
ನಮ್ಮ ಮಹಿಳಾ ವಿಭಾಗದ ವತಿಯಿಂದ ನಡೆದ ಶನಿ ಪೂಜೆಯಿಂದ ದೇವರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಬಯಸುತ್ತೇನೆ. ಕಂಕಣ ಭಾಗ್ಯ ಈ ಯೋಜನೆಯ ಹೆಸರೇ ಸೂಚಿಸುವಂತೆ ನಮ್ಮ ಮುಖ್ಯ ಉದ್ದೇಶ ಅರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಯ ಸಮಯದಲ್ಲಿ ಸಹಕಾರ ನೀಡಿ ಮದುವೆ ಎಂಬ ಪುಣ್ಯ ಕಾರ್ಯ ಯಾವುದೇ ತೊಂದರೆ ಇಲ್ಲದೇ ಸಾಂಗವಾಗಿ ನಡೆಯಬೇಕು ಎಂಬುದೇ ನಮ್ಮ ದ್ಯೆಯವಾಗಿದೆ. ನಮ್ಮ ಮಹಿಳಾ ವಿಭಾಗದ ಸದಸ್ಯರ ಮನಸ್ಸಿನ ಹಾರೈಕೆ ಕೂಡಾ ಇದೇ ಆಗಿದೆ. ನಮ್ಮ ಈ ಯೋಜನೆ ರೂಪುಗೊಂಡು ಸಮಾಜದ ಗಣ್ಯರಲ್ಲಿ ತಿಳಿಸಿದಾಗ ಬಹಳ ಉತ್ಸಾಹದಿಂದ ಬಾರಿ ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ. ನಮ್ಮ ಸಹಕಾರ ಸದಾ ಇದೇ ಎಂದು ಉತ್ತಮ ಧನಸಹಾಯ ನೀಡಿ ಸಹಕರಿಸಿದ್ದಾರೆ. ನಮ್ಮ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿಯವರು, ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಉತ್ತಮ ಮಾರ್ಗದರ್ಶನ ಮತ್ತು ಯೋಜನೆಗೆ ಪ್ರೋತ್ಸಾಹ ನೀಡಿದ್ದಾರೆ. ಯೋಜನೆಗೆ ಮೊದಲಾಗಿ ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿಯವರು ತನ್ನ ಧರ್ಮಪತ್ನಿ ಇಂದಿರಾ ಎಸ್ ಶೆಟ್ಟಿಯವರ ಹೆಸರಿನಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿ ಹರಸಿದ್ದಾರೆ. ನಂತರ ಸಮಾಜದ ಬಹಳಷ್ಟು ಮಂದಿ ಸ್ವಇಚ್ಛೆಯಿಂದ ತಮ್ಮ ದೇಣಿಗೆ ನೀಡಿ ಸಹಕರಿಸಿದ್ದಾರೆ. ಅದೇ ರೀತಿ ಸಂಘದ ಮಾಜಿ ಅಧ್ಯಕ್ಷರುಗಳು, ಮಹಿಳಾ ಮಾಜಿ ಕಾರ್ಯಾಧ್ಯಕ್ಷೆಯರುಗಳು, ಸಂಘದ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಯುವ ವಿಭಾಗದ ಪದಾಧಿಕಾರಿಗಳು ಸಹಕರಿಸಿದ್ದಾರೆ. ನಮ್ಮ ಯೋಜನೆಯ ಉದ್ದೇಶ ಏನಿದೆಯೋ ಅದರ ಪ್ರಕಾರವಾಗಿ ಮಹಿಳಾ ಸಮಾಜ ಕಲ್ಯಾಣ ಅಂದರೆ ವಿವಿಧ ರೀತಿಯಲ್ಲಿ ನಮ್ಮ ಸಮಾಜದ ಆಶಕ್ತ ಮಹಿಳೆಯರಿಗೆ ಸಹಾಯಕವಾಗಿ ನಿಲ್ಲಬೇಕೆಂಬುದೇ ಆಗಿದೆ. ಈ ಯೋಜನೆಯಿಂದ ಕುಟುಂಬಗಳಿಗೆ ಸಹಾಯವಾಗಿ ಅವರು ಸಂತೃಪ್ತಿ ಹೊಂದಿದರೆ ಅದೇ ನಮಗೆ ಸಿಗುವ ತೃಪ್ತಿಯಾಗಿದೆ ಎಂದು ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ ನುಡಿದರು.

