Author: admin

ಬಹರೈನ್ ಹಾಗೂ ಕತಾರ್ ನಲ್ಲಿ ತುಳು, ಕನ್ನಡ ಭಾಷೆಯ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ ಅನುಭವ ಹೊಂದಿರುವ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನವೀನ್ ಶೆಟ್ಟಿ ಇರುವೈಲ್ ಅವರು ಪ್ರತಿಷ್ಠಿತ ಕತಾರ್ ಬಂಟರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವೀನ್ ಶೆಟ್ಟಿಯವರು ಬಹರೈನ್ ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ, ಬಹರೈನ್ ಬಂಟರ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು, ತುಳುಕೂಟ ಕತಾರ್ ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಮಾಜಸೇವಕ ನವೀನ್ ಶೆಟ್ಟಿಯವರ ಕಾರ್ಯವಧಿಯಲ್ಲಿ ಕತಾರ್ ಬಂಟರ ಸಂಘವು ಅಭಿವೃದ್ಧಿ ಹೊಂದಲಿ ಎಂದು ನಮ್ಮೆಲ್ಲರ ಹಾರೈಕೆ.

Read More

ಪುತ್ತಿಗೆ ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಅವರು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವವನ್ನು ವೈಭವೋಪೇತವಾಗಿ ನಡೆಸಲು ಅನುಕೂಲಕರವಾದ ಆರ್ಥಿಕ ಸಹಕಾರದ ಬಗ್ಗೆ ವಿಶೇಷವಾಗಿ ಸ್ವಾಗತ ಸಮಿತಿಯ ಮನವಿಯನ್ನು ಬಿಡುಗಡೆಗೊಳಿಸಿದರು. ಮನವಿಯಲ್ಲಿ ವಿವಿಧ ಆರ್ಥಿಕ ಸಹಕಾರವನ್ನು ಸಮಾಜದಿಂದ, ಗಣ್ಯರಿಂದ ನಿರೀಕ್ಷಿಸಲಾಗಿದೆ. ಎಲ್ಲಾ ಕೃಷ್ಣ ಭಕ್ತರು ಪರ್ಯಾಯೋತ್ಸವದಲ್ಲಿ ಕೈ ಜೋಡಿಸಬೇಕೆಂದು ವಿನಂತಿಸಿದರು. ಅತಿಥಿಗಳಾಗಿ ಪುಣೆಯ ಪ್ರಜ್ ಇಂಡಸ್ಟ್ರೀಸ್ ಲಿ. ಚೇರ್ ಮನ್ ಡಾ. ಪ್ರಮೋದ್ ಚೌಧರಿ, ಅವರ ಪತ್ನಿ ಪ್ರಮೀಳಾ ಚೌಧರಿ ಉಪಸ್ಥಿತರಿದ್ದು ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ ವಿಜೃಂಭಣೆಯಿಂದ ನಡೆಸಲು ಸಹಕರಿಸುವುದಾಗಿ ತಿಳಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಜ್ ಜೆನೆಕ್ಸ್ ಲಿ. ಎಂಡಿ ಅಭಿಜಿತ್ ಧಾನಿ, ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಆಸ್ಟೆನ್ ಸೆಜ್ ನ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಸಮಿತಿ ಪ್ರ. ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗೌರವ ಕೋಶಾಧಿಕಾರಿ ಶ್ರೀ ನಾಗೇಶ್ ಹೆಗ್ಡೆ, ಕೋಶಾಧಿಕಾರಿ ರಂಜನ್ ಕಲ್ಕೂರ, ಉಪಾಧ್ಯಕ್ಷ…

