
ರೋಟರಿ ಕ್ಲಬ್ ಕಾರ್ಕಳ ಹಾಗೂ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಇವರ ಸಹಯೋಗದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ‘ಆನಂದೋತ್ಸವ’ ಶಿಬಿರವು ರೋಟರಿ ಬಾಲಭವನದಲ್ಲಿ ಫೆಬ್ರವರಿ 14ರಿಂದ ಫೆಬ್ರವರಿ 22ರವರೆಗೆ ಯಶಸ್ವಿಯಾಗಿ ನಡೆಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮನೀಷಾ ಕಾಮತ್ ಅವರು ಶಿಬಿರವನ್ನು ನಡೆಸಿಕೊಟ್ಟು ಭಾಗವಹಿಸಿದವರಿಗೆ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಒತ್ತಡ ನಿರ್ವಹಣೆ ಕುರಿತು ಸಮಗ್ರ ತರಬೇತಿ ನೀಡಿದರು. ಶಿಬಿರದಲ್ಲಿ ರೋಟರಿ ಸದಸ್ಯರಾದ ಅನಂತ ಕೃಷ್ಣ ಆಚಾರ್ ದಂಪತಿಗಳು, ವಿಜೇಂದ್ರ ಕುಮಾರ್ ದಂಪತಿಗಳು, ಉದಯ ಕುಮಾರ್ ಕಡಂಬ, ಶಿವಕುಮಾರ್, ಸುಬ್ರಹ್ಮಣ್ಯ ದೇವಾಡಿಗ ಹಾಗೂ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದರು.


ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದರು. ಅಧ್ಯಕ್ಷರು ತಮ್ಮ ಮಾತಿನಲ್ಲಿ, ಇಂತಹ ಆರೋಗ್ಯವರ್ಧಕ ಮತ್ತು ಮನಃ ಶಾಂತಿ ನೀಡುವ ಕಾರ್ಯಕ್ರಮಗಳು ಸಮಾಜದ ಒಳಿತಿಗೆ ಬಹಳ ಅಗತ್ಯವೆಂದು ತಿಳಿಸಿದರು. ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಮನೀಷಾ ಕಾಮತ್ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಶಿಬಿರವು ಭಾಗವಹಿಸಿದವರಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಮಾನಸಿಕ ಶಾಂತಿಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

























































































































