Author: admin
ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ನಿಹಾರಿಕಾ ಜೆ ಶೆಟ್ಟಿ (231) ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಿಎ ಫೌಂಡೇಶನ್ ನಿಂದ ಸಿಎ ಇಂಟರ್ಮೀಡಿಯೇಟ್ ಹಾಗೂ ಸಿಎ ಫೈನಲ್ವರೆಗೆ ನಿರಂತರ ಮತ್ತು ಸಮಗ್ರ ತರಬೇತಿ ವ್ಯವಸ್ಥೆ ರೂಪಿಸಲಾಗಿದೆ. ದೇಶದ ವಿವಿಧ ಭಾಗಗಳ ಅನುಭವಿ ಹಾಗೂ ಪರಿಣತ ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವಿಷಯ ತಜ್ಞರಿಂದ ಗುಣಮಟ್ಟದ ಬೋಧನೆ, ನಿಯಮಿತ ಮೌಲ್ಯಮಾಪನ, ವೈಯಕ್ತಿಕ ಮಾರ್ಗದರ್ಶನ ಹಾಗೂ ಪರಿಕಲ್ಪನಾ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಶೈಕ್ಷಣಿಕ ಮಾದರಿಯೇ ವಿದ್ಯಾರ್ಥಿಗಳ ನಿರಂತರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಭಕ್ತಿಯ ಶಿಖರ, ನಂಬಿಕೆಯ ನೆಲೆ, ಶಕ್ತಿಯ ಸಂಕೇತ, ಸಂಸ್ಕೃತಿಯ ಸಿರಿತನ ಹಾಗೂ ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ವೈಭವವನ್ನು ಸಾರುವ ಪವಿತ್ರ ಕ್ಷೇತ್ರವೇ ಶ್ರೀ ಕ್ಷೇತ್ರ ಮಂದಾರ್ತಿ. ಮಂದಾರ್ತಿ ಕೇವಲ ಒಂದು ದೇವಾಲಯವಲ್ಲ. ಅದು ಭಕ್ತಿಯ ಅನುಭವ, ಶಕ್ತಿಯ ಆರಾಧನೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ಕರಾವಳಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಬೆಳಗುತ್ತಿರುವ ದಿವ್ಯ ಶಕ್ತಿಪೀಠವಾಗಿದೆ. ಇಂತಹ ಶ್ರೀ ದುರ್ಗೆಯ ಪದತಲದಲ್ಲಿ ಜನಿಸಿ ಬೆಳೆದ ಅಮರನಾಥ ಶೆಟ್ಟಿ ಹೆಗ್ಗುಂಜೆಯವರು 2026 –29ನೇ ಸಾಲಿನ ಅವಧಿಗೆ ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಅಮರನಾಥ ಶೆಟ್ಟಿಯವರು 2014 -16 ಹಾಗೂ 2016 -18 ರವರೆಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಮಾಜಸೇವಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿದ್ಯಾರ್ಥಿವೇತನ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿ, 2022 ರಿಂದ 2024 ರವರೆಗೆ ಖಜಾಂಚಿಯಾಗಿ ಅತ್ಯಂತ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ನಿಷ್ಪಕ್ಷಪಾತತೆಯಿಂದ ಕಾರ್ಯ ನಿರ್ವಹಿಸಿ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಬಂಟರ…
ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಆದಿತ್ಯ ಎಚ್ ಪೆರ್ಗಡೆ ಅವರು ಒಟ್ಟು 406 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 47 ನೇ ರ್ಯಾಂಕ್ ಪಡೆದಿದ್ದಾರೆ. ಬಂಟ್ವಾಳ ಪರಂಗಿಪೇಟೆ ಮೇರೆಮಜಲು ಎಂಬಲ್ಲಿ ಅಸಹಾಯಕ, ಅನಾಥ, ನಿರ್ಲಕ್ಷಿತ ಮಂದಿಯ ಸೇವೆಯಲ್ಲಿ, ‘ಶ್ರೀ ಮಾತಾ ಲಕ್ಷಣಿ ಆಶ್ರಯ ಧಾಮ’ ಸಂಸ್ಥೆಯ ಮೂಲಕ ಸಮಾಜಮುಖಿಯಾಗಿ ಪ್ರಸ್ತುತ ಪಡಿಸಿಕೊಂಡಿರುವ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಮತ್ತು ಶಶಿಕಲಾ ಪೆರ್ಗಡೆ ದಂಪತಿಯ ಪುತ್ರರಾದ ಇವರು ಪ್ರತಿಭಾವಂತ ಸಾಧಕ. ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ ಮೀಡಿಯೆಟ್ ತರಬೇತಿ ಜೊತೆಗೆ ಪದವಿ ಶಿಕ್ಷಣವನ್ನು ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ಪಡೆದಿದ್ದಾರೆ. ಆರ್ಟಿಕಲ್ ಶಿಪ್ ಅನ್ನು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕ ಸಂಸ್ಥೆ ಗಣೇಶ ಮತ್ತು ಸುಧೀರ್ ಅವರಲ್ಲಿ ಪೂರೈಸಿದ್ದಾರೆ.
