Author: admin

ಕುಂದಾಪುರ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 16 ರಂದು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮಂಡಳಿಯ ವತಿಯಿಂದ ನಡೆದ ‘ಸಂಸ್ಕೃತಿ’ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಂಜುರ್ಲಿ ಗ್ರೂಪ್ ಹೋಟೆಲ್ಸ್ ನ ಸಿಎಂಡಿ ರಾಜೇಂದ್ರ ವಿ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಡಾ| ಕೆ ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭ ಡಾ| ಚೇತನ್ ಶೆಟ್ಟಿ ಕೋವಾಡಿ, ರಕ್ಷಿತ್ ರಾವ್, ರೇಷ್ಮಾ ಶೆಟ್ಟಿ, ಆಕಾಶ್ ಬಿ ಶೆಟ್ಟಿ, ನಿರೀಕ್ಷಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಕರಿಸಿದ ಸಮಾಜ ಸೇವಕ, ಆಸ್ಪೆನ್ ಕಂಪನಿ ಮುಖ್ಯಸ್ಥ ಹಾಗೂ ಉಡುಪಿ ಕುಂತಳನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿಯವರನ್ನು ಶ್ರೀ ಕ್ಷೇತ್ರ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಕೆ ಪ್ರಕಾಶ್ ಶೆಟ್ಟಿಯವರು ಮತ್ತಿತರ ಗಣ್ಯರ ಸಮಕ್ಷಮ ಸನ್ಮಾನಿಸಿ ಅಭಿನಂದಿಸಿದರು. ಅಶೋಕ್ ಕುಮಾರ್ ಶೆಟ್ಟಿಯವರು ತಮ್ಮ ಆಸ್ಪೆನ್ ಸಂಸ್ಥೆಯಿಂದ 25 ಲಕ್ಷ ರೂ ದೇಣಿಗೆ ನೀಡಿದ್ದಲ್ಲದೇ, ಎಸ್.ಇ.ಝಡ್ ನ ವಿವಿಧ ಕಂಪನಿಗಳಿಂದ ಹಾಗೂ ಸ್ಟೀಲ್ ಸ್ಟ್ರಾಂಗ್ ಕಂಪನಿಯ ಸಿಎಂಡಿ ರಮೇಶ್ ಶೆಟ್ಟಿಯವರಿಂದ ರೂ. 5 ಲಕ್ಷ, ಜೈ ಹಿಂದ್ ಕಂಪನಿಯ ಎಂಡಿ ದಿವ್ಯ ಜೈನ್ ರವರಿಂದ ರೂ. 5 ಲಕ್ಷ, ಎಂ11 ಕಂಪನಿಯ ಅನಿಲ್ ಅವರಿಂದ ರೂ. 2 ಲಕ್ಷ ದೇಣಿಗೆ ಸಂಗ್ರಹಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.

Read More

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಕ್ತದಾನ, ವಿಪತ್ತು ನಿರ್ವಹಣೆಯಂತಹ ಉದಾತ್ತ ಕಾರ್ಯಗಳಲ್ಲಿ ತೊಡಗಿರುವ ರೆಡ್ ಕ್ರಾಸ್ ಸಂಸ್ಥೆ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಪ್ರೇರಣೆಯಾಗಿದೆ ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಯೂತ್ ರೆಡ್ ಕ್ರಾಸ್ ಮಂಗಳೂರು ವಿ.ವಿ ಸಹಯೋಗದಲ್ಲಿ ರೆಡ್ ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ರೆಡ್ ಕ್ರಾಸ್ ವಿಚಾರ ಸಂಕಿರಣದಲ್ಲಿ ಸುರತ್ಕಲ್ ಎನ್ಐಟಿಕೆಯ ಸಹ ಪ್ರಾಧ್ಯಾಪಕಿ ಡಾ| ರಶ್ಮಿ ಸುಧೀರ್ ಉಚ್ಚಿಲ್ ಮತ್ತು ಡಿ ಅಡಿಕ್ಷನ್ ಸಮಲೋಚಕಿ ಡಾ| ಕುಸುಮ್ ತಂತ್ರಿ ಡೆಸಾ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ರೆಡ್ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ ಸಚ್ಚಿದಾನಂದ…

