ಗುರುಪುರ ಬಂಟರ ಮಾತೃ ಸಂಘ (ರಿ.) ಇದರ 13ನೇ ವಾರ್ಷಿಕ ಸಮಾವೇಶ ಹಾಗೂ ಅಂತರ್ಬಂಟರ ಸಂಘಗಳ ‘ನೃತ್ಯ ಸಂಗಮ -2026’ ಎಂಬ ನೃತ್ಯ ಸ್ಪರ್ಧಾ ಕಾರ್ಯಕ್ರಮವು ಜುಲೈ 12 ರಂದು ಆದಿತ್ಯವಾರ ವಾಮಂಜೂರು ಪಿಲಿಕುಳ ‘ಸೌಟ್ಸ್ ಗೈಡ್ಸ್ ಭವನ’ದಲ್ಲಿ ಜರಗಲಿರುವುದು. ಯುವ ಸಂಗಮ 2026 ನೃತ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 10 ಗಂಟೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉಮಾಕೃಷ್ಣ ಶೆಟ್ಟಿಯವರು ಉದ್ಘಾಟಿಸಲಿದ್ದು, ಶ್ರೀಮತಿ ಆಶಾ ಜ್ಯೋತಿ ರೈಯವರು ದೀಪ ಪ್ರಜ್ವಲನೆ ಹಾಗೂ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಇಂದಿರಾಕ್ಷಿ ಪಿ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ವಾಣಿ ವಿಜಯಪ್ರಸಾದ್ ಆಳ್ವ, ಬೆಂಗಳೂರಿನ ಸರ್ಕಲ್ ಇನ್ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ, ಉಮಾವತಿ ಶೆಟ್ಟಿ, ಪಂಕಜ ಶೆಟ್ಟಿ, ಡಾ. ದೀಪ ಆರ್. ಶೆಟ್ಟಿ, ನವೀನ ಶೆಟ್ಟಿ, ಕಿಶೋರಿ ಶೆಟ್ಟಿ ಮೊದಲಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.



ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೀತಾರಾಮ ಜಾಣು ಶೆಟ್ಟಿ, ಇನಾಯತ್ ಆಲಿ, ಶಿವರಾಮ್ ಮಲ್ಲಿ, ಅಶೋಕ್ ಶೆಟ್ಟಿ, ವೇಣುಗೋಪಾಲ ಅರಸ, ಅಜಿತ್ ಶೆಟ್ಟಿ ಬೆಳ್ತಂಗಡಿ, ವಿಶ್ವನಾಥ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಪ್ರಮೋದ್ ಕುಮಾರ್ ರೈ, ಗಿರೀಶ್ ಆಳ್ವ ಹಾಗೂ ಸಂಘದ ವ್ಯಾಪ್ತಿಯ ಸಮಾಜದ ಊರ ಹಾಗೂ ಪರವೂರಿನ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಟ ಸಮಾಜದ ಕೊಡುಗೈ ದಾನಿ, ಉದ್ಯಮ ರಂಗದ ಅಪ್ರತಿಮ ಸಾಧಕ ಡಾ| ಕೆ. ಪ್ರಕಾಶ್ ಶೆಟ್ಟಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು. ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಮಂಜುನಾಥ ಭಂಡಾರಿ ಶೆಡ್ಡೆ, ಉದ್ಯಮ ಕ್ಷೇತ್ರದ ಸಾಧನೆಗಾಗಿ ಶಿವರಾಮ್ ಆಳ್ವ ಪಾಂಡಿಚೇರಿ, ರಾಜಕೀಯ ಕ್ಷೇತ್ರದ ಸಾಧನೆಗಾಗಿ ಸಂತೋಷ್ ಶೆಟ್ಟಿ ಲಿಂಗಮಾರುಗುತ್ತು, ಸಂಘಟನಾ ಕ್ಷೇತ್ರದ ಸಾಧನೆಗಾಗಿ ವಿಜಯ ಶೆಟ್ಟಿ ಹಾಲಾಡಿ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು. ಮತ್ತು ಎಸ್.ಎಸ್.ಎಲ್.ಸಿ., ಹಾಗೂ ಪಿ.ಯು.ಸಿ.ಯಲ್ಲಿ ಶೇಕಡಾ 80ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯಲಿರುವುದು.



ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಡಾ. ಎಂ ಮೋಹನ ಆಳ್ವ ದೀಪ ಪ್ರಜ್ವಲನೆ, ಆರೋಗ್ಯ ಸಚಿವರಾದ ಯು.ಟಿ ಖಾದರ್ರವರು ಸಹಾಯಧನ ವಿತರಣೆ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ವಿದ್ಯಾರ್ಥಿವೇತನ ವಿತರಣೆ ಮಾಡಲಿದ್ದು, ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಸಂಸದರಾದ ನಳಿನ್ ಕುಮಾರ್ಕಟೀಲ್, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನ್ಯಾಕ್, ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಡಾ| ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಶಶಿಧರ ಶೆಟ್ಟಿ ಬರೋಡ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಿಥುನ್ ರೈ ಮೊದಲಾದವರು ಆಗಮಿಸಲಿದ್ದಾರೆ.




















































































































