Author: admin
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕುಂದಾಪುರ ತಾಲೂಕು ಮಟ್ಟದ 17ರ ವಯೋಮಾನದ ಹುಡುಗರ ಕ್ರಿಕೆಟ್ ಪಂದ್ಯಾಟದಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅನುಜ್ ಈಶ್ವರ ಅಂಬ್ಲಿ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಈತ ಈಶ್ವರ ಹಾಗೂ ಅಶ್ವಿನಿ ದಂಪತಿಯ ಪುತ್ರ. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್. ಕೆ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ಹಾಗೂ ಸೂರ್ಯ ತರಬೇತಿ ನೀಡಿದ್ದರು.
ಡಿಜಿಟಲ್ ‘ಜಾತಿ ಎಣಿಕೆ’ ಇರಲಿ, ಡಿಜಿಟಲ್ ‘ಮತ ಎಣಿಕೆ’ ಬೇಡ : ಡಿಜಿಟಲ್ ವ್ಯವಸ್ಥೆಯಲ್ಲಿ ಸರಕಾರದ ದ್ವಂದ್ವ ನಿಲುವು!!!
ಇಡೀ ಅರ್ಥ ವ್ಯವಸ್ಥೆ ಇವತ್ತು ಡಿಜಿಟಲೀಕರಣ ಆಗಿದೆ. ಬಹುತೇಕ ಜನರ ಹಣಕಾಸಿನ ವ್ಯವಹಾರಗಳು ಮೊಬೈಲ್ನಲ್ಲಿ ನಡೆಯುತ್ತವೆ. ಹೆಚ್ಚಿನ ಎಲ್ಲಾ ರೀತಿಯ ಖರ್ಚುಗಳ ಪೇಮೆಂಟ್ ಡಿಜಿಟಲ್ ಮೂಲಕವೇ ಆಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳು, ಷೇರು ವ್ಯವಹಾರಗಳು ಗ್ರಾಹಕನ ಮನೆಯ ಪೋರ್ಟಿಕೋದಲ್ಲೇ ನಡೆಯುತ್ತವೆ. ಕೃಷಿ ಉತ್ಪನ್ನಗಳ ಮಾರಾಟ, ಖರೀದಿ, ಭೂಮಿಯ ದಾಖಲಾತಿಗಳು, ಬೆಳೆ ಸರ್ವೆ, ಟ್ಯಾಕ್ಸ್ ಪೇಮೆಂಟ್, ಆದಾಯ ತೆರಿಗೆ ರಿಟರ್ನ್ಸ್ಗಳೆಲ್ಲಾ ಡಿಜಿಟಲ್ ಮಾರ್ಗದಲ್ಲೇ ಇರುವುದು. ಬಿಸಿನೆಸ್, ಟ್ರಾನ್ಸ್ಪೋರ್ಟ್, ಅಂಚೆ, ವಿಮೆ ವ್ಯವಹಾರಗಳು ಡಿಜಿಟಲ್ ಆಗಿ ಅನೇಕ ವರ್ಷಗಳೇ ಆಗಿವೆ. ಸಿನಿಮಾ ಟಿಕೇಟ್ ಕೂಡ ಈಗ ಪೇಪರ್ ಲೆಸ್ ಆಗಿದೆ. ಊಬರ್ ಬಾಡಿಗೆ ಕಾರಿಗೆ ಅದರ ಪೇಮೆಂಟ್ಗೆ ಬೆರಳು ತುದಿಯಲ್ಲಿ ಮೊಬೈಲ್ ಸ್ಕ್ರೀನ್ ಒತ್ತಿದರೆ ಸಾಕು. ಗೂಗಲ್ ಮ್ಯಾಪ್, ಮನೆ ಮುಂದಿನ ಸಿಸಿ ಕ್ಯಾಮರ, ರೇಡಿಯೋ ಪ್ರಸಾರ, ಟಿವಿ ನ್ಯೂಸ್, ಓಟಿಟಿ ಸಿನಿಮಾ ಎಲ್ಲಾ ಡಿಜಿಟಲ್ ಆಗಿವೆ. ಕೊತ್ತಂಬರಿ ಸೊಪ್ಪಿನ ವ್ಯಾಪಾರದಿಂದ ಹಿಡಿದು ಫಾಸ್ಟ್ ಟ್ಯಾಗ್ ಟೋಲ್ ಪೇಮೆಂಟ್ವರೆಗೆ ಎಲ್ಲರೂ ಡಿಜಿಟಲ್ ವ್ಯವಸ್ಥೆಯನ್ನು ನಂಬಿಯಾಗಿದೆ. ಮನುಷ್ಯನ…
