
ಉಡುಪಿ ಕೆ.ಎಸ್.ಆರ್.ಟಿ.ಸಿ ಹಳೆ ಬಸ್ಸು ನಿಲ್ದಾಣದ ಬಳಿಯ ಶಾಂಭವಿ ಹೋಟೆಲ್ ನಲ್ಲಿ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಕಡೆಕಾರು ಮತ್ತು ನಿರೂಪ್ ಕುಮಾರ್ ಇವರ ನೂತನ “ಮನ್ ಪಸಂದ್” ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆಯನ್ನು ಉಜ್ವಲ್ ಗ್ರೂಪ್ ನ ಸಿಎಂಡಿ ಪುರುಷೋತ್ತಮ್ ಶೆಟ್ಟಿಯವರು ನೆರವೇರಿಸಿದರು. ವಿಭಿನ್ಯವಾದ ಈ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ವಿಶಾಲವಾದ ಪಾರ್ಟಿ ಹಾಲ್ ಸಹಿತ ಉತ್ತಮ ಪಾರಂಪರಿಕ ರುಚಿ ಶುಚಿಯ ಖಾದ್ಯಗಳ ಮಹಾಪೂರವೇ ಇಲ್ಲಿದೆ. ಎಲ್ಲಾ ವಿಧದ ಮೀನು ಖಾದ್ಯಗಳಿಗೆ ವಿಶೇಷ ಅಧ್ಯತೆ ನೀಡಲಾಗಿದೆ.


ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಹಕಾರಿ ಧುರೀಣ ಜಯಕರ ಶೆಟ್ಟಿ ಇಂದ್ರಾಳಿ, ಹೋಟೆಲು ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ವಾಲ್ಟರ್ ನಂದಳಿಕೆ, ಅರವಿಂದ ಬೋಳಾರ್ ಮತ್ತು ಅನೇಕ ಗಣ್ಯರು ಈ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

























































































































