Author: admin
ಭಾರತದಲ್ಲಿ ಹಲವು ಬಗೆಯ ಚಿಕಿತ್ಸೆ ಪದ್ಧತಿಗಳಿವೆ. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದ ಮುಖ್ಯ. ನಮ್ಮ ಜಗತ್ತಿನಲ್ಲೇ ಅತ್ಯಂತ ಇತ್ತೀಚಿನ ಚಿಕಿತ್ಸಾ ಪದ್ಧತಿಯೆಂದರೆ ಅದು ಹೋಮಿಯೋಪಥಿ. ಕೇವಲ 230 ವರ್ಷಗಳ ಹಿಂದೆಯಷ್ಟೇ ಇದರ ಆವಿಷ್ಕಾರವಾಯಿತು. ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸವಿದೆ. ಯಾವುದೇ ಹೊಸ ಆವಿಷ್ಕಾರ ಹೇತುವೇ ಅವಶ್ಯಕತೆ ಎನ್ನುವುದು. ಅಂದಿನ ಅಲೋಪಥಿ ವೈದ್ಯರಾಗಿದ್ದ ಡಾ. ಸಾಮ್ಯುವೆಲ್ ಹಾನಿಮನ್ ತಾನು ಕಲಿತ ವೈದ್ಯ ಪದ್ಧತಿಯಲ್ಲಿ ಕುಂದು ಕೊರತೆಗಳಿಗೆ ಬೇಸತ್ತು ವೈದ್ಯ ವೃತ್ತಿಗೆ ತಿಲಾಂಜಲಿಯಿಟ್ಟು ಬಿಟ್ಟವರು. ಅಡ್ಡ ಪರಿಣಾಮಗಳಿಲ್ಲದೆ ಸುಲಭದಲ್ಲಿ ಕಾಯಿಲೆಗಳನ್ನು ಗುಣಬಡಿಸಬಲ್ಲ ಔಷಧಿಯ ಚಿಕಿತ್ಸಾ ಪದ್ದತಿಯನ್ನು ಕಂಡು ಹುಡುಕುವ ನಿರಂತರ ಪ್ರಯತ್ನದ ಫಲವೇ ಹೋಮಿಯೋಪಥಿಯೆಂಬ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಕಂಡು ಹಿಡಿದರು. ಜರ್ಮನಿಯಲ್ಲಿ ಅವಿಷ್ಕಾರಗೊಂಡ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಕೇವಲ 15 ವರ್ಷಗಳಲ್ಲಿ ಅಂದರೆ 1910ಕ್ಕೆ ಭಾರತಕ್ಕೆ ಕಾಲಿಟ್ಟಿತು. ಸೋಂಕು ರೋಗಗಳಿರಲಿ, ದೀರ್ಘಕಾಲೀನ ರೋಗಗಳಿರಲಿ ಹೋಮಿಯೋಪತಿ ಚಿಕಿತ್ಸೆಯ ಅದ್ಭುತ ಪರಿಣಾಮಗಳನ್ನು ಕಂಡುಕೊಂಡ ನೂರಾರು ಯುರೋಪಿನ ವೈದ್ಯರು ಹೋಮಿಯೋಪಥಿಯತ್ತ ವಾಲಿದರು. ಡಾ. ಹೆರಿಂಗ್, ಡಾ. ಕೆಂಟ್,…
ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಜಂಟಿ ಸಭೆಯು ರೋಟರಿ ಬಾಲ ಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿ ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿಯವರು ಮಾತನಾಡುತ್ತಾ, ರೋಟರಿ ಒಂದು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಸಾಮಾಜಿಕ ಕಳಕಳಿಯುಳ್ಳ ಸೇವಾ ಮನೋಭಾವನೆಯ ಯುವಕರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಮಾತ್ರವಲ್ಲದೆ ಅವರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳುವುದು ಅಷ್ಟೇ ಪ್ರಾಮುಖ್ಯವಾಗಿದೆ ಎಂದರು. ಕ್ಲಬ್ಬಿನ ಪತ್ರಿಕೆ ಸರ್ವಿಸ್ ಅನ್ನು ಬಿಡುಗಡೆಗೊಳಿಸಿದ ವಲಯ ಸೇನಾನಿ ಜಾನ್ ಆರ್ ಡಿಸಿಲ್ವ ಕಾರ್ಕಳ ರೋಟರಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಸುರೇಂದ್ರ ನಾಯಕ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ 2028-29 ನೇ ಸಾಲಿನ ನಾಮನಿರ್ದೇಶಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಕೇಂದ್ರ ಮಹಿಳಾ ಫಟಕದ ನವಮ ವಾರ್ಷಿಕೋತ್ಸವ ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಗುತ್ತು ಸತೀಶ್ ಶೆಟ್ಟಿ ಅವರು ಅಶಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು ಎಂದವರು ತಿಳಿಸಿದರು. ಕಲಾವಿದರಿಗೆ ಮನೆ ನಿರ್ಮಾಣಕ್ಕೆ, ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಕಲಾವಿದರ ಆರೋಗ್ಯಕ್ಕೆ ಟ್ರಸ್ಟ್ ನಿಂದ ಸಹಾಯ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಟ್ರಸ್ಟ್ ಮೂಲಕ ನಿರಂತರ ಕಾರ್ಯ ಯೋಜನೆಗಳನ್ನು ಕೈಗೊಳ್ಳುತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ ಎಂದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕೇಂದ್ರೀಯ ಮಹಿಳಾ ಘಟಕ ಕಳೆದ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ.…
