Author: admin
ಕುವೈಟ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಶೋಧನ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಬೆಳೆಯಲಿ, ಸಮಾಜ ಸೇವೆಯಲ್ಲಿ ಹೊಸ ಮೈಲುಗಲ್ಲುಗಳನ್ನು ಸಾಧಿಸಲಿ ಎಂಬುದು ನಮ್ಮ ಹಾರೈಕೆ. ನಿಮ್ಮ ಮುಂದಿನ ಕಾರ್ಯಯಾತ್ರೆಗೆ ಹಾರ್ದಿಕ ಶುಭಾಶಯಗಳು.
ಒಬ್ಬ ಕಾಫಿ ಘಮಲಿನಲ್ಲಿ ಜಗತ್ತನ್ನೇ ಗೆದ್ದಿದ್ದ ‘ಕಾಫಿ ಕಿಂಗ್’ ಸಿದ್ದಾರ್ಥ್. ಇನ್ನೊಬ್ಬ ಸಿಮೆಂಟ್ ಕಾಂಕ್ರೀಟ್ ಕಾಡಿನಲ್ಲಿ ಸಾಮ್ರಾಜ್ಯ ಕಟ್ಟಿದ್ದ ‘ರಿಯಲ್ ಎಸ್ಟೇಟ್ ಸುಲ್ತಾನ’ ಸಿಜೆ ರಾಯ್. ಇಬ್ಬರದ್ದು ಬೇರೆ ಬೇರೆ ದಾರಿ, ಆದ್ರೆ ಸೇರಿದ್ದು ಮಾತ್ರ ಒಂದೇ ಸ್ಮಶಾನವನ್ನು. ಕೇರಳದವರಾದ್ರೂ ರಾಯ್ ಗೆ ಕನ್ನಡ ಅಂದ್ರೆ ಪ್ರಾಣ. ಸುಮ್ನೆ ದುಡ್ಡು ಮಾಡಿ ಕೇರಳಕ್ಕೆ ಹೋಗ್ಲಿಲ್ಲ. ಗಾಂಧಿನಗರದ ಕಷ್ಟದ ಕಾಲದಲ್ಲಿ ಹೆಗಲು ಕೊಟ್ರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಕ್ರೇಜಿ ಲೋಕ’ ಸಿನಿಮಾ ನಿರ್ಮಾಣ ಮಾಡಿದ್ದು ಯಾರು? ಇದೇ ರಾಯ್!ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್’ ಮತ್ತು ‘ರಂಗಪ್ಪ ಹೋಗ್ಬಿಟ್ನ’ ಸಿನಿಮಾಗೆ ದುಡ್ಡು ಹಾಕಿದ್ರು. ಕೋಮಲ್ ಅವರ ‘ರಾಧಾನ ಗಂಡ’ ಸಿನಿಮಾಕ್ಕೂ ಇವರೇ ಬೆನ್ನೆಲುಬು. ಹೀಗೆ ಬಿದ್ದವರನ್ನು ಮೇಲೆತ್ತೋ ಜಾಯಮಾನ ಇವರದ್ದು. ನೀವು ಟಿವಿಯಲ್ಲಿ ಕಿಚ್ಚ ಸುದೀಪ್ ಅವರ ‘ಬಿಗ್ ಬಾಸ್’ ನೋಡಿರ್ತೀರ. ಆದ್ರೆ ಅದರ ಆರಂಭದ ಸೀಸನ್ ಗಳಲ್ಲಿ ಬರೀ ಸ್ಪಾನ್ಸರ್ ಆಗಿ ದುಡ್ಡು ಕೊಡದೆ, ಆ ಶೋನ ಅದ್ದೂರಿಯಾಗಿ ನಡೆಸೋಕೆ ಬೆನ್ನೆಲುಬಾಗಿ…
ಕರಾವಳಿಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ ಅವರು 77ನೇ ಗಣರಾಜ್ಯೋತ್ಸವದ ಸಂದರ್ಭ ರಾಷ್ಟ್ರಪತಿಗಳು ನೀಡುವ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಭಾರತೀಯ ಸೇನೆಯು ಪಾಕಿಸ್ತಾನದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ 2025ರ ಮೇ ತಿಂಗಳಲ್ಲಿ ಭಾರತದ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದರು. ಇವರು ಸದಾಶಿವ ಶೆಟ್ಟಿ ಕೊಂಡಾಡಿ ಮತ್ತು ದೇವಕಿ ಶೆಟ್ಟಿ ಶಾನ್ಕಟ್ಟು ಅವರ ಪುತ್ರ. ಸಂದೀಪ್ ಶೆಟ್ಟಿ ಕಳೆದ 20 ವರ್ಷಗಳಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 2 ವರ್ಷಗಳಿಂದ ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ನಿಜ ದರ್ಶನ ನೀಡುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕೆಂದು ಎಂದು ಮೈಸೂರು