Author: admin
ಬಂಟರ ಸಂಘ ಇಂದು ಬಲಿಷ್ಠಗೊಳ್ಳಲು ಪ್ರಾದೇಶಿಕ ಸಮಿತಿಗಳು ಮುಖ್ಯ ಕಾರಣವಾಗಿದೆ. ಪ್ರತಿ ಸಮಿತಿಗಳು ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಮಾಡಿ ಸ್ಥಳೀಯ ಬಂಟ ಬಂಧುಗಳಿಗೆ ವಿವಿಧ ರೀತಿಯಲ್ಲಿ ಸಹಕಾರವಾಗಿದೆ. ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಅಪಾರವಾದ ಶ್ರಮವಹಿಸಿ ಸಮಿತಿಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳೆಲ್ಲವೂ ಸಮಯದ ಒಳಗಡೆ ನಡೆಯುವಂತೆ ಮಹತ್ವವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಬೇಕು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ನುಡಿದರು. ಅವರು ಜು. 16 ರಂದು ಆದಿತ್ಯವಾರ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಲೀಲಾವತಿ ಶ್ಯಾಮ ಶೆಟ್ಟಿ (ಬಾಬಾಸ್ ಗ್ರೂಪ್) ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಒಂಭತ್ತು ಪ್ರಾದೇಶಿಕ ಸಮಿತಿಗಳಲ್ಲಿ ಒಂದಾದ ಅಂಧೇರಿ-ಬಾಂದ್ರ ಪ್ರಾದೇಶಿಕ ಸಮಿತಿಯ 18 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಪ್ರಾದೇಶಿಕ ಸಮಿತಿ ಸಮಿತಿಯು ಮಹೇಶ್ ಶೆಟ್ಟಿ ಅವರ ಕಾರ್ಯಧ್ಯಕ್ಷತೆಯಲ್ಲಿ ಪ್ರಾರಂಭಗೊಂಡವು. ಆ ಸಂದರ್ಭದಲ್ಲಿ ನಾನು ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಅಂದು ಸುಮಾರು 5000ಕ್ಕೂ ಮಿಕ್ಕಿ…
ಬಂಟ್ವಾಳದಲ್ಲಿರುವ ಈ ಭವ್ಯ ಮಂದಿರ ನಿರ್ಮಾಣದ ಹಿಂದಿರುವ ಪ್ರೇರಕ ಶಕ್ತಿ ಶ್ರೀ ಗೋವಿಂದ ಮಹಾಸ್ವಾಮಿಗಳು. ಕೇರಳದ ಮಡಿವಂತ ಬ್ರಾಹ್ಮಣ ಕುಲಕ್ಕೆ ಸೇರಿದ್ದ ಗೋವಿಂದ ಸ್ವಾಮಿಗಳು ಗಣೇಶಪುರಿಗೆ ಹೋಗಿ ನಿತ್ಯಾನಂದ ಸ್ವಾಮಿಗಳನ್ನು ಕಂಡು, ನಾನು ಸ್ವಾಮಿ ಆಗುತ್ತೇನೆ, ದೀಕ್ಷೆ ಕೊಡಿ ಎಂದಾಗ ನಿತ್ಯಾನಂದರು ಗೋವಿಂದ ಸ್ವಾಮಿಗಳನ್ನು ಅಡಿಯಿಂದ ಮುಡಿಯವರಿಗೆ ನೋಡಿದರಂತೆ. ನಿನ್ನಲ್ಲಿ ಬ್ರಾಹ್ಮಣ್ಯದ ಮೇಲರಿಮೆಯಿದೆ. ಜೀವರಲ್ಲಿ ಭೇದವೆಣಿಸುವ ಮಡಿ ಮೈಲಿಗೆ ಇದೆ. ಅದನ್ನು ತ್ಯಜಿಸದೆ ಸಾಧನೆ ಸಾಧ್ಯವಿಲ್ಲ. ಸ್ವಲ್ಪ ಕಾಲ ಮೀನಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಬಾ ಎಂದು ಕಳುಹಿಸಿದರಂತೆ! ಕೊಂಚವೂ ಸಂಕೋಚ ಪಡದೆ ಗುರುಗಳ ಆದೇಶವನ್ನು ಶಿರಸಾ ವಹಿಸಿ ಗೋವಿಂದ ಭಟ್ರು ಗಣೇಶ ಪುರಿಯಲ್ಲಿರುವ ಮಾಂಸದಡುಗೆಯ ಹೊಟೇಲೊಂದರಲ್ಲಿ ಕೆಲಸ ಮಾಡಿದರು. ಎಂಜಲು ಎತ್ತಿದರು. ಮುಸುರೆ ತೊಳೆದರು ಮಾಂಸದಡುಗೆ ಬೇಯಿಸಿದರು. ಅಜ್ಜನ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡರು. ದೀಕ್ಷೆ ಕೊಟ್ಟ ನಂತರ ಬಂಟ್ವಾಳಕ್ಕೆ ಹೊರಡು ಎಂದು ನಿತ್ಯಾನಂದರ ಆದೇಶವಾಯಿತು. ಗೋವಿಂದ ಸ್ವಾಮಿಗಳು ಬಂಟ್ವಾಳಕ್ಕೆ ಬಂದರು ಭಕ್ತರ ಪಾಲಿಗೆ ಭಾಗ್ಯ ದೇವತೆಯಾಗಿ. ಎಲ್ಲಿಯ ಕೇರಳ?…
ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವು ಏಪ್ರಿಲ್ 2 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 1ರ ವರೆಗೆ ಪುಣೆಯ ಕ್ಯಾಂಪ್ ಎಂ. ಜಿ. ರೋಡ್ ನಲ್ಲಿರುವ ಡಾ. ಸುಧಾಕರ್ ಶೆಟ್ಟಿಯವರ ಬೇಬಿ ಫ್ರೆಂಡ್ ಕ್ಲಿನಿಕ್ ನ ಆವರಣದಲ್ಲಿ ನಡಯಲಿದೆ. ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು ಮತ್ತು ಸಂಘದ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷರು ಬೇಬಿ ಫ್ರೆಂಡ್ ಕ್ಲಿನಿಕ್ ನ ಮೂಲಕ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪುಣೆಯ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಕಾರ್ಖಾನೆ, ಕಚೇರಿಗಳು ಮತ್ತು ಗೃಹ ಸೇವಕಿಯರು, ಚಾಲಕರು ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬಂದಿಯ ಮಕ್ಕಳ ಅನುಕೂಲಕ್ಕಾಗಿ…
