Author: admin
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದ ಹೊಸ ಆಡಳಿತ ಮಂಡಳಿ ಏಪ್ರಿಲ್ 2 ರಂದು ಮಲಬಾರ್ ದೇವಸ್ವಂ ಬೋರ್ಡಿನ ಅಧಿಕಾರಿ ರಘು ಹಾಗೂ ಊರ ಹತ್ತು ಸಮಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮತ್ತು ಕಾನೂನು ಬದ್ಧವಾಗಿ ನೂತನ ಸಮಿತಿ ಅಧಿಕಾರ ವಹಿಸಿಕೊಂಡಿತು. ಮುಂದಿನ ಮೊಕ್ತೇಸರರಾಗಿ ಉದ್ಯಮಿ, ಸಮಾಜಸೇವಕ ತಾರಾನಾಥ ರೈ ಪಡ್ಡoಬೈಲು ಗುತ್ತು, ಟ್ರಸ್ಟಿಗಳಾಗಿ ರಘುರಾಮ ರೈ ಕಟ್ಟತ್ತಾಡೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ ಆಯ್ಕೆಯಾದರು.
ಬ್ಯಾಂಕಿಂಗ್ ಉದ್ಯಮದ ಉಗಮ ಸ್ಥಾನ, ತೊಟ್ಟಿಲು, ತವರೂರು ಎಂದೇ ಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ದಿಗ್ಗಜರುಗಳಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಅವಿಸ್ಮರಣೀಯ. ಒಬ್ಬ ವ್ಯಕ್ತಿ ಸಮಾಜಕ್ಕೆ ಸಲ್ಲಿಸಿದ ಮಹತ್ವದ ಸೇವೆಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿಯೂ ಇದೊಂದು ಪ್ರಬುದ್ಧ ಸಿದ್ಧಾಂತವೆಂದರೂ ತಪ್ಪಾಗಲಾರದು. ಅವರ ಜನ್ಮ ದಿನ ಇರುವುದು ಏಪ್ರಿಲ್ ತಿಂಗಳಲ್ಲಿ. (ಎಪ್ರಿಲ್ 30) ಅವರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ. 1962 ರಿಂದ 1979ರವರೆಗೆ ವಿಜಯ ಬ್ಯಾಂಕ್‌ನ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿ ಬ್ಯಾಂಕ್‌ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್ ಚೇತನ. ಇಂದು ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನವಾದರೂ ಸುಂದರಾಮ ಶೆಟ್ಟಿ ಹೆಸರು ಬ್ಯಾಂಕ್‌ನೊಂದಿಗೆ ಅಚ್ಚಳಿಯದೇ ಉಳಿದಿದೆ. ರಾಜಮರ್ಜಿಯ ಸಮೃದ್ಧ ಮನೆತನದಲ್ಲಿ ಹುಟ್ಟಿದರೂ ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯ ಸುಂದರರಾಮ ಶೆಟ್ಟಿ ಅವರಿಗಿತ್ತು. ಅವರಿಗೆ ಬ್ಯಾಂಕ್‌ನ ಲಾಭವನ್ನು ಹೆಚ್ಚಿಸುವುದೊಂದೇ ಉದ್ಯಮದ ಉದ್ದೇಶವಾಗಿರಲಿಲ್ಲ. ಉದ್ಯಮವು ಸಮಾಜದ ಅನೇಕರಿಗೆ ಉದ್ಯೋಗಾವಕಾಶಗಳನ್ನು ನೀಡುವುದರೊಂದಿಗೆ…
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್ ಆರ್. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್ ಹಾಲ್ಕಲ್ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು. ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ…
ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ 7 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮನೋರಂಜನೆಯಂಗವಾಗಿ “ಸುಧನ್ವಾರ್ಜುನ “ಯಕ್ಷಗಾನ ಪ್ರದರ್ಶನವು ಫೆ.12 ರಂದು ರವಿವಾರ ಸಂಜೆ ಗಂಟೆ 3 ರಿಂದ ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ನ ದಿ . ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಡ್ತಲ, ಬಂಟ್ಸ್ ಅಸೋಸಿಯೇಷನ್ ಪುಣೆ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ತುಳುಕೂಟದ ಗೌರವಾಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು, ಶ್ರೀ ಗುರುದೇವಾ ಸೇವಾ ಬಳಗದ…
