Author: admin
ಕಾಲ ಎಷ್ಟು ಬದಲಾಯ್ತು ಎಂದರೆ, ಮಹಾ ಕಾಲನೇ ಬೆಚ್ಚಿಬೀಳುವಂತೆ!. ಯಾರಿಗೂ ಸಾವಿನ ಭಯವಿಲ್ಲ. ಆರೋಗ್ಯದ ಕಾಳಜಿಯೇ ಇಲ್ಲ. ಸಮಾಜದ ಹೆದರಿಕೆ ಇಲ್ಲವೇ ಇಲ್ಲ. ಮನೆಯವರ ಗೌರವ, ಕಾಳಜಿ, ಹೆದರಿಕೆ ಎಲ್ಲವೂ ಮಂಗಮಾಯ. ಎಲ್ಲೆಲ್ಲೂ ದುಡ್ಡು ಅಂತಸ್ತು, ಪ್ರಭಾವ ಇದು ಕೆಲಸ ಮಾಡುವ ಕಲಿಕಾಲವನ್ನು ನಾವೇ ಸೃಷ್ಟಿಸಿಕೊಂಡಾಗಿದೆ!. ಎಲ್ಲರೂ ಎಲ್ಲದಕ್ಕೂ ಸ್ವತಂತ್ರರು. ಇದು ಪ್ರಸ್ತುತ ಸಮಾಜದ ಪರಿಸ್ಥಿತಿ. ಇದರ ಪ್ರಭಾವ ಎಲ್ಲಿಯವರೆಗೆ ಮುಟ್ಟಿದೆ ಅಂದರೆ ಒಂದು ಕಾಲದಲ್ಲಿ ಸಾರ್ವಜನಿಕವಾಗಿ ಮಾಡಬಾರದ ಕೆಲವಷ್ಟು ಸಂಗತಿಗಳು ಈಗ ಲಂಗುಲಗಾಮು ಇಲ್ಲದೆ ನಡೆಯುತ್ತಿದೆ. ಅದನ್ನು ಪ್ರಶ್ನಿಸಿದರೆ ಇಲ್ಲವೇ ಸರಿಯಲ್ಲ ಎಂದು ಆಕ್ಷೇಪ ಮಾಡಿದರೆ ಹಾಗೆ ಮಾಡುವವನೇ ಸಂಸ್ಕಾರ ವಿಹೀನ, ಅನಾಗರಿಕ, ಗಾಂಧೀ ಮೊದಲಾದ ಬಿರುದು ಪಡೆಯುವಂತಾಗಿದೆ!. ಬಾಕಿ ಎಲ್ಲಾ ಬದಿಗಿಟ್ಟು “ಕುಡಿತ”ದ ವಿಚಾರವನ್ನು ಹೇಳುವುದಾದರೆ ಇದರಲ್ಲಿ ಎರಡು ವಿಭಾಗ. ಒಂದು ಸ್ಟ್ಯಾಂಡರ್ಡ್ ಅಂದ್ರೆ “ಸೋಶಿಯಲ್ ಕುಡಿತ” ಇನ್ನೊಂದು ದಿನವೂ ಕುಡಿಯವ “ಕುಡುಕ” ಹೊಸ ಸೇರ್ಪಡೆ “ಕುಡುಕಿ”!!!. ಇದು ಎರಡೂ ಸರಿಯಲ್ಲ. ಆದರೆ ಯಾವತ್ತಾದರೂ ಒಮ್ಮೆ ಯಾರದ್ದೋ ಸಮಾಧಾನಕ್ಕೆ…
ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿಯಲ್ಲಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ “ಪಿಲಿಪಂಜ” ತುಳು ಸಿನಿಮಾ ಡಿಸೆಂಬರ್ 12 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಸಿನಿಮಾದ ಕಾರ್ಯಕಾರಿ ನಿರ್ಮಾಪಕ, ನಟ ರಮೇಶ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ನಿರ್ದೇಶಕ ಭರತ್ ಶೆಟ್ಟಿ, ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ನಡೆದಿದ್ದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆ 5 ನಿಮಿಷಗಳ ಅವಧಿಯಲ್ಲಿ ಸಿನಿಮಾ ಇರಲಿದ್ದು, ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲಿ ಬೋರ್ ಆಗದಂತೆ ಸಿನಿಮಾ ಮೂಡಿ ಬಂದಿದೆ. ಸಿನಿಮಾಕ್ಕೆ ರಾತ್ರಿಯ ಸನ್ನಿವೇಶ ಅಗತ್ಯವಿದ್ದ ಕಾರಣ ಹೆಚ್ಚಿನ ಶೂಟಿಂಗ್ ರಾತ್ರಿಯ ವೇಳೆ ಮಾಡಲಾಗಿದೆ. ಕಲಾವಿದರು ನಿರ್ಮಾಪಕರು ಸಿನಿಮಾಕ್ಕೆ ಸಾಕಷ್ಟು ಶ್ರಮವಹಿಸಿ ದುಡಿದಿದ್ದಾರೆ. ಎಲ್ಲರೂ ಡಿ.12ರಂದು ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂದರು. ಪಿಲಿಪಂಜ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್, ಸಿನಿಪೊಲಿಸ್,…
ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ ನ ಡೀನ್ ಆಗಿರುವ ಡಾ. ಮಹಾಬಲೇಶ್ ಶೆಟ್ಟಿ ಅವರು ಫೋರೋನಿಕ್ಸ್ ಮೆಡಿಸಿನ್ ಮತ್ತು ಮೆಡಿಕಲ್ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ಮೆಡಿಕೋಲಿಗಲ್ ಸೊಸೈಟಿಯು ಇವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಬಾಗಲಕೋಟೆಯ ಎಸ್.ಆರ್ ಪರ್ಡಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾದ ರವಿ ವಿ ಹೊಸ್ಮಾನಿ ಹಾಗೂ ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರು ಪ್ರಶಸ್ತಿಯನ್ನು ಪ್ರದಾನಿಸಿದರು.
ದೇವಾಸ್ಥಾನ ದ ಜೀರ್ಣೋದ್ಧಾರ, ಬೆಳ್ಳಿ ಮುಚ್ಚಳಿಕೆ, ಬಂಗಾರ ಮುಚ್ಚಳಿಕೆ, ಬ್ರಹ್ಮಕಲಶ, ಯಾಗ ಯಜ್ಞ, ದಾನ ಧರ್ಮ ಹೀಗೆ ಎಲ್ಲಾ ವೈದಿಕ ಆಚಾರ ವಿಚಾರದಲ್ಲಿ ಬಂಟರು ಮೊದಲಿಗರು. ಆದುದರಿಂದ ದೈವಾನುಗ್ರಹ ಬಂಟರ ಮೇಲೆ ಅತೀ ಹೆಚ್ಚು. ಎಲ್ಲಿಯವರೆಗೆ ಹೆಚ್ಚೆಂದರೆ ಕರ್ನಾಟಕದಲ್ಲೇ ಡಿವೋರ್ಸ್ ಪ್ರಕರಣದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯು ಪೈಪೋಟಿಯಲ್ಲಿದೆ. ಉಡುಪಿಯಲ್ಲಿ ಯಾವ ಸಮಾಜ ನಂ 1 ಎಂದು ಕೇಳಿದರೆ ಅದು ನಮ್ಮ ಬಂಟ ಸಮಾಜ. ಅಖಂಡ ಕರ್ನಾಟಕದಲ್ಲಿ ಡಿವೋರ್ಸ್ ಪ್ರಕರಣದಲ್ಲಿ ಬಂಟರು ನಂ 1 ..! ನಮ್ಮ ಸಮಾಜದ ಶ್ರೀಮಂತರ ದಾನ ಧರ್ಮದ ಫಲ ಶ್ರುತಿ ಇದೆನ್ನಬಹುದು ..!! ಒಬ್ಬ ದೇವಾಸ್ಥಾನದ ಅರ್ಚಕ ದಾನ ಧರ್ಮದ ಸೇವೆ ನೀಡುವವನಿಗಿಂತ ಹೆಚ್ಚು ಶ್ರೀಮಂತನಿರಬಹುದು..! ಆದರೆ ಆತ ಒಂದು ರೂಪಾಯಿ ಕೂಡಾ ದಾನ ಮಾಡಲಾರ. ದಾನ ಧರ್ಮಕ್ಕೆ ಬಂಟರಿದ್ದಾರೆ. ಒಂದು ದೇವಸ್ಥಾನ ಊರಿಗೆ ಸಂಬಂಧ ಪಟ್ಟದ್ದು ಅದು ಕೇವಲ ಬಂಟರಿಗೆ ಸೀಮಿತವೇ ..? ಅದೇ ದಾನ ಧರ್ಮ ಮಾಡುವವನಿಗೆ ಆತನ…
