Author: admin
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಮಾರ್ಚ್ 22 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ “ಐಸಿರಿ – 2026” ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಾರ್ಚ್ 2 ರಂದು ಜರಗಿತು. ಪ್ರಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ನಿಕಟ ಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ ಕೆರೆಕ್ಕೋಡಿ ಮತ್ತು ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು,…
ಮಾರ್ಚ್ 1 ರಂದು ಆದಿತ್ಯವಾರ ಬಂಟ್ಸ್ ಹಾಸ್ಟೆಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯು ಜರಗಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಸಭೆಯು ಸುರೇಶ್ ಶೆಟ್ಟಿ ಶಿಬರೂರು ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಭೆಯಲ್ಲಿ ದಾನಿಗಳಾದ ತೋನ್ಸೆ ಆನಂದ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಂದ್ರ ವಿ ಶೆಟ್ಟಿ ಪಂಜುರ್ಲಿ ಗ್ರೂಪ್ಸ್, ಶಶಿಧರ್ ಶೆಟ್ಟಿ ಇನ್ನಂಜೆ, ಉದಯ್ ಕುಮಾರ್ ಶೆಟ್ಟಿ ಮುನಿಯಾಲ್ ಹಾಗೂ ಸದಸ್ಯರಾದ ವಸಂತ್ ಶೆಟ್ಟಿ ಜಪ್ಪು, ಕರ್ನಲ್ ಶರತ್ ಭಂಡಾರಿ, ಸುಕುಮಾರ್ ಶೆಟ್ಟಿ ಮುಂಬೈ, ವಿಶಾಕ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡನಿಡಂಬೂರು, ಜಯರಾಮ್ ಸಾಂತ ಇವರುಗಳು ಒಕ್ಕೂಟದ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಉತ್ತಮ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಒಕ್ಕೂಟದ ದಾನಿಗಳಾದ ತೋನ್ಸೆ ಆನಂದ್ ಎಂ. ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ರಾಜೇಶ್ ಶೆಟ್ಟಿ ರಾಕ್ಷಿ ಡೆವಲಪರ್ಸ್, ಬೆಳ್ಳಾಡಿ ಅಶೋಕ್ ಶೆಟ್ಟಿ, ಅರವಿಂದ್ ಆನಂದ್ ಶೆಟ್ಟಿ,…
ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಮಹಿಳೆಯರು ಸ್ವಂತ ಮನೆ ಹಾಗೂ ಸಮಾಜವನ್ನು ಬೆಳಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡಿದ್ದಾರೆ. ನಾವು ಸದಾ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸುವ ಕಡೆಗೆ ಗಮನ ಹರಿಸಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಹೇಳಿದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಫೆಬ್ರವರಿ 26 ರಂದು ಘಾಟ್ಕೋಪರ್ ಪೂರ್ವದ ಪಂತ್ ನಗರದ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್ ಶೆಟ್ಟಿ ಬಾಬಾಸ್ ಗ್ರೂಪ್ ಸಭಾಗೃಹದಲ್ಲಿ ನಡೆದ ಅರಶಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅರಶಿನ ಕುಂಕುಮ ಮಹಿಳೆಯರ ಸೌಭಾಗ್ಯದ ಸಂಕೇತವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು. ವೆಲ್ಕಮ್ ಪ್ಯಾಕೇಜಿಂಗ್ ಕಂಪನಿಯ ಆಡಳಿತ ನಿರ್ದೇಶಕ ರವೀಂದ್ರನಾಥ ಎಂ. ಭಂಡಾರಿಯವರು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿಯ ಕಾರ್ಯ…
