
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಅವರು ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. ಈ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗಾರಿಕಾ ಮತ್ತು ಬಂದರಿಗೆ ಬರುವ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಕೆ.ಐ.ಒ.ಸಿ.ಎಲ್ ನಿಂದ ಬೈಕಂಪಾಡಿಯವರೆಗೆ ಮೇಲ್ಸೇತುವೆ (Elevated Road) ನಿರ್ಮಿಸುವಂತೆ ಪ್ರಮುಖವಾಗಿ ಆಗ್ರಹಿಸಲಾಯಿತು. ಇದರಿಂದ ಸಾಮಾನ್ಯ ಸಂಚಾರ ಸುಗಮವಾಗಲಿದ್ದು, ಈ ಭಾಗದ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ.

ಜೊತೆಗೆ, ಕರಾವಳಿ ಕರ್ನಾಟಕವನ್ನು ಮಡಿಕೇರಿ, ಮೈಸೂರು ಮತ್ತು ಬೆಂಗಳೂರು ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಮಾಣಿ ಸಂಪಾಜೆ ರಸ್ತೆಯ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಚಿವರ ಗಮನ ಸೆಳೆಯಲಾಯಿತು.


























































































































