Author: admin
ದೆಹಲಿಯಲ್ಲಿ ರಾಜ್ಯ ಸರಕಾರ ನಿರ್ಮಿಸಿರುವ ಕರ್ನಾಟಕ ಭವನ ಕಾವೇರಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಹಿಂದೆ ಇದು ಮೈಸೂರು ಭವನವಾಗಿತ್ತು. ದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳು ಇವೆ. ಸುಭದ್ರ ರಾಜ್ಯ ನಿರ್ಮಾಣದಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದ್ದು, ಕೇಂದ್ರ ಸರಕಾರದ ಬಳಿ ಹಲವು ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳು, ಸಚಿವರು, ಶಾಸಕರು ದೆಹಲಿಗೆ ಬರಬೇಕಾಗುತ್ತದೆ. ಇವರೆಲ್ಲರಿಗೂ ಕರ್ನಾಟಕ ಭವನ ತಂಗಲು ಸಹಾಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕ ಭವನ ಎರಡರ ಪುನರ್ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು. ಕೊರೋನಾ ಸೇರಿ ಹಲವು ಸಂಕಷ್ಟಗಳಿಂದಾಗಿ ಕಟ್ಟಡ ಕಾಮಗಾರಿಗೆ ವಿಳಂಬವಾಯಿತು. ಈಗ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ಕುರಿತು ಬೋರ್ಡ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಖರ್ಗೆಯವರ ಸಲಹೆಯಂತೆ ಶಾಸಕರು ತಂಗಲು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡುತ್ತೇವೆ…
ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ 27 ದೇಶಗಳ ತುಳು ಸಂಘಟನೆಗಳ ಪ್ರತಿನಿಧಿಗಳು ಅಖಿಲ ಅಮೆರಿಕ ತುಳುವರ ಅಂಗಣ ಇದರ ಅಧ್ಯಕ್ಷೆ ಶ್ರೀವಲ್ಲಿ ರೈ, ಭಾಸ್ಕರ ಶೇರಿಗಾರ್ ಮತ್ತು ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಖಾದರ್ ಅವರು ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು.
ಇವತ್ತು ಗುರ್ಮೆ ಸುರೇಶಣ್ಣನ ಜನ್ಮದಿನ. ಸುರೇಶಣ್ಣ ಮತ್ತು ಹಸುವಿಗೂ, ಹಸುಗೂಸಿಗೂ ದೊಡ್ಡದೇನು ವ್ಯತ್ಯಾಸವಿಲ್ಲ. ಅವರ ಹೃದಯ ನಿಷ್ಕಲ್ಮಶ. ಯಾವಾಗಾದರೊಮ್ಮೆ ಕರೆ ಮಾಡುವ ಸುರೇಶಣ್ಣ ತಡ ರಾತ್ರಿಯ ತನಕವೂ ಲಹರಿಗೆ ಬಿದ್ದು ಮಾತಾಡುತ್ತಾರೆ. ಅದು ಅವರ ಅಂತರಂಗ ಅರಳಿಕೊಳ್ಳುವ ಕಾಲವೆನೋ! ಯಾವ ಜನ್ಮದ ಬಂಧುವೋ ಎನ್ನುವಂತೆ ನಾವು ಹರಟುತ್ತೇವೆ. ಏನಿದೆ ಅಷ್ಟು ಮಾತಾಡಲು ವಿಷಯ? ಆದರೂ ಮಾತಾಡಿರುತ್ತೇವೆ. ಅವರ ಆರೋಗ್ಯ, ಸಮಾಜದ ಅನಾರೋಗ್ಯ, ಹತ್ತಿರವಿದ್ದೂ ದೂರ ನಿಲ್ಲುವವರು, ದೂರವಿದ್ದೂ ಹತ್ತಿರವಿರುವವರು, ಏನೂ ಇಲ್ಲದೆ ದೂರುವವರು ಹೀಗೆ ನನ್ನ ಮತ್ತು ಸುರೇಶಣ್ಣನ ಮಾತಿನ ನಡುವೆ ಎಲ್ಲರೂ ಬಂದು ಹೋಗುತ್ತಾರೆ. ನನ್ನ ಜೀವನದಲ್ಲಿ ನೋಡಿದ ಕೆಲವೇ ಕೆಲವು ನಿಷ್ಕಲ್ಮಶ ಹೃದಯದವರಲ್ಲಿ ಗುರ್ಮೆ ಸುರೇಶಣ್ಣನೂ ಒಬ್ಬರು. ಸುರೇಶಣ್ಣ ಕಾಪು ಕ್ಷೇತ್ರದ “ಪುಣ್ಯಪುರುಷ” ಎನ್ನುವುದು ನನ್ನ ಅಭಿಪ್ರಾಯ. ಮೊನ್ನೆ ಕಾಪು ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ನೋಡಿದಾಗ ನನಗೆ ಹಾಗನ್ನಿಸಿತು. ಅವರ ಮುಂದಿನ ಹೆಜ್ಜೆ ಪೇರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಕಡೆಗಿದೆ! ಸುರೇಶಣ್ಣ ಏನಾದರೊಂದು ಮಾಡಬೇಕು ಎಂದು ಹೆಜ್ಜೆ…
ದೀಕ್ಷಿತ್ ರೈಯವರು ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ನ 2024 ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ನೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಆಧೀನಕ್ಕೊಳಪಟ್ಟ ಮಹಾಲಸಾ ವಿಷುಯಲ್ ಆರ್ಟ್ಸ್ ಪದವಿಯನ್ನು ಪೂರೈಸಿ ಪ್ರಸ್ತುತ ಬೆಂಗಳೂರು ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ವಿಷುಯಲ್ ಆರ್ಟ್ಸ್ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಎಡಮಂಗಲ ಗ್ರಾಮದ ಪೊಯ್ಯತ್ತೂರು ವಿಶ್ವನಾಥ ರೈ ಮತ್ತು ಶೀಲಾವತಿ ರೈ ದಂಪತಿಯ ಪುತ್ರರಾಗಿದ್ದಾರೆ.
ಬಂಟರ ಸಂಘ ಮುಂಬಯಿಯ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಮಾರ್ಚ್ 30ರ ಆದಿತ್ಯವಾರದಂದು ಚೈತ್ರ ನವರಾತ್ರಿಯ ಆರಂಭದ ದಿನದಂದು ಸಂಜೆ ಪೊವಾಯಿಯ ಎಸ್.ಎಂ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ‘ಮಾತಾ ಕಿ ಚೌಕಿ’ ಭಕ್ತಿಪೂರ್ಣ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ದುರ್ಗಾ ಮಾತೆಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಶುಭ ದಿನದಂದು ನಡೆಯಲಿರುವ ಈ ಭಕ್ತಿ ಪ್ರಧಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಇಂತಹ ಧಾರ್ಮಿಕ ಕಾರ್ಯಗಳು ನಾವು ನಡೆಸಿಕೊಂಡು ಬಂದಾಗ ಸಮಾಜ ಮತ್ತು ಬದುಕು ಭದ್ರವಾಗಿ ಸುಂದರವಾಗುತ್ತದೆ ಎಂದು ಶುಭ ಹಾರೈಸಿದರು. ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೋಭಾ ಅಮರನಾಥ್ ಶೆಟ್ಟಿ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ…
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಹಕಾರಿ ಸಂಘ ಅತ್ತಾವರ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಶಾಂತಾನಂದ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.