ಹೈದರಾಬಾದ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಹೈದರಾಬಾದ್ ನ ಹಿರಿಯ ಹೋಟೆಲ್ ಉದ್ಯಮಿ, ಕುಂದಾಪುರದ ಶ್ರೀ ಸಾಯಿ ಸೆಂಟರ್ ಕಟ್ಟಡದ ಮಾಲೀಕರಾದ ಶ್ರೀ ಎಚ್ ಚಂದ್ರ ಶೆಟ್ಟಿ ಮಂಚಿರಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಉದಾರ ದಾನಿಯಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರ ಶೆಟ್ಟಿಯವರ ಸೇವಾ ಅವಧಿಯಲ್ಲಿ ಹೈದರಾಬಾದ್ ಬಂಟರ ಸಂಘ ಉತ್ತರೋತ್ತರ ಶ್ರೇಯಸ್ಸನ್ನು ಕಾಣುವಂತಾಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಸವಣೂರು ಗ್ರಾಮದ ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾರ್ಚ್ 25 ಹಾಗೂ 26 ರಂದು ನಡೆಯುವ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ದೇವಸ್ಥಾನದಲ್ಲಿ ಫೆಬ್ರವರಿ 27 ರಂದು ಜರುಗಿತು. ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸಮಿತಿ ಸದಸ್ಯರಾದ ಮೋನಪ್ಪ ಗೌಡ ಆರೆಲ್ತಡಿ, ರಾಕೇಶ್ ರೈ ಕೆಡಂಜಿ, ಅರ್ಚಕರಾದ ಪದ್ಮನಾಭ ಕುಂಜತ್ತಾಯ, ಸವಣೂರು ಪ್ರಾ.ಕೃ.ಪ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಮೆದು, ಸದಸ್ಯರಾದ ಹರಿಶ್ಚಂದ್ರ ಕಾಯರ್ಗ, ಹರೀಶ್ ಕುಕ್ಕುಜೆ, ಬಾಲಕೃಷ್ಣ ಕುದ್ಮನಮಜಲು, ಪ್ರಥಮ್ ಕಾಯರ್ಗ ಉಪಸ್ಥಿತರಿದ್ದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ಕೋತ್ಸವ್’ ಉದ್ಘಾಟನಾ ಕಾರ್ಯಕ್ರಮವು ಶ್ರೀಮತಿ ಮೋಹಿನಿ ಅಪ್ಪಾಜಿ ವೇದಿಕೆ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಡ್‌ಕ್ರಾಫ್ಟ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ‘ಟೆಕ್ಕೋತ್ಸವ್’ ಕೇವಲ ತಂತ್ರಜ್ಞಾನ ಆಚರಣೆಗಾಗಿ ಮಾತ್ರವಲ್ಲ, ನವೀನತೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಆಯೋಜಿಸಲಾದ ವೇದಿಕೆಯಾಗಬೇಕು ಎಂದರು. ವಿದ್ಯಾರ್ಥಿ ಜೀವನದಲ್ಲಿ ಇಂತಹ ತಾಂತ್ರಿಕ ಉತ್ಸವಗಳು ಅತ್ಯಂತ ಮಹತ್ವದ್ದಾಗಿದ್ದು, ಕಾಲೇಜಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. 20 ಕ್ಕೂ ಅಧಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ವೇದಿಕೆಗಳು ಹೊಸ ವಿಷಯಗಳನ್ನು ತಿಳಿಯಲು, ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಅನುಭವ ಹಂಚಿಕೊಳ್ಳಲು ನೆರವಾಗುತ್ತವೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಯಾವುದೇ ತಂತ್ರಜ್ಞಾನವನ್ನು ಬಳಸುವ ಮೊದಲು ಮೂಲಭೂತ ಅಂಶಗಳ ಮೇಲೆ ಗಮನ…
ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ಜನವರಿಯಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಹಿರ್ಗಾನದ ಸೃಜನ್ ಶೆಟ್ಟಿ ಅವರು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ. ಇವರು ದಿವಂಗತ ಸೀತಾರಾಮ ಶೆಟ್ಟಿ ಹಾಗೂ ಸುಮಿತ್ರಾ ಶೆಟ್ಟಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹಿರ್ಗಾನ ಸೈಂಟ್ ಮರಿಯ ಗೊರಟ್ಟಿ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದು, ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸಿಎ ಶಿಕ್ಷಣ ಪಡೆದಿರುತ್ತಾರೆ.
