
ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ನಡ್ಯೋಡಿಗುತ್ತು ಕೀರ್ತಿಶೇಷ ನೋಣಯ್ಯ ಶೆಟ್ಟಿಯವರ ಜನ್ಮ ಶತಾಭ್ಧಿ ವರ್ಷಾಚರಣೆಯ ಸುಸಂಧರ್ಭದಲ್ಲಿ ಕುಟುಂಬಿಕರು ಆರಾಧನೆ ಮಾಡಿಕೊಂಡು ಬಂದ ಕೊಡಮಣಿತ್ತಾಯ, ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ, ಮೈಸಂದಾಯ ಹಾಗೂ ಪರಿವಾರ ಧೈವಗಳಿಗೆ ಧರ್ಮನೇಮವು ನಡ್ಯೋಡಿಗುತ್ತು ಧರ್ಮಚಾವಡಿಯಲ್ಲಿ ಕುಟುಂಬದ ಹಿರಿಯರ ನೇತೃತ್ವದಲ್ಲಿ ಮಾರ್ಚ್ 8 ರಂದು ವಿಜೃಂಭಣೆಯಿಂದ ನಡೆಯಿತು. ಫೆಬ್ರವರಿ 26 ರಂದು ಚಪ್ಪರ ಮುಹೂರ್ತ ನಡೆದು, ಮಾರ್ಚ್ 7 ರಂದು ನಾಗಬನದಲ್ಲಿ ತಂಬಿಲ, ರಕ್ತೇಶ್ವರಿಗೆ ಪರ್ವ, ಮನೆಯಲ್ಲಿ ಗಣಹೋಮ, ಚಾವಡಿಯಲ್ಲಿ ದೈವಗಳಿಗೆ ನವಕಲಶ, ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಪೂಜೆ, ಪರಿವಾರ ದೈವಗಳಿಗೆ ಪರ್ವ ಪೂಜೆ ನಡೆಯಿತು. ಮಾರ್ಚ್ 8 ರಂದು ಶಾರಿ ಹಾಕಿ ಗೊನೆ ಕಡಿದು ತೋರಣ ಮುಹೂರ್ತ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಕೊಡಮಣಿತ್ತಾಯ ಮತ್ತು ಪಂಜುರ್ಲಿ ದೈವಗಳಿಗೆ ದರ್ಶನ ಸೇವೆ ನಡೆದು ನಂತರ ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಗಳ ನೇಮ ನಡೆದು ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಸಂಜೆ 4:00ಗೆ ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಮೈ ಸಂದಾಯ, ರಕ್ತೇಶ್ವರಿ ದೈವಗಳ ನೇಮ, ಸತ್ಯದೇವತೆ ದೈವಕ್ಕೆ ನೇಮ, ಕಲ್ಕುಡ ಕಲ್ಲುರ್ಟಿ, ಕಾಳಮ್ಮ ದೈವಗಳ ಕೋಲ, ಜಾಗದ ಕಲ್ಲುರ್ಟಿಗೆ ಕೋಲ, ಕೊರಗ ತನಿಯ ದೈವಕ್ಕೆ ಕೋಲ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ ಸಮಾಜದ ಬಾಂಧವರು ಭಾಗವಹಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು ಶ್ರೀ ರಮೇಶ್ ಶೆಟ್ಟಿ ಮತ್ತು ಮಕ್ಕಳು, ಶ್ರೀಮತಿ ಮತ್ತು ಶ್ರೀ ಅಮ್ಮು ಶೆಟ್ಟಿ ಮತ್ತು ಮಕ್ಕಳು, ಶ್ರೀಮತಿ ಮತ್ತು ಶ್ರೀ ಶಂಕರ ಶೆಟ್ಟಿ ಮತ್ತು ಮಗಳು, ಶ್ರೀಮತಿ ಮತ್ತು ಶ್ರೀ ದಿವಾಕರ ಶೆಟ್ಟಿ ಮತ್ತು ಮಕ್ಕಳು, ಶ್ರೀಮತಿ ನಳಿನಿ ಶಿವರಾಮ ರೈ ಮತ್ತು ಮಕ್ಕಳು, ಶ್ರೀಮತಿ ಮಾಲತಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಶ್ರೀಮತಿ ಮತ್ತು ಶ್ರೀ ತಿಮ್ಮಪ್ಪ ಶೆಟ್ಟಿ ಮತ್ತು ಮಕ್ಕಳು, ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


























































































