ಈ ವರ್ಷ ಮಾರ್ಚ್ 29 ರಿಂದ ಏಪ್ರಿಲ್ 6 ರವರೆಗೆ ನಡೆಯವ ದ್ರೌಪದಿ ಶಕ್ತ್ಯೋತ್ಸವ ಎಂದೇ ಪ್ರಸಿದ್ಧವಾದ ಕರಗ ಮಹೋತ್ಸವ ವಸಂತನ ಆಗಮನದೊಂದಿಗೆ ಮರ ಗಿಡಗಳಲ್ಲಿ ಹೊಸ ಚಿಗುರು ಕಾಣುವ ಚೈತ್ರ ಮಾಸದ ಚಂದಿರ ಪೂರ್ಣವಾಗಿ ಮೂಡಿ ಬರುವ ಹುಣ್ಣಿಮೆಯ ವಿಶೇಷ ಸಂಭ್ರಮದೊಂದಿಗೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಮಹೋತ್ಸವ ಪಾಂಡವರಲ್ಲಿ ಹಿರಿಯನಾದ ಧರ್ಮರಾಯನ ಹೆಸರಿನಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಿಂದಲೇ ಕರಗ ಆರಂಭಗೊಳ್ಳುತ್ತದೆ. ಕರಗ ಶಕ್ತಿಯ ಮೂಲ ಸೆಲೆಯಾದ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯತೆ ಹಾಗೂ ದ್ರೌಪದಿ ಕರಗವೆಂದು ಕರೆಯವುದು ರೂಢಿ. ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಭದ್ರತೆಗಳಿಂದ ಆಚರಿಸುವ ಸಂಪ್ರದಾಯಬದ್ದ ಕರಗದಲ್ಲಿ ವೈವಿಧ್ಯತೆ ಹಾಗೂ ಪರಂಪರೆ ಇದೆ. ಏನಿದು ಕರಗ? “ಕ” ಎಂದರೆ ಕೈಯಲ್ಲಿ ಮುಟ್ಟದೆ “ರ” ಎಂದರೆ ಕುಂಡದಲ್ಲಿ ತಲೆಯಲ್ಲಿ ಧರಿಸಿದ “ಗ” ಎಂದರೆ ಚಲಿಸುವುದು ಅಂದರೆ ಕೈಯಲ್ಲಿ ಮುಟ್ಟದೆ ಶಿರದಲ್ಲಿ ಧರಿಸಿ ಭಕ್ತಾಧಿಗಳಿಗೆ ದರ್ಶನ ನೀಡುವುದು. ಕರಗದ ಅಗ್ರ ಭಾಗದಲ್ಲಿ ವಿಷ್ಣು, ಕಂಠದಲ್ಲಿ ಶಿವ…
ಈ ವಿಷಯ ಎಲ್ಲರಿಗೂ ತಿಳಿದಿರುವ ಸತ್ಯ. ಪೊಲೀಸರಿಂದ ಹಿಡಿದು ಜಿಲ್ಲಾಡಳಿತದವರೆಗೆ, ಜನಪ್ರತಿನಿಧಿಗಳಿಂದ ಆರಂಭವಾಗಿ ಜನ ಸಾಮಾನ್ಯರವರೆಗೆ ಎಲ್ಲರಿಗೂ ಈ ಸಮಸ್ಯೆಯ ಆಳದ ಅರಿವೂ ಇದೆ, ಅಪಾಯದ ಸಾಧ್ಯತೆಯ ಭಯವೂ ಇದೆ. ಎಲ್ಲರೂ ಒಟ್ಟಾಗಿ ಪರಿಹಾರಕ್ಕೆ ಪ್ರಯತ್ನಿಸಿದರೆ ಕತ್ತಲು ದಾರಿಯಲ್ಲಿ ಸಾಗುವುದು ಕಷ್ಟವೇನಲ್ಲ. ಅದಕ್ಕೆ ಎಲ್ಲರೂ ತಮ್ಮ ತಮ್ಮ ಪಾತ್ರ ನಿರ್ವಹಿಸಬೇಕಾದ ಕಾಲ ಈಗ ಬಂದಿದೆ. ಪಬ್ಗಳು, ಬಾರ್ಗಳು ತಡರಾತ್ರಿವರೆಗೆ ನಡೆಯುವ ಪಾರ್ಟಿಗಳು ಹೆಚ್ಚಾಗಿ ಡ್ರಗ್ಸ್ ಪೆಡ್ಲರ್ಗಳು ಹಾಗೂ ಗ್ರಾಹಕರು ಸಂಧಿಸುವ ತಾಣಗಳು. ಇತ್ತೀಚೆಗೆ ಇದರ ಸಾಲಿಗೆ ಕೆಲವು ಪ್ರತಿಷ್ಠಿತ ಹೊಟೇಲ್ಗಳೂ ಸೇರುತ್ತಿವೆ ಎಂಬ ಅಭಿಪ್ರಾಯವಿದೆ. ಮಂಗಳೂರಿನಿಂದ ಹಿಡಿದು ಮಣಿಪಾಲ ದವರೆಗೂ ಹೆಚ್ಚಾಗಿ ವಸತಿ ಸಹಿತ ಶಿಕ್ಷಣ ಸಂಸ್ಥೆಗಳೇ ಅಧಿಕ. ಈ ಕಾರಣದಿಂದ ಮಧ್ಯರಾತ್ರಿವರೆಗೂ, ತಡರಾತ್ರಿವರೆಗೂ ಇಬ್ಬಿಬ್ಬರೇ ಅಥವಾ ಗುಂಪು ಗುಂಪಾಗಿ ಸಂಚರಿಸಿದರೂ ಪೊಲೀಸರು ಸ್ಥಳೀಯ ವಿದ್ಯಾರ್ಥಿಗಳೆಂದು ಪ್ರಶ್ನಿಸುವುದು ಕಡಿಮೆ. ಇದನ್ನು ಡ್ರಗ್ಸ್ ಪೆಡ್ಲರ್ಗಳು ತಮ್ಮ ಅನುಕೂಲಕ್ಕೆ ಬಳಸುತ್ತಿದ್ದಾ ರೆ ಎಂಬುದೂ ಸುಳ್ಳಲ್ಲ. ಹೆಚ್ಚುತ್ತಿರುವ ಪಾರ್ಟಿಗಳು ಕೋವಿಡ್ ಬಳಿಕ ತಡರಾತ್ರಿವರೆಗಿನ ಪಾರ್ಟಿ ಗಳ…
