Author: admin
ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಸಾಮಾಜಿಕ ಸೇವಾ ಯೋಜನೆಯಡಿ ಕಡು ಬಡತನದಲ್ಲಿರುವ ಮೂಡುಶೆಡ್ಡೆಯ ಸುಶೀಲಾ ಶೆಟ್ಟಿಯವರಿಗೆ ಉಚಿತ ಮನೆ ನಿರ್ಮಿಸಿ ಕೊಡಲಿದ್ದು, ಮೂಡುಶೆಡ್ಡೆಯಲ್ಲಿ ಹೊಸ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಬಂಟ ಸಮಾಜದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೆರವಾಗುವಂತಹ ಕೆಲಸ ಇದಾಗಿದ್ದು, ಜಾಗತಿಕ ಬಂಟರ ಸಂಘವು ಇದುವರೆಗೆ ೧೮೨ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆ. ಕಳೆದ ಸಾಲಿನಲ್ಲಿ ಸಮಾಜದ ಅರ್ಹರಿಗಾಗಿ ಒಂಬತ್ತು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿತ್ತು ಎಂದರು. ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿ ಸಂಘದ ಪ್ರಯೋಜನ ಪಡೆಯುವಂತಹ ಕುಟುಂಬಗಳ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಿತಿವಂತರಾಗಿ ಸಮಾಜದ ಏಳಿಗೆಗೆ ನೆರವಾಗಬೇಕು ಎಂದರು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಮಾತನಾಡಿ ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ, ನೆರವು ನೀಡುವ ಕೆಲಸ ಮಾಡುತ್ತಿದೆ. ಪ್ರಸ್ತುತ…
ಪುರಾಣದ ಸತ್ವ ಸಾರುತ್ತಾ, ಭಕ್ತಿ ಭಾವನೆ ಪಸರಿಸುತ್ತಾ, ಮಾನವೀಯ ಹಾಗೂ ಕೌಟುಂಬಿಕ ಮೌಲ್ಯದ ಸಾರ ಹೆಚ್ಚಿಸುವ ಚಲಿಸುವ ವಿಶ್ವವಿದ್ಯಾಲಯ ಯಕ್ಷಗಾನ. ಕಲೆ ಕಾಸು, ಕಾಲಯಾಪನೆಗೆ ಹುಟ್ಟಿಕೊಂಡಿರುವ ಹರಕೆ, ಡೇರೆ ಮೇಳವಾದರೂ ಸಹ ಸಾರುವುದು ಮಾತ್ರ ಸನಾತನ ಸಂಸ್ಕೃತಿಯ ಮೌಲ್ಯ. ಗಂಡು ಕಲೆಯೆನಿಸಿದ ಯಕ್ಷಗಾನ ರಂಗದಲ್ಲಿ ದುಡಿದವರು ಅದೆಷ್ಟೊ ಮಂದಿ. ಕಲೆಯ ಕಂಪನ್ನು ಸೂಸುತ್ತಾ, ಪುರಾಣದ ಸತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಬಯಲಾಟ ಅಥವಾ ಡೇರೆ ಮೇಳಗಳ ಕಲಾವಿದರ ಪಾತ್ರ ಹಿರಿದು. ಅನೇಕ ಕಲಾವಿದರು ಯಕ್ಷಗಾನ ರಂಗದಲ್ಲಿ ಅವಿರತವಾಗಿ ದುಡಿದು ಯಕ್ಷಗಾನದಿಂದಲೆ ಬದುಕು ಕಟ್ಟಿಕೊಂಡ ಅನೇಕ ಕಲಾ ಕುಸುಮಗಳಿದ್ದಾರೆ. ನಿಜ ಜೀವನದಲ್ಲಿ ಅನೇಕ ನೋವುಗಳಿದ್ದರೂ ಸಹ ಅದನ್ನು ರಂಗದಲ್ಲಿ ತೋರಗೊಡದೆ, ಜೀವನ ಮೌಲ್ಯ, ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೆ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುವ ಗುಣ ನೈಜ ಕಲಾವಿದನದಾಗಿದೆ. ಅಂಥ ಬಂಟ ಸಮುದಾಯದ ಕಲಾವಿದರುಗಳಿಗೆ ಸಮುದಾಯದ ಸಂಸ್ಥೆ ಗೌರವ ಸೂಚಿಸಲು…
ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಪ್ರತಿ ಮನ ಮನೆಗಳಲ್ಲಿ ವಿಜ್ರಂಬಿಸುತಿರಲು, ನಮ್ಮ ತುಳು ಭಾಂದವರ ಮನಸ್ಸುಗಳ ಮನೆ ತುಳುಕೂಟದ ಕಚೇರಿಯಲ್ಲಿ ದೀಪಾವಳಿ ಸಡಗರದಿಂದ ಆಚರಿಸಿ ಮನ ತುಂಬಿದೆ. ಮೈ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಮತ್ತು ಹೊಸತನ ವೊಂದು ಮೂಡಿ ಬರಲು ಮನ ಮನಸ್ಸುಗಳು ಕೂಡಿ ಮಾಡುವ ಹಬ್ಬದ ಆಚರಣೆಗೆ ಮಹತ್ವವಿದೆ. ಇಂತಹ ದೀಪಾವಳಿ ಹಬ್ಬವನ್ನು ನಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮಾಡಿ ದೀಪ ಜ್ಯೋತಿ ಬೆಳಗಿಸಿ ತುಳುನಾಡ ಸಂಪ್ರದಾಯದ ಪ್ರಕಾರ ಬಲಿಯೇಂದ್ರ ಕರೆಯುವ ಮೂಲಕ ನಮ್ಮ ತುಳು ಸಂಸ್ಕ್ರತಿಯ ಅನಾವರಣವೆ ಇಲ್ಲಿ ಆಗಿದೆ ಎಂದರೆ ತಪ್ಪಾಗಲಾಗದು. ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಸಮಿತಿ, ಮಹಿಳಾ ವಿಭಾಗದವರ ಕೂಡುವಿಕೆಯಲ್ಲಿ ಸಂಪ್ರದಾಯ ಪ್ರಕಾರ ದೀಪಾವಳಿಯ ಆಚರಣೆಯಲ್ಲಿ ತುಳು ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ, ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಶುಭವನ್ನು ತರಲಿ, ಸರ್ವರಿಗೂ ಸುಖ…
ಪ್ಲಾಂಟ್ ಫಾರ್ ದಿ ಪ್ಲಾನೆಟ್ ಕಾರ್ಯಕ್ರಮದಡಿ ಕುಂತಳನಗರದಲ್ಲಿನ ಉಡುಪಿ ಗ್ರಾಮೀಣ ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಕ್ಯಾಂಪಸ್ ನಲ್ಲಿ ಉಪಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಚಾಲನೆಯನ್ನು ನೀಡಿದರು. ಮುಂಬಯಿ ಶಿವಿಕಾ ಪ್ಲಾಸ್ಟಿಕ್ಸ್ ಪ್ರೈ. ಲಿ. ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮಧುಕರ್ ಶೆಟ್ಟಿ, ನಿಟ್ಟೆ ಜಸ್ಟಿಸ್ ಕೆಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇದರ ಪ್ಲೇಸ್ಮೆಂಟ್ ಎಡ್ಮಿಷನ್ಸ್ ಮುಖ್ಯಸ್ಥರಾದ ಗುರುಪ್ರಶಾಂತ್ ಭಟ್ ಕೆ., ಪ್ರೋ. ದಿವ್ಯಾರಾಣಿ ಪ್ರದೀಪ್, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್. ಬಿ. ಶೆಟ್ಟಿ, ಕಾರ್ಯದರ್ಶಿ ವಿಜಿತ್ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ಹರೀಂದ್ರ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ, ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯಾಯ, ಟ್ರೈನರ್ ವಿಷ್ಣುಮೂರ್ತಿ…
ಹಿರಿಯ ಕೃಷಿಕ ನಕ್ರೆ ವರ್ಣಬೆಟ್ಟು ರಘುರಾಮ್ ನಾಯ್ಕ್ ಅವರ ಪತ್ನಿ ಶಿರ್ವ ನಡಿಬೆಟ್ಟು ಮನೆತನದ ಪುಷ್ಪಾ ಆರ್. ಹೆಗ್ಡೆ (70) ಅವರು ಸೆ.13ರಂದು ನಡಿಬೆಟ್ಟುವಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಹಾಗೂ ನಡಿಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದ್ದ ಅವರು ಶಿರ್ವ ನಡಿಬೆಟ್ಟು ಸೂರ್ಯಚಂದ್ರ ಜೋಡುಕೆರೆ ಕಂಬಳದ ಪೋಷಕರಾಗಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.
ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ ಭಯಂದರ್ ಆಯೋಜನೆಯಲ್ಲಿ ಅಗೋಸ್ಟ್ 6 ರವಿವಾರದಂದು ಆಟಿದ ನೆಂಪು – 2023 ಹಾಸ್ಯಗೋಷ್ಠಿ ಶ್ರೀ ನಾರಾಯಣ ಗುರು ಹಾಲ್, ಒಂದನೇ ಮಹಡಿ, ಜಹಾಂಗೀರ್ ಸರ್ಕಲ್, ಎಂ. ಟಿ. ಎನ್. ಎಲ್ ರೋಡ್, ಮೀರಾರೋಡ್ (ಪೂ). ಇಲ್ಲಿ ಅರ್ಥಗರ್ಭಿತವಾಗಿ ನೆರೆದ ಜನ ಸಮೂಹದ ಎದುರು ನೆರವೇರಿತು. ಮೀರಾ ಭಯಂದರ್ ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯು ಕಳೆದ ಒಂದು ದಶಕಗಳಿಂದ ನಮ್ಮ ನಾಡಿನ ಜನಪದ ಕಲೆ ಮತ್ತು ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಅದರಂತೆ ಆಟಿಯ ಆಚರಣೆಯ ಜೊತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ ಮುಂಬಯಿಯ ಸಾಹಿತಿಗಳಿಂದ ವಿಶೇಷ ಕಾರ್ಯಕ್ರಮ ನಡೆದಿದ್ದು ಸಭಾಧ್ಯಕ್ಷತೆಯನ್ನು ಹಾಸ್ಯ ಕವಿ ಖ್ಯಾತಿಯ ಸೋಮನಾಥ್ ಕರ್ಕೇರರು ವಹಿಸಿದ್ದು ನಗು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತಮ ಎಂದು ಕವಿಗಳು ಪ್ರಸ್ತುತಪಡಿಸಿದ ಗೋಷ್ಠಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ಕೆಲವು ಹಾಸ್ಯ…
ಮಳೆಯೆಂದರೆ ಏನೋ ಪುಳಕ, ವರುಣನ ಆರ್ಭಟಕ್ಕೆ ಭೂರಮೆ ಹಸಿರುಗೊಂಡು ನಲಿವ ಸಂತಸದ ಕಾಲದಲ್ಲಿ ಮುಂಗಾರು ಆಗಮನದೊಂದಿಗೆ ಇಡೀ ವಾತಾವರಣ ತೇವಾಂಶದಿಂದ ಕೂಡಿದ್ದು ಕಾಡಂಚಿನ ಹಳ್ಳಿಯ ತಂಪಾದ ವಾತಾವರಣದಲ್ಲಿ ಸಾಧಾರಣ ಸಿಡಿಲು ಮಳೆಯ ಹಿನ್ನೆಲೆಯೊಂದಿಗೆ ಅಬ್ಬರಿಸುವ ಗುಡುಗಿಗೆ ಬೆಚ್ಚಿ ಬಿದ್ದು ಎದ್ದು ಬರುವಂತೆ ಮಳೆಗಾಲದ ಅಪರೂಪದ ಅತಿಥಿ ಅಣಬೆ. ಅಣಬೆ ಫಸಲು ಬರುವುದಕ್ಕೂ ಮಳೆಗಾಲಕ್ಕೂ ಅವಿನಾಭಾವ ನಂಟು. ನಿಸರ್ಗದ ಸೋಜಿಗ ಅಣಬೆಗಳು ನಾನಾ ಗಾತ್ರ ವಿವಿಧ ರೂಪದಲ್ಲಿ ಉದ್ಬವಿಸುವ ದುಂಡಗೆ, ತೆಳ್ಳಗೆ, ಛತ್ರಿ ಹಾಗೂ ಟೋಪಿಯಾಕಾರದಲ್ಲಿ ಹಲವು ಪದರಗಳ ಗುಚ್ಚದಂತೆ ವಿವಿಧ ಆಕಾರದಲ್ಲಿ ಬೆಳವಣಿಗೆ ಹೊಂದುತ್ತದೆ. ಪ್ರಕೃತಿಯ ಈ ವೈಚಿತ್ರ್ಯಕ್ಕೆ ಬೆರಗುಗೊಳ್ಳಲೇಬೇಕು. ಸೃಷ್ಟಿ ಸೌಂದರ್ಯಕ್ಕೂ ಸೈ ಬಾಯಿ ರುಚಿಗೂ ಸೈ ಎನ್ನಬಹುದಾದ ಅಣಬೆ ಕಡಿಮೆ ಅವಧಿಯಲ್ಲಿ ನಾಶವಾಗುವುದಾದರೂ ಜನ ಮೆಚ್ಚುಗೆ ಗಳಿಸಿದೆ. ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಗರಗಳತ್ತಾ ಬಂದಾಗ ನಮ್ಮೂರಿನ ತಿನಿಸುಗಳು ಆಯಾಕಾಲಕ್ಕೆ ನೆನಪಾಗುವುದು ಸಹಜ. ಬಾಲ್ಯದಲ್ಲಿ ತಮ್ಮ ಮತ್ತು ತಂಗಿಯವರೊಂದಿಗೆ ಅಣಬೆ ಆರಿಸಲು ಹೋಗಿದ್ದ ನೆನಪು ಮರುಕಳಿಸಿ ಮಳೆಗಾಲದಲ್ಲಿ ಊರಲ್ಲಿದ್ದ…
ಊಹೆಗೂ ನಿಲುಕದ ಆಶ್ಚರ್ಯಗಳು, ಇಲ್ಲಿ ಕಾಲಿಟ್ಟ ಕೂಡಲೇ ಎತ್ತ ನೋಡಿದರೂ ಬೆಚ್ಚಿ ಬೀಳಿಸುವ ವೈವಿಧ್ಯಮಯ ಪ್ರಾಣಿ, ಪಕ್ಷಿ, ಹಾಗೂ ಮನುಷ್ಯರ ಅಗಾಧ ಅಸ್ಥಿಪಂಜರಗಳ ಸಮೂಹ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ ಇಲ್ಲಿನ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರಕ್ಕೆ ಸಂಬಂಧದ ಪಟ್ಟ ಸಂಗ್ರಹಾಲಯ “ಮಣಿಪಾಲ ಮ್ಯೂಸಿಯಂ ಆಫ್ ಅನಾಟಮಿ ಮತ್ತು ಪೈಥಾಲಜಿ” ಸಾರ್ವಜನಿಕರಿಗೆ ಸಂದರ್ಶಿಸಲು ಅವಕಾಶವಿರುವ ಭಾರತದ ಕೆಲವೇ ಕೆಲವು ಅನಾಟಮಿ ಮ್ಯೂಸಿಯಂಗಳಲ್ಲಿ ಇದು ಒಂದು. ಮಾನವ ತಲೆಬುರುಡೆಯಿಂದ ಕಾಲ ಬೆರಳವರೆಗಿನ ಶರೀರದ ವಿವಿಧ ಅಂಗಗಳ ಸಂಗ್ರಹ ಇಲ್ಲಿದೆ. ಅಪರೂಪದ ಈ ಸಂಗ್ರಹಾಲಯ ನೋಡುವ ಅನುಭವ ತುಸು ವಿಶಿಷ್ಟ. ಲೆಕ್ಕಾ ಹಾಕುತ್ತ ಹೋದರೆ ಅಂಗ ರಚನಾಶಾಸ್ತ್ರ ಮತ್ತು ರೋಗ ಶಾಸ್ತ್ರಕ್ಕೆ ಸಂಬಂಧಿಸಿದ 3,000 ಕ್ಕೂ ಹೆಚ್ಚಿನ ಶರೀರದ ವಿವಿಧ ಭಾಗಗಳ ಅಪಾರ ಸಂಗ್ರಹ ಇಲ್ಲಿದೆ. ಕುತೂಹಲದ ಕಣ್ಣಿಗೆ ಹೊಸ ನೋಟವನ್ನು, ಆಸಕ್ತಿಯ ಮನಕ್ಕೆ ಅನೇಕ ವಿಚಾರಗಳನ್ನು ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರವಾಸಿಗರಿಗೆ ವೈದ್ಯ ವಿಜ್ಞಾನದ ಅಚ್ಚರಿಗಳೊಂದಿಗೆ ಹೊಸ ಅನುಭವ ನೀಡಲು ವೈಜ್ಞಾನಿಕವಾಗಿ ಜೋಡಿಸಿದ ಅಸ್ಥಿ…
ಮಕ್ಕಳ ಕುರಿತಾಗಿ ಅಥವಾ ಮಕ್ಕಳಿಗಾಗಿಯೇ ರಚಿಸಿದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯ ಎಂದು ವಾಖ್ಯಾನಿಸಲಾಗಿದೆ. ವಿಸ್ತರಿಸಿ ಹೇಳುವುದಾದರೆ ಮಕ್ಕಳ ಸಾಹಿತ್ಯವು ಪ್ರಮುಖವಾಗಿ ಕಥೆ, ಕಾದಂಬರಿ, ಪದ್ಯ, ಜಾನಪದ, ವಿಜ್ಞಾನ ಮುಂತಾದ ಪ್ರಕಾರಗಳಿಂದ ರಚಿಸಲ್ಪಟ್ಟಿದ್ದು, ಮಕ್ಕಳ ಮನೋರಂಜನೆಗಾಗಿ ಮಾತ್ರವಲ್ಲದೆ ಅವರ ಬೌದ್ಧಿಕ ವಿಕಾಸಕ್ಕಾಗಿ ಮತ್ತು ಭಾಷಾ ಬೆಳವಣಿಗೆಗಾಗಿಯೇ ಇರುವ ಸಾಹಿತ್ಯವೆನ್ನಬಹುದು. ಮಕ್ಕಳು ಸಾಹಿತ್ಯ ಪಠ್ಯಗಳನ್ನು ಶಾಲಾ ಚಟುವಟಿಕೆಯ ಭಾಗವಾಗಿ ಓದುವುದು ತಮ್ಮ ವೈಯಕ್ತಿಕ ಓದಿಗಿಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಶಾಲೆಯಲ್ಲಿ ಸಾಹಿತ್ಯದ ಓದುವಿಕೆ ಮಗುವಿನ ಮಾನಸಿಕ ಬೆಳವಣಿಗೆ, ಸ್ವ ಅನುಭವ ಹಾಗೂ ಭಾಷಾ ಪ್ರೌಢಿಮೆಯನ್ನು ವಿಸ್ತರಿಸಲು ಸಹಾಯಕವಾಗುತ್ತದಲ್ಲದೇ ಮಗುವಿನ ಕಲ್ಪನಾ ಶಕ್ತಿ ಮತ್ತು ಕಲ್ಪನಾ ಲೋಕವನ್ನು ವಿಸ್ತರಿಸಿಕೊಳ್ಳಲು ಸಹಕಾರಿ. ಓದಿನ ಚಟುವಟಿಕೆ ಅವರ ದೈಹಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳ ಸಾಹಿತ್ಯದ ಕಥಾವಸ್ತು, ಪ್ರಕಾರ ಮತ್ತು ಭಾಷೆ ಮಕ್ಕಳಿಗೆ ಇಷ್ಟವಾಗುವಂತಿರಬೇಕು. ಅಂದರೆ ಕೃತಿಯಲ್ಲಿನ ಥೀಮ್ಗಳು, ಸಂಬಂಧಗಳು ಹಾಗೂ ಅದರಲ್ಲಿನ ಭಾಷೆ ಅತ್ಯಂತ ಕ್ಲಿಷ್ಟಕರವಾಗಿದ್ದರೆ ಆ ಕೃತಿಯು ಮಕ್ಕಳ ಸಾಹಿತ್ಯ ಕೃತಿಯೆನಿಸಿಕೊಳ್ಳಲು ಯೋಗ್ಯವೆನಿಸಲಾರದು.…
