Author: admin
ಸಿಂಧೂರಂ ಸೌಂದರ್ಯಾ ಸಾಧನಂ ಎಂಬ ಮಾತಿದೆ. ಅದರಂತೆ ಕುಂಕುಮ ಧರಿಸುವ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ. ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ, ಹೆಣ್ಣು ಮಕ್ಕಳು ಕುಂಕುಮ ಇಡುವುದು ಸಂಪ್ರದಾಯವಾಗಿದೆ. ಭ್ರೂಮಧ್ಯ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ. ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳ ಗ್ರಂಥೀಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ. ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ.…
ನಾಡಿನ ದೊರೆ ಸಿದ್ದರಾಮಯ್ಯನವರು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸುವ ಸೂಚನೆ ಕೊಟ್ಟಿದ್ದಾರೆ. ಇದು ಕೇವಲ ಆಡಳಿತಾತ್ಮಕ ಆದೇಶವಲ್ಲ. ಇದು ಸಮಾಜದ ಮನಸ್ಸಿನ ದುರಸ್ತಿಗೆ ಪ್ರಭುತ್ವ ಇಟ್ಟ ಗಟ್ಟಿ ಹೆಜ್ಜೆ. ರಸ್ತೆ, ಸೇತುವೆ, ನೀರು, ವಿದ್ಯುತ್, ಉದ್ಯೋಗ ಇವೆಲ್ಲಾ ಅಭಿವೃದ್ಧಿಯ ಅಳತೆಗೋಲುಗಳು. ಆದರೆ ಮಕ್ಕಳ ಮನಸ್ಸನ್ನು ಕಟ್ಟುವುದು, ಅವರ ಒಳಗಿನ ಮನುಷ್ಯನನ್ನು ಉಳಿಸುವುದು ಇದು ಇನ್ನೂ ದೊಡ್ಡ ಅಭಿವೃದ್ಧಿ. ಎರಡೂ ಸಮಾನ ತೂಕದ ಕೆಲಸಗಳು. ಒಂದನ್ನು ಬಿಟ್ಟು ಮತ್ತೊಂದು ನಡೆಯದು. ಇವತ್ತಿನ ಬಹು ಪಾಲು ಶಾಲಾ ಕಾಲೇಜುಗಳ ತರಗತಿಗಳು ಮೌನವಾಗಿವೆ. ಹಾಗಂತ ಅದು ನೆಮ್ಮದಿಯ ಶಾಂತಿ ಅಲ್ಲ. ನಿರಾಸಕ್ತಿ. ಕಣ್ಣುಗಳು ತೆರೆದಿವೆ, ಆದರೆ ಮನಸ್ಸು ಮುಚ್ಚಿಕೊಂಡಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಜಗತ್ತು ಅಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಆ ಜಗತ್ತಿನಲ್ಲಿ ಮನುಷ್ಯತ್ವ ಇಲ್ಲ. ಅಲ್ಲಿರುವುದು ವೇಗ, ಸ್ಪರ್ಧೆ, ಪ್ರದರ್ಶನ, ಬಯಕೆ. ಪ್ರೀತಿ, ತಾಳ್ಮೆ, ಸಹನೆ, ಸಂವೇದನೆ ಇವೆಲ್ಲಾ ಮೌನವಾಗಿ ಮಣ್ಣಾಗುತ್ತಿವೆ. ಮೊಬೈಲ್ ಮಕ್ಕಳ ಕೈಯಲ್ಲಿ ಒಂದು ಸಾಧನವಾಗದೆ, ಅವರ ಮನಸ್ಸನ್ನು ಆಳುವ ಸ್ವಾಮಿಯಾಗಿಬಿಟ್ಟಿದೆ.…
ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ ಹಾಗೂ ಜಾರಂದಾಯ ದೈವಸ್ಥಾನ : ವರ್ಷಾವಧಿ ಬಂಡಿ ನೇಮೋತ್ಸವ, ನೂತನ ಬಂಡಿಗಳ ಸಮರ್ಪಣೆ
