
‘ಚಿಗುರಿನ ನಗುವಿನಲ್ಲಿ ಫಲದ ಸಿಹಿ ಅಡಗಿದೆ’ ಎನ್ನುವುದು ಬಲ್ಲವರ ಕಾವ್ಯಾತ್ಮಕ ನುಡಿ. ದೇಶ ವಿದೇಶಗಳಲ್ಲಿ ಶಾಸ್ತ್ರೀಯ, ಭಾವಪೂರಿತ, ಜಾನಪದ, ಭಕ್ತಿಪೂರ್ವಕ ಗಾಯನ ತಂಡ “ಸ್ವರಸಮರ್ಪಣೆ” ಇಂದು ಕಿರಿಯ, ಯುವ, ಹರೆಯದ ಮನಗಳಿಗೆ ಇಂಪಿನ ತಂಪು ಕೊಡುತ್ತಿದೆ. ದಿವ್ಯನಿಧಿಯವರ ಒಟ್ಟು ಐದಾರು ಜನರಿರುವ ಸ್ವಚ್ಛ ತಂಡ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸಂಗೀತದ ಸಿಂಚನ ನೀಡುತ್ತಿರುವುದು ನಿಜವಾಗಲೂ ಅಭಿನಂದನಾರ್ಹ. ತನ್ನ ಎಳವೆಯಲ್ಲೇ ಬಹರೈನ್, ದುಬೈ, ಆಫ್ರಿಕಾ, ಕೀನ್ಯಾ, ಕತಾರ್ ಹೀಗೆ ಸಪ್ತಸಾಗರ ದಾಟಿ ಸ್ವರ ಕೊಟ್ಟ ಪ್ರಶಂಸಾರ್ಹ ಬಳಗವಿದು. ಭಜನೆಯ ಮೂಲದಿಂದ ಇಂದು ನುರಿತ ಕಲಾವಿದರ ನಡುವೆಯೂ ಪ್ರೋತ್ಸಾಹ ಗಿಟ್ಟಿಸಿದ ಅದ್ಭುತ ಗಾಯಕಿ. ವಿದ್ಯಾಸಂಸ್ಥೆಗಳು, ಸಾಂಸ್ಕೃತಿಕ ರಂಗವೇದಿಕೆಯ ಕಾರ್ಯಕ್ರಮಗಳು, ಮನೆಯ ಕಾರ್ಯಕ್ರಮಗಳಲ್ಲಿ ಸಮರ್ಪಣೆಯ ಮನೋಭಾವವುಳ್ಳ ಈಕೆಯ ಶ್ರಮಕ್ಕೆ ನಾವೆಲ್ಲಾ ಸಲ್ಯೂಟ್ ಹೇಳಲೇಬೇಕು.

ನುಗುಮೊಗದ ಸ್ವರ, ಸ್ಪಷ್ಟ ಸಾಹಿತ್ಯ, ಶುದ್ಧ ಹಿಮ್ಮೇಳಗಳು ಇಂದು ಅಪರಿಮಿತ ಕೇಳುಗರ ಮನ ತಟ್ಟಿದೆ ಎಂಬ ಹೆಮ್ಮೆ ಈಕೆಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಈ ಸ್ವಚ್ಛ ಮನಕ್ಕೆ ಇನ್ನಷ್ಟು ಸ್ವರ ಸಂಗೀತದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಕಾಂಕ್ಷೆಯಿದೆ. ಎರುಂಬು ಮೋಹನದಾಸ್ ರೈ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿಯಾಗಿರುವ ಈ ನಗು ಮೊಗದ ಸ್ವರ-ಸಿರಿಯ ಕಾರ್ಯಕ್ರಮಕ್ಕೆ ಸಂಪರ್ಕಿಸಿರಿ:- 9606213449 ಅಥವಾ 7892830449


























































































