Read More

ಮೊಗರು ಗುತ್ತು ರಾಜೇಶ್ ಕುಮಾರ್ ಹೆಗ್ಡೆ ಮತ್ತು ಮೂಡಂಬೈಲು ಶುಭಾ ರಾಜೇಶ್ ಹೆಗ್ಡೆ ದಂಪತಿಗಳ ಸುಪುತ್ರಿ ರಾಶಿ ಹೆಗ್ಡೆ ಭರತನಾಟ್ಯ ಕಲೆಯನ್ನು ಕದ್ರಿಯ ನಾಟ್ಯಾಲಯದಲ್ಲಿ ಗುರು ಮುಖೇನ ಅಭ್ಯಸಿಸಿ ಈಗ ರಂಗ ಪ್ರವೇಶಕ್ಕೆ ಅಣಿಯಾಗುತ್ತಿದ್ದಾಳೆ. ಮೇ 17 ರಂದು ಪುರಭವನದಲ್ಲಿ ಸಂಜೆ 4.30 ಕ್ಕೆ ಕಾರ್ಯಕ್ರಮವನ್ನು ಶರವು ಶ್ರೀ ಮಹಾಗಣಪತಿ ದೇವಾಲಯದ ಧರ್ಮದರ್ಶಿ ರಾಘವೇಂದ್ರ ಶಾಸ್ತ್ರಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಲಿರುವರು. ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ಛೇರ್ಮನ್ ಡಾ. ಮೋಹನ್ ಆಳ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ, ಅತಿಥಿಗಳಾಗಿ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಮಿತ್ರಾ ಎನ್ ಹೆಗ್ಡೆ, ಜೀವವಿಮಾ ವಿಭಾಗ ಉಡುಪಿ ವಲಯದ ಡಿವಿಜನಲ್ ಮ್ಯಾನೇಜರ್ ಗಣಪತಿ ಎನ್ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ. ವಿದ್ವಾನ್ ಯು.ಕೆ ಪ್ರವೀಣ್ ಅವರು ಕದ್ರಿ ನೃತ್ಯ ವಿದ್ಯಾಲಯ ಚಾರಿಟೇಬಲ್ ಟ್ರಸ್ಟ್ ಇದರ ನಿರ್ದೇಶಕರಾಗಿದ್ದು, ನೃತ್ಯ ಕಲಾತಿಲಕ ಬಿರುದಾಂಕಿತ ಯು.ಕೆ ಕೃಷ್ಣ ಮತ್ತು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಜಯಲಕ್ಷ್ಮಿಯವರ ಸುಪುತ್ರರಾಗಿದ್ದು,…

Read More

ಸಮಾಜಮುಖಿ ಚಿಂತನೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯ ಸಾರ್ಥಕ ಉದಾಹರಣೆಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಂಗಳೂರಿನ ನಿರಾಶ್ರಿತ ಮಕ್ಕಳ ಆಶ್ರಯತಾಣ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ರೂ. 50,000ಕ್ಕೂ ಅಧಿಕ ಮೊತ್ತದ ದೈನಂದಿನ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಂಪ್ರದಾಯ ದಿನಾಚರಣೆಯನ್ನು ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶದೊಂದಿಗೆ ಅದ್ದೂರಿಯಾಗಿ ಆಚರಿಸಲಾಗಿತ್ತು. ಕಾರ‍್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಾಂಪ್ರದಾಯಿಕ ಆಹಾರ ಮೇಳ ಹಾಗೂ ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೇರಳ ರಾಜ್ಯದ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ಹಾಗೂ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೂ ಕೈಜೋಡಿಸುವ ಉದ್ದೇಶದಿಂದ ಆಹಾರ ಮೇಳದಿಂದ ಸಂಗ್ರಹವಾದ ಮೊತ್ತವನ್ನು ಪ್ರತೀ ವರ್ಷದಂತೆ ಸಮಾಜಮುಖಿ ಕಾರ್ಯಕ್ಕೆ ಬಳಸಲು ನಿರ್ಧರಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ…