ಮಂಗಳೂರು ಅತ್ತಾವರ ಮೆಸ್ಕಾಂ ನಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಂದಾಪುರ ಮೂಲದ ಶಾಂತಾನಂದ ಶೆಟ್ಟಿಯವರು ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ಸುತ್ತಮುತ್ತಲಿನ ಪರಿಸರದಲ್ಲಿ ಮೊಟ್ಟ ಮೊದಲ ಬಾರಿಗೆ ವೈಯಕ್ತಿಕ ಸೌಂದರ್ಯ ಹಾಗೂ ಆರೈಕೆ ಕ್ಷೇತ್ರಕ್ಕೆ ಸಂಬ0ದಿಸಿದ ಆಳ್ವಾಸ್ ಅಕಾಡೆಮಿ ಆಫ್ ಮೇಕಪ್ ಆರ್ಟಿಸ್ಟಿç, ಪೋಲಿಶ್- ನೈಲ್ಸ್ ಆ್ಯಂಡ್ ಬ್ಯೂಟಿ, ಹೆಲ್ದೀ ಸಿಪ್ ಹಾಗೂ ಲ್ಯಾಕ್ಟೇಶನ್ ಕನ್‌ಸಲ್ಟೇನ್ಸಿ ಸರ್ವೀಸಸ್ ಅನ್ನು ಮೂಡುಬಿದಿರೆಯ ಆಳ್ವಾಸ್ ಆ್ಯಸ್ಥೇಟಿಕ್ ರಿಜುವನೇಶನ್ ಸೆಂಟರ್ ಆವರಣದಲ್ಲಿ ಯುಗಾದಿಯ ಶುಭ ಸಂಧರ್ಭದ0ದು ಉದ್ಘಾಟನೆಗೊಳಿಸಲಾಯಿತು. ಮಂಗಳೂರಿನ ಕಾಸ್ಮೆಟಿಕ್ ಸ್ತ್ರೀರೋಗ ತಜ್ಞೆ ಹಾಗೂ ಮಿಸೆಸ್ ಇಂಡಿಯಾ ಇಂಡಿಪೆoಡೆoಟ್ ಇಂಟರ್ನ್ಯಾಷನಲ್ ಖ್ಯಾತಿಯ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಲೋಕಾರ್ಪಣೆಗೊಳಿಸಿದರು. ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ನಿಮ್ಮ ಕನಸ್ಸನ್ನು ನನಸಾಗಿಸಲು ಸದಾ ಕರ‍್ಯಪ್ರವೃತ್ತರಾಗಿರಿ. ಎಂದೂ ಹಿಂಜರಿಕೆ ಬೇಡ. ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಉತ್ಸಾಹವಿದ್ದರೆ ಖಂಡಿತ ಸಮಯ ಲಭಿಸುತ್ತದೆ ಎಂದರು. ಮೇಕಪ್ ಕಲೆ ಸಾಮಾನ್ಯವಾಗಿ ಮಹಿಳೆಯರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಈ ಕಲೆಯು ಲಿಂಗಭೇದವನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ.…
ಬ್ರಹ್ಮಾವರ : ಇಲ್ಲಿನ ಜಿ ಎಮ್ ಸಮೂಹ ವಿದ್ಯಾಸಂಸ್ಥೆಯಲ್ಲಿ ‘ಈಜು ಕೊಳ’ ಮತ್ತು ‘ಅಮ್ಯೂಸ್‍ಮೆಂಟ್ ಪಾರ್ಕ್’ನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಉದ್ಘಾಟಿಸಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈಜುಕೊಳ ಮತ್ತು ಮಕ್ಕಳ ಮನೋರಂಜನೆಗಾಗಿ ಅಮ್ಯೂಸ್‍ಮೆಂಟ್ ಪಾರ್ಕ್‍ನ್ನು ನೀಡುವ ನನ್ನ ಕನಸು ಸಾಕಾರಗೊಂಡಿದೆ ಎಂದರು. ಈಜುವಿಕೆಯು ಮನರಂಜನೆ, ವ್ಯಾಯಾಮ, ಚಿಕಿತ್ಸೆ ಮತ್ತು ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದು, ದೈಹಿಕ ಮತ್ತು ಮಾನಸಿಕ ಒತ್ತಡಗಳ ನಿವಾರಣೆಯಂತಹ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿ ನುರಿತ ತರಬೇತಿದಾರರಿಂದ ಮಕ್ಕಳಿಗೆ ಈಜು ಕಲಿಸುವುದರ ಜೊತೆಯಲ್ಲಿ ಅವರ ಮನೋರಂಜನೆಗಾಗಿ ಅಮ್ಯೂಸ್‍ಮೆಂಟ್ ಪಾರ್ಕ್‍ನ್ನು ಸಹ ಸಿದ್ಧಗೊಳಿಸಲಾಗಿದೆ. ಇದರಲ್ಲಿ ತರಬೇತಿ ಪಡೆದ ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆಲ್ಲುವಂತಾಗಲಿ ಎಂದು ಶುಭಹಾರೈಸಿದರು. ಜಿ ಎಮ್ ಗ್ಲೋಬಲ್ ಸ್ಕೂಲ್‍ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಹಾಗೂ ಮಕ್ಕಳ ಉತ್ತಮ ಪ್ರತಿಕ್ರಿಯೆಗೆ ಅಭಿನಂದಿಸಿ ಶುಭ…
ಇತಿಹಾಸ ಪ್ರಸಿದ್ಧ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿಯ ಸಭೆಯು ಊರಿನ ಗಡಿ ಪ್ರಧಾನರು, ಗುರಿಕಾರರು ಹಾಗೂ ಊರ ಹತ್ತು ಸಮಸ್ತರನ್ನು ಒಳಗೊಂಡ ಪಡ್ರೆ, ಕೊಡಿಪಾಡಿ, ಅರಂತಬೆಟ್ಟು, ಮದಕಾಡಿ, ಮುಂಚೂರು, ದಾಮು ಶೆಟ್ಟಿ, ಬೀರಣ್ಣ ಶೆಟ್ಟಿ, ಭಂಡಾರ ಮನೆ ಮುಕ್ಕ ಹಾಗೂ ಮಿತ್ರಪಟ್ಟದವರು ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ದೈವಕ್ಕೆ ಸಂಬಂಧಪಟ್ಟ ಗುರಿಕಾರರನ್ನು ಒಳಗೊಂಡು ಮಾರ್ಚ್ 16 ರಂದು ದೈವಸ್ಥಾನದ ವಠಾರದಲ್ಲಿ ಊರ, ಪರವೂರ ಭಕ್ತರ ಮಹಾಸಭೆಯಲ್ಲಿ ಸರ್ವಾನುಮತದಿಂದ ನೂತನ ಆಡಳಿತ ಮಂಡಳಿಯ ಅಧ್ಯಕರನ್ನಾಗಿ ದಿನಕರ ಶೆಟ್ಟಿ ತೆಂಕು ಮೇಗಿನ ಮನೆ ಪಡ್ರೆ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ದೇವಣ್ಣ ಶೆಟ್ಟಿ ಬಡಗು ಮೇಗಿನಮನೆ ಪಡ್ರೆ, ಉಪಾಧ್ಯಕ್ಷರಾಗಿ ಸತೀಶ್ ಮುಂಚೂರು, ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿಯಾಗಿ ಲತೀಶ್ ಶೆಟ್ಟಿ ಪಡ್ರೆ, ಕೋಶಾಧಿಕಾರಿಯಾಗಿ ಯೋಗೀಶ್ ಕರ್ಕೇರ ಮುಕ್ಕ, ಜೊತೆ ಕಾರ್ಯದರ್ಶಿಯಾಗಿ ಮುಖೇಶ್ ಶೆಟ್ಟಿ ಪಡ್ರೆ, ಸುನಿಲ್ ಮಿತ್ರಪಟ್ಟ, ಶ್ರೀಮತಿ ಸಪ್ನಾ ಲಕ್ಷ್ಮೀಶ ಆಳ್ವ, ಜೊತೆ ಕೋಶಾಧಿಕಾರಿಯಾಗಿ ಸಿ.ಎ ಅಪೇಕ್ಷ…
ಸಂಘ ಸಂಸ್ಥೆಗಳು ಇದ್ದರೆ ಸಾಲದು, ಸಕ್ರೀಯವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತಾಗ ಬೇಕು. ಆ ನಿಟ್ಟಿನಲ್ಲಿ ಸುರತ್ಕಲ್ ತಡಂಬೈಲ್ ನಲ್ಲಿರುವ ವೀರ ಕೇಸರಿ ಸಂಸ್ಥೆ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ನುಡಿದರು. ತಡಂಬೈಲ್ ವೀರಕೇಸರಿ ಸಂಸ್ಥೆ ಮಾರಿಗುಡಿ ಬಳಿ ಮಾರಿಪೂಜಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರ ಕೇಸರಿ ಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮುಖ್ಯವಾಗಿ ಕಳೆದ 46 ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸಾಂಸ್ಕೃತಿಕ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿರುವ ವೀರ ಕೇಸರಿ ಸಂಸ್ಥೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸುವುದು ಮುಂತಾದ ಕಾರ್ಯಕ್ರಮಗಳನ್ನು ಸಂಘಟನೆ ನಿರಂತರವಾಗಿ ಮಾಡುತ್ತಿದೆ. ವೀರಕೇಸರಿ ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳನ್ನು ಜಿಲ್ಲಾಡಳಿತ…