Author: admin

ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ‌. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು‌. ವಿಧಾನಸಭಾ ಚುನಾವಣೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಬಳಿಕ ಶಾಸಕ ಲಾಲಾಜಿ‌ ಆರ್. ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದ್ದು ಅವರೊಂದಿಗಿನ ಮಾತುಕತೆ ಬಳಿಕ ಜಂಟಿ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ನನಗೆ ಪೂರ್ಣ ಸಹಕಾರ ನೀಡಿದ್ದರು. ಈ ಬಾರಿ ನಾನು ಅವರ ಜತೆಗಿದ್ದು ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಇಂದಿನಿಂದಲೇ ಪಕ್ಷ ಸಂಘಟನೆ ನಡೆಸಿ, ಪಕ್ಷದ ಗೆಲುವುಗಾಗಿ ಶ್ರಮಿಸಲಿದ್ದೇವೆ ಎಂದರು.‌ ಕಾಪು ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿದ್ದೇನೆ. ಮೂರು ಬಾರಿ ಗೆದ್ದು ಹದಿಮೂರುವರೆ ವರ್ಷಗಳ ಕಾಲ…

Read More

ತಾಲೂಕಿನ ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಮೇಲ್ಛಾವಣಿಯ ಬಿದಿರುಗಳು ಸಂಪೂರ್ಣ ಕೆಟ್ಟುಹೋಗಿ ಬೀಳುವ ಸ್ಥಿತಿಯಲ್ಲಿ ಇದ್ದಾಗ ತಾಲೂಕಿನ ಯುವ ಬಂಟರ ಸಂಘದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು. ಅವರ ನೆರವಿಗೆ ನಿಂತ ತಾಲೂಕು ಯುವ ಬಂಟರ ಸಂಘವು ಜಾಗತಿಕ ಬಂಟರ ಸಂಘ ಹಾಗೂ ಬಂಟ ದಾನಿಗಳ ಸಹಕಾರದೊಂದಿಗೆ ಇದೀಗ ಮನೆಯ ಮೇಲ್ಛಾವಣಿ ಹೊಸತಾಗಿ ನಿರ್ಮಾಣ ಮಾಡಿ ಕೊಡುವ ಮೂಲಕ ಬಂಟ ಸಮುದಾಯದ ಬಡ ಮಹಿಳೆಯ ನೆರವಿಗೆ ನಿಂತಿದೆ. ದಿನಾಂಕ 17/03/2023ರಂದು ಇದರ ಖರ್ಚಿನ ಎಲ್ಲ ಹಣವನ್ನು ಚೆಕ್ ಮೂಲಕ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷರಾದ ಎ ಹೇಮನಾಥ್ ಶೆಟ್ಟಿ ಕಾವು, ಯುವ ಬಂಟರ ಸಂಘದ ಅಧ್ಯಕ್ಷ ರಾದ ಶಶಿರಾಜ್ ರೈ ಮುಂಡಾಳಗುತ್ತು, ಸಂಯೋಜಕರಾದ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರಜನ್ ಶೆಟ್ಟಿ ಕಂಬಳತ್ತಡ್ಡ, ಜತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ ಹಾಗೂ ಕೋಶಾಧಿಕಾರಿ ಈ ಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಕೆಸಿ ಅಶೋಕ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ…

