ದ್ವೀಪ ರಾಜ್ಯವಾದ ಗೋವಾದಲ್ಲಿ 2024ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದು ಸ್ಥಾಪಕಾಧ್ಯಕ್ಷರಾದ ಹೋಟೆಲ್ ಉದ್ಯಮಿ, ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಮುಂದಾಳ್ವತದಲ್ಲಿ ಅದ್ದೂರಿಯ ಕಾರ್ಯಕ್ರಮಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ತುಳುವರನ್ನು ಒಟ್ಟುಗೂಡಿಸಿ ತುಳು ಕೂಟವು ಉದ್ಘಾಟನೆಗೊಂಡಿತು. ನವೆಂಬರ್ 29 ಆದಿತ್ಯವಾರದಂದು ತುಳುಕೂಟ (ರಿ) ಗೋವಾ ತನ್ನ ವಾರ್ಷಿಕ ಉಚ್ಚಯ -2026 ನ್ನು ಪುಂಡಲೀಕ ದೇವಸ್ಥಾನದ ಸಭಾಗೃಹ ಪೋರ್ವೋರಿಮ್ ಗೋವಾ ಇಲ್ಲಿ ಆಚರಿಸುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಾ ತುಳು ಕೂಟದ ಮಹಾದಾನಿ ಶಶಿಧರ ಶೆಟ್ಟಿ ಬರೋಡಾ (ಗೌರವ ಅಧ್ಯಕ್ಷರು : ಅಖಿಲ ಭಾರತ ತುಳು ಒಕ್ಕೂಟ) ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಗಣೇಶ ಶೆಟ್ಟಿ ಇರ್ವತ್ತೂರು (ಅಧ್ಯಕ್ಷರು : ತುಳುಕೂಟ ಗೋವಾ) ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉಮಾನಾಥ ಕೋಟ್ಯಾನ್ (ಶಾಸಕರು : ಮೂಡುಬಿದ್ರಿ ವಿಧಾನಸಭಾ ಕ್ಷೇತ್ರ), ಹರೀಶ್ ಪೂಂಜ (ಶಾಸಕರು : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ), ಮಹೇಶ್ ಶೆಟ್ಟಿ ತೆಳ್ಳಾರು (ಉದ್ಯಮಿಗಳು ಮುಂಬಯಿ), ಸರ್ವೋತ್ತಮ ಶೆಟ್ಟಿ ಅಬುಧಾಬಿ (ಅಧ್ಯಕ್ಷರು : ತುಳುವ ಮಹಾಸಭಾ ಇಂಟರ್ ನ್ಯಾಶನಲ್), ದೇವೇಂದ್ರ ಹೆಗ್ಡೆ ಕೊಕ್ರಾಡಿ (ಅಧ್ಯಕ್ಷರು : ತುಳುವ ಮಹಾಸಭಾ ಕರ್ನಾಟಕ ರಾಜ್ಯ) ಆಗಮಿಸಲಿದ್ದಾರೆ. ತುಳುವಿನ ಬಗ್ಗೆ ತುಳು ಮಹಾಸಭಾ ಸಂಚಾಲಕರಾದ ಡಾ| ರಾಜೇಶ್ ಕೃಷ್ಣ ಆಳ್ವ ಮಾತನಾಡಲಿದ್ದಾರೆ.




ಕಾರ್ಯಕ್ರಮದಲ್ಲಿ ಭೋಜ ರಾಜ್ ವಾಮಂಜೂರು (ನವರಸ ರಾಜ ಬಿರುದಾಂಕಿತ ನಟ), ಪ್ರಸನ್ನ ಶೆಟ್ಟಿ ಬೈಲೂರು (ನಟ, ನಿರ್ದೇಶಕ), ಸಂದೀಪ್ ಶೆಟ್ಟಿ ಮಾಣಿಬೆಟ್ಟು (ನಟ), ಶಶಿಧರ ರೈ (ಅಧ್ಯಕ್ಷರು : ಬಂಟರ ಸಂಘ ಗೋವಾ), ಕೃಷ್ಣ ಪೂಜಾರಿ (ಅಧ್ಯಕ್ಷರು : ಬಿಲ್ಲವರ ಸಂಘ ಗೋವಾ), ಪ್ರಕಾಶ್ ಪೂಜಾರಿ (ಅಧ್ಯಕ್ಷರು : ನಾರಾಯಣ ಗುರು ಟ್ರಸ್ಟ್ (ರಿ) ಗೋವಾ, ಸದಾನಂದ ಶೆಟ್ಟಿ ಬೆಳುವಾಯಿ (ಗೌರವ ಅಧ್ಯಕ್ಷರು: ತುಳು ಕೂಟ ಗೋವಾ), ಚಂದ್ರಹಾಸ ಅಮೀನ್ (ಗೌರವ ಅಧ್ಯಕ್ಷರು : ತುಳು ಕೂಟ ಗೋವಾ) ಉಪಸ್ಥಿತರಿರುವರು. ಕಾರ್ಯಕ್ರಮದ ನಿರೂಪಣೆಯನ್ನು ನಿತೇಶ್ ಶೆಟ್ಟಿ ಎಕ್ಕಾರು ಮಾಡಲಿದ್ದಾರೆ. ಅಂದು ಮಧ್ಯಾಹ್ನ 2:30 ರಿಂದ ರಾತ್ರಿ 9:00 ಗಂಟೆಯವರೆಗೆ ಹಾಸ್ಯ, ಗಾಯನ, ನೃತ್ಯ ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ. 2:30ಕ್ಕೆ ತುಳು ಪದ್ಯಗಳ ರಸಮಂಜರಿಯನ್ನು ಶರಣ್ಯ ಕಲ್ಲಡ್ಕ, ನವೀನ್ ಶೆಟ್ಟಿ ಬಳಗ ಮಾಡಲಿದ್ದಾರೆ. 3:30ಕ್ಕೆ ತುಳು ಕೂಟದ ಸದಸ್ಯರ ಡ್ಯಾನ್ಸ್, 4:30ಕ್ಕೆ ಪ್ರಶಂಸ ಕಲಾವಿದ ಕಾಮಿಡಿ ಶಾಟ್ಸ್, 5:30ಕ್ಕೆ ಸಭಾ ಕಾರ್ಯಕ್ರಮ, 6:30 ಕ್ಕೆ ಚೈತನ್ಯ ಕಲಾವಿದರು ಬೈಲೂರು ಅವರಿಂದ ‘ಊರು ಬೋಡು ಪುದರ್ ಬೊಡ್ಚಿ’ ನಾಟಕ ಪ್ರದರ್ಶನಗೊಳ್ಳಲಿದೆ. ಅಂದು ಕರಾವಳಿ ಕಂಡ ಹೆಸರಾಂತ ಕಾರ್ಯಕ್ರಮ ನಿರೂಪಕ, ದೇಶ ವಿದೇಶಗಳಲ್ಲಿ ಸುಮಾರು 3,500 ಕ್ಕೂ ಹೆಚ್ಚಿನ ವೇದಿಕೆಯಲ್ಲಿ ನಿರೂಪಣೆ ಮಾಡಿದ ನಿತೇಶ್ ಶೆಟ್ಟಿ ಎಕ್ಕಾರು ಅವರನ್ನು ತುಳು ಕೂಟ (ರಿ) ಗೋವಾದ ವತಿಯಿಂದ ‘ಸ್ವರ ರತ್ನ’ ಬಿರುದ ಪ್ರದಾನದೊಂದಿಗೆ ಸನ್ಮಾನ ಹಾಗೂ ‘ನವರಸ ರಾಜ’ ಬಿರುದಾಂಕಿತ ಬೋಜರಾಜ್ ವಾಮಂಜೂರು ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತುಳು ಕೂಟ ಗೋವಾದ ವರ್ಷದ ಉಚ್ಛಯ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತುಳು ಕೂಟ ಗೋವಾದ ಗೌರವ ಅಧ್ಯಕ್ಷರಾದ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮೀನ್ ಬಂಟ್ವಾಳ, ವಿಜಯೇಂದ್ರ ಶೆಟ್ಟಿ ಕಬಿಯಾಡಿ, ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು, ಉಪಾಧ್ಯಕ್ಷ ಕೆ. ಶಶಿಧರ ರೈ ಪುತ್ತೂರು, ಪ್ರಕಾಶ್ ಪೂಜಾರಿ ವಿರಾಜ್ ಪೇಟೆ, ಅನಿಲ್ ವಿ ಪೂಜಾರಿ, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ್ ಪೂಜಾರಿ ಪಣಿಯೂರು, ಜಗದೀಶ್ ಶೆಟ್ಟಿ ಪಳ್ಳಿ, ನವೀನ್ ರಾವ್ ಉಡುಪಿ, ಶರತ್ ಶೆಟ್ಟಿ ಕಲ್ಲೇರಿ, ರಾಘವೇಂದ್ರ ಉಡುಪ, ಕಾರ್ಯದರ್ಶಿ ಶಶಿಧರ ನಾಯ್ಕ್, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಅಮೀನ್ ಕಾಪು, ಕೋಶಾಧಿಕಾರಿ ಸಿಎ ಪ್ರಶಾಂತ್ ಜೈನ್ ಇರ್ವತ್ತೂರು, ಜೊತೆ ಕೋಶಾಧಿಕಾರಿ ಅಪ್ಪಾಜಿ ಶೆಟ್ಟಿ ಡೆಬ್ಬೇಲಿ ಮತ್ತು ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.


















































































































