
ಗಣಿತನಗರ : ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಹಾಗ್ತೂ ಪ್ರೌಢಶಾಲೆಯಲ್ಲಿ ೭ನೇ ತರಗತಿಯ ಮಕ್ಕಳಿಂದ ‘ಎಕೋಸ್ ಆಫ್ ಇಂಗ್ಲಿಷ್’- ಮಾದರಿ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ ಇವರ ನಿರ್ದೇಶನದಲ್ಲಿ, ವಿದ್ಯಾರ್ಥಿಗಳು, ತರಗತಿ ಆಂಗ್ಲಭಾಷಾ ಶಿಕ್ಷಕಿ ಕು.ದರ್ಶಿನಿಯವರ ಮಾರ್ಗದರ್ಶನದಲ್ಲಿ ವಿವಿಧ ಆಂಗ್ಲಭಾಷಾ ಲೇಖಕರ ಪರಿಚಯ, ಪುಸ್ತಕ ಪರಿಚಯ, ವ್ಯಾಕರಣದ ಮಾದರಿಗಳ ಪ್ರದರ್ಶನ, ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬುಕ್ ಮಾರ್ಕ್ಸ್, ವ್ಯಾಕರಣ ಕ್ರಾಫ್ಟ್ಗಳ ಪ್ರದರ್ಶನದ ಜೊತೆಗೆ ಭಾಷಾಕಲಿಕೆಯನ್ನು ಮನೋರಂಜನಾ ಆಟಗಳ ಮುಖಾಂತರ ಪ್ರಸ್ತುತಪಡಿಸಿದರು.



ಈ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್ ಹಾಗೂ ಸಂಸ್ಥೆಯ ಬೋಧಕರು-ಬೋಧಕೇತರ ಸಿಬ್ಬಂಧಿ ವರ್ಗದವರು ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿದರು.





















































































































