Author: admin
ದೇಹವೆಂದರೆ ಮೂಳೆ ಮಾಂಸಗಳ ತುಡಿಕೆ, ಮನಸ್ಸಲ್ಲಿ ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ, ನಶ್ವರ ಕಾಯ ನಂಬದಿರಯ್ಯ, ತ್ಯಾಗದಿ ಪಡೆವ ಸುಖ ಶಾಶ್ವತ. ಅನ್ಯರಿಗೆ ಅಹಿತವಾಗದಂತೆ ನಮ್ಮ ಆಸೆಗಳನ್ನು ಪೂರೈಸಿಕೊಂಡರೆ ಅದು ಸಂಸ್ಕಾರ, ತಮ್ಮ ಹಿತವನ್ನು ಸಾಧಿಸುತ್ತಾ ಅನ್ಯರ ಹಿತವನ್ನೂ ಸಾಧಿಸುತ್ತಾ ಬಯಸಿ ಸಾಧಿಸಿದರೆ ಅದು ಸಾಧನೆ, ತಮ್ಮ ಹಿತವನ್ನು ಬದಿಗೊತ್ತಿ ಪರರ ಹಿತವನ್ನೂ ಸಾಧಿಸುವುದು ತ್ಯಾಗ. ಈ ವಾಣಿ ಉದ್ಗರಿಸಲೋಸುಗ. ಏಕೆಂದರೆ ಕುಡುಂಬೂರು ಎಂದಾಗ ನಮ್ಮೆಲ್ಲರ ಜ್ಞಾನಕ್ಕೆ ನಿಲುಕುವಂತ ತ್ಯಾಗದ ಅಮರ ಚೇತನ ಕೀರ್ತಿಶೇಷ ಪಂಜ ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟರು. ತುಳುನಾಡಿನ ಕೃಷಿ ಕ್ಷೇತ್ರಗಳಲ್ಲೊಂದು ಹೆಸರುವಾಸಿಯಾದ ಹಚ್ಚಹಸುರಿನ ಪ್ರದೇಶ ಕುಡುಂಬೂರು. 1960 -70ರ ದಶಕದಲ್ಲಿ ಈ ಕುಡುಂಬೂರು ಪ್ರದೇಶವು ಕರ್ನಾಟಕ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಕೈಗಾರಿಕೆಯ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು ಪ್ರದೇಶದ ಜನರಿಗೆ ಪರಿಹಾರ ಬಿಡುಗಡೆಗೊಂಡು ಕೃಷ್ಣಾಪುರ ಕಾಟಿಪಳ್ಳ ಪ್ರದೇಶದಲ್ಲಿ ಪುನರ್ವಸತಿಗೆ ಜಾಗ ಮಂಜೂರಾದರೂ ನಂತರದ ದಿನಗಳಲ್ಲಿ ಸುಮಾರು ಇಪ್ಪತ್ತು ವರುಷಗಳ…
ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ತುಳು ಚಿತ್ರ “ಸರ್ಕಸ್” ಇದರ ಮೊದಲ ಹಾಡು ಹೊಸ ರೀತಿಯಲ್ಲಿ ಚಿತ್ರ ಬಿಡುಗಡೆಯ ರೀತಿಯಲ್ಲೇ ಭಾರತ್ ಸಿನಿಮಾಸ್ ಥೀಯೇಟರ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ಮೊದಲ ಬಾರಿಗೆ ತುಳು ಚಿತ್ರದ ಹಾಡೊಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಇಂದು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ರೀತಿಯಲ್ಲೇ ಜೂ.23ರಂದು ಬಿಡುಗಡೆಯಾಗಲಿರುವ ಸಿನಿಮಾವನ್ನು ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ” ಎಂದರು. ಬಳಿಕ ಮಾತಾಡಿದ ಹಾಸ್ಯನಟ ಅರವಿಂದ್ ಬೋಳಾರ್ ಅವರು, “ಗಿರಿಗಿಟ್ ಚಿತ್ರದ ಬಳಿಕ ಮತ್ತೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಇದಾಗಿದೆ. ಇದರಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಖಂಡಿತಾ ಇಷ್ಟಪಡಲಿದ್ದಾರೆ. ತುಳುವರು ತುಳು ಚಿತ್ರಗಳನ್ನು ಇಷ್ಟಪಟ್ಟು ನೋಡಿದರೆ ಸಿನಿಮಾ ಮಾಡಲು ಧೈರ್ಯ, ಉತ್ಸಾಹ…
