Author: admin

ಕುಟುಂಬದ ತರವಾಡು ಎಂದರೆ ನಮ್ಮ ಶರೀರದಲ್ಲಿರುವ ಹೃದಯವಿದ್ದಂತೆ.ಹೃದಯ ಆರೋಗ್ಯವಾಗಿದ್ದರೆ ಮಾತ್ರ ಶರೀರ ಸ್ವಸ್ಥ ವಾಗಿರುತ್ತದೆ. ಆದುದರಿಂದ ತರವಾಡು ಮನೆಯನ್ನು ನಿರ್ಮಿಸಿ ದೈವಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬರಬೇಕು . ಕುಟುಂಬದ ತಾಯಿಬೇರೆಂದರೆ ಅದು ತರವಾಡು.ಬೇರಿಗೆ ನೀರೆರೆದು ಪೋಷಿಸಿದರೆ ಮಾತ್ರ ಕುಟುಂಬವೆಂಬ ವಟವೃಕ್ಷ ಸಮೃದ್ಧಿಯಿಂದಿರಲು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಪೂಜ್ಯರಾದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಕಳಿಯೂರು ದೇವಸ್ಯಗುತ್ತು ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡುತ್ತಾ ನಮ್ಮಲ್ಲಿ ಆತ್ಮಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ಆಗಬೇಕಾಗಿದೆ. ನಮ್ಮ ವರ್ತಮಾನ ಸುಸ್ಥಿತಿಯಲ್ಲಿದ್ದರೆ ಭವಿಷ್ಯ ಸುಂದರವಾಗುತ್ತದೆ. ವಿಶ್ವದಲ್ಲಿ ಧರ್ಮ ಚಾವಡಿಯಿದ್ದರೆ ಅದು ಭಾರತ. ಭಾರತದೊಳಗೊಂದು ಧರ್ಮ ಚಾವಡಿಯಿದ್ದರೆ ಅದು ನಮ್ಮ ತುಳುನಾಡು. ಇಲ್ಲಿರುವಷ್ಟು ದೈವಗಳ ಆರಾಧನೆ ಬೇರೆಲ್ಲೂ ನಡೆಯುವುದಿಲ್ಲ. ತುಳುವ ಸಂಸ್ಕೃತಿ ನಮ್ಮ ಮಾತೃ ಸಂಸ್ಕೃತಿಯಾಗಿದೆ. ಸಂಸ್ಕೃತಿಯ ಉಳಿವು ಇಂತಹ ಧರ್ಮಾಚರಣೆಗಳಿಂದ ಮಾತ್ರ ಸಾಧ್ಯ. ದೈವಿಕವಾದ ಕಲೆ – ಕಾರಣಿಕದ ತಾಣವೇ “ದೇವಸ್ಯ”. ಇಲ್ಲಿ ಒಂದು ಆದರ್ಶಯುತ…

