
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ದೆಹಲಿ ಕರ್ನಾಟಕ ಸಂಘದ ವತಿಯಿಂದ ಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಹಂಪ ನಾಗರಾಜಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಪ್ರಧಾನ ಗುರುದತ್ತ, ಬಿ.ಆರ್ ಲಕ್ಷ್ಮಣರಾವ್, ಡಾ| ಲತಾ ರಾಜಶೇಖರ್, ಚಲನಚಿತ್ರ ನಿರ್ದೇಶಕ ಡಾ| ಟಿ.ಎಸ್ ನಾಗಾಭರಣ, ಚಲನಚಿತ್ರ ನಟ ಚರಣ್ ರಾಜ್, ಸಂಪಾದಕ ವಿಶ್ವೇಶರ ಭಟ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಯಂ ನಾಗರಾಜ್, ಉಪಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷೆ ಪೂಜಾ ರಾವ್, ಕಾರ್ಯದರ್ಶಿ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.























































































