ಹಾಗೂ ಕೊಡಗು ಸಂಸದ ಯದುವೀರ್ ಅಭಿಪ್ರಾಯ ಪಟ್ಟರು. ಬೆಂಗಳೂರಿನ ರಾಮೋಹಳ್ಳಿಯ ಯೂನಿವರ್ಸಲ್ ಸಮೂಹ ಸಂಸ್ಥೆಯ ಸಂಸ್ಥಾಪನ ದಿನಾಚರಣೆ ಹಾಗೂ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯೊಡನೆ ಭಾರತವು ಎಲ್ಲಾ ರಂಗಗಳಲ್ಲೂ ಉನ್ನತಿ ಸಾಧಿಸುತ್ತಿದೆ. ಈ ವಿಕಾಸ ಪರ್ವವು ದೇಶದ ಭವ್ಯ ಪರಂಪರೆ ಸಂಸ್ಕೃತಿಯನ್ನು ಇಮ್ಮಡಿಗೋಳಿಸುವಂತೆ ಇರಬೇಕು. ಸ್ವಂತಿಕೆ, ಸ್ವಾಭಿಮಾನ ಉದ್ದೀಪನಗೊಳಿಸುವಂತಿರಬೇಕು. ಹಾಗಾಗಿ ಸ್ವತಂತ್ರ ಪೂರ್ವದ ಮೆಕಾಲೆ ಶಿಕ್ಷಣ ನೀತಿ ಪರಿಷ್ಕರಿಸುವ ಅಗತ್ಯತೆ ಇದೆ ಎಂದರು. ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯ. ಅದರ ಯಶಸ್ಸು ಹಾಗೂ ಸೋಲು ಅಧಿಕಾರಿ ವರ್ಗದ ಮೇಲೆ ನಿಂತಿದೆ. ನಿಷ್ಠಾವಂತ ಅಧಿಕಾರಿಗಳಿಂದಲೇ ಮೈಸೂರು ಸಂಸ್ಥಾನ ಇಂದಿಗೂ ಜನಮನ್ನಣೆ ಗಳಿಸಿದೆ ಎಂದರು. ಇದೆ ವೇಳೆ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹೀರೋಗಳಂತೆ ಮೆರೆಸುವ ಮನಸ್ಥಿತಿಯೂ ಮಾರಕ ಎಂದು…
ಯುವಕರು ಸಂಘಟಿತರಾಗಿ ಕ್ರೀಡೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಅಶಕ್ತರ ಬಾಳಿಗೆ ನೆರವಾಗಬೇಕು. ಕ್ರೀಡೆ ಮತ್ತು ವಿದ್ಯೆ ಸಮ್ಮಿಲನವಾದರೆ ಸಂಸ್ಕೃತಿ ಸಂಸ್ಕಾರ ಬೆಳೆಯುತ್ತದೆ ಎಂದು ಭೂ ನ್ಯಾಯ ಮಂಡಳಿ ಕುಂದಾಪುರದ ಮಾಜಿ ಸದಸ್ಯ ಚಿತ್ತರಂಜನ್ ಶೆಟ್ಟಿ ಹರ್ಕೂರು ಹೇಳಿದರು. ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟಿ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪ್ರೊ. ಸುರೇಂದ್ರ ಶೆಟ್ಟಿ ಕಮ್ಮಾರಕೋಡ್ಲು, ವಿಶ್ವನಾಥ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಹೇಶ್ ದೇವಾಡಿಗ, ಪ್ರಮೋದ್ ಆಚಾರ್ಯ, ನರಸಿಂಹ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಶೆಟ್ಟಿ, ನಿತಿನ್ ಶೆಟ್ಟಿ, ಪ್ರವೀಣ್ ಪೂಜಾರಿ, ಪ್ರಣಯ್ ಶೆಟ್ಟಿ, ಗುರುಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಫೆಬ್ರವರಿ 7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವದ ಅಮಂತ್ರಣ ಪತ್ರವನ್ನು ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಜನವರಿ 29 ರಂದು ಅವರ ಕುಂಜಾಡಿ ಮನೆಯಲ್ಲಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಪ್ರಮುಖರಾದ ಚೇತನ್ ಕುಮಾರ್ ಕೋಡಿಬೈಲು, ಉಮಾಪ್ರಸಾದ್ ರೈ ನಡುಬೈಲು, ಸತೀಶ್ ಬಲ್ಯಾಯ ಕನ್ನಡಕುಮೇರು, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ ಖಂಡಿಗ, ಕೀರ್ತನ್ ಕುಮಾರ್ ಕೋಡಿಬೈಲು, ರಾಮಕೃಷ್ಣ ಪ್ರಭು ಸವಣೂರು, ಕುಲಪ್ರಕಾಶ್ ಮೆದು ಹಾಗೂ ಸಂತೋಷ್ ರೈ ಕಲಾಯಿ ಉಪಸ್ಥಿತರಿದ್ದರು. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು
ಸವಣೂರು ಯುವಕ ಮಂಡಲದ ಮಾರ್ಗದರ್ಶಕ, ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ ಸುಲಾಯ ಅವರು 2026 ನೇ ಸಾಲಿನಿ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕ, ಮುದ್ದೇಬಿಹಾಳ ವಿ.ಬಿ.ಸಿ. ಪ್ರೌಢಶಾಲೆಯ ಮೈದಾನದಲ್ಲಿ ಜ. 31 ರಂದು ನಡೆಯಲಿರುವ ರಾಷ್ಟೀಯ ಯುವ ವೈಭವ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಮುಖ್ಯ ಶಿಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದಿರುವ ಗಿರಿಶಂಕರ ಸುಲಾಯ ಸವಣೂರು ಗ್ರಾಮ ಪಂಚಾಯಿತಿಯ ಸದಸ್ಯರಾಗಿ ರಾಜ್ಯದಲ್ಲಿ ಅತೀ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಧಾರ್ಮಿಕ ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿರುವ ಗಿರಿಶಂಕರ ಸುಲಾಯ ಅವರು ಸವಣೂರು ಕಾಣಿಯೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರು, ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪಾಡಿ ಇದರ ಅಧ್ಯಕ್ಷರಾಗಿ, ಧಾರ್ಮಿಕ ಶಿಕ್ಷಣ ಸಮಿತಿಯ ತಾಲೂಕು ಸಮಿತಿ ಪ್ರಮುಖರಾಗಿ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಪ್ರಶಿಕ್ಷಣ,…
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ‘ಜೈ’ ಸಿನಿಮಾ 17 ನೇ ಬೆಂಗಳೂರು ಅಂತಾರಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡ ಸೂಪರ್ ಹಿಟ್ ಚಿತ್ರಗಳ ಜತೆ ಪಾಪ್ಯುಲರ್ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ‘ಜೈ’ ತುಳು ಸಿನಿಮಾ ಆಯ್ಕೆಯಾಗಿದೆ. ಜೈ ಸಿನಿಮಾ ಟಿವಿ, ಓಟಿಟಿ ಹಾಗೂ ಎಲ್ಲಾ ಭಾಷೆಯ ಡಬ್ಬಿಂಗ್ ಹಕ್ಕುಗಳನ್ನು ಭಾರತದ ಪ್ರಖ್ಯಾತ ಸಂಸ್ಥೆ ಬಹು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸಿನಿಮಾ 75 ದಿನಗಳನ್ನು ಪೂರೈಸಿದ್ದು, ಶೀಘ್ರದಲ್ಲೇ ಸಿನಿಮಾ 100 ದಿನಗಳನ್ನು ಪೂರೈಸಲಿದೆ. ಸಿನಿಮಾದ 100 ದಿನಗಳ ಸಂಭ್ರಮಾಚರಣೆಯ ವೇಳೆ ಹೊಸ ಸಿನಿಮಾದ ಘೋಷಣೆಯನ್ನು ಮಾಡಲಾಗುವುದು ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ. ಮುಂಬೈಯಲ್ಲಿ ಇತಿಹಾಸದಲ್ಲೇ ಅತೀ ದೊಡ್ಡ ತುಳು ಪ್ರೀಮಿಯರ್ ಒಂದೇ ದಿನ 9 ಟಾಕೀಸ್ ಗಳಲ್ಲಿ 25 ಕ್ಕೂ ಹೆಚ್ಚು ಶೋ ನಡೆದು ದಾಖಲೆ ಬರೆದಿದೆ. ‘ಜೈ’ ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಪ್ರಥಮ ದಿನದಲ್ಲೇ 1020 ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಈಗಾಗಲೇ ಸಿನಿಮಾ ತೆರೆಕಂಡ ಎಲ್ಲಾ…
ಆಕೆಗೆ ಮಧ್ಯ ವಯಸ್ಸು. ಬಂದದ್ದು ಸೊಂಟ ನೋವಿನ ಸಮಸ್ಯೆ ಪರಿಹಾರಕ್ಕೆ. ಆದರೆ ಜೀವನದ ಹಲವು ತಿರುವುಗಳನ್ನು ಅನುಭವಗಳನ್ನು ಆಕೆ ಹಂಚಿಕೊಂಡಾಗ ದಿಗ್ಭ್ರಮೆಯಾದದ್ದೇ ಅಲ್ಲ ಆಕೆಯ ಬಗೆಗೆ ಗೌರವದ ಭಾವನೆಯೂ ಬಂತು. ಇದ್ದ ಎರಡು ಮಕ್ಕಳು ತಮ್ಮ ಹದಿ ಹರೆಯದಲ್ಲೇ ಇಹಲೋಕ ತ್ಯಜಿಸಿದರು. ಗುಣವಾದ ಖಾಯಿಲೆ ವರ್ಷಗಳವರೆಗೆ ತಪಸ್ಸಿನಂತೆ ನೋಡಿಕೊಂಡ ದಂಪತಿ. ಈಗ ಆಕೆ ಮಕ್ಕಳಿಗೆ ಕಲಿಸುವ ಶಿಕ್ಷಕಿ. ಇದನ್ನೆಲ್ಲಾ ಹೇಳುವಾಗ ಆ ಮುಖದಲ್ಲಿ ಏನೋ ಒಂದು ದೃಢ ನಿಶ್ಚಯವಿತ್ತು. ಕೆಲವು ಒಳ್ಳೆಯ ವಿಷಯಗಳನ್ನು ಮಕ್ಕಳಿಗೆ ಕಲಿಸುವುದೇ ನನ್ನ ಗುರಿ ನನ್ನ ಮಕ್ಕಳೂ ಅದನ್ನೇ ಬಯಸಿದ್ದರು ಎಂದು ಆಕೆ ಹೇಳಿದರು. ದುಃಖವನ್ನು ಗೆದ್ದ ಬದುಕಿಗೊಂದು ಅರ್ಥ ಹುಡುಕಿಕೊಂಡಿರುವ ಆಕೆಗೆ ಪ್ರಣಾಮಗಳು. ಇನ್ನೊಂದು ದಿನ ಬಂದ 40ರ ಆಸುಪಾಸಿನ ಮಹಿಳೆ ನೋವುಗಳನ್ನು ಉಂಡವಳೇ. ಖಿನ್ನತೆ ಮತ್ತು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆ ಹೊರಬಂದದ್ದು ತನ್ನಲ್ಲಿರುವ ಮೊಬೈಲಿನ ಸಹಾಯದಿಂದ. ಮೊಬೈಲ್ ನಿಂದ ಯುವ ಜನಾಂಗವೇ ದಾರಿ ತಪ್ಪುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದು, ಆದರೆ ಆಕೆ…
ಈ ಜಗತ್ತೇ ನಿಂತಿರುವುದು ನಂಬಿಕೆ ಮತ್ತು ವಿಶ್ವಾಸ ಎಂಬ ಎರಡು ಮಹತ್ವಪೂರ್ಣವಾದ ವಿಚಾರಗಳಲ್ಲಿ. ನಂಬಿಕೆ ಇದ್ದಲ್ಲಿ ಮಾತ್ರ ಶಿಲೆಯಲ್ಲಿ ಶಂಕರನನ್ನು ಕಾಣಲು ಸಾಧ್ಯ. ಅದೇ ರೀತಿ ತಾಯಿ ತೋರಿಸಿದವನ ಮೇಲೆ ಆತ ನಮ್ಮ ತಂದೆ ಎಂಬ ವಿಶ್ವಾಸ ಮೂಡಲು ಸಾಧ್ಯ!. ಇವುಗಳಿಗೆ ಸಾಕ್ಷಿ ಆಧಾರಗಳ ಅಗತ್ಯವಿಲ್ಲ. ಈ ವಿಚಾರವನ್ನೇ ಆಧರಿಸಿ ತಯಾರಿಸಿದ ಹೊಸ ಚಿತ್ರ ಮೊನ್ನೆ ತಾನೇ ತೆರೆಕಂಡ ‘ಕಟ್ಟೆಮಾರ್’ ಎಂಬ ತುಳು ಚಿತ್ರ. ‘ಕಟ್ಟೆಮಾರ್’ ಚಿತ್ರದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡಾ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ. ಈ ಚಿತ್ರವನ್ನು ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನ ಮಾಡಿದ್ದಾರೆ. ಇದು ಈಗಾಗಲೇ ಕನ್ನಡದಲ್ಲಿ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಕಾಣಲಿದೆ. ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ…















