Author: admin
ದೇವರ ಸ್ವಂತ ನಾಡಾದ ಕೇರಳ ರಾಜ್ಯದ ಉತ್ತರ ಭಾಗದ ತುಳುನಾಡಿನಲ್ಲಿ ಕುಂಬಳೆ ಸೀಮೆ ಪ್ರಸಿದ್ಧವಾದುದು. ಈ ಸೀಮೆಯ ಉದ್ದಗಲಕ್ಕೂ ತುಳುನಾಡಿನ ರಾಜದೈವಗಳೆಂದು ಪ್ರಖ್ಯಾತವಾದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಹಲವು ದೈವಸ್ಥಾನಗಳು ಕಾಣಸಿಗುತ್ತವೆ. ಬೆಳೆಂಜದ ಕಿನ್ನಿಗೋಳಿ ಮಾಡವು ಇಂತಹ ಕಾರಣಿಕ ದೈವಸ್ಥಾನಗಳಲ್ಲಿ ಒಂದಾಗಿದೆ. ಬಹಳ ವರ್ಷಗಳ ಹಿಂದೆ ಬಾರಕೂರಿನ ರಾಜನಿಗೆ ಮಕ್ಕಳಿಲ್ಲದೆ ಆತ ತನ್ನ ಸೊಸೆಯನ್ನು ಅಳಿಯ ಸಂತಾನ ಪದ್ಧತಿಯ ಪ್ರಕಾರ ರಾಣಿಯನ್ನಾಗಿ ನೇಮಿಸುತ್ತಾನೆ. ಆಕೆ ಹಲವು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾಳೆ. ಅವಳ 9 ಮಕ್ಕಳಲ್ಲಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಇತರರೆಲ್ಲ ಯುದ್ಧದಲ್ಲಿ ಮಡಿಯುತ್ತಾರೆ. ಸೋಲಿನಿಂದ ಅವಮಾನಿತರಾಗಿ ಆ ಮೂವರು ಕಾಶಿಯಾತ್ರೆ ಕೈಗೊಳ್ಳುತ್ತಾರೆ. ಕಾಶಿ ವಿಶ್ವನಾಥನನ್ನು ಒಲಿಸಿಕೊಂಡು ಪೂಮಾಣಿ – ಕಿನ್ನಿಮಾಣಿ, ದೈಯಾರೆ ಎಂಬ ಹೆಸರನ್ನು ಪಡೆದು, ಕಾರಣಿಕ ಶಕ್ತಿಯನ್ನು ಗಳಿಸಿ ಅಲ್ಲಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಹಾಗೆ ಭಗಂಡ ಕ್ಷೇತ್ರ (ಭಾಗಮಂಡಲ)ಕ್ಕೆ ತಲುಪಿ ಕಾವೇರಮ್ಮನ ದರ್ಶನ ಪಡೆದು ಘಟ್ಟ ಇಳಿದು ಬರುತ್ತಾರೆ. ಬರುತ್ತಿರುವಾಗ…
ತುಳುನಾಡಿನ ಸಮಗ್ರ ಆಸ್ಮಿತೆಯ ಅವಲೋಕನಕ್ಕಾಗಿ ಎಲ್ಲಾ ಜಾತಿ, ಧರ್ಮದವರನ್ನು ಒಳಗೊಂಡ ಪ್ರತ್ಯೇಕ ತುಳು ಭಾಷಾ ಕೇಂದ್ರ ತುಳುನಾಡಿನಲ್ಲೇ ಸ್ಥಾಪನೆಯಾಗಬೇಕಾದ ಅಗತ್ಯತೆಯಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಆಶಿಸಿದರು. ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ತುಳು ಪರಿಷತ್ ಮಂಗಳೂರು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ರೋಶನಿ ನಿಲಯದ ಕನ್ನಡ ಸಂಘ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಯ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಆಯೋಜಿಸಲಾದ ‘ನೆಲಮೂಲದ ನಡೆ: ಶೋಧ – ಸ್ವಾದ’ ಎಂಬ ರಾಜ್ಯ ಮಟ್ಟದ ವಿಚಾರಗೋಷ್ಠಿ ಹಾಗೂ ಡಾ. ಇಂದಿರಾ ಹೆಗ್ಗಡೆ ಅವರು ಬರೆದ ‘ಅತಿಕಾರೆ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೊಂಕಣಿ ಭಾಷೆಯ ಕುರಿತಂತೆ ಆಳವಾದ ಅಧ್ಯಯನಕ್ಕೆ ಪೂರಕವಾಗುವ ಭಾಷಾ ಕೇಂದ್ರವಿದೆ. ಆದರೆ ತುಳುನಾಡಿನಲ್ಲಿ ತುಳುವಿಗೆ ಬೇಕಾಗಿರುವ ತುಳು ಭಾಷಾ ಕೇಂದ್ರ ಇಲ್ಲದಿರುವುದು ಆಶ್ಚರ್ಯ ತಂದಿದೆ. ತುಳು ಅಕಾಡೆಮಿ ಸಹಿತ ವಿವಿಧ ಪ್ರಕಾರಗಳು ಇದ್ದರೂ ತುಳು ಭಾಷಾ ಕೇಂದ್ರ ಇಂದಿನ ಅಗತ್ಯವಾಗಿದೆ. ತುಳುನಾಡಿನಲ್ಲಿ…
