
ತುಳುನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸಮುದಾಯದ ಸೌಹಾರ್ದತೆಯನ್ನು ಸಂಭ್ರಮಿಸುವ ಬೆಂಗಳೂರಿನ ಜೈ ತುಳುನಾಡು (ರಿ) ಸಂಘಟನೆಯು ತುಳುನಾಡು ಆಟಿ ಉತ್ಸವ -2026 ಆಯೋಜಿಸಿತ್ತು. ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾನ್ಯ ಆರೋಗ್ಯ ಸಚಿವರಾದ ಯು.ಟಿ ಖಾದರ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ರಾಜೇಶ್ ಶೆಟ್ಟಿ, ಸಹಕಾರಿ ರತ್ನ ಡಾ| ಅಗರಿ ನವೀನ್ ಭಂಡಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಸ್ವೀಕರಿಸಿ ಮಾತನಾಡಿದ ರಾಜೇಶ್ ಶೆಟ್ಟಿಯವರು, ನಮ್ಮ ತುಳು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಅರ್ಥಪೂರ್ಣ ಆಚರಣೆಯ ಭಾಗವಾಗಿರುವುದು ಹೆಮ್ಮೆಯ ಕ್ಷಣ ಎಂದರು.

















































































