ತೋಕೂರು ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ ಹಾಗೂ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ಬಂಡಿ ನೇಮೋತ್ಸವ ‘ಕನಿಲದಾಯನ’ ಮಾರ್ಚ್ 1 ರಿಂದ 4 ರವರೆಗೆ ಜರುಗಲಿದೆ. ಫೆಬ್ರವರಿ 25 ರಂದು ನೂತನ ಬಂಡಿಗಳ ಸಮರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಸಂಜೆ 4 ಗಂಟೆಗೆ ಬಂಡಿಯ ಮೆರವಣಿಗೆ ಸುರತ್ಕಲ್ ಜಂಕ್ಷನ್ ನಿಂದ ಹೊರಟು ತೋಕೂರು ಕನಿಲ ದೈವಸ್ಥಾನಕ್ಕೆ ಆಗಮಿಸಿ ಬಂಡಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1 ರಂದು ಬೆಳಿಗ್ಗೆ 9 ಗಂಟೆಗೆ ನವಕ ಪ್ರಧಾನ ಮತ್ತು ರಾತ್ರಿ 9 ಗಂಟೆಗೆ ಕುಡುಂಬೂರು ಗುತ್ತಿನಿಂದ ದೈವಸ್ಥಾನದವರೆಗೆ ‘ಭಂಡಾರ’ ಮೆರವಣಿಗೆ ಮೂಲಕ ಹೊರಡಲಿದೆ. ಮಾರ್ಚ್ 2 ರಂದು ರಾತ್ರಿ 9 ಗಂಟೆಗೆ ಮೈಸಂದಾಯ, ಕಾಂತೇರಿ ಧೂಮಾವತಿ ಬಂಟ ಮತ್ತು ಬೊಬ್ಬರ್ಯ ದೈವಗಳಿಗೆ ನೇಮೋತ್ಸವ ಹಾಗೂ ಬಂಡಿ ಉತ್ಸವ ಜರುಗಲಿದೆ. ಮಾರ್ಚ್ 3 ರಂದು ರಾತ್ರಿ 9 ಗಂಟೆಗೆ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ನೇಮೋತ್ಸವ ಮತ್ತು ಬಂಡಿ ಉತ್ಸವ ನೆರವೇರಲಿದೆ. ಮಾರ್ಚ್ 4…
ಫೆಬ್ರವರಿ 20 ರಂದು ಕೊಪ್ಪ ತಾಲೂಕಿನ ಅಗಳಗಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರುಗಿದ್ದು, ಈ ಕಾರ್ಯಕ್ರಮದಲ್ಲಿ ಸುಧಾಕರ್ ಶೆಟ್ಟಿಯವರ ಅಮ್ಮ ಫೌಂಡೇಶನ್ ವತಿಯಿಂದ ಹಳ್ಳಿಗಾಡಿನ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಎಸ್.ಎಸ್.ಎಲ್. ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯ ಅಭಾವ ಇರುವ ಹಳ್ಳಿಗಳಲ್ಲಿ ರಾತ್ರಿ ಓದುವುದಕ್ಕೆ ಆಗುವುದಿಲ್ಲ. ಅಂತಹ ಮನೆಗಳ ಮಕ್ಕಳನ್ನು ಕಂಡುಹಿಡಿದು ಸುಮಾರು 16 ಮಕ್ಕಳಿಗೆ ಸೋಲಾರ್ ಲೈಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಮ್ಮ ಫೌಂಡೇಶನ್ ನಿರ್ದೇಶಕರಾದ ಪ್ರಭಾಕರ್ ಶೆಟ್ಟಿಯವರು, ಸಮಾಜದಲ್ಲಿ ನಿಜವಾದ ಬದಲಾವಣೆ ತರಬಲ್ಲ ಶಕ್ತಿ ಶಿಕ್ಷಣದಲ್ಲಿದೆ ಎಂದು ತಿಳಿಸಿದರು. ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಅನೇಕ ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯವಾಗದೆ ಹಿಂದುಳಿಯುತ್ತಿದ್ದಾರೆ. ಇಂತಹ ಮಕ್ಕಳಿಗೆ ಕನಿಷ್ಠ ಓದುವ ಬೆಳಕು ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ದಲಿತರು, ಬಡವರು ಮತ್ತು ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ…