ಇತಿಹಾಸ ಪ್ರಸಿದ್ದ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಸಮೀಪದ ಕಳಿಯೂರು ಶ್ರೀ ರಕ್ತೇಶ್ವರೀ ಸಾನಿಧ್ಯ ಪರಿಸರದಲ್ಲಿ ಬಂಟ ಸಮುದಾಯದ ಕಳಿಯೂರು ದೇವಸ್ಯ ಗುತ್ತು ಮನೆಯ ಸಾನಿಧ್ಯ ಶಕ್ತಿಗಳ ಬ್ರಹ್ಮಕಲಶೋತ್ಸವ ಮೇ 3 ರಂದು ನಡೆಯಲಿದ್ದು ಇದರ ಯಶಸ್ವಿಗಾಗಿ ಸಮಾಲೋಚನ ಸಭೆ ದೈವಸ್ಥಾನದ ಪರಿಸರದಲ್ಲಿ ಜರಗಿತು. ಕಳಿಯೂರು ದೇವಸ್ಯಗುತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕಳಿಯೂರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಶೋರ್ ರೈ ದೇಲಂಪಾಡಿ ಅಧ್ಯಕ್ಷತೆವಹಿಸಿದ್ದರು. ಧಾರ್ಮಿಕ ಮುಂದಾಳು, ಜ್ಯೋತಿಷ್ಯ ಅನುವಾದಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮಾರ್ಗದರ್ಶನದಲ್ಲಿ ವಿವಿಧ ಸಮಿತಿ ರಚಿಸಿ ಕೆಲಸ ಕಾರ್ಯಗಳ ಬಗ್ಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಸಾರಂಗಪಾಣಿ ಶ್ರೀಮಹಾವಿಷ್ಣು ಶ್ರೀದುರ್ಗಾ ಕ್ಷೇತ್ರದ ಶಶಿಧರ ನಾಯ್ಕ್ , ಕೊರಗಜ್ಜ ಸೇವಾ ಸಮಿತಿಯ ರಘುರಾಮ ಮಂದ್ರಬೈಲ್, ಧ.ಗ್ರಾ. ಯೋಜನೆಯ ಒಕ್ಕೂಟಗಳ ಅಧ್ಯಕ್ಷ ದಿನೇಶ್ ರೆಂಜಪಡ್ಪು, ಶ್ರೀರಕ್ತೇಶ್ವರಿ ಭಜನಾ ಮಂದಿರದ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ, ಸತ್ಯಪ್ರಭಾ ಮೊದಲಾದವರು ಉಪಸ್ಥಿತರಿದ್ದರು. ಜಿಶಾಲಿ ಜೆ.ಶೆಟ್ಟಿ ಪ್ರಾರ್ಥನೆ…
ಪುಣೆಯಲ್ಲಿ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯು ಕಳೆದ ೭ ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡು ಪುಣೆಯಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಮಾಡಿರುವ ಸಾಧನೆ ಅಪಾರವಾಗಿದೆ. ಯಕ್ಷಾಗಾನವೆಂಬುದು ನಾವೆಲ್ಲ ಆರಾಧಿಸಿಕೊಂಡು ಬಂದಿರುವ ಜೀವನವನ್ನು ಸಮೃದ್ಧಗೊಳಿಸುವ ನವರಸಭರಿತವಾದ ಪರಿಪೂರ್ಣವಾದ ಕಲೆಯಾಗಿದ್ದು ಇಲ್ಲಿರುವ ಕಲಾವಿದರಿಗೆ ಯಕ್ಷಗಾನ ತರಬೇತಿಯನ್ನು