Read More

ಬಸ್ರೂರು ಶ್ರೀ ತುಳುವೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಮುಂದುವರಿದ ಭಾಗವಾಗಿ, ಬಸ್ರೂರಿನ ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ ಜೂನ್ 14ರಂದು (ಆದಿತ್ಯವಾರ) ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ ಎಂದು ದೇವಸ್ಥಾನ ಸಮಿತಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ತಿಳಿಸಿವೆ. ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ನಡೆದ ಪ್ರಶ್ನೆ ಚಿಂತನೆಯ ವೇಳೆ ದೊರೆತ ದೈವ ಸಂದೇಶದ ಪ್ರಕಾರ, ಶ್ರೀಚಕ್ರ ಸಾನಿಧ್ಯ ಹೊಂದಿರುವ ಮೂಲಳ ದೇವಿ ತುಳುವೇಶ್ವರಿ ಸಾನಿಧ್ಯದ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ನಡೆದ ನಂತರವೇ ತುಳುವೇಶ್ವರ ದೇವರ ಪುನರ್ವೈಭವೀಕರಣ ಕಾರ್ಯಗಳು ಪೂರ್ಣ ಫಲಪ್ರದವಾಗಲಿವೆ ಎಂಬ ಸೂಚನೆ ದೊರೆತ ಹಿನ್ನೆಲೆಯಲ್ಲಿ ಈ ಮಹತ್ವದ ತಿರುವು ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ತುಳುವೇಶ್ವರಿ (ಮುಳಲ) ಸಾನಿಧ್ಯದ ಪ್ರಸ್ತುತ ವಾರಿಸುದಾರರಾದ ಪ್ರಶಾಂತ ಪ್ರಭು ಹಾಗೂ ಸುಭಾಷ್ ಚಂದ್ರ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜೂನ್ 14 ಆದಿತ್ಯವಾರದಂದು ಅಷ್ಟಮಂಗಲ ಪ್ರಶ್ನೆ ಚಿಂತನೆಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಪ್ರಾಚೀನ ತುಳುನಾಡಿನ ಶಕ್ತಿಸ್ವರೂಪಿಣಿಯಾದ ತುಳುವೇಶ್ವರಿ ದೇವಿಯ ಮೂಲ ಸಾನಿಧ್ಯ, ಶ್ರೀಚಕ್ರ ಆರಾಧನೆ, ಶ್ರೀಚಕ್ರ ನೇಪಾಳಕ್ಕೆ…

Read More

ಅನಿವಾಸಿ ಭಾರತೀಯ ದಂಪತಿ ಸತೀಶ್ ದಾಬ ಶೆಟ್ಟಿ ಮತ್ತು ಅನಿತಾ ಸತೀಶ್ ಶೆಟ್ಟಿ ಅವರ ಸುಪುತ್ರ, ಯುಎಇ ದುಬಾಯಿಯ ಅಲ್ ವಾರ್ಖಾ ಅವರ್ ಓವ್ನ್ ಇಂಗ್ಲಿಷ್ ಹೈಸ್ಕೂಲ್ ನ ಪ್ರತಿಭಾವಂತ ವಿದ್ಯಾರ್ಥಿ, 2022 ರಲ್ಲಿ ರಾಣಿ ಎಲಿಜಬೆತ್ ಪ್ಲಾಟಿನಂ ಜುಬಿಲಿ ಸ್ಕಾಲರ್ ಶಿಪ್ ಪಡೆದ ಆರುಷ್ ಸತೀಶ್ ಶೆಟ್ಟಿಯವರು 12 ನೇ ತರಗತಿಯಲ್ಲಿ (ಸಿ.ಬಿ.ಎಸ್.ಸಿ ವಿಜ್ಞಾನ ವಿಭಾಗ) 98.4 ಶೇಕಡಾದೊಂದಿಗೆ ತೇರ್ಗಡೆಗೊಂಡು ಎರಡನೇ ರ‌್ಯಾಂಕ್ ಪಡೆದಿದ್ದಾರೆ. ಕಾಪು ಉಳಿಯಾರಗೋಳಿ ನಂದೋಡಿ ಗುತ್ತು ಮನೆತನದ ಸತೀಶ್ ದಾಬ ಶೆಟ್ಟಿ ದಂಪತಿಯ ಹಿರಿಯ ಪುತ್ರಿ ಆಕೃತಿ ಸತೀಶ್ ಶೆಟ್ಟಿ ಯು.ಎ.ಇ ಯ ಟಾಪರ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲೇ 2020 ರ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸತೀಶ್ ಶೆಟ್ಟಿ ದಂಪತಿಯರ ಪ್ರತಿಭಾವಂತ ಮಕ್ಕಳಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ ಹಾರ್ದಿಕ ಅಭಿನಂದನೆಗಳು.

