Author: admin
ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಮಂಡಳಿಯವರು 28 ನೇಯ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಯುವ ಉದ್ಯಮಿ, ಸಮಾಜ ಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಸಮರ್ಥ ಬಿಲ್ಡರ್ಸ್ ನ ಆಡಳಿತ ನಿರ್ದೇಶಕರಾದ ಬೆಳುವಾಯಿ ಸಂದೀಪ್ ಶೆಟ್ಟಿಯವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ 2025 ರ ಸಾಲಿನ ಶ್ರೀ ಯಕ್ಷದೇವ ಸಾಧನಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಸಂದೀಪ್ ಶೆಟ್ಟಿಯವರು ಮೂಡಬಿದಿರೆ ಯುವ ಬಂಟರ ಸಂಘದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಸಂಧರ್ಭದಲ್ಲಿ ಹರಿಕೃಷ್ಣ ಪುನರೂರು, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಲಯನ್ ಗೋವರ್ಧನ್ ಶೆಟ್ಟಿ, ದೇವಾನಂದ ಭಟ್, ಉದ್ಯಮಿ ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ಸುದ್ದಿ ಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲುರವರನ್ನು ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪಾಡಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಉಮಾಪ್ರಸಾದ್ ರೈ ನಡುಬೈಲುರವರು 1993 ರಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರಿನ ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ 20 ವರ್ಷಗಳಿಂದ ವರದಿಗಾರರಾಗಿದ್ದು, ಪತ್ರಿಕಾ ಕ್ಷೇತ್ರದಲ್ಲಿ 32 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಸಮರ್ಥ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ ಸುಲಾಯರವರು ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ನಾಗರಾಜ ನಿಡ್ವಣ್ಣಾಯ, ಕೋಶಾಧಿಕಾರಿ ಶೀನಪ್ಪ ಶೆಟ್ಟಿ ನೆಕ್ರಾಜೆ, ಟ್ರಸ್ಟಿಗಳಾದ ನಾಗೇಶ್ ಓಡಂತರ್ಯ, ರಾಜೇಶ್ವರಿ ಕನ್ಯಾಮಂಗಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಶ್ರೀ ಕುಚ್ಚೆಜಾಲು, ಯಶೋದ ನೂಜಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಮೂಲ್ಕಿ ಮೂಡುಬಿದ್ರೆ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಇಂದು ಮೂಡುಬಿದಿರೆಯ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ, ಮಾಸ್ಟರ್ ಟ್ರೈನರ್ ಎ.ಜಿ. ಸೋನ್ಸ್ ಐಟಿಐ ಇದರ ತರಬೇತಿ ಅಧಿಕಾರಿ ಕೆ. ಶಿವಪ್ರಸಾದ್ ಹೆಗ್ಡೆ ಮತ್ತು ಮೂಡುಬಿದಿರೆ ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ| ಹರೀಶ್ ಎಚ್, ಚುನಾವಣಾ ಶಾಖೆಯ ಕೇಶವ ಹಾಗೂ ಮಲ್ಲೇಶ್ ಉಪಸ್ಥಿತರಿದ್ದರು.201 ಮೂಡುಬಿದಿರೆ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಮೇಲ್ವಿಚಾರಕರು, ಬೂತ್ ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಹಾಜರಿದ್ದರು. ಈ ವಿಶೇಷ ಸಮಗ್ರ ಪರಿಷ್ಕರಣೆಯು ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002 ರಲ್ಲಿ ನಡೆದಿದ್ದು, 23 ವರ್ಷಗಳ ಬಳಿಕ ಈ ಪ್ರಕ್ರಿಯೆ ಮತ್ತೆ ನಡೆಯುತ್ತಿದೆ. ಇದು ಮತದಾರರ ಪಟ್ಟಿಯಲ್ಲಿನ ಎಲ್ಲಾ ಲೋಪದೋಷಗಳನ್ನು ದೂರೀಕರಿಸಲು ಸಹಕಾರಿಯಾಗಲಿದೆ.
ತೆಂಕನಿಡಿಯೂರು ಬಬ್ಬುಸ್ವಾಮಿ, ಪರಿವಾರ ದೈವಗಳ ದೈವಸ್ಥಾನ, ಮೂಕಾಂಬಿಕಾ ಅಮ್ಮನವರ ಸನ್ನಿಧಿ : ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ
ತೆಂಕನಿಡಿಯೂರು ಶ್ರೀ ಬಬ್ಬುಸ್ವಾಮಿ, ಪರಿವಾರ ದೈವಗಳ ದೈವಸ್ಥಾನ ಹಾಗೂ ಶ್ರೀ ಮೂಕಾಂಬಿಕಾ ಅಮ್ಮನವರ ಸನ್ನಿಧಿಯ ಅಧ್ಯಕ್ಷರಾಗಿ ಉದ್ಯಮಿ, ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಅಜಿತ್ ಶೆಟ್ಟಿ, ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ, ಕೃಷ್ಣ ಪೂಜಾರಿ, ವೆಂಕಟೇಶ್ ಕುಲಾಲ್, ದೀಪಕ್, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಜೆ ರಾವ್, ಕಾರ್ಯದರ್ಶಿಯಾಗಿ ಮಂಜುನಾಥ, ಜೊತೆ ಕಾರ್ಯದರ್ಶಿಯಾಗಿ ದೀಪಕ್, ಕೋಶಾಧಿಕಾರಿಯಾಗಿ ಸತೀಶ್, ಗೌರವ ಸಲಹೆಗಾರರಾಗಿ ಅಣ್ಣಯ್ಯ ಪಾಲನ್, ಸಂದೀಪ್ ಕುಮಾರ್, ಮಂಜಪ್ಪ ಪಾಲನ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಮತಾ ಪಿ ಶೆಟ್ಟಿಯವರು ನೇಮಕಗೊಂಡಿದ್ದಾರೆ.
ಬ್ರಹ್ಮಾವರ ಸೆ. 20 ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಮುನಿರಾಜ್ ರೆಂಜಾಳರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರು ಕರ್ತವ್ಯ ಮುಗಿಯಿತು ಅಂದುಕೊಳ್ಳದೇ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಮಕ್ಕಳ ಭವಿಷ್ಯಕ್ಕಾಗಿ ಮೌಲ್ಯಯುತ ಶಿಕ್ಷಣ ನೀಡಿ, ಋಣಪ್ರಜ್ಞೆಯ ಮತ್ತು ದೇವರ ಅಸ್ತಿತ್ವದ ಭಾವನೆಯನ್ನು ಮೂಡಿಸಿ ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಬೇಕೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ನಮ್ಮ ವಿದ್ಯಾಸಂಸ್ಥೆಯು ಮಕ್ಕಳ ಜೀವನೋಪಾಯಕ್ಕಾಗಿ ಮಾತ್ರ ಶಿಕ್ಷಣ ನೀಡದೇ ಅವರ ಉತ್ತಮ ಜೀವನಕ್ಕಾಗಿ ಸಂಸ್ಕಾರದ ಜೊತೆಗೆ ಜ್ಞಾನವನ್ನು ನೀಡುತ್ತಿದೆಯೆಂದು ತಿಳಿಸಿದರು.ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ, ಅತಿಥಿಗಳು ಪೋಷಕರಿಗೆ ನೀಡಿದ ಸಲಹೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ. ಅನೂಷಾ ಸುಬ್ರಹ್ಮಣ್ಯಂ ಮಾತನಾಡಿ ಪೋಷಕರು ಮಕ್ಕಳ…
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ನ್ಯಾಷನಲ್ ಪಿ.ಯು ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಜಂಪ್ರೋಪ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕಾರ್ತಿಕ್ ಎಲ್.ಎಚ್ ಫ್ರೀಸ್ಟೈಲ್ ನಲ್ಲಿ ಪ್ರಥಮ ಸ್ಥಾನವನ್ನು, 30ಸೆಕೆಂಡ್ ಡಬಲ್ ಅಂಡರ್ನಲ್ಲಿ ಕಾರ್ಕಳ ಜ್ಞಾನಸುಧಾ ಬಾಲಕರ ತಂಡವು (ನಿಖಿಲ್ ಎಂ.ವಿ, ಪೂರ್ವಜ್ ಗೌಡ ವಿ, ಪ್ರಥಮೇಶ್ ಡಿ.ಪಿ ಹಾಗೂ ಎನ್.