
ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಉಡುಪಿ ಕಂಬಳ ನಡೆಯಲ್ಲಿದ್ದು, ಇದರ ಪೂರ್ವಭಾವಿ ಸಭೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಫೆಬ್ರವರಿ 23 ರಂದು ಉಡುಪಿಯ ಶಾಂಭವಿ ಹೋಟೆಲ್ ನಲ್ಲಿ ನಡೆಯಿತು. ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ಇದೇ ತಿಂಗಳ 28 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.


ಈ ಸಂದರ್ಭದಲ್ಲಿ ಕಂಬಳ ಕೋಣದ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, 80 ಬಡಗುಬೆಟ್ಟು ಬ್ರಹ್ಮಬೈದರ್ಕಳ ಗರೋಡಿ ಮೊಕ್ತೇಸರರಾದ ಅರುಣಾಚಲ ಹೆಗ್ಡೆ, ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನ ಮೊಕ್ತೇಸರರಾದ ಜಯರಾಜ್ ಹೆಗ್ಡೆ, ಉದ್ಯಮಿಗಳಾದ ಶಿವಪ್ರಸಾದ್ ಹೆಗ್ಡೆ, ರಾಜ್ಯ ಕಂಬಳ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಕಂಗಿನಮನೆ ಹಾಗೂ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿಯ ಪದಾಧಿಕಾರಿಗಳು ಮತ್ತು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

























































































































