Author: admin
ಹೆಬ್ರಿ ತಾಲೂಕು ಮುನಿಯಾಲಿನಲ್ಲಿ ಮೇ 3ರಂದು ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ ಮುಟ್ಲುಪಾಡಿ ಇದರ ವತಿಯಿಂದ ಮುನಿಯಾಲಿನ ವೀರ ಸಾರ್ವಕರ್ ಮೈದಾನದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು ತಿಳಿಸಿದ್ದಾರೆ. ಅವರು ಮಾ. 18ರಂದು ಹೋಟೆಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಕಬಡ್ಡಿ ಪಂದ್ಯಾಟದ ವೇಳೆ ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಮುಟ್ಲುಪಾಡಿಯ ದಿ. ಪ್ರೀತಂ ಶೆಟ್ಟಿಯವರ ಸ್ಮರಣಾರ್ಥ ಮುನಿಯಾಲಿನಲ್ಲಿ ಮೇ 3ರಂದು ಕಬ್ಬಡಿ ಪಂದ್ಯಾಟ ಆಯೋಜಿಸಲಾಗಿದೆ. ರಾಜಕೀಯ ರಹಿತವಾಗಿ ನಡೆಯುವ ಈ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ನಟ- ನಟಿಯರು ಭಾಗವಹಿಸಲಿದ್ದಾರೆ ಎಂದರು. ಬೆಳಿಗ್ಗೆ 9:30ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಆಯ್ದ 16 ತಂಡಗಳ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಇದರ ವಿಜೇತರಿಗೆ ಪ್ರಥಮ- 25000, ದ್ವಿತೀಯ- 15,000 ತೃತೀಯ- 10,000, ಹಾಗೂ ಚತುರ್ಥ -10,000 ಬಹುಮಾನ ನೀಡಲಾಗುತ್ತದೆ. ಸಂಜೆ 6.30ರಿಂದ ನಡೆಯುವ…
ಮುಂಬೈ:- ಕವಿತೆ ಮನಸಂತೋಷಕ್ಕಾಗಿ ಬರೆಯಬೇಕು. ಇತರ ಯಾವುದೇ ಉದ್ದೇಶವಿಟ್ಟು ಬರೆಯಬಾರದು. ಮೊದಲು ಬೇರೆ ಬೇರೆ ಪುಸ್ತಕಗಳನ್ನು ಓದಬೇಕು. ಓದಿದ್ದನ್ನು ಇತರರೊಂದಿಗೆ ಚರ್ಚಿಸಬೇಕು. ಕವಿತೆಯ ರಚನೆಯ ಆಳವನ್ನು ಅರಿತುಕೊಳ್ಳಬೇಕು. ಇವೆಲ್ಲದರ ಜೊತೆಯಲ್ಲಿ ಕವಿತೆ ಬರೆಯುವವರು ಕಾವ್ಯ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು. ಅದು ಇಲ್ಲದಿದ್ದರೆ ಕವಿತೆ ನಿರ್ಜೀವವಾಗುತ್ತದೆ. ಕವಿಯೊಬ್ಬ ಬರೆಯುವ ಪ್ರತಿ ಕವಿತೆಯಲ್ಲೂ ಹೊಸತನವಿರಬೇಕು. ಪ್ರಾಸ, ಲಯ, ಛಂದಸ್ಸಿನ ಅರಿವು ಇರಬೇಕು. ಕವಿತೆಗಳು ವಾಚ್ಯವಾಗಬಾರದು. ಕವಿತೆ ಸಣ್ಣದಿರಲಿ, ದೊಡ್ಡದಿರಲಿ ಅದು ಧ್ವನಿಪೂರ್ಣವಾಗಿರಬೇಕು. ಆ ಎಚ್ಚರ ಕವಿತೆ ಬರೆಯುವ ಪ್ರತಿಯೊಬ್ಬರಿಗೂ ಇರಬೇಕು. ‘ಬೆಸ್ಟ್ ವಡ್ರ್ಸ್ ಇನ್ ಬೆಸ್ಟ್ ಆರ್ಡರ್’ ರೀತಿಯಲ್ಲಿ ಕವಿತೆ ಬರೆಯುವ ಜಾಣ್ಮೆ ತಿಳಿದಿರಬೇಕು. ಗಿಡದಲ್ಲಿ ಸೊಂಪಾಗಿ ಎಲೆ ಮೂಡಿದಂತೆ ಕವಿತೆ ಮೂಡಿಬರಬೇಕು. ಋಷಿ ಅಲ್ಲದವನು ಕವಿಯಾಗಲಾರ ಹಾಗೆಯೇ ಖುಷಿ ಇಲ್ಲದವನೂ ಕವಿಯಾಗಲಾರ’ ಎನ್ನುವ ಮಾತಿನಂತೆ ಮನಸ್ಸು ಪ್ರಪುಲ್ಲಿತವಾದಾಗ ಹೊಸತನದೊಂದಿಗೆ ಹೊಸ ರೂಪಕ, ಉಪಮೆಗಳೊಂದಿಗೆ ಕಾವ್ಯ ಕಟ್ಟುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಡುಂಡಿರಾಜ್ ಅವರು ಅಭಿಪ್ರಾಯ ಪಟ್ಟರು. ಅವರು ಮಾರ್ಚ್ 10ರಂದು ಮುಂಬಯಿ…
ಬಪ್ಪನಾಡು ಕ್ಷೇತ್ರದ ಅನನ್ಯ ಭಕ್ತರು ಹಾಗೂ ಕಲೋಪಾಸಕರು ಆಗಿ ನಾಡಿನಾದ್ಯಂತ ಭಕ್ತ ಬಂಧುಗಳ ಪ್ರೀತಿಗೆ ಪಾತ್ರರಾದ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕಕ್ವಗುತ್ತು ಮನೋಹರ ಶೆಟ್ಟಿಯವರು ನಿಧನರಾಗಿದ್ದಾರೆ. ಬಂಟ ಸಮಾಜದ ಸರ್ವಶ್ರೇಷ್ಠ ವ್ಯಕ್ತಿಯಾಗಿ ಮಕ್ಕಳಿಂದ ಮುದುಕನವರೆಗೆ ಇವರು ತೋರಿದ ಸಮಾನಾಧಾರ ಭಾವ, ಹೃದಯದ ಮಾತುಗಳು ಪ್ರತಿಯೊಬ್ಬರಿಗೂ ಆದರ್ಶದಾಯಕ. ಅನುಭವವೇ ದೇವರು ಎನ್ನುವ ಮಾತಿಗೆ ಅನುಸಾರವಾಗಿ ಜೀವನದಲ್ಲಿ ಸಾರ್ಥಕ್ಯವನ್ನು ಕಂಡು ಶ್ರೀ ಕ್ಷೇತ್ರ ಬಪ್ಪನಾಡಿನ ಮಹಾಮಾತೆಯ ಶ್ರೀರಕ್ಷೆಗೆ ಒಳಗಾಗಿ ಪ್ರತಿಯೊಬ್ಬರ ಹೃದಯದಲ್ಲಿ ಮನೆಮಾತಾದ ಇವರ ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಆತ್ಮಕ್ಕೆ ಸದಾ ಚಿರಶಾಂತಿ ಸಿಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಪ್ರಾರ್ಥಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.
ಉಡುಪಿ ಜಿಲ್ಲೆಯ ಪರೀಕ ಚೆನ್ನಿಬೆಟ್ಟು ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ ಅವರು ತನ್ನ 102 ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುಎಇ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ಸಹೋದರಿಯರು, ಸಹೋದರರು, ಅಳಿಯಂದಿರು, ಸೊಸೆಯರು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸರಸ್ವತಿ ಸೂರಪ್ಪ ಹೆಗ್ಡೆ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಯುಎಇ ಬಂಟರ ಸಂಘ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಗೌರವ ಸಂಪಾದಕ ಅರುಣ್ ಶೆಟ್ಟಿ ಎರ್ಮಾಳು, ಸ್ಥಾಪಕ ರಂಜಿತ್ ಶೆಟ್ಟಿಯವರು ದುಃಖ ಸಂತಾಪ ಸೂಚಿಸಿದ್ದಾರೆ.