ಬಂಟರ ಸಂಘ ಪುಣೆ ಮಹಿಳಾ ವಿಭಾಗದ ಆಶ್ರಯದಲ್ಲಿ ಸಮಾಜ ಯೋಜನೆಗೆ ಪೂರಕವಾಗಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಮ್ಮಿ ಎ ಹೆಗ್ಡೆಯವರ ನೇತೃತ್ವದಲ್ಲಿ ಕಂಕಣ ಭಾಗ್ಯ ಮತ್ತು ಮಹಿಳಾ ಕಲ್ಯಾಣ ಯೋಜನೆಯ ಸಹಾಯಾರ್ಥವಾಗಿ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ಲಲಿತೆ ಕಲಾವಿದರು ಮಂಗಳೂರು ಲಯನ್ ಡಿ. ಕಿಶೋರ್ ಶೆಟ್ಟಿ ಅವರ ನಿರ್ಮಾಣ, ಕದ್ರಿ ನವನೀತ್ ಶೆಟ್ಟಿ ರಚನೆ ಸಾಹಿತ್ಯದ, ಜೀವನ್ ಉಳ್ಳಾಲ್ ನಿರ್ದೇಶನದ ತುಳು ಧಾರ್ಮಿಕ ಪೌರಾಣಿಕ ‘ಶನಿ ಮಹಾತ್ಮೆ’ ಎಂಬ ನಾಟಕ ಪ್ರದರ್ಶನವು ಮಾರ್ಚ್ 7 ಶನಿವಾರದಂದು ಪುಣೆ ಬಂಟರ ಭವನದಲ್ಲಿ ಜರಗಿತು. ಈ ನಾಟಕ ಪ್ರದರ್ಶನದ ಮೊದಲಿಗೆ ಅಪರಾಹ್ನ ಹರೀಶ್ ಭಟ್ ರವರ ಪೌರೋಹಿತ್ಯದಲ್ಲಿ ಶನಿ ಪೂಜೆ ಜರಗಿತು. ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮತ್ತು ಶಮ್ಮಿ ಹೆಗ್ಡೆ ದಂಪತಿಗಳು ಶನಿ ಪೂಜೆಯಲ್ಲಿ ಕುಳಿತು ಪೂಜಾ ವಿಧಿ ನೆರವೇರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಭಕ್ತಾಧಿಗಳು ಗಂಧ ಪ್ರಸಾದ ಸ್ವೀಕರಿಸಿದರು. ನಂತರ ನಡೆದ ಕಿರು ಸಭಾ ಕಾರ್ಯಕ್ರಮವನ್ನು ಪುಣೆ ಬಂಟರ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆಯವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸಮಿತಿ ಪದಾಧಿಕಾರಿಗಳಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಗಣೇಶ್ ಹೆಗ್ಡೆ ಪುನ್ಚೂರು, ಪ್ರವೀಣ್ ಶೆಟ್ಟಿ ಪುತ್ತೂರು, ಮಾಧವ ಶೆಟ್ಟಿ, ದಿನೇಶ್ ಶೆಟ್ಟಿ ಕಳತ್ತೂರು, ಸತೀಶ್ ಶೆಟ್ಟಿ, ಟ್ರಸ್ಟಿ ಸತೀಶ್ ರೈ, ಕಂಕಣ ಭಾಗ್ಯ ದಾನಿಗಳಾದ ಕರುಣಾಕರ್ ಶೆಟ್ಟಿ ಸಮುದ್ರ, ಸುಂದರ್ ಪೂಜಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಜಯಂತಿ ಜೆ ಶೆಟ್ಟಿ, ಪುಷ್ಪ ಕೆ ಹೆಗ್ಡೆ, ಶೋಭಾ ಜೆ ಶೆಟ್ಟಿ, ಶಶಿ ಬಿ ಹೆಗ್ಡೆ, ಸಂದ್ಯಾ ವಿ ಶೆಟ್ಟಿ, ಸುಲತಾ ಎಸ್ ಶೆಟ್ಟಿ, ಮಹಿಳಾ ಸಮಿತಿಯ ಪದಾಧಿಕಾರಿಗಳಾದ ನೀನಾ ಬಿ ಶೆಟ್ಟಿ, ವೀಣಾ ಪಿ ಶೆಟ್ಟಿ, ನಯನಾ ಜೆ ಶೆಟ್ಟಿ, ನಿವೇದಿತಾ ಎಸ್ ಶೆಟ್ಟಿ, ಸಾರಿಕಾ ಸಿ ಶೆಟ್ಟಿ, ವಿನಯ ಯು ಶೆಟ್ಟಿ, ಆಶಾ ಪಿ ಶೆಟ್ಟಿ, ಗೀತಾ ಜೆ ಶೆಟ್ಟಿ, ಗೀತಾ ಅರ್ ಶೆಟ್ಟಿ, ರೇಷ್ಮಾ ಎಸ್ ಶೆಟ್ಟಿ, ಜ್ಯೋತಿ ಎಸ್ ಭಂಡಾರಿ, ಗೀತಾ ವಿ ಶೆಟ್ಟಿ, ನೀನಾ ರೈ, ನಂದಿನಿ ಡಿ ಹೆಗ್ಡೆಯವರು ಉಪಸ್ಥಿತರಿದ್ದರು. ಶ್ರೀಮತಿ ಇಂದಿರಾ ಸದಾನಂದ ಕೆ ಶೆಟ್ಟಿ, ಶ್ರೀಮತಿ ಚಂದ್ರಕಲಾ ಗೋವರ್ಧನ್ ಶೆಟ್ಟಿ, ಶ್ರೀಮತಿ ಶೋಭಾ ಕರುಣಾಕರ್ ಶೆಟ್ಟಿ, ಶ್ರೀಮತಿ ಭಾರತಿ ಸುಂದರ್ ಪೂಜಾರಿ, ಶ್ರೀಮತಿ ಶಮ್ಮಿ ಅಜಿತ್ ಹೆಗ್ಡೆ, ಶ್ರೀಮತಿ ದಿವ್ಯಾ ಸಂತೋಷ್ ಶೆಟ್ಟಿ, ಶ್ರೀಮತಿ, ಶ್ರೀಮತಿ ಸರೋಜಿನಿ ಜಯ ಶೆಟ್ಟಿ, ಶ್ರೀಮತಿ ಸಂದ್ಯಾ ವಿಶ್ವನಾಥ್ ಶೆಟ್ಟಿ, ಶ್ರೀಮತಿ ಪುಷ್ಪ ಕುಶಲ್ ಹೆಗ್ಡೆ, ಶ್ರೀಮತಿ ರೂಪಾಲಿ ಸತೀಶ್ ರೈ, ಶ್ರೀಮತಿ ಉಮಾ ರಘುರಾಮ್ ಶೆಟ್ಟಿ, ಶ್ರೀಮತಿ ಸಂಧ್ಯಾ ರಾಮಕೃಷ್ಣ ಶೆಟ್ಟಿ, ಶ್ರೀಮತಿ ರೇಷ್ಮಾ ಸುಧೀರ್ ಶೆಟ್ಟಿ, ಶ್ರೀಮತಿ ಪುಷ್ಪ ಮಾಧವ ಶೆಟ್ಟಿ, ಶ್ರೀಮತಿ ಸಾರಿಕಾ ಚಂದ್ರಹಾಸ್ ಶೆಟ್ಟಿ, ಶ್ರೀಮತಿ ಆಶಾ ಪ್ರವೀಣ್ ಶೆಟ್ಟಿ, ಶ್ರೀಮತಿ ವೀಣಾ ಪ್ರಭಾಕರ್ ಶೆಟ್ಟಿ, ಶ್ರೀಮತಿ ರಾಜೇಶ್ವರಿ ಶಶೀಂದ್ರ ಶೆಟ್ಟಿ, ಶ್ರೀಮತಿ ರಚನಾ ಸಂತೋಷ್ ಶೆಟ್ಟಿ, ಶ್ರೀಮತಿ ಶಿಲ್ಪಾ ಸಂಪತ್ ಶೆಟ್ಟಿ, ಶ್ರೀಮತಿ ಶೋಭಾ ಜಯಂತ್ ಶೆಟ್ಟಿ, ಶ್ರೀಮತಿ ಸುಚಿತ್ರಾ ಜಿತೇಂದ್ರ ಹೆಗ್ಡೆ, ಶ್ರೀಮತಿ ಸುಧಾ ನಾರಾಯಣ ಶೆಟ್ಟಿ, ಶ್ರೀಮತಿ ಶಶಿ ಬಾಲಕೃಷ್ಣ ಹೆಗ್ಡೆ, ಶ್ರೀಮತಿ ಸುಲತಾ ಸತೀಶ್ ಶೆಟ್ಟಿ, ಶ್ರೀಮತಿ ಸುಜಾತಾ ಸದಾನಂದ ಶೆಟ್ಟಿ, ಶ್ರೀಮತಿ ಜೋಶ್ನಾ ಬಾಲಚಂದ್ರ ಶೆಟ್ಟಿ, ಶ್ರೀಮತಿ ವಿನುತಾ ಕನಕದಾಸ್ ಶೆಟ್ಟಿ, ಶ್ರೀಮತಿ ಸುನಿತಾ ರಾಕೇಶ್ ಶೆಟ್ಟಿ, ಶ್ರೀಮತಿ ರೂಪಾ ಸದಾನಂದ ಶೆಟ್ಟಿ, ಶ್ರೀಮತಿ ಮಂಜುಳಾ ಮಾಧವ ಶೆಟ್ಟಿ, ಶ್ರೀಮತಿ ಗೀತಾ ಜಯ ಶೆಟ್ಟಿ, ಶ್ರೀಮತಿ ಛಾಯಾ ಮೋಹನ್ ಶೆಟ್ಟಿ, ಶ್ರೀಮತಿ ಸುಜಾತಾ ಗಣೇಶ್ ಶೆಟ್ಟಿ, ಶ್ರೀಮತಿ ಸೌಮ್ಯ ಗಣೇಶ್ ಹೆಗ್ಡೆ, ಶ್ರೀಮತಿ ನಿವೇದಿತಾ ಸುಧಾಕರ್ ಶೆಟ್ಟಿ, ಶ್ರೀಮತಿ ವೀಣಾ ಪ್ರಶಾಂತ್ ಶೆಟ್ಟಿ, ಶ್ರೀಮತಿ ಸುಮತಿ ಕೃಷ್ಣ ಶೆಟ್ಟಿ, ಶ್ರೀಮತಿ ಆಶಾ ಸೋಮನಾಥ ಶೆಟ್ಟಿ, ಶ್ರೀಮತಿ ಉಷಾ ಶೆಟ್ಟಿ, ಶ್ರೀಮತಿ ಸ್ಮಿತಾ ಸಮೀರ್ ಪಾಟೀಲ್, ಶ್ರೀಮತಿ ಸುಜತಾ ಸುಬಾಶ್ ಹೆಗ್ಡೆ, ಶ್ರೀಮತಿ ದೀಪಾ ಅರವಿಂದ್ ರೈ, ಶ್ರೀಮತಿ ಮಲ್ಲಿಕಾ ಆನಂದ್ ಶೆಟ್ಟಿ, ಶ್ರೀಮತಿ ದಿವ್ಯಾ ಉಲ್ಲಾಸ್ ಶೆಟ್ಟಿ, ಶ್ರೀಮತಿ ರೇಣುಕಾ ದಿನೇಶ್ ಶೆಟ್ಟಿ, ಶ್ರೀಮತಿ ಸುಹಿತಾ ಶರಣ್ ಶೆಟ್ಟಿ ಮತ್ತು ಇನ್ನೂ ಹೆಚ್ಚಿನ ದಾನಿಗಳು ಕಂಕಣ ಭಾಗ್ಯ ಮಹಿಳಾ ಸಮಾಜ ಕಲ್ಯಾಣ ಸೇವೆಗೆ ಸಹಕಾರ ನೀಡಿದರು. ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆಯವರು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ, ಪುಣೆ


























































































































