Author: admin

ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಗ್ರಾಮಾಂತರ ಹಾಗೂ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಜಾಲಹಳ್ಳಿ ಇವರ ಜಂಟಿ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಕು.ಗ್ರೀಷ್ಮಾ ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಮುಂಬರುವ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ಸತೀಶ್ ಹಾಗೂ ಶ್ರೀಮತಿ ಚೈತ್ರಾ ದಂಪತಿಗಳ ಸುಪುತ್ರಿಯಾಗಿರುತ್ತಾರೆ ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು, ಟ್ರಸ್ಟಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದ್ದಿ ವರ್ಗದವರು ಹರ್ಷವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

Read More

ಯುಎಇ ಬಂಟ್ಸ್ ವತಿಯಿಂದ 11ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಗರದ ಜೆ.ಎಸ್.ಎಸ್ ಶಾಲೆಯಲ್ಲಿ ಭಕ್ತಿ ಭಾವದೊಂದಿಗೆ ಅಕ್ಟೋಬರ್ 5 ರಂದು ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಯುಎಇ ರಾಜ್ಯದ ಎಲ್ಲಾ ಬಂಟ ಬಾಂಧವರು ಹಾಗೂ ಯುಎಇಯ ಎಲ್ಲಾ ಸಮುದಾಯದ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು. ಶ್ರೀ ರಘು ಭಟ್ ಮತ್ತು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ವೈದಿಕ ವಿಧಿ ವಿಧಾನಗಳು ನೆರವೇರಿತು. ಪೂಜೆಯ ಪ್ರತಿನಿಧಿಯಾಗಿ ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಮತ್ತು ಶ್ರೀಮತಿ ರೂಪಾಲಿ ಶೆಟ್ಟಿ, ಸಾಯಿನಾಥ್ ವಿಠಲ ಶೆಟ್ಟಿ ಮತ್ತು ಪ್ರತಿಮಾ ಸಾಯಿನಾಥ್ ಶೆಟ್ಟಿ, ಪೆರ್ಲಗುತ್ತು ಗೋಕುಲ್ ದಾಸ್ ರೈ ಮತ್ತು ನಿಶ್ಮಿತಾ ಗೋಕುಲ್ ದಾಸ್ ರೈ ದಂಪತಿಗಳು ಕುಳಿತರು. ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಪೂಜೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಸ್ವಾಗತಿಸಿದರು.…

Read More

ಮನುಷ್ಯನ ಅಸ್ತಿತ್ವ ಇರುವುದೇ ಭಗವಂತನ ಕೈಯಲ್ಲಿ. ದೇವರ ಅನುಗ್ರಹದಿಂದ ನಮ್ಮ ಜೀವನ ಸಾರ್ಥಕ ಬದುಕನ್ನು ಕಾಣಬಹುದು. ಶರವನ್ನರಾತ್ರಿಯ ವಿಜಯ ದಶಮಿಯ ಪಾವಿತ್ರತೆಯ ಈ ಶುಭ ಅವಸರದ ಸಂದರ್ಭದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದವರು ಆಯೋಜಿಸಿದ ಈ ಕಾರ್ಯಕ್ರಮ ಶ್ಲಾಘನೀಯ. ಮುಂಬಯಿ ಬಂಟರ ಸಂಘ ಹಾಗೂ ಅದರ ಪ್ರಾದೇಶಿಕ ಸಮಿತಿಗಳಲ್ಲಿ ಅದೆಷ್ಟೋ ಉತ್ತಮ ಕೆಲಸ ಕಾರ್ಯಗಳು ಸಮಾಜದ ಪರವಾಗಿ ನಡೆಯುತ್ತಿದೆ. ನಮ್ಮ ಸಮಾಜ ಬಾಂಧವರಲ್ಲಿ ಸಂಘದ ಆಗು ಹೋಗುಗಳ ಬಗ್ಗೆ ಅರಿವು ಮೂಡಬೇಕಾದರೆ ಕೆಲವಾದರೂ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿ ಅತ್ಯಗತ್ಯ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಕರೆಯಿತ್ತರು. ಅವರು ಅಕ್ಟೋಬರ್ 2 ರಂದು ಭಯಂದರ್ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ದಿ ಕ್ರೌನ್ ಬ್ಯುಸಿನೆಸ್ ಹೊಟೇಲ್ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರ ನೇತೃತ್ವದಲ್ಲಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಭ್ ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಆಯೋಜಿಸಿದ ದಾಂಡಿಯಾ…