Read More

ಪುಣೆ : ಮನುಷ್ಯ ತನ್ನ ದಿನ ನಿತ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವ ಅರೋಗ್ಯವನ್ನು ಬಯಸುತ್ತಾನೆ ,ಆದರೆ ಈಗಿನ ದೈಹಿಕ ,ಮಾನಸಿಕ ,ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರು ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ .ಇದರಿಂದ ಯಾವುದೇ ನಿಯಂತ್ರಣ ಹೊಂದಿರದ ಚಲನೆ ಮತ್ತು ಪ್ರಕ್ರಿಯೆಯಿಂದ ಮಾನಸಿಕ ಆರೋಗ್ಯಕ್ಕೆ ತೊಂದರೆ ಯಾಗುತ್ತದೆ .ಇಂತಹ ಸಂದರ್ಭದಲ್ಲಿ ಮೊದಲಾಗಿ ನಾವು ಡಾಕ್ಟರ್ಸ್ ನವರ ಸಲಹೆಯಂತೆ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಜೀವನ ಸುಖಮಯವಾಗಬಹುದು,ಮತ್ತು ದೈಹಿಕ,ಮಾನಸಿಕ ,ಸಾಮಾಜಿಕ ಸುಸ್ಥಿತಿಯಿಂದ ಅರೋಗ್ಯ ಪೂರ್ಣ ಜೀವನವನ್ನು ಪಡೆಯಲು ಸಾದ್ಯ . ಆರೋಗ್ಯದ ಬಗ್ಗೆ ಕಾಳಜಿ ಮತ್ತು ತಪಾಸಣೆ ಮಾಡಿಸುವ ಉದ್ದೇಶದೊಂದಿಗೆ ನಮ್ಮ ಅಸೋಸಿಯೇಷನ್ ವತಿಯಿಂದ ಸಮಾಜ ಭಾಂದವರಿಗೆ ಈ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ .ಇದಕ್ಕೆ ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು , ಗುರುನಾನಕ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ .ಡಾ ಸುಧಾಕರ್ ಶೆಟ್ಟಿ ಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು…

Read More

ಕರ್ನಾಟಕ ಸಂಪದ್ಭರಿತ ಕಾನನ ಹಾಗೂ ಜೀವ ಜಂತುಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅದರಲ್ಲೂ ಹಾವುಗಳಂತೂ ರೈತ ಸ್ನೇಹಿ ಜೀವಿಗಳು. ಪ್ರಕೃತಿ ‌ನಮಗೆ ಕೊಟ್ಟ ಉಡುಗೊರೆ. ದುರಾದೃಷ್ಟವೆಂದರೆ ಹಲವು ವರ್ಷಗಳಿಂದ ಹಾವುಗಳ ಪ್ರಬೇಧಗಳು ನಶಿಸಿದೆ. 2024 ರ ಹೊತ್ತಿಗೆ ಮತ್ತಷ್ಟು ಹದಗೆಡುವ ಸಾಧ್ಯತೆಯ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ನಿಸರ್ಗ ಸ್ನೇಹಿಯಾಗಿದ್ದ ಮಾನವ ಬದುಕು ಬದಲಾಗಿ ಪರಿಸರ ಸಮತೋಲನದ‌ ಸ್ಥಿತಿಯ ಲಯ ತಪ್ಪಲು ಕಾರಣವಾಗುತ್ತಿದೆ. ಮನುಷ್ಯನ ಸ್ವಾರ್ಥ, ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣದ ಅಬ್ಬರ, ಕಾಡು ನಾಶ, ಶರವೇಗದಲ್ಲಿ ನಡೆಯುತ್ತಿರುವ ನಗರೀಕರಣ, ಹಸಿರನ್ನು ನುಂಗಿ ಜೀವ ವೈವಿಧ್ಯತೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಾವುಗಳ ಸೂಕ್ತ ರಕ್ಷಣೆ ಅನಿವಾರ್ಯ ಹಾಗೂ ಅವುಗಳ ಸಂತತಿ ಉಳಿಸಿ ನಿಸರ್ಗ ಸ್ನೇಹಿ ಬದುಕನ್ನು ರೂಪಿಸಿಕೊಳ್ಳಲು ನಾವಿಂದು ದಾಪುಗಾಲು ಇಡ ಬೇಕಾಗಿದೆ. ಈಗಾಗಲೇ ಕಾಲ ಮೀರಿದೆ. ಮತ್ತಷ್ಟು ವಿಳಂಬವಾದರೆ‌ ಪ್ರಕೃತಿ ಮುನಿದು ಸೇಡು ತೀರಿಸಿಕೊಳ್ಳಲು ಅಣಿಯಾಗ‌ಬಹುದು.…

