
ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪಿಯುಷ್ ಎಚ್ 99.4585176 ಪರ್ಸೇಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ. 8 ವಿದ್ಯಾರ್ಥಿಗಳು 98.5 ಪರ್ಸೇಂಟೈಲ್ಗಳಿಗಿಂತ ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಶಶಾಂಕ್ ಬೋರ್ಕರ್ (98.9610456), ಸೃಜನ್ ವಿ (98.7320359), ಮೆಲ್ರೋಯ್ ಕಾಸ್ಟೆಲಿನೋ (98.648776), ಪ್ರಣವ್ ಎನ್. ಪಂಡಿತ್ (98.5677958), ಹರ್ಷವರ್ಧನ ಕೆ.ಪಿ. (98.5552656), ಕ್ಷಮಾ ಅಶೋಕ್ ಹಕಟಿ (98.5177603), ಕ್ಲಾರೆನ್ಸ್ ಡಿಸೋಜ (98.4810184) ಸೇರಿದಂತೆ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. 97 ಪರ್ಸೆಂಟೈಲ್ಗಿಂತ ಅಧಿಕ 22 ವಿದ್ಯಾರ್ಥಿಗಳು, 96 ಪರ್ಸೆಂಟೈಲ್ಗಿಂತ ಅಧಿಕ 38 ವಿದ್ಯಾರ್ಥಿಗಳು ಮತ್ತು 95 ಪರ್ಸೆಂಟೈಲ್ಗಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ.


ಭೌತಶಾಸ್ತ್ರ ವಿಷಯದಲ್ಲಿ 5 ವಿದ್ಯಾರ್ಥಿಗಳು, ರಸಾಯನಶಾಸ್ತ್ರ ವಿಷಯದಲ್ಲಿ 11 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್ಗಳಿಗಿಂತ ಅಧಿಕ ಅಂಕ ಪಡೆದಿದ್ದಾರೆ. ಸಾಧನೆ ಮೆರೆದ ಈ ಎಲ್ಲಾ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್ಸಿನ ಎರಡು ವರ್ಷದ ಕ್ಲಾಸ್ ರೂಮ್ ವ್ಯವಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಾಗಿರುತ್ತಾರೆ. ಈ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.
























































































