ನಿಖಿಲ್) ಪ್ರಥಮ ಸ್ಥಾನವನ್ನು, 3 ನಿಮಿಷಾ ಎಂಡುರೆನ್ಸ್ನಲ್ಲಿ ಶಾನ್ವಿ ಎಸ್ ದ್ವಿತೀಯ ಸ್ಥಾನವನ್ನು, 30ಸೆಕೆಂಡ್ ಸ್ಪೀಡ್ ನಲ್ಲಿ ಕಾಜೊಲ್ ಎಂ ಪಿ ದ್ವಿತೀಯ ಸ್ಥಾನವನ್ನು ಪಡೆದು ಒಟ್ಟು 7 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಕ್ಷಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೋತ್ತಾನ ಪದವಿ ಪೂರ್ವಕಾಲೇಜು ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿಯ ಅಜ್ಲೀನ್ ಅನ್ನ ಅರಹ್ನ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು ನಿಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಭುವನ್ ಎಸ್ ನಾಯಕ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಜಿಲ್ಲಾಮಟ್ಟದ ಜಂಪ್ ಹಗ್ಗ ಪಂದ್ಯಾವಳಿಯು ಬಾರಕೂರಿನ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ನಡೆಯಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ ಜಯಗಳಿಸಿದ್ದಾರೆ. ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಥಮ ಪಿ ಸಿ ಎಂ ಬಿ ವಿಭಾಗದ ವೇದ ಎಂ. ಪಚ್ಚೆನ್ನವರ್ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ಸ್ಪರ್ಧೆಯಲ್ಲಿ ಕಂಚು, 30 ಸೆಕೆಂಡುಗಳ ಡಬಲ್ ಅಂಡರ್ ನಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ ಶ್ರೇಷ್ಠ ಎಸ್. ಗೋಲ್ಡ್ ಮೆಡಲ್, ಉಚಿತ ಶೈಲಿಯಲ್ಲಿ ಪ್ರಥಮ ಪಿ ಸಿ ಎಂ ಬಿ ವಿಭಾಗದ ಅನುಷ್ಕ ಮಹಾಂತೇಶ ಮುರ್ಗೋಡ್ ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆಯಲ್ಲಿ ಪ್ರಥಮ ಪಿ ಸಿ ಎಮ್ ಸಿ ವಿಭಾಗದ ಗುಂಡಲ ಶ್ರೀಗವಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.ಹುಡುಗರ ವಿಭಾಗದಲ್ಲಿ 30 ಸೆಕೆಂಡುಗಳ ವೇಗದ ಜಂಪ್ ರೋಪಿಂಗ್ ನಲ್ಲಿ ದ್ವಿತೀಯ ಪಿಸಿಎಂಬಿ ವಿಭಾಗದ ಅಭಿಷೇಕ್ ಚಿನ್ನದ ಪದಕ, 3 ನಿಮಿಷಗಳ ಸಹಿಷ್ಣುತೆ ವಿಭಾಗದಲ್ಲಿ ದ್ವಿತೀಯ ಪಿ ಸಿ ಎಂ…
ದಿನಾಂಕ 19/09/2025ರಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಇಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು,ವಿದ್ಯಾ ನಗರದ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪಾರ್ಥ ಜೆ ಗೌಡ 100ಮೀ ಬ್ಯಾಕ್ ಸ್ಟ್ರೋಕ್ವಿಭಾಗದಲ್ಲಿ ಪ್ರಥಮ ಹಾಗೂ 50ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಪಾವನಿ ಬಿ ನಾಯಕ್ 100ಮೀ ಫ್ರೀಸ್ಟೈಲ್ ನಲ್ಲಿ ದ್ವೀತಿಯ ಸ್ಥಾನ ಗಳಿಸಿರುತ್ತಾರೆ. ವಿಜೇತರನ್ನು ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು, ಕಾಲೇಜಿನ ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿರುತ್ತಾರೆ.