ಬಂಟರ ಯಾನೆ ನಾಡವರ ಮಾತೃಸಂಘದ ಅಧೀನದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಅಮೃತ ಮಹೋತ್ಸವದ ಉದ್ಘಾಟನೆ ಸೆ. ೨೪ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಲ್ಗುತ್ತು, ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ವಿಬಿಎಂಎಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಅದಮ್ಯ ಚೇತನ ಪ್ರತಿಷ್ಠಾನದ ಸಿಇಒ ತೇಜಸ್ವಿನಿ ಅನಂತ ಕುಮಾರ್, ಸ್ತ್ರೀ ಸಶಕ್ತಿಕರಣ ಯೋಜನೆಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಸುಜಾತ ಎಸ್. ಶೆಟ್ಟಿ, ಎಸ್ಆರ್ವಿ ಭವನದ ಧ್ವಾರ ಮತ್ತು ಪ್ರಯಾಣಿಕರ ತಂಗುದಾಣವನ್ನು ಬಂಟ್ಸ್ ಕತಾರ್ ಅಧ್ಯಕ್ಷ ಡಾ. ಪದ್ಮಶ್ರೀ ಆರ್. ಶೆಟ್ಟಿ ಉದ್ಘಾಟಿಸುವರು. ಸ್ಮರಣ ಸಂಚಿಕೆ ಅಮೃತ ಸಿರಿಯನ್ನು ಉದ್ಯಮಿ ಉಪೇಂದ್ರ ಶೆಟ್ಟಿ, ಪ್ರಗತಿ ಯು. ಶೆಟ್ಟಿ ಬಿಡುಗಡೆಗೊಳಿಸುವರು ಎಂದರು.
ಈ ಸಂದರ್ಭದಲ್ಲಿ ಸಾಧಕಿಯರಾದ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಮಿಷನರ್ ಇನ್ ಇನ್ಡೈರೆಕ್ಟ್ ಟ್ಯಾಕ್ಸಸ್ ರೀನಾ ಶೆಟ್ಟಿ, ಮೆಡಲ್ ಆಫ್ದ ಆರ್ಡರ್ ಆಫ್ ಆಸ್ಟ್ರೇಲಿಯ ಪ್ರಶಸ್ತಿ ಪುರಸ್ಕೃತೆ ಮಲ್ಲಿಕಾ ಚೌಟ, ಅಸಿಸ್ಟೆಂಟ್ ಕನ್ಸ್ರ್ವೇಟರ್ ಆಫ್ ಫಾರೆಸ್ಟ್ ಹಸ್ತಾ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನಕ್ಕೆ ಅನನ್ಯ ಸೇವವೆ ಸಲ್ಲಿಸಿದ ಮಾಲತಿ ಎಸ್. ಆಳ್ವ, ವಿಲಾಸ ಜೆ. ಶೆಟ್ಟಿ, ಚಂದ್ರಲೇಖ ಎ. ಶೆಟ್ಟಿ, ಶಾಲಿನಿ ಡಿ. ರೈ, ಶಬರಿ ವಿ. ಶೆಟ್ಟಿ, ಜ್ಯೋತಿ ಎ. ಆಳ್ವರಿಗೆ ಗೌರವ ಸಮರ್ಪಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮದ ಬಳಿಕ ವಿಶಿಷ್ಟ ಕುಡ್ಲದಿಂದ ಸಾಮಾಜಿಕ ಕಳಕಳಿಯ ಕಿರು ಪ್ರಹಸನ, ಪಟ್ಲ ಸತೀಶ್ ಶೆಟ್ಟಿಯವರಿಂದ ಯಕ್ಷ – ಗಾನ – ನಾಟ್ಯ – ವೈಭವ, ದೀಪಕ್ ರೈ ಪಾಣಾಜೆ ಮತ್ತು ಮಂಜು ರೈಯಿಂದ ಹಾಸ್ಯ ಉಲ್ಲಾಸ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಗರದ ಹೃದಯಭಾಗದಲ್ಲಿರುವ ಲಾಲ್ಬಾಗ್ನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ೧೯೪೮ರ್ಲಲಿ ಸರ್ವ ಸೌಲಭ್ಯಗಳಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಆರಂಭಗೊಂಡಿತು. ವಿದ್ಯಾರ್ಥಿನಿ ಭವನವು ಕೇವಲ ಬಂಟ ಸಮುದಾಯಕ್ಕಷ್ಟೇ ಸೀಮಿತವಾಗದೆ ಸಮಾಜದ ಎಲ್ಲ ವರ್ಗದ ಜಾತಿಯ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಸ್ವಾಭಿಮಾನದ ಬದುಕಿಗೆ ನಾಂದಿಯಾಯಿತು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಲಿಕೆಗೆ ಉದ್ಯೋಗಕ್ಕೆ ಅವಕಾಶವಿಲ್ಲದಾಗ ಊಟ ವಸತಿ ಸೌಕರ್ಯವನ್ನು ಒದಗಿಸಿ ಅವರ ಕನಸುಗಳಿಗೆ ಬಣ್ಣ ತುಂಬಿ ಸ್ವಾವಲಂಬಿ ಬದುಕಿಗೆ ದಿಕ್ಸೂಚಿಯಾಯಿತು. ಈ ಸಂಸ್ಥೆಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ವಿದ್ಯಾರ್ಥಿನಿ ಭವನದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಮುದಾಯವರೆಲ್ಲ ಸೇರಿಕೊಂಡು ಬಂಟ ಸಮಾಜದ ಪ್ರಥಮ ಪದವೀಧರೆ ಮಾತ್ರವಲ್ಲ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತನ್ನ ಕೊಡುಗೆ ನೀಡಿದ ಶಾಂಭವಿ ಆರ್. ಪೂಂಜ ಅವರ ಸ್ಮರಣೆಯಲ್ಲಿ ‘ಶಾಂಭವಿ ವಿಶ್ರಾಂತಿ ಧಾಮ’ವನ್ನು ಆರಂಭಿಸಿ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಇದೊಂದು ಹೆಜ್ಜೆ ಗುರುತು ಎಂದು ವಿವರಿಸಿದರು.
ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿನಿ ಭವನದ ಸಂಚಾಲಕಿ ಶಾಲಿನಿ ಶೆಟ್ಟಿ, ಅಮೃತೋತ್ಸವ ಸಮಿತಿ ಅಧ್ಯಕ್ಷೆ ವೀಣಾ ಟಿ. ಶೆಟ್ಟಿ, ರ್ಕಾದರ್ಶಿ ಶಾರಿಕಾ ಭಂಡಾರಿ, ಶಾರಿಕಾ ಭಂಡಾರಿ ಉಪಸ್ಥಿತರಿದ್ದರು.