
ಕುರ್ಪಾಡಿ ಸಂಜೀವ ನಾರಾಯಣ ಶೆಟ್ಟಿ ಸ್ಮರಣಾರ್ಥವಾಗಿ ಅವರ ಪುತ್ರರಾದ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಉದ್ಯಮಿ, ಸಮಾಜಸೇವಕ ಹರೀಶ್ ಶೆಟ್ಟಿಯವರು ಪಡುಕುಡೂರುವಿನಲ್ಲಿ ‘ಗೋಕಟ್ಟೆ’ಯನ್ನು ನಿರ್ಮಿಸಿದ್ದಾರೆ. ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸಹಿತ ಸ್ಥಳೀಯರು, ಗ್ರಾಮಸ್ಥರು, ಕುಟುಂಬಸ್ಥರು ಉಪಸ್ಥಿತರಿದ್ದರು.























































































