Read More

ವಿಶ್ವ ವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಹುಟ್ಟಿದ ದಿನ ಎಪ್ರಿಲ್ 23 ನ್ನು ಅವರ ಸ್ಮರಣಾರ್ಥ ವಿಶ್ವ ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ 52 ವರ್ಷ ಬದುಕಿದರೂ ಮಾನವ ಜನಾಂಗ ಮರೆಯದ ಉತ್ತಮ ಸಾಹಿತ್ಯ ಕೃಷಿಯಲ್ಲಿ ಪಳಗಿ ಅನೇಕ ನುಡಿ ಮತ್ತುಗಳನ್ನು ಅಜರಾಮರವಾಗಿಸಿದ ಹೆಗ್ಗಳಿಕೆ ಇವರದು. ಜ್ಞಾನದ ಕಣಜವಾಗಿರುವ ಶೇಕ್ಸ್‌ಪಿಯರ್‌ ಅವರ ಪ್ರತಿಯೊಂದು ಶಬ್ದವು ವೇದಾಂತಸಾರದ ಅನುಭವವನ್ನು ತಿಳಿಸುವಂತದ್ದು. ಜೀವನವನ್ನು ಅರ್ಥೈಸುವ ಹಾಗೂ ಅದರ ಇತಿಮಿತಿಗಳನ್ನು ಪರಾಮರ್ಶಿಸುವ ಬದುಕಿನ ವಿವಿಧ ಮಜಲುಗಳ ಅರ್ಥವನ್ನು ಸಾರುವ ಅನೇಕ ಸುನೀತಗಳು ವಿಶಿಷ್ಟವಾದ ಶಬ್ದ ಮಾಧುರ್ಯ, ಅರ್ಥ ಗಾಂಭೀರ್ಯ ಬರಹ ಶೈಲಿ ಮನಮುಟ್ಟುವಂತದ್ದು ಅಂತಹ ಮಹಾನ್ ನಾಟಕಕಾರರ ಸ್ಮರಣಾರ್ಥ ವಿಶ್ವ ಪುಸ್ತಕದಿನಾಚರಣೆ ನಡೆಯುತ್ತಿರುವುದು ಅರ್ಥ ಗರ್ಭಿತ. ಅತ್ಯಂತ ನೆಮ್ಮದಿಯ ಕ್ಷಣಗಳನ್ನು ಓದಿನಿಂದ ಪಡೆಯಬಹುದು. ಓದುವ ಹವ್ಯಾಸ ಹೆಚ್ಚಾದಂತೆ ಪುಸ್ತಕ ಹುಡುಕಿ ಓದುವ ಚಟವೂ ಹೆಚ್ಚಾಗುತ್ತದೆ. ಪುಸ್ತಕ ಭಂಡಾರ ಜ್ಞಾನ ದೇಗುಲ, ಜ್ಞಾನ ಜೋತಿ ದೊರೆಯುವ ಸುಂದರ ಆಲಯವೇ ಗ್ರಂಥಾಲಯ. ಓದುಗರ ಅಭಿರುಚಿಗೆ ಅನುಗುಣವಾಗಿ ಬುದ್ದಿಯನ್ನು…

Read More

ಸುಕುಮಾರ ಶೆಟ್ಟರ ರಾಜಕೀಯ ಇನ್ನಿಂಗ್ಸ್ ಮುಗಿದಿದೆ. ಆದರೆ ಅವರ ಜೋರು, ಅವರ ಅಬ್ಬರ, ಅವರ ಸ್ಪೀಡು ಇದಕ್ಕೆ ಯಾರೆಂದರೆ ಯಾರಿಂದಲೂ ಬ್ರೇಕ್ ಹಾಕುವುದು ಸಾಧ್ಯವಿಲ್ಲ. ತನ್ನ ಸುತ್ತ ಇರುವವರೆಲ್ಲಾ ನನ್ನ ಅಭ್ಯುದಯಕ್ಕೇ ದುಡಿಯುತ್ತಿದ್ದಾರೆ ಎಂದು ಭಾವಿಸಿದ್ದು ಶೆಟ್ಟರ ದೊಡ್ಡ ತಪ್ಪು, ಮಗುವಿನಂತೆ ಕೆಲವರನ್ನ ನಂಬಿದ್ದು ಅವರ ಮತ್ತೊಂದು ತಪ್ಪು. ಕೆಲವು ದುಡುಕು ನಿಲುವು, ನೇರ ನಿಷ್ಠೂರ ಮಾತು, ಜೊತೆಗೆ ಪ್ರಬುದ್ಧರ ಸಲಹೆ ಇಲ್ಲದ ನಿರ್ಧಾರಗಳು ಶೆಟ್ಟರಿಗೆ ಟಿಕೇಟ್ ತಪ್ಪಿಸುವ ಹಂತಕ್ಕೆ ತಂದು ನಿಲ್ಲಿಸಿತೇ ಹೊರತು ಅವರ ವಿರುದ್ಧ ತಲೆ ಹೋಗುವಂತಹ ಆರೋಪಗಳೇನೂ ಇದ್ದಿರಲಿಲ್ಲ. ಶೆಟ್ಟರು ಹಿಂದೂ ಸಂಘಟನೆಯ ಪೋಷಕ ಶಕ್ತಿಯಾಗಿ ನಿಂತಿದ್ದರು, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಜೆಲ್ಲಿ ಕಾಣದ ರಸ್ತೆಗಳನ್ನ ಕಾಂಕ್ರೀಟಿಕರಣ ಮಾಡಿಸಿದ್ದರು, ಸರಿಯಾದ ಬಸ್ಸುಗಳೇ ಓಡಾಡದ ಊರಿನಲ್ಲಿ ನಿಂತು ವಿಮಾನ ನಿಲ್ದಾಣದ ಕನಸು ಕಟ್ಟಿದ್ದರು, ತಪ್ಪೋ ಆಮೇಲಿನ ಪ್ರಶ್ನೆ ಕೊಲ್ಲೂರಿನಿಂದ ಕೊಡಚಾದ್ರಿಗೆ ಕೇಬಲ್ ಕಾರುಗಳು ಓಡಾಡುವ ಕನಸು ಹರವಿದ್ದರು, ಇಲ್ಲಿಗೇ ತರ್ತೀನಿ ಮೆಡಿಕಲ್ ಕಾಲೇಜು ಎಂದು ಹುಬ್ಬು ಮೇಲೆ…