Read More

ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಂಟರ ಭವನದಲ್ಲಿ ನಡೆದ ಮಹಿಳಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಅಧ್ಯಕ್ಷರಾಗಿ ಭವ್ಯಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಸರೋಜ ಟಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ವಜ್ರಾಕ್ಷಿ ಶೆಟ್ಟಿ, ಕೋಶಾಧಿಕಾರಿಯಾಗಿ ಜ್ಯೋತಿ ಪಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಲತಾ ಶೆಟ್ಟಿ ತೋಕೂರು, ಕ್ರೀಡಾಕಾರ್ಯದರ್ಶಿಯಾಗಿ ಬಬಿತಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕಾಟಿಪಳ್ಳ ಆಯ್ಕೆಯಾದರು. ಸಭೆಯಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಮಾಜೀ ಅಧ್ಯಕ್ಷರಾದ ಅಂಜನಾ ಶೆಟ್ಟಿ, ಬೇಬಿ ಶೆಟ್ಟಿ ಉಪಸ್ಥಿತರಿದ್ದರು.

Read More

ಮುಂಬಯಿ ಮಹಾನಗರ ಪಾಲಿಕೆಯ ರಾಜಾವಾಡಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ‘ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪರಿಣಾಮ ಜನ್ಮ ಜಾತ ಶ್ರವಣ ದೋಷ ಇರುವ ಮಕ್ಕಳಿಗೆ ಶಾಶ್ವತವಾಗಿ ಪರಿಹಾರ ಸಿಗಲಿದೆ. ದೋಷವಿರುವ ಮಕ್ಕಳಲ್ಲಿ ಐದು ವರ್ಷಗಳವರೆಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಮಕ್ಕಳಲ್ಲಿ ಶ್ರವಣ ದೋಷದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ವಿಶೇಷವೇನೆಂದರೆ ಡಾ. ಅದೀಪ್ ಶೆಟ್ಟಿ ನೇತೃತ್ವದಲ್ಲಿ ಈ ಯೋಜನೆ ಕಾರ್ಯನಿರತಗೊಳ್ಳಲಿದೆ. ಮೂಲತ: ಮಂಗಳೂರು ಸುರತ್ಕಲ್ ನ ಡಾ. ಅದೀಪ್ ಶೆಟ್ಟಿಯವರು ರಾಜಾವಾಡಿಯ ಕಿವಿ- ಮೂಗು – ಗಂಟಲು ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪಾಲಿಕೆಯ ಕೆಇಎಂ ಮತ್ತು ನಾಯರ್ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತಿತ್ತು. ದೇಶದ ಅತ್ಯಂತ ಕಿರಿಯ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಆದ ಡಾ. ಅದೀಪ್ ಶೆಟ್ಟಿ ಅವರ ಪರಿಶ್ರಮದ ಫಲವೇ ಉಪನಗರದ ರಾಜಾವಾಡಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆ ಆರಂಭಗೊಳ್ಳಲಿದೆ. ಮುಂಬಯಿಯಲ್ಲಿರುವ ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್…

