
ಮನೆ ಮನದಲ್ಲಿ ದೇವರಿದ್ದಾಗ ಜನ ಸೇವೆಗೆ ಮನಸ್ಸಾಗುವುದು. ಪಡುಪರ್ಕಳದ ಹರೀಶ ಶೆಟ್ಟಿಯವರ ಮನೆ ಮನದಲ್ಲಿ ದೇವರು ಇದ್ದಾರೆ ಎಂಬುದಕ್ಕೆ ಅವರ ಮನೆ ಮತ್ತು ಜನಸೇವೆಯ ಮನಸಾಕ್ಷಿಯೇ ಪ್ರಮುಖ ಕಾರಣ ಎಂದು ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಇತ್ತೀಚೆಗೆ ಪಡುಕುಡೂರು ಪಡುಪರ್ಕಳದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಮುಂಬಯಿಯ ಉದ್ಯಮಿ ಹರೀಶ ಶೆಟ್ಟಿ ಪಡುಕುಡೂರುರವರ ತಂದೆ ಕುರ್ಪಾಡಿ ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪಡುಪರ್ಕಳದ ಹರೀಶ ಶೆಟ್ಟಿ ಮತ್ತವರ ತಾಯಿ ಸುನಂದ ಶೆಟ್ಟಿ ಹಾಗೂ ಪಡುಪರ್ಕಳ ಕುಟುಂಬಸ್ಥರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.



ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್, ಜಗದೀಶ ಹೆಗ್ಡೆ ಪಡುಕುಡೂರು, ಅಶೋಕ ಎಂ. ಶೆಟ್ಟಿ, ಪ್ರಸನ್ನ ಶೆಟ್ಟಿ ಪಡುಕುಡೂರು, ಸುರೇಶ ಶೆಟ್ಟಿ ಶಿವಪುರ ಸೇರಿದಂತೆ ಪ್ರಮುಖರು, ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಪಡುಪರ್ಕಳ ಕುಟುಂಬಸ್ಥರು ಉಪಸ್ಥಿತರಿದ್ದರು.






















































































