ಕನ್ನಡ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕನ್ನಡ ಕಥಾ ಲೋಕಕ್ಕೆ ಸೇರ್ಪಡೆಯಾದ ಒಂದು ಮೌಲ್ಯಯುತ ಕೃತಿ. ಕನ್ನಡ ಕಥಾ ಪರಂಪರೆಗೆ ಶತಮಾನಗಳ ಇತಿಹಾಸ ಇರುವುದಾದರೂ ಇಂದಿಗೂ ಭಿನ್ನ ರೀತಿಯ ನಿರೂಪಣೆಯೊಡನೆ ಉತ್ತಮ, ಅಪೂರ್ವ ಹಾಗೂ ಹೊಸ ಹೊಸ ಕಥಾವಸ್ತುವುಳ್ಳ ಕಥೆಗಳು ಸಾಹಿತ್ಯ ಲೋಕಕ್ಕೆ ದಕ್ಕುತ್ತಿರುವುದು, ಕಥಾಲೋಕ ಓದುಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿರುವುದಕ್ಕೆ ಬಹು ಮುಖ್ಯ ಕಾರಣ. ಇಂತಹದೇ ಒಂದು ಅಪೂರ್ವ, ಭಿನ್ನ ಶೈಲಿಯ ನಿರೂಪಣೆಗಳುಳ್ಳ, ಬಹು ನೆಲೆಯ ಕಥಾ ವಸ್ತುಗಳನ್ನುಳ್ಳ ಕೃತಿ, ‘ಅವಳೆಂದರೆ ಬರಿ ಹೆಣ್ಣೆ’. ಈ ಕೃತಿಯಲ್ಲಿರುವ ಒಟ್ಟು ಹದಿಮೂರು ಕಥೆಗಳಲ್ಲಿ ಹೆಚ್ಚಿನ ಎಲ್ಲಾ ಕಥೆಗಳು ಹೆಣ್ಣು ಬದುಕಿನ ವಿವಿಧ ಮಜಲುಗಳನ್ನು ಚಿತ್ರಿಸುತ್ತವೆ. ಈ ಕಥೆಗಳನ್ನು, “ಪ್ರಯೋಗಾತ್ಮಕವಾಗಿ ಕಟ್ಟಿದ ಕಥೆಗಳು ಹಾಗು ಸಹಜ ಹರಿವಿನ ಕತೆಗಳು” ಎಂದು ಎರಡು ರೀತಿಯಲ್ಲಿ ಗುರುತಿಸಬಹುದು. ಆದರೆ ಎಲ್ಲಾ ಕಥೆಗಳಲ್ಲೂ ಇರುವ ಸಮಾನ ಗುಣವೆಂದರೆ ಜೀವಪರವಾದ ನೋಟ ಅಥವಾ ಸೂಕ್ಷ್ಮ ಸಂವೇದನೆಯ ಸ್ತೀಕೇಂದ್ರಿತ ನೋಟ. ಇಲ್ಲಿ ಯಾವುದೋ ರೀತಿಯಲ್ಲಿ ಶೋಷಣೆಗೊಳಗಾದ ಪಾತ್ರಗಳು ಸೋತು…
ರಂಗ ಸಂಗಾತಿ ಪ್ರತಿಷ್ಟಾನದ ವತಿಯಿಂದ ಕುದ್ಮಲ್ ರಂಗರಾವ್ ಸಭಾಭವನದಲ್ಲಿ ಇತ್ತೀಚೆಗೆ ಪ್ರಾಧ್ಯಾಪಕಿ ಅಕ್ಷಯ ಆರ್ ಶೆಟ್ಟಿ ಅವರ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕೃತಿಯನ್ನು ಭಾರತಿ ಶೆಟ್ಟಿ ಮುಂಡಬೆಟ್ಟು ಗುತ್ತು ಲೋಕಾರ್ಪಣೆಗೊಳಿಸಿದರು. ಕೃತಿಯ ಕುರಿತು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಪ್ರಾಧ್ಯಾಪಕಿ ಡಾ. ಸುಧಾರಾಣಿ ಕೃತಿಯ ಕುರಿತು ಮಾತನಾಡಿದರು. ಈ ಸಂದರ್ಭ ರಂಗ ಸಂಗಾತಿ ಪ್ರತಿಷ್ಟಾನದ ಶಶಿರಾಜ್ ರಾವ್ ಕಾವೂರು, ಎಕ್ಸ್ಪರ್ಟ್ ಕಾಲೇಜಿನ ಉಪಪ್ರಾಂಶುಪಾಲರಾದ ಕರುಣಾಕರ್ ಉಪಸ್ಥಿತರಿದ್ದರು.
ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಬಜೆಟ್ ಅಧಿವೇಶನ ಮುಗಿದ ಬಳಿಕ ಕರಾವಳಿ ಭಾಗದ ಹಿರಿಯ ಸಾಹಿತಿಗಳು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಮುಖ್ಯಮಂತ್ರಿಗಳ ಜೊತೆ ಸಭೆ ಆಯೋಜಿಸುವುದಾಗಿ ಸ್ವೀಕರ್ ಯು.ಟಿ. ಖಾದರ್ ಹೇಳಿದರು. ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಜರಗಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿ, ಈ ಬೇಡಿಕೆ ಬಹಳ ಹಳೆಯದ್ದು, ಪ್ರಯತ್ನಗಳು ಸತತವಾಗಿ ನಡೆದಿವೆ ಎಂದು ಹೇಳಿದರು. ತುಳು ಭಾಷೆಯಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ತುಳು ಭಾಷೆಯನ್ನು ಉಳಿಸಿ, ಬೆಳೆಸುವ ಮಹತ್ತರ ಹೊಣೆ ನಮ್ಮೆಲ್ಲರ ಮೇಲಿದೆ. ತುಳು ಕೇವಲ ಭಾಷೆಯಲ್ಲ ಸಂಸ್ಕೃತಿ, ಉಡುಗೆ, ವೈದ್ಯಕೀಯ ಪದ್ಧತಿಯೆಲ್ಲಾ ಸೇರಿದೆ. ತುಳು ಭಾಷೆಗೆ ಲಿಪಿ ಇದ್ದು ಶಾಲೆಗಳಲ್ಲಿ ಕಲಿಯಲು ಪ್ರೋತ್ಸಾಹ ನೀಡಬೇಕು. ಉಳ್ಳಾಲದಲ್ಲಿ ತುಳು ಗ್ರಾಮ ನಿರ್ಮಾಣಕ್ಕೆ ಜಾಗ ಗುರುತಿಸಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು. ದಿಕ್ಸೂಚಿ ಭಾಷಣಗೈದ ಕನ್ನಡ…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ(RGUHS) ರ್ಯಾಂಕ್ ಪ್ರಕಟ : ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, 2024ನೇ ಸಾಲಿನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಆಳ್ವಾಸ್ನ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 9 ರ್ಯಾಂಕ್ಗಳಿಸಿದ್ದಾರೆ. ಪದವಿ ರ್ಯಾಂಕ್ಗಳು: ಬಿಎಚ್ಎ ವಿಭಾಗದ ಪ್ರತೀಕ್ಷಾ ದ್ವಿತೀಯ ರ್ಯಾಂಕ್, ಸಾಕ್ಷಿ ಸಿಎಸ್ ತೃತೀಯ ರ್ಯಾಂಕ್, ಸ್ನೇಹಾ 5ನೇ ರ್ಯಾಂಕ್, ವರ್ಷಿಣಿ ಎ 9ನೇ ರ್ಯಾಂಕ್, ಸೌರಕ್ಷಾ ಶೆಟ್ಟಿ 10ನೇ ರ್ಯಾಂಕ್ ಪಡೆದರೆ, ಬಿಎಸ್ಸಿ ಎಂಎಲ್ಟಿ ವಿಭಾಗದ ಸುಪ್ರೀತಾ ಜೈನ್ 6ನೇ ರ್ಯಾಂಕ್ ಗಳಿಸಿ ಪದವಿ ವಿಭಾಗದಲ್ಲಿ ಒಟ್ಟು 6 ರ್ಯಾಂಕ್ಗಳು ಕಾಲೇಜಿಗೆ ಲಭಿಸಿದೆ. ಸ್ನಾತಕೋತ್ತರ ರ್ಯಾಂಕ್ಗಳು: ಎAಎಚ್ಎ ವಿಭಾಗದಲ್ಲಿ ಪ್ರಜ್ಞಾ 5ನೇ ರ್ಯಾಂಕ್ ಹಾಗೂ ರಮ್ಯಾ ಕೆ ಎನ್ 8ನೇ ರ್ಯಾಂಕ್ ಪಡೆದರೆ, ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯ ಫಾತಿಮಾ ಫಾಹಿಮಾ 9ನೇ ರ್ಯಾಂಕ್ ಗಳಿಸಿದ್ದಾರೆ.ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ಡಾ ವಿನಯ್ ಆಳ್ವ, ಆಳ್ವಾಸ್ ಅಲೈಡ್ ಹೆಲ್ತ್…