ಬಂಟರ ಸಂಘ ಪಡುಬಿದ್ರಿಯ ಅಧ್ಯಕ್ಷರಾಗಿ ಮೂರನೇ ಅವಧಿಗೆ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು ಪುನರಾಯ್ಕೆಗೊಂಡಿದ್ದಾರೆ. ಸಂಘದ ಅಧ್ಯಕ್ಷರಾಗಿ ಈ ಹಿಂದಿನ ಅವಧಿಗಳಲ್ಲಿ ಇವರು ಸಂಘದ ಸಭಾಭವನಗಳಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಸಿರಿಮುಡಿ ಕೋ ಆಪರೇಟಿವ್ ಸೊಸೈಟಿ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದ್ದರು. ಈ ಅವಧಿಯಲ್ಲಿ ಸಂಘದ 15 ಕೋಟಿಗಳ ಮಹತ್ವಾಕಾಂಕ್ಷೆಯ ಬಂಟಾಶ್ರಯ ಯೋಜನೆಗೆ ಮುಂದಿನ ತಿಂಗಳಿನಲ್ಲಿ ಭೂಮಿ ಪೂಜೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಡಾ| ಶೆಟ್ಟಿ ಅವರು ರಾಜಕೀಯ, ಸಹಕಾರಿ, ಕಂಬಳ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೂತನ ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪಲ್ಲವಿ, ಶ್ರೀನಾಥ ಹೆಗ್ಡೆ ನಡ್ಸಾಲು ಗುತ್ತು, ಅನಿತ ವಿಶುಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿಯಾಗಿ ರವಿ ಶೆಟ್ಟಿ ಗುಂಡ್ಲಾಡಿ, ಜೊತೆ ಕಾರ್ಯದರ್ಶಿಯಾಗಿ ಕರುಣಾಕರ ಶೆಟ್ಟಿ ಪಲಿಮಾರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ ಎನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ವಿವಿಧ ಉಪ ಸಮಿತಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಸಂಘದ…
ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ : ಭಾರತ GDP ಯಲ್ಲಿ ಮುಂದಿರುವಾಗ ಮಾನವ ಹಕ್ಕುಗಳಲ್ಲಿ ಹಿಂದುಳಿಯುವುದೇಕೆ? ವಿಚಾರ ಸಂಕಿರಣ
ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಹ ಘಟಕವಾದ ಯುನಿವರ್ಸಲ್ ಸ್ಕೂಲ್ ಆಫ್ ಲಾ ವತಿಯಿಂದ ಭಾರತ GDP ಯಲ್ಲಿ ಮುಂದಿರುವಾಗ ಮಾನವ ಹಕ್ಕುಗಳಲ್ಲಿ ಹಿಂದುಳಿಯುವುದೇಕೆ? ಎಂಬ ವಿಷಯದ ಮೇಲೆ ವಿಶೇಷ ಕಾರ್ಯಕ್ರಮವನ್ನು 9 ಡಿಸೆಂಬರ್ 2025 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ನ ಕರ್ನಾಟಕ ಸರ್ಕಾರ ನೌಕರರ ಸಂಘ ಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗೌರವಾನ್ವಿತ ಡಾ. ಜಸ್ಟಿಸ್ ಅಶೋಕ್ ಬಿ. ಹಿಂಚಿಗೇರಿ, ಅಧ್ಯಕ್ಷರು ಕರ್ನಾಟಕ ಕಾನೂನು ಆಯೋಗ ಹಾಗೂ ಮಾಜಿ ನ್ಯಾಯಮೂರ್ತಿ ಕರ್ನಾಟಕ ಹೈಕೋರ್ಟ್ ಅವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು, ಆರ್ಥಿಕ ಬೆಳವಣಿಗೆ ಮತ್ತು ಮಾನವ ಹಕ್ಕುಗಳ ಜಾರಿಯ ನಡುವೆ ಸಮತೋಲನ ತರಲು ಬಲವಾದ ಸಂಸ್ಥಾ ಸಂರಚನೆ ಹಾಗೂ ಜನಜಾಗೃತಿ ಅತ್ಯವಶ್ಯಕ ಎಂದು ಹೇಳಿದರು. ಅವರು ಭಾರತದ 40% ಸಂಪತ್ತನ್ನು ಕೇವಲ 1% ಭಾರತೀಯರು ಹೊಂದಿದ್ದಾರೆ ಎಂಬ ಅಸಮಾನತೆಯನ್ನು ಉಲ್ಲೇಖಿಸಿದರು. ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಮಾನವ ಹಕ್ಕುಗಳು ಮೂಲ…
ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಚ್ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಮೂರನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ನಟನೆಯ ʻಲ್ಯಾಂಡ್ಲಾರ್ಡ್ʼ ಸಿನಿಮಾವು ಜನವರಿ 23 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ‘ರೂಲರ್’ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಲ್ಯಾಂಡ್ಲಾರ್ಡ್’ ನಿರ್ದೇಶಕ ಜಡೇಶ್ ಕೆ ಹಂಪಿ ಅವರೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ರಾಜ್. ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿರುವುದು ಈಗ ನಿರೀಕ್ಷೆ ಡಬಲ್ ಆಗಲು ಕಾರಣವಾಗಿದೆ. ಹೌದು, ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ರೂಲರ್ ಆಗಿ ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈಚೆಗೆ ರಾಜ್ ಬಿ ಶೆಟ್ಟಿ ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಈ ಬಾರಿ ವಿಗ್ ಧರಿಸಿ, ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ. ರಾಜ್ ಬಿ ಶೆಟ್ಟಿ ಹೇಳಿದ್ದೇನು? “ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್. ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುವವನು ನಾನು. ಈ…
ಹುಟ್ಟು ನಿಶ್ಚಿತ ಸಾವು ಖಚಿತ ಆದರೆ ಅದಕ್ಕೊಂದು ಕರುಣೆ ಇಲ್ಲ. ವಯಸ್ಸಿನ ಲೆಕ್ಕಾಚಾರವನ್ನು ಹಾಕಲ್ಲ. ಬೈಕಾಡಿ ಜೀವನ್ ಶೆಟ್ರು ಉಡುಪಿ ಜಿಲ್ಲೆಯ ಪ್ರಸಿದ್ಧ ಪಿಡಬ್ಲ್ಯೂಡಿ ಗುತ್ತಿಗೆದಾರರು. ಅದೆಷ್ಟೋ ಜನರು ತಮ್ಮೂರಿಗೊಂದು ರಸ್ತೆ ಸ್ಯಾಂಕ್ಷನ್ ಆದಾಗ ಅದರ ಗುತ್ತಿಗೆ ಬೈಕಾಡಿ ಜೀವನಣ್ಣನಿಗೆ ಸಿಗಲಿ ಅಂತ ಪ್ರಾರ್ಥಿಸಿದವರಿದ್ದಾರೆ. ಎಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಆದರೂ ಕೂಡ ಎಲ್ಲಾ ಗುತ್ತಿಗೆದಾರರಿಗಿಂತ ಹೆಚ್ಚು ಹಣವನ್ನು ರಸ್ತೆಗೆ ಹಾಕಿ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಎಲ್ಲಾ ಸ್ಥರದ ಜನರಿಂದಲೂ ಸೈ ಅನಿಸಿಕೊಂಡವರು. ನೀಳಕಾಯದ ನಗುಮೊಗದ ಶುಭ್ರ ವಸ್ತ್ರಧಾರಿಯಾಗಿರುತ್ತಿದ್ದ ಜೀವನಣ್ಣನನ್ನು ನೋಡುವಾಗಲೇ ಎಂಥವರಲ್ಲೂ ಗೌರವ ಹೊರ ಹೊಮ್ಮುತ್ತಿತ್ತು. ಎಳ್ಳಂಪಳ್ಳಿ ರಸ್ತೆ ಕಾಮಗಾರಿಯಾಗುವಾಗ ಮುಂಜಾನೆ ಬಂದು ಅರ್ಧ ತೋಳಿನ ಬಿಳಿಯಂಗಿಯನ್ನು ತೊಟ್ಟು ಕೆಲಸಗಾರರಿಗೆ ಸೂಚನೆಯನ್ನು ಕೊಡುತ್ತಿದ್ದ ಅವರಿಗೊಂದು ನಮಸ್ಕಾರ ಮಾಡಿ ನಾನು ಶಾಲಾ ಕರ್ತವ್ಯಕ್ಕೆ ಮುಂದುವರಿಯುತ್ತಿದ್ದೆ. ಅವರಿಗೆ ನಮಸ್ಕರಿಸುವುದೇ ನಮ್ಮಂಥವರಿಗೆ ಹೆಮ್ಮೆಯ ವಿಷಯವಾಗಿತ್ತು ಮುರಳಿ ಕೃಷ್ಣ ನಾಮಾಂಕಿತದೊಂದಿಗೆ ಕರಾವಳಿಯಲ್ಲಿ ಮಿಂಚಿದ ಪ್ರಸಿದ್ಧ ಕನ್ಸ್ಟ್ರಕ್ಷನ್ ಕಂಪೆನಿ ಇವರದ್ದು. ತಮ್ಮ ಸಂಸ್ಥೆಯ ಮುಖಾಂತರವಾಗಿ ಅದೆಷ್ಟೋ ಜನರಿಗೆ…
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಹರೀಶ್ ಶೆಟ್ಟಿ ಬಂಡ್ಸಾಲೆ ಇವರು ಇಂಗ್ಲೆಂಡ್ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿಹೆಚ್ಡಿ ಪದವಿ ಪಡೆದಿದ್ದಾರೆ. ಹರೀಶ್ ಶೆಟ್ಟಿ ಬಂಡ್ಸಾಲೆ ಹಾರಾಡಿ ಗ್ರಾಮದ ಕೆಳಬಣಸಾಲೆ ಮನೆ ರತ್ನಾವತಿ ಶೆಟ್ಟಿ ಹಾಗೂ ಹಳುವಳ್ಳಿ- ಕೋಂಟಿಬೈಲು ಲಕ್ಷಣ ಶೆಟ್ಟಿ ಅವರ ಮಗನಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪಡೆದು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬ್ರಹ್ಮಾವರದ ಎಸ್ಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದರು. ಹಾರಾಡಿಯ ಡಾ.ಎ.ವಿ ಬಾಳಿಗಾ ಕಾಲೇಜಿನಲ್ಲಿ ಬಿಎಸ್ಡಬ್ಲ್ಯೂ ಮುಗಿಸಿ ಮಂಗಳೂರಿನ ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಪದವಿ ಪಡೆದಿದ್ದರು. ಅಹಮ್ಮದಾಬಾದ್ನ ಐಐಎಂನಲ್ಲಿ ಪಿಎಚ್ಡಿಯನ್ನು ಪ್ರಾರಂಬಿಸಿ ಅಲ್ಲಿಂದ ಇಂಗ್ಲೆಂಡ್ನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬಾತ್ನಿಂದ ಸ್ಕಾಲರ್ಶಿಪ್ ಪಡೆದು ಕಟ್ಟಡ ಕಾರ್ಮಿಕರ ಬಗ್ಗೆ ಆಳವಾದ ಅಧ್ಯಯನ ಮಾಡಿ ತಮ್ಮ ಪ್ರಬಂಧವನ್ನು ಮಂಡಿಸಿ, ಯಾವುದೇ ತಿದ್ದುಪಡಿ ಇಲ್ಲದೆ ಮೊದಲ ಹಂತದಲ್ಲೇ ಉತ್ತೀರ್ಣರಾಗಿ…