ನಮ್ಮ ಹಿರಿಯರ ಪ್ರಕಾರ ವಿವಾಹ ಎಂಬುದು ಪವಿತ್ರ ಬಂಧನ. ಇದಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ. ಹಿಂದೆ ಕುಟುಂಬ ವ್ಯವಸ್ಥೆ ಭದ್ರವಾಗಿದ್ದು, ಹೆಚ್ಚಿನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತರಾಗಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜಾಗೃತಿಯಿಂದ ಕುಟುಂಬ ಜೀವನದಲ್ಲಿಯೂ ಅನೇಕ ಬದಲಾವಣೆಗಳು ಕಂಡುಬಂದಿವೆ. ಯಶಸ್ವಿ ವೈವಾಹಿಕ ಜೀವನದಲ್ಲಿ ದೀರ್ಘಕಾಲ ಕಳೆದ ದಂಪತಿಗಳನ್ನು ಗೌರವಿಸಿ, ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ಗುರುತಿಸುವ ಉದ್ದೇಶದಿಂದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ -2026’ ಪ್ರದಾನಿಸಲಾಯಿತು ಎಂದು ಕಲಾ ಜಗತ್ತು ಸಂಸ್ಥೆಯ ಅಧ್ಯಕ್ಷ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಹೇಳಿದರು. ಜೂನ್ 26ರಂದು ಬೊರಿವಲಿ ಪಶ್ಚಿಮ ಪ್ರಭೋದನ್ ಠಾಕ್ರೆ ನಾಟ್ಯಗೃಹದಲ್ಲಿ ಕಲಾ ಜಗತ್ತು ವಸುಂಧರ ವತಿಯಿಂದ ಜರಗಿದ ‘ವಸುಂಧರ ಆದರ್ಶ ದಂಪತಿ ಪ್ರಶಸ್ತಿ–2026’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುಖೀ ದಾಂಪತ್ಯ ಜೀವನಕ್ಕೆ ಪರಸ್ಪರ ವಿಶ್ವಾಸ, ಗೌರವ, ತಾಳ್ಮೆ ಮತ್ತು ಹೊಂದಾಣಿಕೆ ಅತ್ಯಂತ ಮುಖ್ಯವೆಂದು ತಿಳಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕೃತಿ,…
ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಗೊಂಡಿದ್ದು, ಉಪಾಧ್ಯಕ್ಷೆಯಾಗಿ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಮಾಲಿನಿ ಜೆ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಮಾಲಿನಿ ಜೆ ಶೆಟ್ಟಿಯವರು ನೀರೆ ಕಣಂಜಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯಾಗಿ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮತ್ತು ಅಧ್ಯಕ್ಷೆಯಾಗಿ, ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಎರಡನೇ ಬಾರಿಗೆ ಜಿಲ್ಲಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೇ ಧಾರ್ಮಿಕ ಹಾಗೂ ಸಾಮಾಜಿಕವಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರೀಕದಲ್ಲಿ ಬಂಟ ಸಮಾಜದ ಮಹಾನ್ ಚೇತನ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಕೊಡುಗೈ ದಾನಿಯಾಗಿದ್ದ ದಿವಂಗತ ಸತೀಶ್ಚಂದ್ರ ಹೆಗ್ಡೆ ಅವರ ಸವಿ ನೆನಪಿಗಾಗಿ ‘ಸತೀಶ್ಚಂದ್ರ ಹೆಗ್ಡೆ ಸರ್ಕಲ್’ ಲೋಕಾರ್ಪಣೆಗೊಂಡಿತು. ಈ ಸಂಧರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರೇಮಲತಾ ಎಸ್ ಹೆಗ್ಡೆ, ಆತ್ರಾಡಿ ಬೀಡು ದಿಲೀಪ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಹುಬ್ಬಳ್ಳಿ ಧಾರವಾಡ ಬಂಟರ ಸಂಘದ 2026 -28ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಪ್ರಮುಖರನ್ನು ಹೂಗಾರ ಸಮಾಜ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ರಾಜೇಂದ್ರ ವಿ ಶೆಟ್ಟಿ, ನೂತನ ಕಾರ್ಯದರ್ಶಿ ರತ್ನಾಕರ್ ಎಂ. ಶೆಟ್ಟಿ (ಕರಾವಳಿ ಕ್ಯಾಟರ್ಸ್) ಹಾಗೂ ನೂತನ ಖಜಾಂಚಿ ದಿನೇಶ್ ಕೆ ಶೆಟ್ಟಿ ಅವರನ್ನು ಪ್ರತಿಷ್ಠಾನದ ಪದಾಧಿಕಾರಿಗಳು ಗೌರವಿಸಿ, ಅವರ ಮುಂದಿನ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಿದರು. ನೂತನ ಪದಾಧಿಕಾರಿಗಳ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ಆಶಿಸಲಾಯಿತು. ಈ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಹೂಗಾರ ಸಮಾಜ ಅಭಿವೃದ್ಧಿ ಪ್ರತಿಷ್ಠಾನದ ಪ್ರಮುಖರಾದ ಲೋಚನೇಶ ಹೂಗಾರ, ಸುರೇಶ ಹೂಗಾರ, ಬಸವರಾಜ ಹೂಗಾರ ಹಾಗೂ ಹೊಳಬಸಪ್ಪ ಹೂಗಾರ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ ಬ್ರಹ್ಮಾವರ ವಲಯದ ಸಂಚಾಲಕಿಯಾಗಿ ಶ್ರೀಮತಿ ಆಶಾ ಎ. ಹೆಗ್ಡೆ ಅವರನ್ನು ಮರು ನೇಮಕ ಮಾಡಲಾಗಿದೆ. ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಆಶಾ ಎ. ಹೆಗ್ಡೆ ಅವರು ಶ್ರೀದೇವಿ ಕ್ಲಿನಿಕಲ್ ಲ್ಯಾಬೋರೇಟರಿ, ಶ್ರೀದೇವಿ ಹೆಲ್ತ್ ಕೇರ್ ಮತ್ತು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮಂದಾರ್ತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಂಸ್ಥೆಯ ಕರ್ನಾಟಕ ಉಪಾಧ್ಯಕ್ಷೆ, ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಸಮಾಜಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ಪ್ರಧಾನ ಸಂಚಾಲಕ ವಿಶ್ವನಾಥ…
ಬಂಟರ ಸಂಘ ಹೈದರಾಬಾದ್ ವತಿಯಿಂದ ಬಂಟ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜುಲೈ 5 ರಂದು ಸಂಜೆ 6 ಗಂಟೆಗೆ ಹೈದರಾಬಾದ್ ಲಕ್ಡಿಕಪುಲ್ ನಲ್ಲಿರುವ ಹೋಟೆಲ್ ಅಬೋಡೆಯಲ್ಲಿ ಸಂಘದ ಅಧ್ಯಕ್ಷ ಎಚ್ ಚಂದ್ರಶೇಖರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಂದಾಪುರ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಉದ್ಯಮಿ, ಸಮಾಜಸೇವಕ, ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ರೈ ಹಾಗೂ ಗೀತಾ ರೈ ದಂಪತಿಗಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಗುವುದು. ಬಂಟರ ಸಂಫದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೈದರಾಬಾದ್ ಬಂಟರ ಸಂಘದ ಅಧ್ಯಕ್ಷ ಎಚ್ ಚಂದ್ರಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿತಾ ಪಿ ಶೆಟ್ಟಿ ಹಾಗೂ ಕೋಶಾಧಿಕಾರಿ ಎಸ್ ರವಿ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟರ ಸಂಘ ಬಜಪೆ ವಲಯದ ನೂತನ ಬಂಟರ ಭವನಕ್ಕೆ ಶಿಲಾನ್ಯಾಸ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮವು ಸಂಘದ ನಿವೇಶನ ಇರುವ ಬಜಪೆ ತಾರಿಕಂಬ್ಳ ಮುಂಡಾರಿನಲ್ಲಿ ಜುಲೈ 5ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಬಂಟರ ಸಂಘ ಬಜಪೆಯ ಅಧ್ಯಕ್ಷ ವೇಣುಗೋಪಾಲ್ ಎಲ್ ಶೆಟ್ಟಿ ಕರಂಬಾರು ಪಡುಮನೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದಾಜು ರೂ. 10 ಕೋಟಿಯಲ್ಲಿ ನಿರ್ಮಾಣಗೊಳ್ಳಲಿರುವ ಬಂಟರ ಭವನಕ್ಕೆ ಎಂ.ಆರ್.ಜಿ ಸಮೂಹ ಸಂಸ್ಥೆಗಳ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸುವರು. ಶಬರಿ ಇಂಡಸ್ಟ್ರಿಯಲ್ ಕೇಟರಿಂಗ್ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಕೆ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸುವರು. ಉದ್ಯಮಿ ಕರುಣಾಕರ ಶೆಟ್ಟಿ ಮಧ್ಯಗುತ್ತುರವರು ನೂತನ ಬಂಟರ ಭವನದ ನೀಲನಕ್ಷೆ ಬಿಡುಗಡೆ ಮಾಡುವರು. ಪುಣೆ ಬಂಟರ ಸಂಘ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರುಗುತ್ತು…