ವೈದ್ಯರನ್ನು ತಲುಪುವ ಮುನ್ನವೇ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ರಕ್ಷಿಸುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದುವುದು ಅಗತ್ಯ ಎಂದು ಕೆಐಒಸಿಎಲ್ನ ನಿವೃತ್ತ ವೈದ್ಯಕೀಯ ಅಧಿಕಾರಿ ಡಾ. ಬಿ. ರಾಮಚಂದ್ರ ಭಟ್ ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಥಮ ಚಿಕಿತ್ಸೆಗೆ ಬಹುತೇಕ ಸಂದರ್ಭ ಯಾವುದೇ ಉಪಕರಣಗಳು ಲಭ್ಯವಿರುವುದಿಲ್ಲ. ವ್ಯಕ್ತಿಯ ಸಮಯ ಪ್ರಜ್ಞೆ ಮತ್ತು ಜ್ಞಾನ ರೋಗಿಯ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ರೋಟರಿ ಸಂಸ್ಥೆಯ ಪೂರ್ವ ಅಸಿಸ್ಟೆಂಟ್ ಗವರ್ನರ್ ವಿನೋದ್ ಕುಡ್ವ ಮಾತನಾಡಿ ‘ಪ್ರಥಮ ಚಿಕಿತ್ಸೆಯು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯೇನೆಪೊಯ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಜಿತಿನ್ರಾಜ್. ವಿ ಅವರು ಪ್ರಥಮ ಚಿಕಿತ್ಸೆ ಬಗ್ಗೆ…
ದುಂಬೊರ್ತಿಗ್ ಮೂಜಿ ನಾಲ್ ಪೊನ್ನು ಜೋಕುಲೇ ಇತ್ತಗೆ. ಐಕ್ ಅರ್ತಿ ಪಿರ್ತಿಗ್ ಪಂದ್ ಕಡೆತ ಬಾಲೆಗ್ ಮಾಯನದ ನಿರವು ದಂಡ್ ಮಲ್ತ್ ದ್ ಅಂಟದ್, ಆನ್ ಬಾಲೆ ಪಂದ್ ಅಪ್ಪೆ ಕುಸಿ ಪಡೆವೊಂದು ಇತ್ತೊಲುಗೆ. ಬಾಲೆನ್ ಜೋರ್ ಬೆಚ್ಚ ನೀರ್ ಡ್ ಮೀಪವೊಂದು ಇತುಜೊಲು, ಜೋರು ದೆಂಬುದಗ ಪಿದಾಯಿ ಕಡಪುಡೊಂದು ಇತುಜೊಲು. ಈ ಬಾಲೆ ಒಂಜೈಕ್ ರಡ್ಡೆಕ್ ಅಪ್ಪೆನ್ ಪೊಡಿಗೆ ಕಟ್ಟಾವೊಂದು (blackmail) ಇತುಂಡುಗೆ, “ದೆಂಬುಡು ಕುಲ್ಲುವೆ” ಪಂದ್. ಉಂದು ಮಡಿವಂತೆರೆಗ್ ಒಂತೆ ಬಪ್ಪರ್ (vulgar) ಪಂದ್ ತೋಜು. ಈ ಒಂಜಿ ತುಲುವ ಪಾತೆರ ಪಂಡ್ಂಡ, ಐತ ಪಿರವುದು ಕತೆ, ಭಾವಾರ್ಥ ಜನೊಕುಲೆಗ್ ತೆರಿಯೊಂದು ಇತ್ಂಡ್. ಕೆಲವು ಜೋಕುಲು ಅಪ್ಪ್ಯೆಲ್ಲೆನ್ ಪೋಡಿಗಟ್ಟವುನ ಕೇಂದೆ “ಉಗ್ಗೆಲ್ ಗ್ ಲಾಗಿವೆ”, “ಓಲ್ಲ ಪೋದು ಜೀವ ಕೊರ್ಪೆ” ಇಂಚ. ಉಂದೆನೇ ಇಂಗ್ಲೀಷ್ ಡ್ emotional blackmail (ಭಾವನಾತ್ಮಕ ಬೆದರಿಕೆ) ಪನ್ಪೆರ್. ಅಂಚ ಏರ್ಲಾ ಅಪಗಪಗ ಪೊಡ್ಯಾವೊಂದು (ಧಮ್ಕಿ ಕೊರೊಂದು) ಇತ್ತೆರ್ ಡ ಪನ್ವೆರ್ “ದುಂಬೊಂಜಿ ಬಾಲೆ…
ಗಣಿತನಗರ : ಒಬ್ಬ ವ್ಯಕ್ತಿಯ ಯಶಸ್ಸಿಗೆ, ಕನಸನ್ನು ನನಸು ಮಾಡಲು ಪರಿಸ್ಥಿತಿ ಮುಖ್ಯವಲ್ಲ ಮನಸ್ಥಿತಿ ಮುಖ್ಯ. ಸಕಾರಾತ್ಮ ಆಲೋಚನೆಗಳಿಗೆ ಸೋಲಿಲ್ಲ. ಯಾರಿಗೆ ಹೆತ್ತವರ ಆಲೋಚನೆಗಳು ಅರ್ಥವಾಗುತ್ತವೆಯೋ ಅಂತವರು ಎಂದೂ ಹಾದಿ ತಪ್ಪಲು ಸಾದ್ಯವಿಲ್ಲ ಎಂದು ಸ.ಪ.ಪೂ.