ಪರಹಿತವ ನೆನೆಯದಿರೆ ತೊರೆ ಹರಿದು ಸಾಗುವುದೆ? ಕಂಪ ಮರತರೆ ತಾನು ಗಂಧ ತೇಯುವುದೆ? ಕನಲಿದರೆ ಮುನಿಸಿಂದ ಚೆಲುವೆಲ್ಲಿ ಹೂಗಿಡದಿ? ಬಾಳ ಚಂದನ ತ್ಯಾಗ-ಮುದ್ದುರಾಮ ಜೀವನ ಅಂದರೆ ಕೇವಲ ತನಗೆ ಹಾಗು ತನ್ನವರಿಗಾಗಿ ಅಂದುಕೊಂಡರೆ ಅದು ತಪ್ಪು. ದೇಹ ದೇವರಲ್ಲಿಗೆ ಹೋಗುವ ಮೊದಲು ದೇಶಕ್ಕಾಗಿ ಜೀವಿಸಿ, ಸಮಾಜಕ್ಕೆ ಗಂಧದ ಕೊರಡಾಗಿ ತೇದುತ್ತಾ, ಸಮಾಜಮುಖಿಯಾಗಿರುವವರ ಸಂಖ್ಯೆ ಬಹು ವಿರಳವಾಗಿರುವ ಪ್ರಸ್ತುತ ಸಮಯದಲ್ಲಿ ಸಮಾಜ ಸೇವೆ, ಶೈಕ್ಷಣಿಕ ಸೇವೆ, ಕಲಾಸೇವೆಯೊಂದಿಗೆ ಬದುಕುವ ಅಪರೂಪದಲ್ಲಿಯೇ ಅಪರೂಪದ ಸಾಮಾಜದ ಹಿತೈಷಿ, ಸಮಾಜ ಸೇವಕ ಹಾಗು ಅಪ್ಪಟ ದೇಶಾಭಿಮಾನಿ ಅಂದರೆ ಅದು ಪೊವಾಯಿ ಪರಿಸರದ ತುಳು-ಕನ್ನಡಿಗರ ಹಾಗು ಇತರ ಭಾಷಿಕರ ಮನದಲ್ಲಿ ಮನೆ ಮಾಡಿದವರು ದ್ಯಾವಪ್ಪ ಶೆಟ್ಟಿ ಯಾನೆ ಡಿ ಕೆ ಶೆಟ್ಟಿಯವರು. ಹೌದು… ಅವರದ್ದು ಮಗುವಿನಂತ ಮನಸ್ಸು, ಸಂಸ್ಕ್ರತಿ-ಸಂಸ್ಕಾರದ ಖನಿಜ ಅವರಲ್ಲಿ ಧಾರಾಳ. ಪರರ ನೋವಿಗೆ ಶೀಘ್ರವಾಗಿ ಸ್ಪಂಧಿಸುವ ಗುಣ ಅವರಿಗೆ ಪರಮಾತ್ಮನ ಕೊಡುಗೆ. ದುಡಿದು ಗಳಿಸುವುದು ತನ್ನ ಕಾಯಕವಾದರೆ, ದುಡಿದುದರಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಬಚ್ಚಿಡಬೇಕು ಎಂಬ…
ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ, ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ ಚರ್ಯೆಗಳಿಗೆ ದಿಟ್ಟವಾಗಿ, ಮುಕ್ತವಾಗಿ ತೆರೆದುಕೊಂಡವರು, ಮಾತನಾಡಿದವರು, ಬರೆದವರು ಡಾ ಇಂದಿರಾ ಹೆಗ್ಗಡೆಯವರು. ಇವರ ಸಮಗ್ರ ಬರಹಗಳ ಅವಲೋಕನ ಸಂಪುಟವೊಂದು ಪ್ರಟಣೆಗೊಳ್ಳಲಿದೆ. ಇದೊಂದು ಸಂಭ್ರಮ ನಮಗೆಲ್ಲರಿಗೂ. ಪ್ರೊ. ಬಿ. ಎ. ವಿವೇಕ ರೈ ಅವರ ಆಶಯ, ಮಾರ್ಗದರ್ಶನ ಮತ್ತು ಗೌರವ ಸಂಪಾದಕತ್ವದಲ್ಲಿ, ಡಾ.