
ಮುಂಬಯಿಯ ಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ ನಂದಳಿಕೆ ಕಾಪಿಕೆರೆ ಕೃಷ್ಣ ವೈ ಶೆಟ್ಟಿ ಹಾಗೂ ಉಮಾ ಕೆ ಶೆಟ್ಟಿಯವರ ವೈವಾಹಿಕ ದಾಂಪತ್ಯದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅವರ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ನ ವತಿಯಿಂದ ಸನ್ಮಾನ ನಡೆಯಿತು. ಈ ಸಂದರ್ಭ ಮಾತನಾಡಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೃಷ್ಣ ವೈ ಶೆಟ್ಟಿ ಹಾಗೂ ಉಮಾ ಕೆ ಶೆಟ್ಟಿ ದಂಪತಿಯವರ ಬದುಕು ಆದರ್ಶನೀಯ. ಉದ್ಯಮಿಯಾಗಿ, ಕೃಷಿಕರಾಗಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಶ್ಲಾಘನೀಯ ಎಂದರು. ಈ ಸಂಧರ್ಭ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಿಬ್ಬಂದಿಗಳು, ನಂದಳಿಕೆಯ ಪ್ರಮುಖ ಹಾಗೂ ಕೃಷ್ಣ ವೈ ಶೆಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು.























































































