ನೀಡಿರುವುದಲ್ಲದೇ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟು ಯಕ್ಷಗಾನವನ್ನು ಪುಣೆಯಲ್ಲಿ ಬೆಳೆಸುವಲ್ಲಿ ಸಂಘ ವಿಶೇಷವಾದ ಶ್ರಮವಹಿಸಿದ್ದು ನಿಸ್ವಾರ್ಥವಾದ ಸಮಾಜಸೇವೆಗೆ ಉನ್ನತಮಟ್ಟದ ಯಶಸ್ಸು ದೊರಕುತ್ತದೆ ಎಂಬುದಕ್ಕೆ ಈ ಮಂಡಳಿ ಉತ್ತಮ ಉದಾಹರಣೆಯಾಗಿದೆ. ಅದಕ್ಕಾಗಿ ಈ ಸಂಸ್ಥೆಯು ಅಭಿನಂದನಾರ್ಹವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಅವರು ಪುಣೆ ಕನ್ನಡ ಸಂಘದ ದಿ. ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದ ಡಿ. ವಾಸು ಕುಲಾಲ್ ವಿಟ್ಲ ವೇದಿಕೆಯಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ 7ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಇಂದಿನ…
ಕ್ರೀಡೆಗಾಗಿ ಬದುಕು ಮೀಸಲಿರಿಸಿದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ, ಸಮಾಜ ಸೇವಕ, ಯುವ ಉದ್ಯಮಿ ಗೌತಮ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಬಂಟ ಸಮಾಜದ ಸಮಗ್ರ ಸುದ್ದಿಗಾಗಿ ನಮ್ಮ ಬಂಟ್ಸ್ ನೌ ಪೇಜ್ ಲೈಕ್ ಮಾಡಿ.https://www.facebook.com/buntsnow/
ನಾವು ಒಂದಾಗಿ ಬಾಳಬೇಕು. ಇದ್ದಾಗ ಮಹತ್ವ, ಮೌಲ್ಯ ಇರುತ್ತದೆ. ಕಳಕೊಂಡಾಗ ದುಃಖ, ದುಮ್ಮಾನ. ನಾವು ಯಾವುದನ್ನು ನೆನಸದೇ ಬರುತ್ತದೋ ಅವಾಗ ಅತಿಯಾದ ನೋವು ಯಾತನೆ ಆಗುತ್ತದೆ. ಅನುಭವ ಎಂಬುವುದು ಬಹಳ ಮಹತ್ತರವಾದದ್ದು. ಹಾಗೆಯೇ ಅನುಕಂಪ ಎಂಬುವುದು ಕೂಡ ಅಷ್ಟೇ ಘನತ್ತರವಾದುದು. ಹ್ಞಾಂ.. ಅಂದ್ಹಾಗೆ ಅಗಲುವಿಕೆ ಮತ್ತು ಯಾತನೆ ಎಂಬುವುದು ನಾವು ಪಡುವ ತುಮುಲತೆ, ದುಗುಡತೆ… ಅಲ್ಲದೇ ವ್ಯಾಕುಲತೆ, ನೊಂದುವಿಕೆ ಇತ್ಯಾದಿ ಇವುಗಳಲ್ಲಿ ಅವ್ಯಕ್ತವಾಗಿರುತ್ತದೆ. ಒಂದು ವಿಚಾರ ಏನಪ್ಪಾಂದ್ರೆ? ನಮ್ಮಿಂದ ಯಾರು ಅಗಲಿದ್ದಾರೆ..? ಅವರ ಅಸ್ತಿತ್ವ, ಮನೆಯ ಗೋಚರವಾಗುತ್ತದೆ. ಏಕತನ ಕಾಡುತ್ತದೆ. ಅಂಥವರ ಪ್ರಾಧ್ಯಾನತೆ ಎಷ್ಟು? ಅವರ ಒಡನಾಟ ಎಷ್ಟು? ಪ್ರಭಾವ ಎಷ್ಟು? ಪ್ರೀತಿ ಎಷ್ಟು? ಹೊಂದಾಣಿಕೆ ಯಾವ ತರಹದು..? ಬಂಧುತ್ವ ಎಷ್ಟು? ಕಾರ್ಯಪ್ರವರ್ತನೆ ಎಷ್ಟು ಇತ್ಯಾದಿ… ಒಟ್ಟಾರೆ ಒಂದರ್ಥ ಹೇಳುವುದಾದರೆ ಅಸ್ತಿತ್ವ ಎಷ್ಟು? ಎಂದು