ಜಿಲ್ಲಾ ಪಂಚಾಯತ್ ಉಡುಪಿ, ಸ್ವಚ್ಛ ಭಾರತ್ ಮಿಷನ್, ಕಟಪಾಡಿ ಗ್ರಾಮ ಪಂಚಾಯತ್, ಡಾ. ಶ್ರೀ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಇಂದು ದಿನಾಂಕ 01-10-2023 ರಂದು ಕಟಪಾಡಿ ಪೇಟೆ ಬಳಿ ಹಮ್ಮಿಕೊಳ್ಳಲಾದ “ಸ್ವಚ್ಛತಾ ಹೀ ಸೇವಾ ಅಭಿಯಾನ”ಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಬಿ ಶೆಟ್ಟಿ, ಉಪಾಧ್ಯಕ್ಷರಾದ ಸುಗುಣಾ, ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಮತಾ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಉಪಸ್ಥಿತರಿದ್ದರು.
ಬಂಟರ ಚಾವಡಿ ಪರ್ಕಳ( ರಿ) ಇದರ ವಾರ್ಷಿಕ ಮಹಾಸಭೆಯು ಪರ್ಕಳ ಸುರಕ್ಷಾ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಬಂಟರ ಚಾವಡಿಯ ಚಾವಡಿಯ ಅಧ್ಯಕ್ಷರಾದ ಶ್ರೀ ತಾರನಾಥ್ ಹೆಗ್ಡೆಯವರು ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಶ್ರೀ ಜಯರಾಜ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು, ಕೋಶಾಧಿಕಾರಿ ದಿನಕರ್ ಶೆಟ್ಟಿ ಹೆರ್ಗ, ಸಂಘಟನಾ ಕಾರ್ಯದರ್ಶಿ ಶುಭಕರ್ ಶೆಟ್ಟಿ ಮತ್ತು 5 ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಆಸೀನರಾಗಿದ್ದರು. ಕುಮಾರಿ ಅನುಷ ಪ್ರಾರ್ಥನೆ ಮಾಡಿದರು. ಕಾರ್ಯಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟು ಸಭೆಗೆ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೇಬೆಟ್ಟು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಪೂರ್ವಧ್ಯಕ್ಷರಾದ ಶಿವರಾಮ ಶೆಟ್ಟಿಯವರು ಸಂಘದ ಧ್ಯೇಯೋದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಕೋಶಾಧಿಕಾರಿ ದಿನಕರ ಶೆಟ್ಟಿಯವರು 2022-23ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ಮತ್ತು ಅದಕ್ಕೆ ಸಭೆಯ ಸದಸ್ಯರ ಅನುಮೋದನೆಯನ್ನು ಪಡೆದುಕೊಂಡರು. ಹಾಜರಿದ್ದ ಸದಸ್ಯರ ಅನುಮತಿ ಮೇರೆಗೆ…
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಅಬುದಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿಯವರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಜು. 29 ರಂದು ಪುತ್ತೂರು ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ, ಗೌರವಿಸಿದರು. ಉದ್ಯಮಿ ಜಯಕುಮಾರ್ ರೈ ಮಿತ್ರಂಪಾಡಿ, ಉಪ್ಪಿನಂಗಡಿ – ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಪುತ್ತೂರು ಜನ್ಮ ಫೌಂಡೇಶನ್ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ರಿತೇಶ್ ಮಂಗಳೂರು, ರಾಕೇಶ್ ರೈ ಕುದ್ಕಾಡಿಯವರುಗಳು ಉಪಸ್ಥಿತರಿದ್ದರು.