ಕಾಲೇಜು ಸದಲಗ, ಚಿಕ್ಕೋಡಿ ಇಲ್ಲಿನ ಉಪನ್ಯಾಸಕ ಶ್ರೀ ವೀರೇಶ್ ಗದಿಗೆಪ್ಪಗೌಡ ಪಾಟೀಲ್ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-40ರಲ್ಲಿ “ಸಕಾರಾತ್ಮಕ ಆಲೋಚನೆ ಸಾಧನೆಗೆ ಪ್ರೇರಣೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಕನಸನ್ನು ನನಸು ಮಾಡಲು ಸಕಾರಾತ್ಮಕ ಆಲೋಚನೆ ಮುಖ್ಯ. ನಮ್ಮನ್ನು ತುಂಬಾ ಸುಲಭವಾಗಿ ಸೋಲಿಸುವ ಆಯುಧ ಭಯ. ನಮಗೆ ನಾವೇ ಪ್ರೇರಣೆಯನ್ನು ತುಂಬ ಬೇಕು ಎನ್ನುತ್ತಾ ಅನೇಕ ಮಹಾತ್ಮರ ಜೀವನ ಸಂದೇಶಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್…
ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೈಂಟ್ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವದಲ್ಲಿ ಜರುಗಿದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಅನ್ಸಿತ್ ಎ ಭಂಡಾರಿ, ಮನ್ವಿಶ್ ರಾವ್ ಮತ್ತು ಅಖಿಲ್ ಸಾಯಿ ಕೋಕ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಹಾಗೂ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯಾರಾದ ಮಾನಸ ವಿ ನಾಯಕ್, ಹರ್ಷಿತ ವಿ ನಾಯಕ್, ಆದ್ಯ ಎಸ್. ಪಡ್ರೆ, ಆರುಷಿ, ಪೂರ್ವಿ ಎಸ್. ಕಡಕೋಲ್ಮಠ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿನಿಯರ ಸಾಧನೆಗೆ ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ದಾನಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಿ. ಮುಂದೆ ಜೀವನದಲ್ಲಿ ನೀವು ಅವರಂತೆ ಶಿಕ್ಷಣಕ್ಕೆ ನೆರವು ನೀಡುವವರಂತಾಗಿ. ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯವರ ನಿಸ್ವಾರ್ಥ ಸೇವೆಗೆ ಅಭಿನಂದನೆಗಳು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ “ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್” ವತಿಯಿಂದ ಎಸ್.ಕೆ.ಎಸ್ ಇನ್ಫ್ರಾ ಕಾರ್ಕಳ ಇವರ ಸಹಕಾರದೊಂದಿಗೆ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹೆಬ್ರಿ ಪರಿಸರದ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ಆರ್ ವಿದ್ಯಾಸಂಸ್ಥೆ ಹೆಬ್ರಿ ಇದರ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡುತ್ತಾ, ಕಷ್ಟಪಟ್ಟು ಕಲಿತ ಶಿಕ್ಷಣವು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಸರಕಾರಿ ಶಾಲೆಗಳಲ್ಲಿ ಸಿಗುವ ಉತ್ತಮ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಂಸ್ಕಾರಯುತ ನಾಗರೀಕರಾಗಿ ಎಂದು ಶುಭ ಹಾರೈಸಿದರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್…
ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ರೋಟರಿ ಗವರ್ನರ್ ರೋ. ರಾಮಕೃಷ್ಣ ಅವರು ಸುರತ್ಕಲ್ ಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುರತ್ಕಲ್ ನಲ್ಲಿರುವ ಅಭಿಷ್ ಕಟ್ಟಡದಲ್ಲಿರುವ ಚಾವಡಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ಸಾಧನೆಯನ್ನು ಕೊಂಡಾಡಿದರು. ಇತ್ತೀಚೆಗೆ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಚಾಂಪ್ಯನ್ ಆಗಿರುವುದನ್ನು ಶ್ಲಾಘಿಸಿದರು. ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಬಾಳ ಜಗನ್ನಾಥ ಶೆಟ್ಟಿ ಹಾಗು ಕಟ್ಟಬೀಡು ಭಾಸ್ಕರ ರೈಯವರನ್ನು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೋ. ರಾಮಕೃಷ್ಣ ಪಿ.ಕೆ, ಅಸಿಸ್ಟೆಂಟ್ ಗವರ್ನರ್ ಚಿನ್ನಗಿರಿ ಗೌಡ, ಸಂದೀಪ್ ರಾವ್ ಇಡ್ಯ, ಕ್ಲಬ್ಬಿನ ಅಧ್ಯಕ್ಷರಾದ ಸುಭೋದ್ ಕುಮಾರ್ ದಾಸ್, ಕಾರ್ಯದರ್ಶಿ ಕಿರಣ್ ಪ್ರಸಾದ್ ರೈ, ನವೀನ್ ಇಡ್ಯಾ, ಜಯಕುಮಾರ್ ಹಾಗೂ ಸುಧಾಕರ್ ಸಾಲ್ಯಾನ್ ಉಪಸ್ಥಿತರಿದ್ದರು. ಕೃತಿಕಾ ರೈ…
ಓನ್ಲಿ ಬಂಟ್ಸ್ ಆರ್ ಅಲ್ಲೋವ್ಡ್ ಫೇಸ್ಬುಕ್ ಬಳಗದ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಸೆಪ್ಟೆಂಬರ್ 14 ರಂದು ಅಪರಾಹ್ನ 2.30 ರಿಂದ ಸಾಂತಾಕ್ರೂಜ್ ಬಿಲ್ಲವರ ಭವನದಲ್ಲಿ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಮಹಾಬಲ ಆಳ್ವ ರಚಿಸಿರುವ ‘ಜ್ವಾಲಾ ಮೋಹಿನಿ’ ಯಕ್ಷಗಾನ ಪ್ರಸಂಗವು ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಸ್ ಮುಂಬೈ ಇವರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿದೆ. ಬಳಗದ ನಿರ್ವಾಹಕರಾದ ಪ್ರವೀಣ್ ಕಯ್ಯ, ಕಾಂತಿ ಶೆಟ್ಟಿ ಮುಂದಾಳತ್ವದಲ್ಲಿ ಕೂಟದ ಸರ್ವ ಸದಸ್ಯರ ಸಹಯೋಗದೊಂದಿಗೆ ನಡೆಯಲಿರುವ ಯಕ್ಷಗಾನ ಪ್ರದರ್ಶನದ ಹಿಮ್ಮೇಳ ಮುಮ್ಮೇಳದಲ್ಲಿ ನಗರದ ಪ್ರಸಿದ್ಧ ಹಾಗೂ ಪ್ರಬುದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಸದಸ್ಯರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಬಳಗದ ಪರವಾಗಿ ನಿರ್ವಾಹಕರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.