Read More

ಯುನೈಟೆಡ್‌ ಸ್ಟೇಟ್ಸ್‌ ಸರಕಾರ ನಡೆಸುವ “ಲೀಡರ್ಸ್‌ ಲೀಡ್‌ ಆನ್‌ ಡಿಮಾಂಡ್‌’ ಕಾರ್ಯಕ್ರಮಕ್ಕೆ ಉಡುಪಿಯ ಬಂಟ ಕುವರಿ ಸಂಬ್ರಾತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಭಾರತದಿಂದ ಮೂಲತಃ ಕೆಮ್ಮಣ್ಣುವಿನ ನಿವಾಸಿ ಸಂಬ್ರಾತಾ ಶೆಟ್ಟಿ, ಬೆಂಗಳೂರಿನ ಪ್ರಣಯ್‌ ಕೊಟಸ್ತಾನೆ, ಹೊಸದಿಲ್ಲಿಯ ಇಬ್ಬರು ಹಾಗೂ ಕೋಲ್ಕತದ ಒಬ್ಬರು ಆಯ್ಕೆಯಾಗಿದ್ದಾರೆ. ಸಂಬ್ರಾತಾ ಶೆಟ್ಟಿಯವರು ಪ್ರಸ್ತುತ ಫಿನಾಜಿಯಾ ಫೌಂಡೇಶನ್‌ನಲ್ಲಿ ಚೀಫ್ ಆಪರೇಟಿಂಗ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡಾ| ರೋಶನ್‌ ಶೆಟ್ಟಿ ಅವರ ಪತ್ನಿ. ಉಡುಪಿಯ ಉದ್ಯಮಿ ಸಂಪತ್‌ಕುಮಾರ್‌ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ. ಸಂಬ್ರಾತಾ ಶೆಟ್ಟಿ ಅವರು ನೇಸಲ್‌ ಸ್ಪ್ರೇಯನ್ನು ಅಭಿವೃದ್ಧಿಪಡಿಸಿ ಅದಕ್ಕಾಗಿ ಪೇಟೆಂಟ್‌ ಪಡೆದಿದ್ದರು.

Read More

ಪ್ರಸ್ತುತ ದೇಶದಲ್ಲಿ ಸರಕಾರದಿಂದ ಮಂಜೂರಾಗುವ 100 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದ್ದಾರೆ.ರೋಟರಿ ಜಿಲ್ಲೆ 3181ರ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ ಜಿಲ್ಲಾ ಸಮಾವೇಶ “ಪರಿಕಲ್ಪನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1985ರಲ್ಲಿ ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸರಕಾರದಿಂದ ಮಂಜೂರಾಗುವ ಪ್ರತೀ 1 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಇಂದಿನ ಪರಿಸ್ಥಿತಿ ಅದನ್ನೂ ಮೀರಿ ಹೋಗಿದ್ದು, ನಮ್ಮ ದುರಾಸೆ ಮಾತ್ರ ವೃದ್ಧಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಆದರೆ ನಾವು ಯಾವ ರೀತಿಯ ಅಭಿವೃದ್ಧಿ ಕಾಣುತ್ತಿದ್ದೇವೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಶ್ರೀಮಂತರಾಗಲು ಪೈಪೋಟಿ ಉಂಟಾಗಿದ್ದು, ಇದು ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಸಲಿದೆ. ದುರಾಸೆ ಎಂಬ ರೋಗ ಎಲ್ಲೆಡೆ ಹರಡುತ್ತಿದೆ. ಇದು ಎಲ್ಲಿಗೆ ತಲುಪುತ್ತದೆ ಎಂದು ಯೋಚಿಸುವಾಗ ಭಯವಾಗುತ್ತದೆ ಎಂದರು.

Read More

ಹೌದು, ದೇಶದ ಪ್ರಮುಖ ನಗರಗಳಲ್ಲಿ ಒಂದಾದ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ, ನೆಲ, ರೈಲು ಮತ್ತು ವಾಯು ಸಾರಿಗೆಗಳನ್ನು ಹೊಂದಿರುವ ರಾಜ್ಯದ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಗಳೂರಿನ ದುರಂತ ಕಥೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಂತರ ವೇಗವಾಗಿ ಮಾರ್ಪಾಡಾಗುತ್ತಿರುವ ನಗರಗಳಲ್ಲಿ ಮಂಗಳೂರೂ ಒಂದು. ಗುಣಮಟ್ಟದ ಶಿಕ್ಷಣ , ದೇಶದಲ್ಲೇ ಉತ್ತಮ ಸುಸ್ಸಜಿತ ಆಸ್ಪತ್ರೆ ಮತ್ತು ಆರೈಕೆ, ರಫ್ತು ಆಮದಿಗೆ ಪ್ರಮುಖ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ನಾನಾ ರೀತಿಯಲ್ಲಿ ಮಿಂಚುತ್ತಿರುವ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 75 ದುಸ್ಥಿತಿ ಶಾಪವಾಗಿ ತಿರುಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ , ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅತ್ಯಂತ ಆಮೆ ಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ಈ ಸಮಸ್ಯೆ ಆರಂಭವಾಗಿ ದಶಕಗಳೇ ಉರುಳಿ ಹೋಗಿವೆ,ಒಬ್ಬರ ಹಿಂದೆ ಒಬ್ಬರಂತೆ ಬಂದು ಹೋದ ಜನಪ್ರತಿನಿದಿಗಳೆಷ್ಟೋ ದೇವರೇ ಬಲ್ಲ.ಅದರೂ ಇನ್ನೂ ಸರಿಯಾದ ಪರಿಹಾರ…