Read More

ಜೈನ್ ಟ್ಯೂಬ್ಸ್ ಉದ್ದಿಮೆ ಕರಾವಳಿಯಲ್ಲಿ ಉತ್ತಮ ವ್ಯವಹಾರ ನಡೆಸಿ ಅಭಿವೃದ್ಧಿ ಹೊಂದಲಿ ಎಂದು ಸಿಎ ನಿತಿನ್ ಶೆಟ್ಟಿ ಹಾರೈಸಿದರು. ಅವರು ಮಾ.30 ರಂದು ಪಡುಬಿದ್ರಿ ಹೆಜಮಾಡಿ ಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಜೈನ್ ಟ್ಯೂಬ್ಸ್ ಉದ್ದಿಮೆಯ ಮೊದಲನೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜೈನ್ ಗ್ರೂಪ್ ಆಫ್ ಕಂಪನೀಸ್ ನ ಸಂಸ್ಥಾಪಕ ಮಹೇಂದ್ರ ಕುಮಾರ್ ಜೈನ್ ಮಾತನಾಡಿ, ಎಲ್ಲರ ಮಾರ್ಗದರ್ಶನ, ದೂರದರ್ಶಿತ್ವ, ಸಲಹೆ ಹಾಗೂ ವಿಚಾರಗಳಿಂದಲೇ ನಾವು ಬೆಳೆದಿದ್ದೇವೆ. ನಿಮ್ಮೆಲ್ಲರ ಸಹಕಾರ ಜೈನ್ ಗ್ರೂಪ್ ನೊಂದಿಗಿರಲಿ ಎಂದರು. ಜೈ ಹಿಂದ್ ಗ್ರೂಪ್ ನ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ದಿವ್ಯ ಕುಮಾರ್ ಜೈನ್ ಮಾತನಾಡಿ, ಯಾವುದೇ ಉತ್ಪಾದನ ಘಟಕ ಸ್ಥಾಪನೆಗೆ ಉಡುಪಿ ಜಿಲ್ಲೆಯ ಜನರ ಮನೋಭಾವನೆ ಮತ್ತು ಜೈವಿಕ ಪರಿಸರ ವ್ಯವಸ್ಥೆ ಪೂರಕವಾಗಿವೆ. ಭಾರತ ವಿಶ್ವದ ಅಗ್ರಮಾನ್ಯ ಉತ್ಪಾದನ ಹಬ್ ಎನಿಸಲಿದೆ. ಜೈ ಹಿಂದ್ ಗ್ರೂಪ್ ಕೂಡ ನಿಮ್ಮೆಲ್ಲರ ಸಹಕಾರದೊಂದಿಗೆ ಅಗ್ರಪಂಕ್ತಿಯಲ್ಲಿ ಮುಂದುವರಿಯಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಆಸ್ಪೆನ್ ಇನ್ಫ್ರಾ ಎಸ್ಇಝೆಡ್ ನ ಹಿರಿಯ…

Read More

ಕರಾವಳಿ ಭಾಗದಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆಯ ಸಂದೇಶವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಮುನ್ಸೂಚನೆಯಂತೆ ಮಾ. 10ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸಲಿದ್ದು, ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವಾರ ಮಾ. 4ರಂದು ಉಷ್ಣ ಅಲೆ ಮತ್ತು ಮಾ. 8ರಂದು ಕಡಲಿನ ಅಬ್ಬರದ ಎಚ್ಚರಿಕೆಯನ್ನು ಐಎಂಡಿ ನೀಡಿತ್ತು. ಅದರಂತೆ ಕರಾವಳಿಯ ಹಲವು ಕಡೆಗಳಲ್ಲಿ ಉರಿ ಸೆಕೆ ಮತ್ತು ಉಷ್ಣತೆಯಿಂದ ಕೂಡಿದ ಗಾಳಿ ಬೀಸಿತ್ತು. ಈಗ ಮತ್ತೆ ಎಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಅಗತ್ಯ ಇದೆ. ಮಾರ್ಚ್‌ನಲ್ಲಿ ಅತ್ಯಧಿಕ ತಾಪಮಾನ : ‌ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ಉಷ್ಣ ಅಲೆ ಬರುವುದಿಲ್ಲ. ಈ ವರ್ಷ ಉತ್ತರ ಭಾರತದ ಹಲವು ಕಡೆಗಳಲ್ಲಿ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ಹೆಚ್ಚು ಇತ್ತು. ಉತ್ತರ ದಿಕ್ಕಿನಿಂದ ಸುಳಿಗಾಳಿ ಬೀಸುತ್ತಿದ್ದು, ಉಷ್ಣ ಅಲೆಯನ್ನು ತರುತ್ತಿದೆ. ಪರಿಣಾಮವಾಗಿ ಕರಾವಳಿಯಲ್ಲಿ ಈಗಿರುವ ಉಷ್ಣಾಂಶ ಮತ್ತಷ್ಟು…