Read More

ಮುಂಬಯಿಯ ಹಿರಿಯ ಹೋಟೇಲು ಉದ್ಯಮಿ ಹಾಗೂ ಕೃಷ್ಣ ಪ್ಯಾಲೇಸ್ ಹೋಟೇಲ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿಯವರನ್ನು ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ವಿಶ್ವಸ್ಥರಾಗಿ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಸೂಚನೆಯ ಮೇರೆಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಅನುಮೋದಿಸಿ ನೇಮಕ ಮಾಡಿದರು. ಮೃದು ಭಾಷಿ, ಪರೋಪಕಾರಿ, ವಿಶಾಲ ಮನೋಭಾವಿ, ಸಮಾಜಸೇವಕ, ಕೊಡುಗೈದಾನಿ, ಉದಾರ ಮನಸ್ಸುಳ್ಳ ಕೃಷ್ಣ ಶೆಟ್ಟಿಯವರನ್ನು ವಿಶ್ವಸ್ಥರಾಗಿ ನೇಮಿಸಿದ್ದರಿಂದ ಸಂಸ್ಧೆಗೆ ನಿರಂತರ ಸಹಾಯಹಸ್ತ ದೊರಕಿ, ಸಂಸ್ದೆ ಇನ್ನಷ್ಷು ಹೆಚ್ಚಿನ ಉನ್ನತಿ ಪಡೆಯುತ್ತದೆ ಎಂದು ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಸೋಸಿಯೇಶನ್ ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ ಎಲ್ಲರೂ ಸೇರಿ ಅವರಿಗೆ ಹೂಗುಚ್ಛವನ್ನು ನೀಡಿ ಗೌರವಿಸಿ, ಶುಭ ಕಾಮನೆಯನ್ನಿತ್ತು ಅವರನ್ನು ಸಂಸ್ಥೆಯ ವಿಶ್ವಸ್ಥರನ್ನಾಗಿ ಸ್ವಾಗತಿಸಿದರು. ಕೃಷ್ಣ ವೈ ಶೆಟ್ಟಿಯವರು ನಂತರ ಮಾತನಾಡಿ, ನನ್ನಿಂದ ಸಂಸ್ಥೆಯ ಒಳಿತಿಗಾಗಿ…

Read More

ಕರಾವಳಿಯ ಬಂಟ ಸಮುದಾಯದ ಕ್ರೀಡಾ ಪಟುಗಳಿಗಾಗಿ ಇದೀಗ ಒಂದು ಅದ್ಭುತ ಕ್ರೀಡಾ ವೇದಿಕೆ ಸಜ್ಜಾಗಿದೆ. ಬಂಟರ ಸಂಘ ಪಳ್ಳಿ ನಿಂಜೂರು ವಲಯದ ಆಶ್ರಯದಲ್ಲಿ ಕಾರ್ಕಳ, ಕಾಪು ಮತ್ತು ಹೆಬ್ರಿ ತಾಲೂಕುಗಳ ಸಹಯೋಗದೊಂದಿಗೆ ಮೇ 16 ರಂದು ಬೃಹತ್ ‘ಬಂಟರ ಕ್ರೀಡೋತ್ಸವ -2026’ ಆಯೋಜಿಸಲಾಗಿದೆ. ಪಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಹೊನಲು ಬೆಳಕಿನ ಕ್ರೀಡಾಕೂಟವು ಸಮುದಾಯದ ಒಗ್ಗಟ್ಟು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್‌ಕೆಜಿ ಮಕ್ಕಳಿಂದ ಹಿಡಿದು 50 ವರ್ಷ ಮೇಲ್ಪಟ್ಟ ಹಿರಿಯರವರೆಗೆ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು. ಈ ಕ್ರೀಡಾ ಉತ್ಸವದಲ್ಲಿ ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ ಹಾಗೂ ಲಕ್ಕಿ ಸರ್ಕಲ್‌ನಂತಹ ವೈಯಕ್ತಿಕ ಕ್ರೀಡೆಗಳಿವೆ. ತಂಡದ ಆಟಗಳಾದ ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಹಗ್ಗಜಗ್ಗಾಟ (ಪುರುಷ ಮತ್ತು ಮಹಿಳಾ ತಂಡಗಳಿಗೆ) ವಿಶೇಷ ಆಕರ್ಷಣೆಯಾಗಿದೆ. ವಾಲಿಬಾಲ್…

Read More

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಸರಗೋಡು ತಾಲೂಕಿನಲ್ಲಿ ನಾಮಪತ್ರ ಹಿಂದೆಗೆಯುವ ಅವಧಿ ಮುಗಿದ ಬಳಿಕವೂ ಎರಡು ನಾಮಪತ್ರ ಹೆಚ್ಚು ಇದ್ದುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಯಿತು. ಅಧ್ಯಕ್ಷರು ಸೇರಿ 84 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಕೃತವಾಗಿ ಘೋಷಣೆ ಮಾಡಿದೆ. ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾಗಿ ಅವಿರೋಧ ಆಯ್ಕೆಯಾಗಿದ್ದರು. ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಕಾವು ಹೇಮನಾಥ ಶೆಟ್ಟಿಯವರು ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾದರು. ಇವರು ಮಾತೃ ಸಂಘದ ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿ ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಸುಮಾರು 3.5 ಎಕ್ರೆ ಸರಕಾರಿ ಜಮೀನು ಸಂಘಕ್ಕೆ ಮಂಜೂರು ಮಾಡಿಸಿದ್ದು, ಇನ್ನೂ 2.5 ಎಕ್ರೆ ಜಮೀನು ಮಂಜೂರಾತಿ ಹಂತದಲ್ಲಿದೆ. ಈ ಜಮೀನಿನಲ್ಲಿ ಸಮುದಾಯ…

Read More