Read More

ಕುಗ್ರಾಮದ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿ.ಪ್ರಾ. ಶಾಲೆಗೆ ಬೆಂಗಳೂರಿನ “ಬೆಳಕು’ ತಂಡವು ಸುಣ್ಣ – ಬಣ್ಣ ಬಳಿಯುವ ಮೂಲಕ ಹೊಸತೊಂದು ರೂಪವನ್ನು ನೀಡಿದೆ. ಈಗ ಈ ಶಾಲೆಯ ಗೋಡೆಯಲ್ಲಿ ಚಿತ್ರಗಳ ಚಿತ್ತಾರ, ಕಟ್ಟಡದ ಗೋಡೆ, ಆವರಣ ಗೋಡೆಗೆ ಅಂದದ ಬಣ್ಣದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಬೆಳಕು ತಂಡದ 21 ಮಂದಿ ಸ್ವಯಂಸೇವಕರು ಕಳೆದ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಹಾಗೂ ರವಿವಾರ 2 ದಿನಗಳ ಕಾಲ ಶಾಲೆಯ ಸೌಂದರ್ಯ ವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು. ಹೊರಭಾಗದ ಆವರಣ ಗೋಡೆ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ. ಹಳೆ ವಿದ್ಯಾರ್ಥಿ ಸಂದೀಪ್‌ ಕೊಡ್ಲಾಡಿ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ, ಈ…

Read More

ಮಂಜುನಾಥ ಸಭಾಭವನದಲ್ಲಿ ಬಂಟರ ಸಂಘ (ರಿ.) ಹಾವಂಜೆ ಇದರ ವತಿಯಿಂದ ಆಟಿದ ತಮ್ಮನ ಕಾರ್ಯಕ್ರಮವು ಜಯಕರ ಶೆಟ್ಟಿ ಇಂದ್ರಾಳಿ ಇವರ ಕೈಯಿಂದ ಉದ್ಘಾಟನೆಗೊಂಡು, ಶ್ರೀಮತಿ ವಿಜೇತ ಯಸ್ ಶೆಟ್ಟಿ ಇವರು ಆಟಿದ ದಿನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಬ್ರಹ್ಮಾವರ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಾವಂಜೆ ಬಂಟರ ಸಂಘದ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ ಉಜಂಗಾರು, ಕಾರ್ಯದರ್ಶಿ ವಿಶಾಕ್ ಜಿ ಶೆಟ್ಟಿ, ಕೋಶಾಧಿಕಾರಿ ರಕ್ಷಿತ್ ಶೆಟ್ಟಿ, ಗೌರವಾಧ್ಯಕ್ಷರಾದ ಅನಿಲ್ ಬಿ ಶೆಟ್ಟಿ, ಭಾಸ್ಕರ್ ಶೆಟ್ಟಿ, ಉಪಾಧ್ಯಕ್ಷರಾದ ಶಲ್ಮಾ ಎನ್ ಹೆಗ್ಡೆ ಉಪಸ್ಥಿತರಿದ್ದರು. ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ವಿಕಾಸ್ ವಿ ಶೆಟ್ಟಿ ವಂದಿಸಿದರು.