Read More

ಮುಂಬಯಿಯಲ್ಲಿ ನಗರದ ಹೃದಯ ಭಾಗವಾಗಿರುವ ವರ್ಲಿಯಲ್ಲಿ ಮಧುಸೂದನ್ ಮಿಲ್ ಕಂಪೌಂಡಿನಲ್ಲಿ ಇರುವ ಅಪ್ಪಾಜಿ ಬೀಡು ಫೌಂಡೇಶನ್‌[ರಿ] ಮತ್ತು ಐ ಲೇಸಾ ದಿ ವಾಯ್ಸ್‌ ಆಫ್‌ ಓಷನ್‌ [ರಿ] ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್‌ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಟೀಂ ಐಲೇಸಾದ ಕವಿ ಸಾಹಿತಿ ಶಾಂತರಾಮ ಶೆಟ್ಟಿಯವರು ಮಾತನಾಡುತ್ತಾ ಕೊರೋನ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದೆ ಅದನ್ನು ಕಂಡು ನನ್ನ ಆತ್ಮೀಯರಾಗಿದ್ದ ಕೆಲವರು ಅದಕ್ಕೊಂದು ಗಟ್ಟಿತನದ ಶಕ್ತಿ ನೀಡಿದರು, ವಿದೇಶದ ಗೆಳೆಯರು ಕೂಡ ಅದಕ್ಕೆ ಸಹಕಾರ ಆ ಶಕ್ತಿಯೇ  ಐ ಲೇಸಾ ತಂಡವಾಗಿ ಬೆಳೆದು ಬಂತು. ಸೂರಿ ಮಾರ್ನಾಡ್ ಓರ್ವ ಅದ್ಭುತ ಕಲಾವಿದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ಅವರು ಭಕ್ತಿಯ ಅನುಭವಗಳನ್ನು ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಭಕ್ತಿಗೀತೆ ಜನಸಾಮಾನ್ಯರಿಗೆ ತಲುಪುವ ಕೆಲಸ ನಮ್ಮೆಲ್ಲರಿಗೂ ಆಗಿದೆ ಅದು ಅವರಿಗೆ ನೀಡುವ ಕೊಡುಗೆಯಾಗಿದೆ ಎಂದು ನುಡಿದರು. ಅಂದೇರಿ ಅಯ್ಯಪ್ಪ ಭಕ್ತಬಂಧದ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಆಶೀರ್ವಚನ…

Read More

ಮುಂಬಯಿ (ಆರ್‍ಬಿಐ), ಜ.25: ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗ ಸುಬ್ರಹ್ಮಣ್ಯ ಪ್ರತಿಷ್ಠಾಪಿತ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಜರುಗುತ್ತಿರುವ ಬ್ರಹ್ಮಕಲಶಾಭಿಷೇಕ ಸಮಾರಂಭದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಗೋಪಾಲ್ ಶೆಟ್ಟಿ ಮತ್ತು ಉಷಾ ಜಿ.ಶೆಟ್ಟಿ ದಂಪತಿ ಹಾಗೂ ಅತಿಥಿüಯಾಗಿದ್ದ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ, ಮಹಾನಗರದಲ್ಲಿನ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಉಪಸ್ಥಿತರಿದ್ದು ಗಣ್ಯರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನೀಡಿ ಸನ್ಮಾನಿಸಿ ಶುಭಾರೈಸಿ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಅರುಣಾ ನಾಗೇಂದ್ರ ಆಚಾರ್ಯ ದಂಪತಿ ಸಂಸದರನ್ನು ಬರಮಾಡಿ ಕೊಂಡರು. ವಿದ್ವಾನ್ ಹೆರ್ಗ ರವೀಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪ್ರಸಾದ್ ಭಟ್ ಉಪಸ್ಥಿತರಿದ್ದು ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ…

Read More