ಬಂಟರ ಸಂಘ ಬಂಟ್ವಾಳ ತಾಲೂಕಿನ ವತಿಯಿಂದ ದಿನಾಂಕ 07-01-2024ರಂದು ಜರಗಲಿರುವ ಜಿಲ್ಲಾ ಮಟ್ಟದ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷ ಹಾಗೂ ಪ್ರಸ್ತುತ ಒಕ್ಕೂಟದ ಜೊತೆ ಕಾರ್ಯದರ್ಶಿಯವರಾದ ಶ್ರೀ ಚಂದ್ರಹಾಸ್ ಡಿ. ಶೆಟ್ಟಿಯವರು ಆಮಂತ್ರಣ ಪತ್ರಿಕೆ ನೀಡಿ ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಕಾರ್ಯದರ್ಶಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಬಂಟರ ಸಂಘ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳಾದ ಶ್ರೀ ಜಗನ್ನಾಥ್ ಚೌಟ, ಶ್ರೀ ಲೋಕೇಶ್ ಶೆಟ್ಟಿ ಕೆ, ಶ್ರೀ ಪದ್ಮನಾಭ ಶೆಟ್ಟಿ, ಶ್ರೀ ರಂಜನ್ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ, ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.







































































