ತಾಯಿ ಮೂಕಾಂಬಿಕೆ ಸನ್ನಿಧಿಗೆ ದಿವಂಗತ ಆರ್ ಎನ್ ಶೆಟ್ಟಿ ಪುತ್ರ ಸುನೀಲ್ ಶೆಟ್ಟರಿಂದ ನೂತನ ಬ್ರಹ್ಮರಥ ಸಮರ್ಪಣೆ ಸುಯೋಗ.
-ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ,ಉಡುಪಿ ಜಿಲ್ಲೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಲವಾರು ಐತಿಹಾಸಿಕ ಪ್ರಸಿದ್ಧ ತಾಣಗಳಿಗೆ ಸಾಕ್ಷಿಯಾಗಿದೆ. ಅದೇ ರೀತಿ ಮೂಕಾಂಬಿಕಾ ಸನ್ನಿಧಾನಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆದು ಪುನೀತರಾಗುತ್ತಾರೆ, ಅದೇ ರೀತಿ ದೇಶದಲ್ಲಿನ ಅತ್ಯುನ್ನತ ಪ್ರಕರತೆಗಳನ್ನು ಹೊಂದಿರುವ ಕೊಲ್ಲೂರು ಮೂಕಾಂಬಿಕೆಯ ದೇಗುಲ ತನ್ನದೇ ಆದಂತಹ ಐತಿಹಾಸಿಕ ದಂತಕಥೆಯನ್ನು ಹೊಂದಿದೆ. ಸಮಾಜಮುಖಿ ಚಿಂತನೆ, ಪ್ರತಿದಿನ ನಡೆಯುವಂತಹ ಧಾರ್ಮಿಕ ಸೇವೆಗಳು, ಅನ್ನದಾನ ಸೇವೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳು ಸಮಾಜದಲ್ಲಿನ ಭಕ್ತಿಯ ಪರಾಕಷ್ಟೆಯಾಗಿ ಉಳಿದಿರುವುದು ನಿಜಕ್ಕೂ ಸಂತಸದ ವಿಚಾರ. ಅದೇ ರೀತಿ ಸಮಾಜದಲ್ಲಿನ ಭಕ್ತಿ ಕೇಂದ್ರವಾಗಿ ನಯಾಗುವುದರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕ ತಾಯಿಯು ದರುಶನ ಭಾಗ್ಯವನ್ನು ಸದಾ ನೀಡುತ್ತಿದ್ದಾಳೆ. ಅದೇ ರೀತಿ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಐತಿಹಾಸಿಕ ಪುರಾಣ ಪ್ರಸಿದ್ಧ ಸ್ಥಾನವಾಗಿ ಮಾರ್ಪಟ್ಟಿದೆ. ಅದಲ್ಲದೆ ಸಮಾಜಮುಖಿ ಚಿಂತನೆ ಉಳ್ಳಂತಹ ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ವಿಶಿಷ್ಟ…