Read More

ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ರೀತಿಯ ‘ಪುಳಿ ಮುಂಚಿ’ ತುಳು ಸಿನಿಮಾ ಸೆಟ್ಟೇರಿದ್ದು, ಇದರ ಪೋಸ್ಟರ್, ಟ್ರೇಲರ್ ಬಿಡುಗಡೆ ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾದಲ್ಲಿ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಅವರು ಪುಳಿಮುಂಚಿ ಟೀಸರ್, ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ದ.ಕ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸಿನಿಮಾದ ನಿರ್ಮಾಪಕ ಹರಿಪ್ರಸಾದ್ ರೈ, ಸಹ ನಿರ್ಮಾಪಕ ದೇವಿಪ್ರಸಾದ್ ಜಿ.ಎಸ್., ಪೂರ್ಣಿಮಾ, ಮೇಘನಾಥ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಅ.27ರಂದು ತೆರೆಗೆ: ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ತ್ರಿಶೂಲ್ ಶೆಟ್ಟಿ, ನಾನು ಕನ್ನಡ, ತುಳು ಭಾಷೆಗಳಲ್ಲಿ ಹಲವು ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಪುಳಿಮುಂಚಿ ತುಳುವಿನಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಹಾಸ್ಯದ ಜತೆಗೆ ಹೆಸರಿಗೆ ತಕ್ಕಂತೆ ಪ್ರೇಕ್ಷಕರಿಗೆ ಹೊಸತನ, ವೈವಿಧ್ಯತೆಯನ್ನು ನೀಡಲಿದೆ ಎಂದರು.…

Read More

ಸೇವಾ ಮನೋಭಾವನೆ ಹೊಂದಿರುವ ಬಂಟ ಸಮಾಜ ಇಂದು ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಸಮಾಜದ ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯವನ್ನು ರಕ್ಷಿಸಿ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಮರವೂರಿನಲ್ಲಿ ನಡೆದ ಮರಿಯಲದ ಮಿನದನ ಕಾರ್ಯಕ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ತುಳುನಾಡಿನ ನಂಬಿಕೆಗಳಿಗೆ ಚ್ಯುತಿ ತರುವ ಕೆಲವು ಪ್ರಯತ್ನಗಳು ನಡೆಯುತ್ತಿದ್ದು ಅದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ ‘ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಕೇವಲ ಬಂಟ ಸಮಾಜಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನತೆಗೆ ನೆರವಾಗುತ್ತಿದೆ ಎಂದರು. ಶಾಸಕರಾದ ರಾಜೇಶ್ ನಾಯ್ಕ್, ಡಾ.ವೈ.ಭರತ್ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಅಶೋಕ್‌ ಕುಮಾರ್ ರೈ, ಕರ್ನಾಟಕ ಮಾಧ್ಯಮ…