ಜ್ಯೋತಿ ಚೇಳ್ಯಾರು ಅವರ ಪ್ರಧಾನ ಸಂಪಾದಕತ್ವದಲ್ಲಿ ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರ ತರಲಿದೆ. ಎಸ್ ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ),ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮತ್ತು ಸ್ಕೂಲ್ ಅಪ್ ಸೋಷಲ್ ವರ್ಕ್ ರೋಶನೀ ನಿಲಯ ಕನ್ನಡ ಸಂಘ ಮಂಗಳೂರು -ಹೀಗೆ ಈ ಐದು ಸಂಘಟನೆಗಳ ಸಹಯೋಗದಲ್ಲಿ ಅಕ್ಟೋಬರ್ 26, 2023 ಗುರುವಾರದಂದು ‘ಮಾರಿಯಾ ಪೈವಾ’ ಸಭಾಂಗಣ ರೋಶನೀ ಮಂಗಳೂರು ಇಲ್ಲಿ…
ಧರ್ಮವು ಅಧರ್ಮದ ದಾರಿಯಲ್ಲಿ ನಡೆದಾಗ ಭಗವಂತನು ಯಾವುದೇ ರೂಪದಲ್ಲಿ ಬಂದು ರಕ್ಷಣೆ ನೀಡುತ್ತಾನೆ ಎಂಬ ದೃಢ ನಂಬಿಕೆಯಿಂದ ಹನ್ನೆರಡು ವರ್ಷಗಳ ಹಿಂದೆ ಅಮಾನುಷವಾಗಿ ಕೊಲೆಯಾದ ಧರ್ಮಸ್ಥಳ ಪರಿಸರದ ಬಾಲೆ ಸೌಜನ್ಯಳ ನಿಜವಾದ ಕೊಲೆಗಾರ ಯಾರು ಎಂದು ತಿಳಿಯುವರೇ ಹೋರಾಟ ಆರಂಭವಾಗಿದೆ. ಈ ಹೋರಾಟದಲ್ಲಿ ನ್ಯಾಯ ಸಿಗಲೇಬೇಕೆಂದು ಪ್ರೋತ್ಸಾಹಿಸಿ ಮಹಾರಾಷ್ಟ್ರದ ಮಣ್ಣಿನಲ್ಲಿ ನೆಲೆಸಿದ ಸಮಾನ ಮನಸ್ಕರಾದ ನಾವು ಮುಂಬಯಿಯಲ್ಲೂ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪೂರ್ವಬಾವಿ ಸಭೆಯಲ್ಲಿ ಒಟ್ಟುಗೂಡಿದ್ದೇವೆ. ನಮ್ಮ ನಡೆ ಕೇವಲ ನ್ಯಾಯದ ಕಡೆ. ಹಿಂದೆ ಸಂತೋಷ್ ರಾವ್ ಎಂಬ ಸಜ್ಜನ ಯುವಕನನ್ನು ಆರೋಪಿಯ ಸ್ಥಾನದಲ್ಲಿಟ್ಟು ಇದೀಗ ನ್ಯಾಯಾಲಯವು ಅವರನ್ನು ನಿರಾಪರಾಧಿ ಎಂದು ತೀರ್ಪು ನೀಡಿದೆ. ಹಾಗಾಗಿ ನಿಜವಾದ ಆರೋಪಿ ಅಲ್ಲದೆ ಸಂತೋಷ್ ರಾವ್ ಹಾಗೂ ಅವರ ಕುಟುಂಬಕ್ಕೆ ಕಳಂಕ ತಂದವರು ಯಾರು ಎಂಬ ಗೊಂದಲವು ಈ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕಾಗಿ ಎಸ್ ಐಟಿ ಮುಖೇನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಮರು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಬೇಕು. ನಾವು ಯಾರದ್ದೇ…
