
ಪಂಜಾಬ್ ನ ಜಲಂಧರ್ ನಲ್ಲಿ ಮಾರ್ಚ್ 7ರಿಂದ 12ರವರೆಗೆ ನಡೆದ 74ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಪುರುಷರ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕರ್ನಾಟಕದ ಇನ್ಸ್ ಪೆಕ್ಟರ್ ಅಭಿಷೇಕ್ ಶೆಟ್ಟಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಅಭಿಷೇಕ್ ಶೆಟ್ಟಿ ಭಾಜನರಾಗಿದ್ದಾರೆ. 10 ಕ್ರೀಡೆಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಒಟ್ಟಾರೆ 6,709 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನ ಗಳಿಸಿದ ಅಭಿಷೇಕ್ ಅವರು ಕಡಬ ಕಡಬ ತಾಲೂಕಿನ ಸವಣೂರು ನಡುಬೈಲು ಜಗನ್ನಾಥ ಶೆಟ್ಟಿ ಹಾಗೂ ತುಳಸಿನಿ ಶೆಟ್ಟಿ ಮನವಳಿಕೆಗುತ್ತು ದಂಪತಿಗಳ ಸುಪುತ್ರ.



























































































