ರೋಟರಿ ಕ್ಲಬ್ ಕಾರ್ಕಳ ಹಾಗೂ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಇವರ ಸಹಯೋಗದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ‘ಆನಂದೋತ್ಸವ’ ಶಿಬಿರವು ರೋಟರಿ ಬಾಲಭವನದಲ್ಲಿ ಫೆಬ್ರವರಿ 14ರಿಂದ ಫೆಬ್ರವರಿ 22ರವರೆಗೆ ಯಶಸ್ವಿಯಾಗಿ ನಡೆಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮನೀಷಾ ಕಾಮತ್ ಅವರು ಶಿಬಿರವನ್ನು ನಡೆಸಿಕೊಟ್ಟು ಭಾಗವಹಿಸಿದವರಿಗೆ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಒತ್ತಡ ನಿರ್ವಹಣೆ ಕುರಿತು ಸಮಗ್ರ ತರಬೇತಿ ನೀಡಿದರು. ಶಿಬಿರದಲ್ಲಿ ರೋಟರಿ ಸದಸ್ಯರಾದ ಅನಂತ ಕೃಷ್ಣ ಆಚಾರ್ ದಂಪತಿಗಳು, ವಿಜೇಂದ್ರ ಕುಮಾರ್ ದಂಪತಿಗಳು, ಉದಯ ಕುಮಾರ್ ಕಡಂಬ, ಶಿವಕುಮಾರ್, ಸುಬ್ರಹ್ಮಣ್ಯ ದೇವಾಡಿಗ ಹಾಗೂ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದರು. ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದರು. ಅಧ್ಯಕ್ಷರು ತಮ್ಮ ಮಾತಿನಲ್ಲಿ, ಇಂತಹ ಆರೋಗ್ಯವರ್ಧಕ ಮತ್ತು ಮನಃ ಶಾಂತಿ ನೀಡುವ ಕಾರ್ಯಕ್ರಮಗಳು ಸಮಾಜದ ಒಳಿತಿಗೆ ಬಹಳ ಅಗತ್ಯವೆಂದು ತಿಳಿಸಿದರು. ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಮನೀಷಾ ಕಾಮತ್…
ಕತಾರ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸಮಾಜಸೇವಕ, ಸಂಘಟಕ ಸುಖರಾಮ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಬೆಳೆಯಲಿ, ಸಮಾಜ ಸೇವೆಯಲ್ಲಿ ಹೊಸ ಮೈಲುಗಲ್ಲುಗಳನ್ನು ಸಾಧಿಸಲಿ ಎಂಬುದು ನಮ್ಮ ಆಶಯ. ನಿಮ್ಮ ಮುಂದಿನ ಕಾರ್ಯಯಾತ್ರೆಗೆ ಹಾರ್ದಿಕ ಶುಭಾಶಯಗಳು.
ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ. ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ. ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ‘ಬೊಂಡಾಲ ಪ್ರಶಸ್ತಿ’ಯನ್ನು ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಬೊಂಡಾಲದಲ್ಲಿ ಏರ್ಪಡಿಸಿದ್ದ ಕಟೀಲು ಮೇಳದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ‘ಧಾರ್ಮಿಕ ಪ್ರಜ್ಞೆ ಯಕ್ಷಗಾನದಿಂದ ಸಿಗುತ್ತದೆ, ಜನರೆಲ್ಲಾ ಸತ್ಕರ್ಮಾಚರಣೆಯಿಂದ ಸತ್ಯಮಾರ್ಗದಲ್ಲಿ ನಡೆದರೆ ಬದುಕು ಸುಗಮ’ ಎಂದರು. ವೇ.ಮೂ. ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ‘ಬೊಂಡಾಲ ಮನೆಯವರು ಹಿರಿಯರು ಹಾಕಿದ ಮಾರ್ಗವನ್ನು ಮುಂದುವರೆಸುತ್ತಿದ್ದಾರೆ. ಹರಕೆಯ ಬಯಲಾಟದ ಜೊತೆಗೆ ಕಲಾವಿದರನ್ನು ಗೌರವಿಸುವುದು…
ಇನಿ ಲೋಕೊದ ಅಪ್ಪೆ ಬಾಸೆದ ದಿನಗೆ. ಎನ್ನಪ್ಪೆ ಬಾಸೆ ತುಲು. ಆಂಡಲಾ ಒಂಜಿ ಎಕ್ಕಂದೆಲ್ (dilemma), ಎನ್ನಪ್ಪೆ ದಿನಾ ಪಾತೆರೊಂದು ಇತ್ತಿನ ತುಲು ಬಾಸೆನ್ ನೆಟೆ ಬರೆವೊಡಾ, ಅತ್ತ್ ತುಲುವ ಬಾಸೆದ ಪೆರ್ಮೆ ಗರ್ಮೆ(ಪೇರ್ತೆ)ದ ಬಗೆಟ್ ಬರೆವೊಡಾ? ಎನ್ನಪ್ಪೆನ ನಿಚ್ಚದ ಬಾಸೆದ ಕೆಲವು ಸ್ಯಾಂಪಲ್ ನಿಗಲೆಗ್ ಕೊರೊಂದು ಉಲ್ಲೆ. ಕಾಂಡೆ ಜೋಕುಲೆಗ್ ಇಂಚ ಸುಪ್ರಭಾತ ಪಂಡ್‌ದ್ ಲಕ್ಕಾವೊಂದು (ಮೆನ್ಪಾವೊಂದು) ಇತ್ತೆರ್, ಹಾಂ, ನನ ಲಕ್ಕೊಲಿ ಹದೊಟು, ಪೀಂಕನ್‌ಗ್ ದೆಂಬು ದರ್ತೊಂದು ಉಂಡು. ನನ ದಾನೆ ಕರ್ಂಟೊಡಾ? ಬೆನ್ನಿದಪಗದ ಸುಲೇಕ ಒಂತೆ ಬೇತೆ, ಲೋಕೊಡು ನಿಗುಲೇ ಒಂಜಿ ಜೋಕುಲಾ? ಓಲಾ ಆಯನ್ ತೂಲೆ. ಪೊರ್ತು ಮೂಡ್ಡೊಡ್ಡ ದಪ್ಪು ಕಟ್ಟುವೆ. ನಿಗಲೆಗ್ ಪೀಂಕನ್‌ಗ್ ದೆಂಬು ದರ್ಪಂದೆ ಎಚ್ಚರ ಆಪುಜಿ. ಓದರೆ ಕಾಂಡೆ ಬೇಗ ಲಕ್ಕಾದ್‌ಜೆರ್ ಪಂದ್ ಜೋಕುಲು ಕಂಪ್ಲೇಂಟ್ ಮಲ್ತೆರ್‌ಡ ಲಕ್ಕಾವುನ, ನನ ಎಂಚ? ಮುಕ್ಕೊಲು ಮುಕ್ಕೊಲು ಪಿರೆತೆ. ನನ ಬಡಿಗೆ ಪಾಡ್ದ್ ಲಕ್ಕಾವೊಡು ನಿನನ್. ಕಾಂಡೆನೆ ಜೋಕುಲು ಒರಿಯಗೊರಿ ದಾಲ ನೆರೊಂದು, ಪನೊಂದು…
ನಾರದನು ನಾರಾಯಣ ಮಂತ್ರವನ್ನು ಜಪಿಸುತ್ತಾ ವೈಕುಂಠವನ್ನು ಸೇರಿಕೊಂಡನು. ಅಲ್ಲಿ ಶೇಷತಲ್ಪದ ಮೇಲೆ ವಿರಾಜಮಾನರಾಗಿದ್ದ ವಿಷ್ಣುಮೂರ್ತಿಯನ್ನು ಕಂಡ ತಕ್ಷಣ ನಾರದನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡಿತು. “ವಿಷ್ಣುಮೂರ್ತಿಗೆ ನನಗಿಂತ ದೊಡ್ಡ ಭಕ್ತ ಇನ್ನಾರು ಇರಬಹುದು?” ಎಂದುಕೊಂಡನು. ಅದೇ ವಿಷಯವನ್ನು