ಪವಿತ್ರ ದೇಶ ನಮ್ಮದು. ಭಾರತದಲ್ಲಿರುವ ಹಲವು ಜಾತಿ, ಕುಲ, ಭಾಷೆ, ವಿಭಿನ್ನ ಸಂಸ್ಕೃತಿ ಎಲ್ಲಿಯೂ ಕಾಣಸಿಗದು. ವಿದೇಶಕ್ಕೆ ಹೋದ ಮಕ್ಕಳು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಘ ಕಳೆದ 10 ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ ಕಾರ್ಯ ಮಾಡುತ್ತಾ, ಸಾಧನೆಯನ್ನು ಗುರುತಿಸಿ ಸಮಾಜದವರನ್ನು ಸಮ್ಮಾನ ಮಾಡುತ್ತಿದೆ ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯ ಸ್ವಾಮೀಜಿಯವರು ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ರವಿವಾರ ವಾಮಂಜೂರು ಚರ್ಚ್ ಸಭಾಭವನದಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಬಂಟ ಸಮಾಜದಲ್ಲಿಯೂ ಕಷ್ಟದಲ್ಲಿ ಇದ್ದವರು ಇದ್ದಾರೆ. ಅವರು ಸಮಾಜದ ಅವಿಭಾಜ್ಯ ಅಂಗ. ಎಲ್ಲಾ ಸಮಾಜ ಗಟ್ಟಿಯಾದರೆ, ಸನಾತನ ಧರ್ಮ ಗಟ್ಟಿಯಾಗುತ್ತದೆ. ಎಲ್ಲರಿಗೂ ಬಂಟ ಸಮಾಜ ಆದರ್ಶವಾಗಬೇಕು.…
ಮಾಧ್ಯಮಗಳು ಉತ್ತಮವಾದ ಶಿಸ್ತು ಮತ್ತು ಸಂಸ್ಕಾರವನ್ನು ಹೊಂದಿರುವ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ನೀಡಿದಾಗ ಪತ್ರಿಕೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ನೈಜ ಸುದ್ದಿಯನ್ನು ಕೊಡುವ ಮಾಧ್ಯಮವಾಗಿ ದಿನಪತ್ರಿಕೆಯನ್ನು ನೋಡಬಹುದು ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಜು.12ರಂದು ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿಶ್ವಾಸಾರ್ಹ ಸುದ್ದಿಗಾಗಿ ಜನರು ಪತ್ರಿಕೆ ಅವಲಂಬಿಸುತ್ತಾರೆ. ಇದರಿಂದ ಪತ್ರಿಕೆಯೂ ಉಳಿಯುತ್ತದೆ. ಇಂದು ಪತ್ರಿಕೆಯಿಂದ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಮೊದಲು ಸುದ್ದಿಗಳು ಬರುತ್ತದೆ. ಇದನ್ನೇ ಸತ್ಯವೆಂದು ಜನರು ನಂಬುತ್ತಾರೆ. ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪಠ್ಯದ ಜೊತೆಗೆ ಪತ್ರಿಕೆಗಳು ಕೂಡ ಸಹಕಾರಿಯಾಗುತ್ತದೆ ಎಂದು ತಿಳಿಸಿ ಪತ್ರಿಕೆಯ ಉಗಮ, ಇತಿಹಾಸ ಮತ್ತು ಸ್ವರೂಪದ ಕುರಿತು ಅವರು ಮಾಹಿತಿ ನೀಡಿದರು. ನಾನು…