ನಮ್ಮಲ್ಲಿ ಕೋಲ, ಕಂಬಳದ ಆಚರಣೆ, ಮಾರಿ, ಗೆಂಡ ಸೇವೆ ಇವುಗಳೆಲ್ಲವೂ ಇಡೀ ಊರಿನವರು ಒಂದಾಗಿ ಆಚರಿಸುವ ಸಂಪ್ರದಾಯ. ಸಿರಿಬೈಲು ಕೋಲ ಎಂದರೆ ಕೇವಲ ಕಾರ್ಯಕ್ರಮವೆಂದರೂ ತಪ್ಪಲ್ಲ, ಅದು ಊರಿನ ನಂಬಿಕೆಯನ್ನು ಉಳಿಸುವ ಸಂಪ್ರದಾಯ. ಕೆಲವು ವರ್ಷಗಳ ಹಿಂದೆ, ಸುಮಾರು 90ರ ದಶಕದಲ್ಲಿ ಸಿರಿಬೈಲು ಕೋಲಕ್ಕೆ ಹೋಗಬೇಕೆಂದರೆ ಸರಿಯಾದ ಬಸ್ ವ್ಯವಸ್ಥೆಯೇ ಸರಿ ಇರಲಿಲ್ಲ. ನಡೆದುಕೊಂಡೇ ಹೋಗಬೇಕು. ಆಗ ನಮ್ಮೂರಲ್ಲಿ ಕರೆಂಟ್ ಬಂದಿತ್ತಾದರು ಇನ್ನೂ ಕೆಲವು ಕಡೆ ಬಂದಿರಲಿಲ್ಲ. ರಸ್ತೆ ಬದಿಯ ದೀಪಗಳಂತೂ ಕನಸೇ. ಅಭಿವೃದ್ಧಿ ಎಂಬುದು ಅಷ್ಟೊಂದು ಕಾಣಿಸಿಕೊಳ್ಳದ ದಿನಗಳು. ಈಗ ಕಾಲ ಬದಲಾಗಿದೆ. ಆದರೆ ಅಂದಿನ ಕಾಲದ ಸುಖ ಇಂದಿನ ಜೆನ್ ಜಿ ಜನರೆಶನ್ ಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಹೌದೆ ? ಓಹೋ ಎಂದು ಪ್ರಶ್ನಿಸುವ ಕಾಲ. ಆ ದಿನಗಳಲ್ಲಿ ಕೋಲಕ್ಕೆ ಹೋಗುವಾಗ ಗ್ಯಾಸು ಲೈಟ್ ಹಿಡಿದು ಸಾಗುತ್ತಿದ್ದರೆ, ಅವನು ಶ್ರೀಮಂತನೆಂದು ಪರಿಗಣಿಸುವ ಕಾಲ. ಅದರಲ್ಲೂ ಲ್ಯಾಟನ್ ಇದ್ದರೆ, ಮಿಣಿಮಿಣಿ ಮಿಣುಕುತ್ತ ಮಿನುಗುವ ಬೆಳಕು, ಸೀಮೆ ಎಣ್ಣೆ ಲ್ಯಾಟನ್…
ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ ಕಳೆದ ಸಲದಂತೆ ಈ ಬಾರಿಯೂ ಫೆಬ್ರವರಿ 7 ಮತ್ತು 8 ರಂದು ಉಚಿತ ಶ್ರವಣ ತಪಾಸಣಾ ಶಿಬಿರವನ್ನು ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಸಲಿದೆ. ಈ ಶಿಬಿರದಲ್ಲಿ ಉಚಿತವಾಗಿ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ನಡೆಯಲಿದೆ ಎಂದು ತಂಡದ ಸಂಚಾಲಕ ಲವ ಬಂಗೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರ ಜೊತೆ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಉಚಿತ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್…
ಜಯಕಿರಣ ಫಿಲಂಸ್ ಲಾಂಛನದಲ್ಲಿ, ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ‘ನಾನ್ ವೆಜ್’ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾವನ್ನು ಎಲ್ಲಾ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್ ನಿಗದಿಪಡಿಸಿದ್ದು, ಇದು ತುಳು ಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್‌ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್‌ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ…
ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ ಜಿಲ್ಲಾ ಘಟಕ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ಲೇಡಿಗೋಶನ್ ಅಸ್ಪತೆಯಲ್ಲಿ ಇತ್ತೀಚಿಗೆ ರಕ್ತದಾನ ಶಿಬಿರ ನಡೆಯಿತು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಶಿಬಿರವನ್ನು ಉದ್ಘಾಟಿಸಿದರು. ಲೇಡಿಗೋಶನ್ ಅಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್ ರೈ, ರೆಡ್‌ಕ್ರಾಸ್ ಜಿಲ್ಲಾ ಘಟಕದ ನಿರ್ದೇಶಕ ಗುರುದತ್ ಕಾಮತ್, ಲೇಡಿಗೋಶನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಕೆಎಂಸಿ ಅಸ್ಪತ್ರೆಯ ಡಾ. ಅನುಪಮ ಸುರೇಶ್ ಮುಖ್ಯ ಅತಿಥಿಗಳಾಗಿದ್ದರು.
ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ ಯವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ. ಪವಿತ್ರ ಎ.ವಿಯವರು ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಾಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ| ಲೋಕೇಶ್ ಎಂ.ಯು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದಿದ್ದಾರೆ. ಜ. 30ರಂದು ನಡೆದ ದಾವಣಗೆರೆ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ರವರು ಪದವಿ ಪ್ರಧಾನ ಮಾಡಿದರು. ಇವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿ ಪ್ರಸಾದ್ ಅವರ ಪತ್ನಿ.
ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆಬ್ರವರಿ 1 ರಂದು ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್ ಪ್ರೈವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ ಸಂಕಲ್ಪ ಹಾಗೂ ಸುಮಂಗಲೆಯರಿಂದ ಜ್ಯೋತಿ ಬೆಳಗುವುದರರೊಂದಿಗೆ ಪ್ರಾರಂಭವಾಯಿತು. ಪುರೋಹಿತ ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರುಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ವೃತಕ ಲೋಕ್ತ ಪೂಜೆ, ಕಥಾಸಾರ, ಮಹಾನೈವೇದ್ಯ, ಮಂಗಳಾರತಿ, ಬ್ರಾಹ್ಮಣರಾಧನೆ, ಸುವಾಸಿನಿ ಪೂಜೆ, ಕನ್ನಿಕಾರಾಧನೆ ತೀರ್ಥ ಪ್ರಸಾದ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಯಿತು. ಪೂಜೆಯಲ್ಲಿ ಸಾರ್ವಜನಿಕರ ಪರವಾಗಿ ಶ್ರೀಮತಿ ಅಂಜಲಿ ಕೌಶಿಕ್ ದಂಪತಿ, ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀಮತಿ ವೀಣಾ ಸುದರ್ಶನ್ ಹೆಗ್ಡೆ ಕಾರ್ಕಳ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಗಳಾಗಿದ್ದರು. ದುಬಾಯಿಯಲ್ಲಿ ನೆಲೆಸಿ ಕಾರ್ಯೋನ್ಮುಖವಾಗಿರುವ ಸಂಘ ಸಂಸ್ಥೆಗಳಾದ ಯು.ಎ.ಇ ಬಂಟ್ಸ್, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ,…
ಸೌರಾಷ್ಟ್ರ (ಗುಜರಾತ್) ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮುನಿಯಾಲು ಮೂಲದ ನಿತ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. 21 ವರ್ಷದ ನಿತ್ಯಾ ಶೆಟ್ಟಿ ಫೆಬ್ರವರಿ 6 ರಂದು ರಾಂಚಿಯಲ್ಲಿ ನಡೆಯಲಿರುವ ಅಂಡರ್ 23 ವುಮೆನ್ಸ್ ಬಿ.ಸಿ.ಸಿ.ಐ ಟೂರ್ನಮೆಂಟ್ ನಲ್ಲಿ ಸೌರಾಷ್ಟ್ರ ತಂಡದಲ್ಲಿ ಅಗ್ರ ಕ್ರಮಾಂಕದ ಆಟಗಾರ್ತಿ ಹಾಗೂ ಮಧ್ಯಮ ವೇಗದ ಬೌಲರ್ ಆಗಿ ಆಡಲಿದ್ದಾರೆ. ಇವರು ಮೂಲತಃ ಮುನಿಯಾಲು ಬೈಲಿನವರಾದ ಆರತಿ ಶೆಟ್ಟಿ ಮತ್ತು ಗುಜರಾತ್ ನ ವಿಪುಲ್ ಪಾಂಚಲ್ ದಂಪತಿಯ ಪುತ್ರಿ.