ಸ್ವತಃ ವಿಷ್ಣುಮೂರ್ತಿಯ ಬಾಯಿಂದಲೇ ಕೇಳಬೇಕು ಎಂದು ನಾರದನು ಬಯಸಿದನು. “ಓ ದೇವದೇವಾ! ಈ ಮೂರು ಲೋಕಗಳಲ್ಲಿ ನಿನ್ನನ್ನು ಅತ್ಯಂತ ಭಕ್ತಿಯಿಂದ ಆರಾಧಿಸುವವರು ಯಾರು?” ಎಂದು ಕೇಳಿದನು. ವಿಷ್ಣುಮೂರ್ತಿ ಹೇಳಿದರು, “ಅಯ್ಯೋ! ಅದು ಅಷ್ಟೊಂದು ಕಷ್ಟವಾದ ಪ್ರಶ್ನೆಯೇ ಅಲ್ಲ. ಅಲ್ಲಿ ಕಾಣುತ್ತಿರುವ ಆ ಹಳ್ಳಿಯಲ್ಲಿರುವ ಒಂದು ಚಿಕ್ಕ ಗುಡಿಸಲು ನೋಡುತ್ತಿದ್ದೀಯಲ್ಲಾ! ಅದರಲ್ಲಿ ಒಬ್ಬ ರೈತನು ವಾಸಿಸುತ್ತಿದ್ದಾನೆ. ನನ್ನನ್ನು ಕೇಳಿದರೆ ಈ ಲೋಕದಲ್ಲಿ ನನ್ನನ್ನು ಅತ್ಯಂತ ತೀವ್ರವಾಗಿ ಧ್ಯಾನಿಸುವವನು ಅವನೇ!” ಎಂದರು. ಪ್ರತಿದಿನ ಹರಿನಾಮ ಸ್ಮರಣೆ ಮಾಡುವ ತನಗಿಂತ ಆ ಚಿಕ್ಕ ರೈತ ಹೇಗೆ ದೊಡ್ಡ ಭಕ್ತನಾಗಿರಬಹುದು? ಎಂದುಕೊಂಡು ತನ್ನ ದಿವ್ಯದೃಷ್ಟಿಯಿಂದ ಆ ರೈತನ ಜೀವನವನ್ನು ಗಮನಿಸಿದನು. ಆ ರೈತನು ಬಹಳ ಬಡವನು. ಅವನಿಗೆ ಒಂದು…
ಹಾಲಾಡಿ ಶ್ರೀನಿವಾಸ ಶೆಟ್ಟರು ಅಂದರೆ ಇವರು ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಲ್ಲ. ಇವರು ಇಂಡಸ್ಟ್ರಿಯಲಿಸ್ಟ್ ಹಾಲಾಡಿ ಶ್ರೀನಿವಾಸ ಶೆಟ್ಟಿ. ಶಾರ್ಟ್ ಮತ್ತು ಸ್ವೀಟ್ ಆಗಿ ಎಚ್.ಎಸ್ ಶೆಟ್ಟಿ ಎಂದು ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಅಮಾಸೆಬೈಲು ಕೊರಗರ ಕಾಲೋನಿಯಲ್ಲಿ ಹದಿನಾಲ್ಕು ಸುಂದರ ಮನೆಗಳ ನಿರ್ಮಾಣಕ್ಕೆ ಮುನ್ನುಡಿ ಬರೆಯುವ ಮೂಲಕ ಮತ್ತೊಮ್ಮೆ ತಮ್ಮ ‘ಜನಪರ’ ಕಾಳಜಿಯನ್ನು ಸಾಬೀತುಪಡಿಸಿದ್ದಾರೆ. ಇದು ಕೇವಲ ಇಟ್ಟಿಗೆ, ಸಿಮೆಂಟ್‌ನ ಕಟ್ಟಡವಲ್ಲ, ದಶಕಗಳಿಂದ ಸೂರು ಇಲ್ಲದೆ ಅಲೆದಾಡುತ್ತಿದ್ದ ಒಂದು ಶೋಷಿತ ಸಮುದಾಯದ ಆತ್ಮಗೌರವದ ಸಂಕೇತ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇದರ ಆಶ್ರಯದಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಅಮಾಸೆಬೈಲನ್ನು ಈ ಹಿಂದೆಯೇ ಡಿಜಿಟಲ್ ಗ್ರಾಮವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್.ಎಸ್ ಶೆಟ್ಟರು, ಈಗ ಅಲ್ಲಿನ ಕೊರಗ ಸಮುದಾಯದ ಬದುಕಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಫೆಬ್ರವರಿ 25 ರಂದು ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿರುವ ಈ…