Read More

ದೈವ ಆಳಿ ಬರುವ ಸಿನೆಮಾ ಕಾಂತಾರ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ಹೋರಾಟಗಾರರು ಸೆಲೆಕ್ಟಿವ್ ಆಗೋದರ ಬಗ್ಗೆ ನನ್ನ ಸ್ಪಷ್ಟ ಆಕ್ಷೇಪವಿದೆ. ಸಿನೆಮಾದಲ್ಲಿ ಕೋಲದ ದೃಶ್ಯ ತೋರಿಸುವುದರಿಂದ ಅನ್ಯಾಯ ಆಗುತ್ತದೆ ಎಂದು ಕೆಲವೇ ಕೆಲವು ಮಂದಿ ವಾದ ಮಾಡುತ್ತಿದ್ದಾರೆ. ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಬಿ.ವಿ. ಕಾರಂತ ನಿರ್ದೇಶನದ ಚೋಮನ ದುಡಿ ಸಿನೆಮಾದ ಆದಿಯಾಗಿ ಮೊನ್ನೆ ಮೊನ್ನೆಯ ಗಗ್ಗರದ ತನಕ ಕೋಲದ ದೃಶ್ಯಗಳಿರುವ ಸಿನೆಮಾಗಳನ್ನ ನಾವು ನೋಡಿದ್ದೇವೆ. ಸಿನೆಮಾ ನೋಡಿ ಅದನ್ನ ಅನುಕರಣೆ ಮಾಡುವ ಯಡವಟ್ಟುಗಳಿಗೆ ಇರುವುದು ಪ್ರಚಾರದ ಅಮಲು. ಮೊನ್ನೆ ಒಬ್ಬ ಹುಡುಗ ದೊಂದಿಯೊಂದಿಗೆ ರೀಲ್ಸ್ ಮಾಡುತ್ತಾ ಕುಂದಾಪುರದ ಹುಡುಗ ಎಂದು ಬೊಬ್ಬೆ ಹಾಕುತ್ತಿದ್ದ! ಮನೆಯಲ್ಲಿ ಮೈಯಲ್ಲಿ ಬೊಬ್ಬೆ ಬೀಳುವಂತೆ ಬಡಿದರೆ ಆ ತೆವಲುಗಳೆಲ್ಲವೂ ನಿಲ್ಲುತ್ತದೆ. ಸಿನೆಮಾಗಳಲ್ಲಿ ಹೀರೊ ಮಚ್ಚು ಹಿಡಿದು ಕೊಚ್ಚುತ್ತಾನೆ ಎಂದು ತಾನೂ ಮಚ್ಚು ಹಿಡಿದು ಹೂಂಕಾರ ಮಾಡಿದರೆ ಆತ ಜೈಲುಪಾಲಾಗುವುದಿಲ್ಲವೇ? ಹಾಗೆಯೇ ಪ್ರಚಾರಕ್ಕಾಗಿ ಕೋಲದ ಮುಖವರ್ಣಿಕೆ ಹಾಕಿ ಅನುಕರಣೆ ಮಾಡುವವರ ಬಗ್ಗೆ ನಮ್ಮ ಆಕ್ಷೇಪ…

Read More

ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾಮದೇವ ಭಜನಾ ಮಂಡಳಿ ಕುತ್ತೆತ್ತೂರು ಸೂರಿಂಜೆ 75 ನೇ ವರ್ಷದ ಭಜನಾ ಅಮೃತ ಮಹೋತ್ಸವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಪೊನ್ನಗಿರಿ ದೇವಸ್ಥಾನದಲ್ಲಿ ಜರುಗಿತು. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ ಬೊಳ್ಳಾರು ಗುತ್ತು, ಕಾರ್ಯದರ್ಶಿ ಜಯಶೀಲ ಸೂರಿಂಜೆ, ಕೋಶಾಧಿಕಾರಿ ವಾಮನ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಹಯವದನ ಭಟ್, ಶಶಿಧರ ಶೆಟ್ಟಿ ಸೂರಿಂಜೆ, ಧನಂಜಯ ಶೆಟ್ಟಿ ಬೊಳ್ಳಾರು ಗುತ್ತು, ಗಿರೀಶ್ ಕೋಟೆ, ಸುಕೇಶ್ ಶೆಟ್ಟಿ ಬೈಲಗುತ್ತು, ಜಗನ್ನಾಥ ಶೆಟ್ಟಿ ತೇವು ಸೂರಿಂಜೆ, ಸುಜೀರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಕವಿತಾ, ಶ್ರೀಕಾಂತ್ ಶೆಟ್ಟಿ, ಯೋಗೀಶ್ ಶೆಟ್ಟಿ, ದಾಸು ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಪ್ರಸಾದ್ ಅಂಚನ್, ದಿನೇಶ್ ಬಂಗೇರ, ರಾಧಕೃಷ್ಣ ಭಂಡಾರ್ಕರ್ ಉಪಸ್ಥಿತರಿದ್ದರು.