Read More

ಯು.ಎ.ಇ.ಯ ರಾಜಧಾನಿ ಅಬುಧಾಬಿಯಲ್ಲಿ ಕಳೆದ 43 ವರ್ಷಗಳಿಂದ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಅಬುಧಾಬಿ ಕರ್ನಾಟಕ ಸಂಘ 44 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ ಐದರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಿತು. ಅಬುಧಾಬಿಯ ಭಾರತೀಯ ರಾಯಭಾರಿಯ ಉಪ ಮುಖ್ಯಸ್ಥ ಗೌರವಯುತ ಎ. ಅಮರನಾಥ ಮತ್ತು ಇಂಡಿಯನ್ ಸೋಶಿಯಲ್ ಸೆಂಟರ್ ನ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಾಲಜಿ ರಾಮಸ್ವಾಮಿ ಕೌನ್ಸಿಲರ್ ಇಂಡಿಯನ್ ಅಂಬಾಸಿ ಅಬುಧಾಬಿಯವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾವಗೀತೆ, ಹಾಸ್ಯ ಕವಿ ಪುಷ್ಕಲ್ ಕುಮಾರ್ ತೋನ್ಸೆ ದಂಪತಿಗಳು, ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕನ್ನಡಿಗರು ದುಬೈಯ ಸಾಧನ್ ದಾಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅನಂತ ರಾವ್, ಶ್ರೀಮತಿ ನಮಿತ ಅನಂತ ರಾವ್ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು…

Read More

ವಿದ್ಯಾಗಿರಿ( ಮೂಡುಬಿದಿರೆ): ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ ಮತ್ತು ಪೆÇೀಷಣಾ ವಿಭಾಗವು ಆಮ್‍ವೇ ಗ್ಲೋಬಲ್ ಸರ್ವೀಸ್ ಇಂಡಿಯಾದ ಜೊತೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದೆ. ಆಮ್‍ವೇ ಕಂಪನಿಯ ವಿವಿಧ ಸಂಶೋಧನಾ ಕ್ರಮಗಳನ್ನು ಬೆಂಬಲಿಸಲು ಹಾಗೂ ಪೌಷ್ಟಿಕಾಂಶ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯ ವೈಜ್ಞಾನಿಕ ಸಂಶೋಧನೆ ಕುರಿತು ವಿಶ್ವಾಸ ಹೆಚ್ಚಿಸುವ ಉದ್ದೇಶವಾಗಿದೆ. ಆಮ್‍ವೇ ಕಂಪನಿಯ ನಿರ್ದೇಶಕ ಡಾ. ಶ್ಯಾಮ ರಾಮಕೃಷ್ಣನ್ ಹಾಗೂ ಹಿರಿಯ ವ್ಯವಸ್ಥಾಪಕ ಡಾ. ಪಳನಿಯಮ್ಮನ್ ದೊರೈರಾಜ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ.ಅರ್ಚನ ಪ್ರಭಾತ್ ಇದ್ದರು.