Read More

ಕರಿಮಣಿ ಕರಿಮಣಿ ಕಪ್ಪು ಮಣಿ ದಾಂಪತ್ಯ ಜೀವನದ ದಿವ್ಯಮಣಿ ಹಿರಿಯರು ನಡೆಸಿ ಬಂದ ಸತ್ಯಮಣಿ ಸ್ತ್ರೀಯರ ಕೊರಳಿನ ಭಾಗ್ಯಮಣಿ!! ಮಾಂಗಲ್ಯವೇ ಸ್ತ್ರೀಯರ ಗರಿಮೆ ಪತಿಯೇ ಅವಳ ಹಿರಿಮೆ ಸ್ತ್ರೀಯೇ ಮನೆಮನೆಯ ಹೆಮ್ಮೆ ಅವಳೇ ಸುಖದುಃಖದ ಸಂಗಮೆ!! ಮಂಗಳಸೂತ್ರ ಆದರ್ಶದ ಸಾರ ಅದಾಗಿರಬಾರದು ಬರೇ ಬಂಗಾರ ಸ್ತ್ರೀಯರ ಮನಸಿನ ಸುವಿಚಾರ ಇದರಿಂದಾಗುವುದು ಬಹಳ ಉಪಕಾರ!! ಹಿಂದಿನದು ಇಂದಿನದು ನಿಜವಲ್ಲ ಡಿಸೈನ್ ಫ್ಯಾಶನ್ ಗಳು ಸ್ಥಿರವಲ್ಲ ಜೀವನವು ಕೇವಲ ಭೋಗವಲ್ಲ ಸರಳತೆಗೆ ಸರಿಸಾಟಿ ಇನ್ನೊಂದಿಲ್ಲ!! -ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ

Read More

ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲದ ನೂತನ ಧ್ವಜಸ್ತಂಭ ಶೋಭಾಯಾತ್ರೆಗೆ ಚಾಲನೆ ಕಾರ್ಯಕ್ರಮ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ನಡೆಯಿತು. ಚಾಲನೆ ನೀಡಿದ ಶ್ರೀ ಕಾಣಿಯೂರು ಶ್ರೀಪಾದರು ಮಾತನಾಡಿ, 1.41 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ದೇಗುಲದ ಕಾರ್ಯ ಶೀಘ್ರವಾಗಿ ವ್ಯವಸ್ಥಿತವಾಗಿ ನೆರವೇರಲಿ ಎಂದು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಜ್ವಲ್‌ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಆರ್ಕಿಟೆಕ್ಟ್ ಶ್ರೀನಾಗೇಶ್‌ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‌, ಕಾಪು ಹೊಸ ಮಾರಿಗುಡಿ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಮಟ್ಟು ಶ್ರೀ ವಿಷ್ಣುಮೂರ್ತಿ ದೇಗುಲದ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್‌, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಅಧ್ಯಕ್ಷ ಸಾಧು ಸಾಲ್ಯಾನ್‌, ಕಾರ್ತಿಕ್‌ ಎಸ್ಟೇಟ್‌ನ ಹರಿಯಪ್ಪ ಕೋಟ್ಯಾನ್‌, ಸ್ವರ್ಣೋದ್ಯಮಿ ಮುರಹರಿ ಕೆ. ಆಚಾರ್ಯ, ಉದ್ಯಮಿ   ಗಳಾದ ರಂಜನ್‌ ಕಲ್ಕೂರ್‌, ತೋನ್ಸೆ ಮನೋಹರ ಶೆಟ್ಟಿ, ನಗರಸಭೆ…

Read More

ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರು ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿ ಆಗಮಿಸಿರುವುದು ಸಂತಸದ ವಿಚಾರವಾಗಿದೆ. ಡಾ. ಪ್ರೀತಿಕಾ ಶೆಟ್ಟಿಯಂತಹ ಸಂಪನ್ಮೂಲ ಮಹಿಳೆಯರು ನಮ್ಮ ಸಮಾಜದಲ್ಲಿ ಮಾದರಿಯಾಗಿ ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಾಕ್ಟರ್, ಇಂಜಿನಿಯರ್ ಗಳಾಗಿ ಜೀವನದಲ್ಲಿ ಹೇಗೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಬಹುದೆಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ, ಮಕ್ಕಳು ಇವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದಾಗಿದೆ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೆಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ಮಾ ೧೯ ರಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಿನಿ ಸಭಾಗೃಹದಲ್ಲಿ ನಡೆದ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿಯವರಿಂದ ಮಹಿಳಾ ಆರೋಗ್ಯದ ಬಗ್ಗೆ…

Read More