ಜಯಶ್ರೀಕೃಷ್ಣ ಪರಸರ ಪ್ರೇಮಿ ಜಿಲ್ಲಾ ಸಮಿತಿಯು (NGO) ಉಡುಪಿಯ ಇಂದ್ರಾಣಿ ನದಿ ಮಾಲಿನ್ಯದ ಕುರಿತು ಮುನಿಸಿಪಲ್ ಕಮಿಷನರ್ ಮತ್ತು ಸಂಬಂಧಿತ ಅಧಿಕಾರಿಗಳಿಗೆ ತುರ್ತು ಮನವಿ ಸಲ್ಲಿಸಿ, ಇಂದ್ರಾಣಿ ನದಿಯ ಮಾಲಿನ್ಯ ನಿವಾರಣೆಗೆ ತುರ್ತು ಮನವಿ ಪತ್ರ ಸಲ್ಲಿಸಿದೆ. ಉಡುಪಿ ಮುನ್ಸಿಪಲ್ ಮಿತಿಯ ಸುಮಾರು 375 ಕ್ಕಿಂತಲೂ ಅಧಿಕ ವಸತಿ ಸಮುಚ್ಚಯದ ಎಲ್ಲಾ ತಾಜ್ಯ ಮಣಿಪಾಲ, ಮಲ್ಪೆಯ ಎಲ್ಲಾ ಅಪರಿಷ್ಕೃತ ತ್ಯಾಜ್ಯ ನೀರು ಇಂದ್ರಾಣಿ ನದಿಯನ್ನು ಸೇರಿ ಪರಿಸರದ ಹಾಗೂ ಆಸುಪಾಸಿನ ಜನರ ದೈನಂದಿನ ಬದುಕು ದುರ್ಬರವಾಗಿದೆ. ಇದರ ನಿರ್ಲಕ್ಷ್ಯದಿಂದ 500 ಕ್ಕಿಂತಲೂ ಅಧಿಕ ಕುಟುಂಬಗಳ ಆರೋಗ್ಯ (ಜ್ವರ, ಚರ್ಮರೋಗ, ಡೆಂಘಿ ಭೀತಿ) ಹದಗೆಟ್ಟಿದೆ. ಅದಲ್ಲದೇ ಅಂತರ್ಜಲ ಕೂಡಾ ಕಲುಷಿತವಾಗಿ ಮನೆಯ ಬಾವಿಯ ನೀರು ಕೂಡಾ ಕುಡಿಯಲು ಯೋಗ್ಯವಾಗಿಲ್ಲ. ಬಾವಿಯಿಂದ ದುರ್ಗಂಧ ಹಾಗೂ ಸಾಯಂಕಾಲದ ನಂತರ ಸೊಳ್ಳೆಗಳ ಕಾಟದಿಂದ ಇಡೀ ಪರಿಸರ ಹಾಳಾಗಿದೆ ಹಾಗೂ ಇಂದ್ರಾಣಿ ನದಿ ಒಂದು ಕಲುಷಿತ ಒಳಚರಂಡಿ ಕಾಲುವೆಯಾಗಿ ಪರಿವರ್ತನೆಯಾಗಿದೆ ಎಂದು ಸಂಬಂಧಪಟ್ಟವರಲ್ಲಿ ಆಗ್ರಹಿಸಿ, ಇದರ ಶೀಘ್ರ ನಿವಾರಣೆಗೆ…
ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ನಡೆಯುವ “ಉಡುಪಿ ಕಂಬಳ” ಇದರ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ರಾಜ್ಯ ಕಂಬಳ ಆಸೋಸಿಯೇಶನ್ ಅಧ್ಯಕ್ಷರಾದ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ, ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿಯ ಸದಸ್ಯರಾದ ನಂದಳಿಕೆ ಶ್ರೀಕಾಂತ್ ಭಟ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಮುಖಂಡರಾದ ಹರಿಕೃಷ್ಣ ಬಂಟ್ವಾಳ, ರಾಜ್ಯ ಕಂಬಳ ಆಸೋಸಿಯೇಶನ್ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಕಂಗಿನಮನೆ, ಕೋಶಾಧಿಕಾರಿಗಳಾದ…
ಪುತ್ತೂರು ತಾಲೂಕು ಬೆಟ್ಟಂಪಾಡಿ ಗುತ್ತು ಧರ್ಮಚಾವಡಿ ಪ್ರವೇಶೋತ್ಸವ ಮತ್ತು ಶ್ರೀ ಜಠಾಧಾರಿ ದೈವ, ಧರ್ಮದೈವ ಶ್ರೀ ವ್ಯಾಘ್ರ ಚಾಮುಂಡಿ, ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ‘ಶಿವಭಕ್ತ ವೀರಮಣಿ’ ವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ರಾಧಾಕೃಷ್ಣ ಕಲ್ಚಾರ್ ಮತ್ತು ಭಾಸ್ಕರ ಶೆಟ್ಟಿ ಸಾಲ್ಮರ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣರಾವ್ ಕಲಾವಿದರನ್ನು ಪರಿಚಯಿಸಿದರು. ಬೆಟ್ಟಂಪಾಡಿ ಗುತ್ತು ಕುಟುಂಬಿಕರು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಮೋಹನ್ ದಾಸ್ ರೈ ಎ. ಸ್ವಾಗತಿಸಿದರು. ಸಂಚಾಲಕ ದಯಾನಂದ ರೈ ಕೋರ್ಮಂಡ ವಂದಿಸಿದರು. ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಜರಗಿತು.