Read More

ಪ್ರಕೃತಿಯ ಮಡಿಲಲ್ಲಿ ಒಂದಾಗಿ ಬದುಕುತ್ತಿದ್ದ ಮಾನವ ತನ್ನ ದಿನಚರಿಗಳನ್ನು ಅನೇಕ ಆಚರಣೆಗಳ ಮೂಲಕ ಪ್ರಾರಂಭಿಸುತ್ತಿದ್ದ. ನಾಗರಿಕ ಪ್ರಪಂಚದಲ್ಲಿ ಆಧುನಿಕತೆಯ ಪ್ರಭಾವ ಹೆಚ್ಚುತ್ತಾ ‌ಹಿರಿಯರು ಅನುಸರಿಸಿಕೊಂಡು ಬಂದ ರೀತಿ‌ ನೀತಿಯ ಕೆಲವು ಮೌಲ್ಯ ಮಾಯವಾಗಿ ಕೆಲವು ಸಂಪ್ರದಾಯ ಕಣ್ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಕುಂದಾಪುರದ ಆಸು ಪಾಸಿನ ಊರುಗಳ ಮನೆ ಮನೆಯಲ್ಲಿ ಜಕಣಿ ಅಂದರೆ ಕುಟುಂಬದ ಸದಸ್ಯರು ತೀರಿಕೊಂಡವರ ಆತ್ಮಗಳಿಗೆ ಊಣ ಬಡಿಸುವ ಕೌಟುಂಬಿಕ ಬಾಂಧವ್ಯದ ಸಂಕೇತ ಜಕಣಿ ಆಚರಣೆ. ಇಂದಿಗೂ ಈ‌ ಆಚರಣೆ ಜೀವಂತವಾಗಿದ್ದು, ಜನಮಾನಸದಲ್ಲಿ ಉಳಿದಕೊಂಡಿದೆ. ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ಭಯ – ಭಕ್ತಿಯಿಂದ ನಂಬಿಕೆಯೊಂದಿಗೆ ಪ್ರತಿವರ್ಷ ಬ್ಯಾಸಿ ತಿಂಗಳಲ್ಲಿ ಆಚರಿಸುವ ಜಕಣಿ, ಅಳಿಯ ಸಂತಾನ ವ್ಯವಸ್ಥೆಯ ಮಾತೃಪ್ರಧಾನ ಸಮಾಜದಲ್ಲಿ ಮುಖ್ಯವಾಗಿ ಆಚರಣೆಯಲ್ಲಿದೆ. ಆಚರಣೆಯ ಕ್ರಮ- ಜಕಣಿಯ ದಿನ ಸಂಜೆ ಮನೆಯ ಗಂಡಸರು, ಹಾಗೂ ಗಂಡು ಮಕ್ಕಳು ಮನೆಯಿಂದ ಸ್ವಲ್ಪ ದೂರ ನಿರ್ದಿಷ್ಟ ಕಾಡು ಪ್ರದೇಶದಲ್ಲಿ ಇರುವ ಅವರವರ ಕುಟುಂಬದ ಜಕಣಿಕಲ್ಲು, ಭೂತದ ಕಲ್ಲು ಅಥವಾ ಗಡಿಕಲ್ಲುಗಳಿಗೆ ಮನೆಯಿಂದ…