ಆವಾಗ ಕಣ್ಣೀರು ಬರುತ್ತದೆ. ಖೇದ ಕೂಡವು ಆಗುತ್ತೆ, ಅಘಾತವಾಗುತ್ತೆ. ಹ್ಞಾಂ… ಅಂದ್ಹಾಗೆ… ಅಗಲುವಿಕೆಯಲ್ಲಿ ನೋವು ಇದೆ. ಇರುವಿಕೆ ಸಹ ಅಷ್ಟೇ ಪ್ರಮುಖವಾಗಿರುತ್ತದೆ. ಅಂಥವರು ಬಳಸಿದ್ದ ವಸ್ತು,…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಕಾರ್ಯಕ್ರಮ ನಿರೂಪಕರ ಜವಾಬ್ದಾರಿಯನ್ನು ತಿಳಿಸುವ ಉದ್ದೇಶದಿಂದ ದಿನಾಂಕ 16.10.2023 ರಂದು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ 5ನೇ ಮಹಡಿಯ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಿರೂಪಕರ ಸಭೆ ಜರಗಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ, ಸಹ ಸಂಚಾಲಕರಾದ ಶ್ರೀ ಕರ್ನೂರು ಮೋಹನ್ ರೈ, ಪೋಷಕ ಸದಸ್ಯರಾದ ಶ್ರೀ ಸುಧಾಕರ್ ಪೂಂಜ ಸುರತ್ಕಲ್, ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀ ಪುರುಷೋತ್ತಮ ಕೆ ಭಂಡಾರಿ, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಮಾಧ್ಯಮ ಸಮಿತಿಯ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಶ್ರೀ ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಶ್ರೀ…
ಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ವನಮಹೋತ್ಸವ ಆಚಾರಿಸಲಾಯ್ತು . ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯೀ ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್. ರೈ ಉಪಸ್ಥಿತರಿದ್ದರು.ಶಾಲಾ ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿಗಳು ಆಟದ ಮೈದಾನದ ಸುತ್ತಲೂ ವಿವಿಧ ಹಣ್ಣು ಹೂಗಳ ಹಾಗು ಮೌಲ್ಯಯುತ ಮರಗಳ ಸಸಿಗಳನ್ನು ನೆಟ್ಟರು.
ಮಂಗಳೂರು ತಾಲೂಕು ಪೊಳಲಿ ಸೀಮೆಯ ಪುಟ್ಟ ಗ್ರಾಮವೊಂದರ ಕಾಂತಪ್ಪ ಎಂಬ ಹುಡುಗ ಐಟಿಐ ಮುಗಿಸಿ ಬೆಂಗಳೂರಿನ ಹೆಚ್‌ಎಎಲ್‌ಗೆ ತರಬೇತಿಗೆಂದು ಹೋದ. ಬೆಂಗಳೂರಿನಲ್ಲಿ ತನ್ನ ಸಂಬಂಧಿಕರೂ, ಕಟ್ಟರ್ ಕಾಂಗ್ರೆಸಿಗರೂ ಆಗಿದ್ದ ಜೀವರಾಜ ಆಳ್ವರ ಮನೆಯಲ್ಲಿದ್ದುಕೊಂಡು ಹೆಚ್‌ಎಎಲ್‌ಗೆ ಹೋಗತೊಡಗಿದ. ಊರಿನಿಂದ ಬಂದಿದ್ದ ಸಂಬಂಧಿಕರ ಹುಡುಗನನ್ನು ಶಿಸ್ತಿನಿಂದ ಬೆಳೆಸಬೇಕು ಎಂದುಕೊಂಡಿದ್ದ ಜೀವರಾಜ ಆಳ್ವರಿಗೆ ಕೆಲವೇ ದಿನಗಳಲ್ಲಿ ಹುಡುಗ ದಾರಿ ತಪ್ಪುತ್ತಿದ್ದಾನೆ ಎನಿಸಲಾರಂಭಿಸಿತು. ಹುಡುಗನನ್ನು ಕರೆದು ಬಯ್ದರು, ಬುದ್ಧಿ ಹೇಳಿದರು, ತಿದ್ದಲು ಇನ್ನಿಲ್ಲದ ಪ್ರಯತ್ನ ಮಾಡತೊಡಗಿದರು. ಆದರೆ ಹುಡುಗ, ಆಳ್ವರ ಮಾತನ್ನು ಕೇಳದೆ ತನ್ನದೇ ದಾರಿಯಲ್ಲಿ ನಡೆಯತೊಡಗಿದ. ತಾನು ನಡೆಯುತ್ತಿದ್ದ ದಾರಿಯಲ್ಲಿ ಆತನಿಗೆ ಯಾವುದೋ ಒಂದು ಭವಿಷ್ಯ ಕಾಣಿಸತೊಡಗಿತು. ಜೀವರಾಜ ಆಳ್ವರಿಗೆ ಹುಡುಗ ದಾರಿ ತಪ್ಪುತ್ತಿದ್ದಾನೆ ಎನಿಸಿದ್ದು ಆತ ಆರೆಸ್ಸೆಸ್ಸಿನ ಶಾಖೆಗೆ ಹೋಗಲಾರಂಭಿಸಿದ್ದಕ್ಕೆ. ಮನೆಯ ಹುಡುಗನೇ ಶಾಖೆಗೆ ಹೋಗುವುದನ್ನು ನೋಡಿದರೆ ಜನ ಏನೆಂದುಕೊಂಡಾರು ಮತ್ತು ಇದು ತನ್ನ ರಾಜಕೀಯ ಬದುಕಿಗೆ ಹಿನ್ನಡೆಯಾಗಬಹುದೆಂಬ ಭಯ ಜೀವರಾಜ ಆಳ್ವರಿಗಿತ್ತು. ಆದರೆ ಆಳ್ವರು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ಹುಡುಗ ಮುಂಗೋಪಿ…
” ಭಾರತೀಯ ಭಾವೈಕೆಯ ಸಾಂಸ್ಕೃತಿಕ ವೈಭವವನ್ನು ಮುಂಬಯಿಯಲ್ಲಿ ಬಿಂಬಿಸಿದ ಕರ್ನಾಟಕ ಸಂಘದ 90 ರ ಸಂಭ್ರಮ : ಪ್ರವೀಣ್ ಶೆಟ್ಟಿ ವಕ್ವಾಡಿ ದುಬೈ ಚಿತ್ರ ವರದಿ ದಿನೇಶ್ ಕುಲಾಲ್ ಮುಂಬೈ : ಹೊರನಾಡಿನ ಕನ್ನಡಿಗರಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದು,ಅದು ಅವರನ್ನು ಜಾಗೃತ ಗೊಳಿಸಿ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಕನ್ನಡ ಭಾಷೆಯ ಉಳಿವಿಗಾಗಿ ನಿರಂತರವಾಗಿ ಕೆಲಸ ಕಾರ್ಯಗಳು ಮಹಾರಾಷ್ಟ್ರದಲ್ಲಿ ನಡೆಯುವಷ್ಟು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕನ್ನಡ ನಾಡಿನಲ್ಲೂ ನಡೆಯುವುದಿಲ್ಲ.90 ವರ್ಷಗಳಿಂದ ಕರ್ನಾಟಕ ಸಂಘ ಮಾಡುತ್ತಿರುವ ಕನ್ನಡ ಪರ ಕಾರ್ಯಗಳು ತುಂಬಾ ಪ್ರಸಿದ್ದಿಯನ್ನು ಪಡೆದಿದ್ದು, ಸರಕಾರವು ಇಂತಹ ಮೇರು ಸಂಸ್ಥೆಗಳ ತ್ತ ಗಮನ ಹರಿಸಬೇಕು. ನಮ್ಮ ನಾಡಿನ ಮೇಲೆ, ಭಾಷೆಯ ಮೇಲೆ ಅಭಿಮಾನ ಇದ್ದವರು ಮಾತ್ರ ಇಂಥ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯ ಸಂಸ್ಕೃತಿ ಉಳಿದರೆ ಧರ್ಮವು ಉಳಿಯುವುದಕ್ಕೆ ಸಾಧ್ಯ ಧರ್ಮದಿಂದ ದೇಶ ಉಳಿದಾಗೆ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಮುಂಬೈಯಲ್ಲಿ ಮತ್ತೆ ಅದ್ಬುತವಾಗಿ ಮಾಡ ಬೇಕಾದರೆ …