ದುಬಾಯಿ ಫಾರ್ಚೂನ್ ಹೋಟೆಲು ಸಮೂಹಗಳ ವತಿಯಿಂದ ರಕ್ತದಾನ ಶಿಬಿರ ಉದಾತ್ತ ಉದ್ದೇಶಕ್ಕಾಗಿ ಒಗ್ಗೂಡುವುದು ಬದ್ಧತೆ ತೋರಿಸುತ್ತದೆ : ಪ್ರವೀಣ್ ಶೆಟ್ಟಿ ವಕ್ವಾಡಿ
ಮುಂಬಯಿ (ಆರ್‍ಬಿಐ), ಮೇ.22: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬಾಯಿ ವರ್ಷಂಪ್ರತಿಯಂತೆ ಇಂದಿಲ್ಲಿ ಸೋಮವಾರ (ಮೇ.22) ಬೆಳಿಗ್ಗೆ ಗಲ್ಫ್ ರಾಷ್ಟ್ರವಾದ ದುಬಾಯಿ ನಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಕರ್ನಾಟಕ ಕರಾವಳಿಯ ಉಡುಪಿ ಕುಂದಾಪುರ ಮೂಲತಃ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಕಾರ್ಯಾಧ್ಯಕ್ಷ ಪ್ರವೀಣ್ಶೆ ಟ್ಟಿ ವಕ್ವಾಡಿ ತನ್ನ ಹೆಮ್ಮೆಯ ಪೋಷಕರಾದ ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ಅವರ ವಿವಾಹ ವಾರ್ಷಿಕೋತ್ಸವದ ಶುಭಾವಸರದಿ ಫಾರ್ಚ್ಯೂನ್ ಸಮೂಹವು 11ನೇ ವರ್ಷದ ಕಾರ್ಯಕ್ರಮವನ್ನಾಗಿಸಿ ಡಿಹೆಚ್‍ಎ ಸ್ಥಳೀಯ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಮತ್ತು ರಕ್ತನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರ-2023 ನಡೆಸಿತು. ಪ್ರವೀಣ್ ಶೆಟ್ಟಿ ಸ್ವತಃ ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಶ್ಲಾಘನೆ ವ್ಯಕ್ತಪಡಿಸಿ ಮಾತನಾಡಿ “ನಮ್ಮ ರಕ್ತದಾನ ಶಿಬಿರಕ್ಕೆ ಪಡೆದ ಅಗಾಧ ಪ್ರತಿಕ್ರಿಯೆಯಿಂದ ನಾವು ರೋಮಾಂಚನ ಗೊಂಡಿದ್ದೇವೆ. ನಮ್ಮ ತಂಡದ ಸದಸ್ಯರು, ಪ್ರೋತ್ಸಹಕರು ಮತ್ತು ಸ್ಥಳೀಯ ಸಮುದಾಯವು ಇಂತಹ ಉದಾತ್ತ ಉದ್ದೇಶಕ್ಕಾಗಿ ಒಗ್ಗೂಡುವುದನ್ನು ಕಂಡು ಹೃದಯಸ್ಪರ್ಶಿಯಾಗಿದೆ. ಈ ಕಾರ್ಯಕ್ರಮವು ಕಾರ್ಪೊರೇಟ್…
ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ವತಿಯಿಂದ ಪುಣೆ ಗ್ರಾಮೀಣ ಭಾಗದ ನಸರಾಪುರದ ಮಾವುಲಿ ಅನಾಥಾಶ್ರಮದ ಮಕ್ಕಳಿಗೆ ಮಾರ್ಚ್ ೨೯ ರಂದು ಮಧ್ಯಾಹ್ನದ ಊಟ ಮತ್ತು 2 ತಿಂಗಳಿಗೆ ಬೇಕಾದಷ್ಟು ಆಹಾರದ ಸಾಮಾಗ್ರಿಯನ್ನು ನೀಡಲಾಯಿತು. ಈ ಸಂದರ್ಭದ ಲ್ಲಿ ಊರೂರು ತಿರುಗುತ್ತ ಕೀರ್ತನೆ ಮಾಡಿ ಮಕ್ಕಳನ್ನು ಪಾಲನೆ ಮಾಡುವಂತಹ ಮಹಾರಾಜ್ ಗುರೂಜಿಯನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ ಮಹಿಳಾ ಸಮಿತಿಯ ಅಧ್ಯಕ್ಷೆ ಯಶೋಧಾ ಜಿ ಶೆಟ್ಟಿ, ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ವಸಂತ್ ಎ ಶೆಟ್ಟಿ ಮತ್ತು ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಇಂತಹ ಪುಣ್ಯ ಕಾರ್ಯಕ್ರಮನ್ನು ಮಾಡಿದ್ದಕ್ಕಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರು…
ಪುತ್ತೂರಿನ ದರ್ಬೆಯಲ್ಲಿರುವ ಉಷಾ ಪಾಲಿ ಕ್ಲಿನಿಕ್ ನಲ್ಲಿ ಡಾ.ಶ್ರೇಷ್ಠ ಆಳ್ವ ರವರು ಏ.3ರಿಂದ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 5 ರ ತನಕ ಸೇವೆಗೆ ಲಭ್ಯವಿದ್ದಾರೆ. ಇವರು ಜನರಲ್ ಪ್ರಾಕ್ಟಿಷನರ್ ನೆಲೆಯಲ್ಲಿ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ನೀಡಲಿದ್ದಾರೆ. ಅನಂತಾಡಿ ಗ್ರಾಮದ ಗಂಗಾಧರ ಆಳ್ವ ಹಾಗೂ ನವೀನಾ ಆಳ್ವಾರವರ ಪುತ್ರಿಯಾದ ಡಾ.ಶ್ರೇಷ್ಠ ಆಳ್ವರವರು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಾಣಿ ಬಾಲ ವಿಕಾಸ ಇಂಗ್ಲೀಷ್ ಮೀಡಿಯಂ ಶಾಲೆ, ಪಿಯುಸಿಯನ್ನು ಪುತ್ತೂರಿನ ಅಂಬಿಕಾ ಪಿಯು ಕಾಲೇಜು, ಎಂ. ಬಿ. ಬಿ. ಎಸ್ ಪದವಿಯನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿ ಕೊಡಗಿನ ಸುಲರ್ಬಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದರು.
ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಕುಂದಾಪುರ ಭಾಷಾ ಅಕಾಡೆಮಿ ರಚನೆಯ ಅಗತ್ಯವನ್ನು ಹೇಳಿ ಅಕಾಡೆಮಿ ಸ್ಥಾಪನೆಗೆ ಯತ್ನಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅವರು ಮಾಧ್ಯಮದ ಜತೆ ಮಾತನಾಡಿ, ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಆಗಿದೆ. ಅಲ್ಲಿ ಶೈಕ್ಷಣಿಕ, ಸಂಶೋಧನೆ ಮೊದಲಾದ ಅಧ್ಯಯನಾತ್ಮಕ ಚಟುವಟಿಕೆಗಳು ನಡೆಯಲಿವೆ. ಇದು ಕುಂದಾಪುರ ಭಾಷೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸಿಕೊಡಲಿದೆ. ಇದರ ಜತೆಗೆ ಅಕಾಡೆಮಿ ರಚನೆಯಾದರೆ ಸಂಶೋಧನೆ, ಪ್ರಕಟನೆ ಜತೆಗೆ ಕಲೆ, ಸಂಸ್ಕೃತಿಯ ಪ್ರಸಾರಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಸಚಿವರ ಕ್ಷೇತ್ರದಲ್ಲೇ ಹೆಬ್ರಿಯಲ್ಲಿ ಕುಂದಾಪುರ ಕನ್ನಡ ಮಾತನಾಡುವವರು ಇದ್ದಾರೆ. ಬ್ರಹ್ಮಾವರದಿಂದ ಬೈಂದೂರಿನವರೆಗೆ ಕುಂದಾಪುರ ಭಾಷೆ ಮಾತನಾಡುವವರು ಇದ್ದಾರೆ. ಆದ್ದರಿಂದ ಅಕಾಡೆಮಿ ರಚನೆಯಿಂದ ಈ ಭಾಗದ ಭಾಷೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಚುನಾವಣೆ ಘೋಷಣೆಗೆ ಮುನ್ನವೇ ಅಕಾಡೆಮಿ ರಚನೆ ನಿರ್ಧಾರ ಘೋಷಿಸಲು ಮನವಿ ಮಾಡುವುದಾಗಿ ಹೇಳಿದ ಅವರು, ಹಲವು ಪ್ರಥಮಗಳಿಗೆ ಹೆಸರಾದ ಕುಂದಾಪುರಕ್ಕೆ ಪ್ರತ್ಯೇಕ ಭಾಷಾ…
ಕನ್ನಡದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಿದ ಸರಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್)ರಿಗೆ ನೀಡಲಾಗುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಗೆ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಭಾಜನರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರಿಗೆ ನೀಡುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಕೋವಿಡ್ ಕಾರಣಕ್ಕಾಗಿ 2 ವರ್ಷದಿಂದ ನಡೆದಿರಲಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಪ್ರಕಾಶ್ಚಂದ್ರ ಅವರು 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದು ಆ ವೇಳೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿದ್ದರು.2019-20ನೇ ಹಾಗೂ 2020-21ನೇ ಸಾಲಿನ ಪ್ರಶಸ್ತಿ ಪ್ರದಾನ ರವಿವಾರ ಬೆಂಗಳೂರು ವಿಧಾನಸೌಧದಲ್ಲಿ ಜರಗಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.