Read More

ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಅವರ ಕಿರಿಯ ಪುತ್ರಿ ಪಡುವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಬಹರೈನ್ ನಲ್ಲಿ ನೆಲೆಸಿದ್ದ ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ (46) ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದಲ್ಲಿ ಜನಿಸಿದ ಆಸ್ತಿಕಾ ರೈ ಪದಡ್ಕ ವಿಶ್ವಕಲಾನಿಕೇತನದಲ್ಲಿ ಕಲಿತು ನೃತ್ಯ, ಯಕ್ಷಗಾನದಲ್ಲಿ ಪಳಗಿದ್ದರು. ಭರತನಾಟ್ಯ ಕಲಾವಿದೆಯಾಗಿ, ಯಕ್ಷಗಾನ ಕಲಾವಿದೆಯಾಗಿ ಬಹರೈನ್ ದೇಶದಲ್ಲಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದಿದ್ದರು. ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವ ಮೋಕ್ಷದ ಕೃಷ್ಣನಾಗಿ, ಕೋಟಿ ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿಯಾಗಿ ಮೊದಲಾದಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದರು. ಪುತ್ತೂರಿನಲ್ಲಿ ಇರುವಾಗ ತಂದೆ ವಿದ್ವಾನ್ ವಿಶ್ವನಾಥ ರೈ ಹಾಗೂ ತಾಯಿ ವಿದುಷಿ ನಯನಾ ವಿ. ರೈ ಅವರೊಂದಿಗೆ ನೃತ್ಯ ರಂಗದಲ್ಲಿ ಗುರುತಿಸಿಕೊಂಡಿದ್ದರು.

Read More

ವಸಂತ ಋತುವಿನ ಆಗಮನವನ್ನು ಸಂಭ್ರಮೋಲ್ಲಾಸದ ಸಂಕೇತವಾಗಿ ಸ್ವಾಗತಿಸುತ್ತಾ ವಿಶಿಷ್ಟ ರೀತಿಯಲ್ಲಿ ಕುಡುಬಿ ಜನಾಂಗ ಆಚರಿಸುವ ವಾರ್ಷಿಕ ವೈಶಿಷ್ಟ್ಯ ಪೂರ್ಣವಾದ ಹೋಳಿ ಉತ್ಸವ, ಹೋಳಿ ಹಬ್ಬ ಅಥವಾ ಹೋಳಿ ಕುಣಿತ. ಇಂದಿಗೂ ಸಂಪ್ರದಾಯ ಬದ್ದವಾಗಿ‌ ಮೇಳೈಸುತ್ತಾ ತಮ್ಮ ಮೂಲ ಸಂಸ್ಕೃತಿ ಹಾಗೂ ಏಕತೆಯನ್ನು ‌ಗಟ್ಟಿ‌ಗೊಳಿಸುವ ಭಾವೈಕ್ಯದ ಹೋಳಿ ಆಚರಣೆಯನ್ನು ಚಾಚು ತಪ್ಪದೆ ಭಯ ಭಕ್ತಿಯಿಂದ ಕುಡುಬಿ ಸಮಾಜದ ಜನರು ಆಚರಿಸಿಕೊಂಡು‌ ಬರುತ್ತಿದ್ದಾರೆ. ಗೋವಾದಿಂದ ವಲಸೆ‌ ಬಂದು ಕರಾವಳಿ ಕರ್ನಾಟಕದ ಉಡುಪಿ, ಕುಂದಾಪುರ, ಕಾರ್ಕಳ, ಮಂದಾರ್ತಿ, ಶಿರಿಯಾರ, ಹಿಲಿಯಾಣ, ಗೋಳಿಅಂಗಡಿ, ಹಾಲಾಡಿ, ಹೆಬ್ರಿ, ಮುದ್ರಾಡಿ ಹಾಗೂ ಆಸುಪಾಸಿನ ಊರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಡುಬಿಯವರು ನೆಲೆಸಿದ್ದಾರೆ. ಐದು ದಿನ ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆ ನಡೆಯಲಿದ್ದು ಕುಡುಬಿ ಸಮುದಾಯದವರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಹೋಳಿ ಕುಣಿತದಲ್ಲಿ ಪಾಲ್ಗೋಳ್ಳಲು ಸಿದ್ದತೆ ನಡೆಸುತ್ತಾರೆ. ಈ ಹಬ್ಬ ಪಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣುಮೆಯವರೆಗೆ ಇರುತ್ತದೆ. ಕುಡುಬಿಯವರಲ್ಲಿ ಕೂಡುಕಟ್ಟು ಅಥವಾ ಕೂಡಳಿಕೆ ಎಂಬ ಸಂಘಟನೆಯಿದ್ದು. ಕೂಡುಕಟ್ಟಿಗೆ…

Read More