Read More

ವಿಜಯ ಬ್ಯಾಂಕ್ ನ ನಿವೃತ್ತ ಅಧಿಕಾರಿ ಪುತ್ತೂರು ಮೂಲದ ಅಗರಿ ಮೋಹನ್ ದಾಸ್ ಭಂಡಾರಿ ಅವರು ಅ. 5ರಂದು ರಾತ್ರಿ ಬೆಂಗಳೂರಿನ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು. ಮೃತರು ಪತ್ನಿ ಶಕುಂತಲಾ ಭಂಡಾರಿ, ಪುತ್ರಿಯರಾದ ಭವ್ಯ, ದಿವ್ಯ, ಅಳಿಯಂದಿರಾದ ನಿತಿನ್ ರೈ, ವಿಜಯ್ ಶೆಟ್ಟಿ, ಸಹೋದರರಾದ ಕರ್ನಲ್ ಎ ಜೆ ಭಂಡಾರಿ, ಸಹಕಾರಿ ಧುರೀಣ ದಿ. ಅಗರಿ ಜಗಜೀವನ್ ಭಂಡಾರಿ, ಆರ್.ಬಿ.ಐ ನ ಮಾಜಿ ನಿರ್ದೇಶಕ ಸಹಕಾರ ರತ್ನ ಅಗರಿ ನವೀನ್ ಭಂಡಾರಿ, ಅಗರಿ ಭಗವಾನ್ ದಾಸ್ ಭಂಡಾರಿಯವರನ್ನು ಅಗಲಿದ್ದಾರೆ. ಮೋಹನ್ ದಾಸ್ ಭಂಡಾರಿ ಅವರು ದೆಹಲಿ, ಜೆಮ್ಶೆಡ್ ಪುರ, ಮದ್ರಾಸ್, ಕೊಲ್ಕತ್ತಾ, ಬೆಂಗಳೂರು, ಹೊಸೂರು, ಮೂಡಲಪಾಳ್ಯ, ದೊಮ್ಮಲೂರು ಸೇರಿದಂತೆ ವಿಜಯ ಬ್ಯಾಂಕಿನಲ್ಲಿ 35 ವರ್ಷ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿದ್ದ ಭಂಡಾರಿಯವರು ಭಾಂಧವ್ಯ ಕ್ರೆಡಿಟ್ ಸಹಕಾರಿ ಲಿಮಿಟೆಡ್ ಎಂಬ ಸೊಸೈಟಿ ಬ್ಯಾಂಕ್ ಬೆಂಗಳೂರಿನಲ್ಲಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Read More

ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪುರುಷರ ತಂಡವು ಪ್ರಥಮ ಸ್ಥಾನವನ್ನು ಪಡೆದರೆ, ಮಹಿಳೆಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಆ ಮೂಲಕ ಆಳ್ವಾಸ್ ಪದವಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ದಶಮ ಸಂಭ್ರಮ ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ನೆರವೇರಿತು. ದೆಹಲಿಯ ಸಂಸದರಾದ ಭಾನ್ಸುರಿ ಸ್ವರಾಜ್ ಸಮಾರಂಭವನ್ನು ಉದ್ಘಾಟಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಕಾರ್ಯ ಯೋಜನೆಗಳನ್ನು ಮತ್ತು ಪಟ್ಲ ಸತೀಶ್ ಶೆಟ್ಟಿಯವರಿಗೆ ಕಲಾವಿದರ ಮೇಲಿರುವ ಕಾಳಜಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪಟ್ಲ ಟ್ರಸ್ಟ್ ಫೌಂಡೇಶನ್ ಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆಯನ್ನು ನೀಡಿದರು. ಪಟ್ಲ ಫೌಂಡೇಶನ್ ನ ದೆಹಲಿ ಘಟಕದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಶ್ ಪ್ರಸಾದ್, ಐಎಎಸ್ ಸಿಬಿಐಯ ಜಂಟಿ ನಿರ್ದೇಶಕ ಅಶ್ವಿನ್ ಶೇನ್ವಿ ಐಪಿಎಸ್, ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಪಟ್ಲ ಟ್ರಸ್ಟ್ ನ ಮಹಾದಾನಿ ಶಶಿಧರ ಶೆಟ್ಟಿ ಬರೋಡ, ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ದೆಹಲಿಯ ಪ್ರಸಿಧ್ಧ ಉದ್ಯಮಿಗಳಾದ ವಿವೇಕ್ ಅಗರ್ವಾಲ್, ಶ್ರೀಮತಿ ದೀಪ್ತಿ ಶರ್ಮ, ದೆಹಲಿ ಕರ್ನಾಟಕ ಸಂಘದ…