ವಿದ್ಯಾಗಿರಿ : ದೇಸಿ ಕ್ರೀಡೆ ಖೋ-ಖೋ ಎಲ್ಲಾ ಕ್ರೀಡೆಗಳಿಗೆ ಅಡಿಪಾಯವಿದ್ದಂತೆ. ಈ ಆಟವನ್ನು ಪ್ರೋತ್ಸಾಹಿಸುವ ಮೂಲಕ, ಯುವಜನತೆಯಲ್ಲಿ ಶಾರೀರಿಕ ಹಾಗೂ ಮಾನಸಿಕ ಸಿದ್ಧತೆಯನ್ನು ಹೆಚ್ಚಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ ಜೆರಾಲ್ಡ್ ಡಿ ಸೋಜಾ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋ- ಖೋ ಟೂರ್ನಮೆಂಟ್ -2025 ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಮನೋಭಾವ ನಮ್ಮನ್ನು ಈ ಕ್ಷೇತ್ರದಲ್ಲಿ ಹೆಚ್ಚಿನದ್ದನ್ನು ಸಾಧಿಸಲು ಸಹಕಾರಿಯಾಗುತ್ತದೆ. ಅಂತರ್ ಕಾಲೇಜು ಪಂದ್ಯಾಟವು ಎಲ್ಲಾ ಕ್ರೀಡಾಳುಗಳನ್ನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿರುತ್ತದೆ. ಪ್ರತಿಯೊಬ್ಬರೂ ಅವರವರ ಕ್ರೀಡಾ ಶಕ್ತಿಯ ಅನುಸಾರ ಪ್ರದರ್ಶನ ನೀಡಬೇಕು ಎಂದರು. ಆಳ್ವಾಸ್ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ,ಹಿಂದೆಲ್ಲ ದೇಸಿ ಕ್ರೀಡೆಯಾದ ಖೋ-ಖೋ ಆಟವು ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಆದರೆ, ಇಂದು ಕ್ರೀಡೆಯಲ್ಲಿನ ಬೆಳವಣಿಗೆಯು ದೇಸಿ ಕ್ರೀಡೆಯನ್ನು ರಾಷ್ಟ್ರೀಯ ಮಟ್ಟದಲ್ಲಿ…
ಬಂಟರ ಸಂಘ (ರಿ) ಹೈದರಾಬಾದ್ ಇದರ ವತಿಯಿಂದ ಮಾರ್ಚ್ 10 ರಂದು ಸೋಮವಾರ ಹೈದರಾಬಾದ್ ಬಂಟರ ಸಂಘದ ಆಡಳಿತ ಕಚೇರಿಗೆ ಆಗಮಿಸಿದ ಯುವ ಸಂಘಟಕ ಕುಂದಾಪುರ ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಬಂಟರ ಸಂಘ (ರಿ) ಹೈದರಬಾದ್ ಇದರ ಅಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರತ್ನಾಕರ ರೈ, ಕೋಶಾಧಿಕಾರಿ ರವಿರಾಜ್ ಶೆಟ್ಟಿ, ಹೋಟೆಲ್ ಉದ್ಯಮಿಗಳಾದ ಅಲ್ತಾರು ದೇಬೆಟ್ಟು ಜಯರಾಮ ಶೆಟ್ಟಿ, ಅಣ್ಣಪ್ಪ ಶೆಟ್ಟಿ ಮಲ್ಯಾಡಿ, ಉದಯ್ ಕುಮಾರ್ ಶೆಟ್ಟಿ ಹಕ್ಲಾಡಿ ಉಪಸ್ಥಿತರಿದ್ದರು.