ಸಾಹಿತ್ಯಾರಾಧನ ಸಂಸ್ಥೆ ಹಾಗೂ ಭಾರತಿ ಪ್ರಕಾಶನ ದಾಂಡೇಲಿ (ಉ.ಕ) ಇವರ ಸಹಯೋಗದಲ್ಲಿ ಸೆಪ್ಟೆಂಬರ್ 04 ರಂದು ಶುಕ್ರವಾರ ಸಾಯಂಕಾಲ 5.00 ಗಂಟೆಗೆ ಮಾಸ್ಕೇರಿ ಸಾಹಿತ್ಯ ಭವನದಲ್ಲಿ ಸಾಹಿತ್ಯ ಪ್ರೇಮಿ, ಉದ್ಯಮಿ, ಕುಂದಾಪುರ ಯುವ ಬಂಟರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ ಅವರಿಗೆ ಶ್ರೀ ಕೃಷ್ಣ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅವಕಾಶ ಇದ್ದರೂ ಸರಕಾರದ ಮಾಸಾಶನ ಪಡೆಯದ ದೇಶಭಕ್ತ ಪೂಜ್ಯ ತಂದೆ ಕೃಷ್ಣ ನಾಯಕ ಅವರ ನೆನಪಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ವರ್ಷಂಪ್ರತಿ ನೀಡಲಾಗುವ ‘ಶ್ರೀ ಕೃಷ್ಣ ಗೌರವ ಪ್ರಶಸ್ತಿ’ ಇದಾಗಿದೆ. ಗೋವಿಂದರಾಯ ಶೇಟ್ ದೀಪ ಪ್ರಜ್ವಲಿಸಲಿರುವ ಸಮಾರಂಭದಲ್ಲಿ ಪತ್ರಕರ್ತ ರಾಜೇಶ್ ತಳೇಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೈ ಹನುಮಾನ್ ಸಮಿತಿಯ ಅಧ್ಯಕ್ಷರಾದ ಚಂದ್ರು ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉದಯ್ ಶೆಟ್ಟಿ, ಸಮಾಜ ಸೇವಕರುಗಳಾದ ಸುಧೀರ್ ಶೆಟ್ಟಿ, ಸುಧಾಕರ ಶೆಟ್ಟಿ, ಸಮಾಜ ಚಿಂತಕರಾದ ವಿಶ್ವನಾಥ ಶೆಟ್ಟಿ ಮತ್ತು ಹಿರಿಯ ಕವಿ ರವಿ ಲಕ್ಷ್ಮೇಶ್ವರ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉಪನ್ಯಾಸಕಿ ಹಾಗೂ ಲೇಖಕಿ ನಿರುಪಮಾ ನಾಯಕ, ಉಪನ್ಯಾಸಕಿ ಕು.ಕಾವ್ಯ ಭಟ್, ಹಾಸ್ಯ ಕಲಾವಿದ ವಿಶ್ವನಾಥ ಭಾಗ್ವತ್, ವಕೀಲರಾದ ಜಯಾ ನಾಯ್ಕ್, ಶರಣ ಚಿಂತಕರಾದ ಅಶೋಕ ಪಾಟೀಲ, ಲೇಖಕರಾದ ವೃಶ್ಚಿಕಮುನಿ ಪ್ರವೀಣ ಕುಮಾರ ಸುಲಾಖೆ, ಒಂದು ಕವಿತೆ ಒಂದು ಕೃತಿ ಸಂಪಾದಕಿ ಲಕ್ಷ್ಮಿ ಎಸ್ ಸಿಂಗಾಡಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯಸಕ್ತರನ್ನು ಭಾರತಿ ಕವರಿ, ಐಶ್ವರ್ಯ, ಗುರುರಾಜ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳಾದ ಮಾಸ್ಕೇರಿ ನಾಯಕ ಅವರು ಸ್ವಾಗತಿಸಲಿದ್ದಾರೆ.



















































































