Read More

ಮೂಡುಬಿದಿರೆ: ನದಿ ಹಾಗೂ ಸಮುದ್ರ ತೀರಗಳಲ್ಲಿ ಜನರ ಸೆಲ್ಫಿಯ ಹುಚ್ಚಿನಿಂದಾಗಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ಸಮಾಜ ಸೇವಕ ಹಾಗೂ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ನುಡಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆ ಸ್ಪಟಿಕ ಫೋರಂನ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿಯ ಮಳೆಗಾಲದಲ್ಲಿ ಒಟ್ಟು 50ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಸಂದರ್ಭಗಳಲ್ಲಿ ಕೇವಲ ಐವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ತನ್ನ ಬದುಕಿನ ವೃತ್ತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ತಾನು ಬಾಲ್ಯದಲ್ಲಿ ಸೇನೆಗೆ ಸೇರಬೇಕೆಂದು ಕನಸು ಕಂಡಿದ್ದೆ, ಆದರೆ ಬಡತನದಿಂದಾಗಿ ವಿದ್ಯಾಭ್ಯಾಸ ಪಡೆಯಲಾಗಲಿಲ್ಲ. ಆದರೆ ಇಂದು ತನ್ನಿಷ್ಟದ ಈಜು ಕಲೆಯನ್ನು ಕರಗತ ಮಾಡಿಗೊಂಡು ಕೈಲಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನದಿ ಹಾಗೂ ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗುವವರನ್ನು ರಕ್ಷಿಸುವುದು ನನ್ನ ಕಾಯಕವಾಗಿದೆ. ಅದರಲ್ಲೆ ಆತ್ಮ ತೃಪ್ತಿ ಕಾಣುತ್ತಿದ್ದೇನೆ.…

Read More

ಮುಂಬಯಿ: ನಮ್ಮ ಕನ್ನಡ ಸಾಹಿತ್ಯಕ್ಕೆ ಪ್ರಭುದ್ಧವಾದ ಹಿನ್ನೆಲೆಯಿದೆ. ನಮಗೆ ಕಲಿಯುವ ಹುಮ್ಮಸ್ಸು ಇರಬೇಕು. ಜ್ಞಾನಕಾಂಕ್ಷೆ ಬಹಳ ಮುಖ್ಯವಾದುದು.ಮುಂಬಯಿಯಲ್ಲಿ ಸೃಜನಶೀಲತೆಗೆ ಸಾವಿರ ದಾರಿಗಳಿವೆ. ಇಲ್ಲಿ ಪ್ರೋತ್ಸಾಹ ಸಿಗುವಷ್ಟು ಬೇರೆಲ್ಲೂ ಸಿಗುವುದಿಲ್ಲ. ಇಂತಹ ಮುಂಬಯಿ ಕೇಂದ್ರಿತ ಕಾರ್ನಾಡ್ ಅವರ ಕತೆಗಳಲ್ಲಿ ಧನಾತ್ಮಕ ಚಿಂತನೆಗಳಿವೆ ಎಂದು ಜಾನಪದ ವಿದ್ವಾಂಸರಾದ ಡಾ.ಕಾಳೇಗೌಡ ನಾಗವಾರ ಅವರು ನುಡಿದರು. ಅವರು ಸೆಪ್ಟೆಂಬರ್ 26ರ ಶುಕ್ರವಾರದಂದು ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ.ನಾಯಕ್ ಭವನದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಅಂದು ಡಾ.ವಿಶ್ವನಾಥ ಕಾರ್ನಾಡರ ‘ಲಿಲ್ಲಿ ಬಂದು ಹೋದಳು’ ಕತಾ ಸಂಕಲನ, ಅಪರಾಧಿ(ಕನ್ನಡದಿಂದ ಮರಾಠಿಗೆ) ಹಾಗೂ ಇಂತಹ ‘ಮಂಗಳಮೂರ್ತಿ ಗಣೇಶ’ (ಮರಾಠಿಯಿಂದ ಕನ್ನಡಕ್ಕೆ) ಸರೋಜಿನಿ ತರೆ ಅವರ ಅನುವಾದಿತ ಕೃತಿಗಳನ್ನು ವೇದಿಕೆಯ ಗಣ್ಯರು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ನಾಡ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಜಿ.ಎನ್.ಉಪಾಧ್ಯ ಅವರು ಮಾತನಾಡುತ್ತಾ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಡಾ.ವಿಶ್ವನಾಥರ ಕೊಡುಗೆ ದೊಡ್ಡದು. ಕಳೆದ ಅನೇಕ ವರ್ಷಗಳಿಂದ…

Read More