
ರೋಟರಿ ಜಿಲ್ಲಾ ಆರ್.ಸಿ.ಸಿ (ರೋಟರಿ ಗ್ರಾಮೀಣ ಸಮುದಾಯ ದಳ) ಜಿಲ್ಲಾ ಸಮ್ಮೇಳನ ‘ಸಾಂಗತ್ಯ’ವು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ಜರಗಿತು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲ್ಪವೃಕ್ಷದ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಕ್ಷ ರವರು ಉದ್ಘಾಟಿಸಿದರು. ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ್ ಕೋಟ್ಯಾನ್, ಆರ್. ಸಿ.ಸಿ ಜಿಲ್ಲಾ ಚೇರ್ಮನ್ ಎಲೆನ್ ವಿನಯ್ ಲೂಯಿಸ್, ಮಾಜಿ ಜಿಲ್ಲಾ ಗವರ್ನರ್ ದೇವಾನಂದ್, ಗವರ್ನರ್ ಎಲೆಕ್ಟ್ ಬಿ.ಎಂ ಭಟ್, ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಸೇನಾನಿ ಜಾನ್ ಆರ್ ಡಿಸಿಲ್ವ, ರೋಟ್ರಾಕ್ಟ್ ಜಿಲ್ಲಾ ಪ್ರತಿನಿಧಿ ಜಯರಾಮ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಕ್ಲಬ್ ಗಳ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸಭಾಪತಿ ಶೇಖರ್, ಕಾರ್ಯದರ್ಶಿ ಇಕ್ಬಾಲ್ ಹಾಗೂ ವಿಶ್ರಾಂತ ಮುಖ್ಯ ಶಿಕ್ಷಕ ಪ್ರಭಾಕರ್ ರಾವ್ ರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರು ಸಂಘಟನಾ ಸಮಿತಿಯ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಕಾನ್ಫರೆನ್ಸ್ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಸಮುದಾಯ ದಳದ ಸದಸ್ಯರು ಕಾರ್ಯಕ್ರಮದ ವ್ಯವಸ್ಥೆ ಹಾಗೂ ವಿಷಯದ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದರು. ಗುರುದಾಸ್ ಕಾಮತ್ ಪ್ರಾರ್ಥಿಸಿದರು. ರೇಖಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.





















































































