ಜಗತ್ತಿನಲ್ಲೇ ಪಶ್ಚಿಮ ಘಟ್ಟಗಳೆಂದರೆ ಅದು ಜೀವವೈವಿಧ್ಯದ ಆಗರ. ಇಲ್ಲಿರುವ ಜೀವಸಂಕುಲಗಳ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ಇಲ್ಲಿನ ಸಸ್ಯ ಸಂಕುಲಗಳ ವೈವಿಧ್ಯತೆ ಕೂಡ. ಪಶ್ಚಿಮಘಟ್ಟಗಳ ದಟ್ಟವಾದ ಶೋಲಾ ಅರಣ್ಯಗಳ ಮಧ್ಯೆ ಮಧ್ಯೆ ಕಂಡುಬರುವ Montane grassland ಅನ್ನುವ ವಿಶಿಷ್ಟ ಬಗೆಯ ಹುಲ್ಲುಗಾವಲುಗಳ ಈ ವ್ಯವಸ್ಥೆ ತುಂಬಾ ಅಪರೂಪದ ಭೂಲಕ್ಷಣವಾಗಿದೆ. ದಟ್ಟಾರಣ್ಯದ ಮಧ್ಯೆ ಅಲ್ಲಲ್ಲಿ ಹುಲ್ಲುಗಾವಲುಗಳು ಕಂಡುಬರುವುದರಿಂದ ಇದನ್ನು ಭೂ ವಿಜ್ಞಾನಿಗಳು ಶೋಲಾ ಮೊಸಾಯಿಕ್ ಅಂತ ಕರೆಯುತ್ತಾರೆ. ಬಹುಶಃ ನಮ್ಮ ಕೊಯ್ಲದ ಸುಮಾರು ಏಳುನೂರು ಎಕರೆಯಷ್ಟು ವಿಶಾಲವಾದ ಈ ಹುಲ್ಲುಗಾವಲು ಕೂಡ ಪಶ್ಚಿಮ ಘಟ್ಟದ ಈ ಶೋಲಾ ಮೊಸಾಯಿಕ್ ನ ಭಾಗವೇ. ಕೊಯ್ಲದ ಈ ಹುಲ್ಲುಗಾವಲೀಗ ನಾಗರಿಕ ಸಮಾಜದ ಮಧ್ಯೆಯೇ ಇರುವುದರಿಂದ ಮತ್ತು ಸರ್ವಋತು ರಸ್ತೆಗಳು, ವಿದ್ಯುಚ್ಛಕ್ತಿ ಇತ್ಯಾದಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇರುವ ಸ್ಥಳವಾದುದರಿಂದ ಅಧ್ಯಯನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಜಾಗವಾಗಿದೆ. ಇಲ್ಲಿ ಈಗ ಪಶುವೈದ್ಯಕೀಯ ಕಾಲೇಜು ಹೇಗೂ ಸ್ಥಾಪನೆಯಾಗಿರುವುದರಿಂದ ಇದನ್ನೊಂದು ಉನ್ನತ ಅಧ್ಯಯನ ಕೇಂದ್ರವನ್ನಾಗಿ, ತೋಟಗಾರಿಕಾ,…
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಜಗತ್ತಿನಾಧ್ಯಂತ ಸದಸ್ಯರನ್ನೊಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ 2022-2025 ರ ಸಾಲಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಅಜಿತ್ ಕುಮಾರ್ ರೈ ಬಂಟರ ಮಾತೃ ಸಂಘಕ್ಕೆ ಸತತವಾಗಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುತ್ತಾರೆ. ಮುಂದಿನ ದಿನಗಳಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಭಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈ ಗೊಳ್ಳುವುದು ಹಾಗೂ ಸಮಾಜದ ಸವೋತೊಮುಖ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಮಾಲಾಡಿ ಅಜಿತ್ ಕುಮಾರ್ ರೈ ನುಡಿದರು. ಮುಖ್ಯ ಚುನಾವಣಾಧಿಕಾರಿ ವಕೀಲರಾದ ಬಿ ಗುರುಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ ವಕೀಲರಾದ ಬಿಪಿನ್ ರೈ, ಹಾಗೂ ಚುನಾವಣಾಧಿಕಾರಿ ದಿವಾಕರ ಸಾಮಾನಿ ಚೇಳಾರ್ ಗುತ್ತು ಉಪಸ್ಥಿತರಿದ್ದರು
ಪುತ್ತೂರಿನ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ ಚಿಲ್ಮೆತ್ತಾರು (85) ಮಂಗಳೂರಿನಲ್ಲಿ ಮಾ 27 ರಂದು ಇಹಲೋಕ ತ್ಯಜಿಸಿದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪುತ್ರಿಯರಾದ ವಿಜಯ ಹಾಗು ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ| ಮಂಜುನಾಥ್ ರೈ ಹಾಗೂ ಅಪಾರ ಬಂಧು ಮಿತ್ರರೂ ಅಭಿಮಾನಿಗಳನ್ನು ಆಗಲಿದ್ದಾರೆ. ಕೋಚಣ್ಣ ರೈಯವರ ಪತ್ನಿ ದಿ. ಮುಂಡಾಲ ಗುತ್ತು ಸುಗುಣ ರೈ. ಕೋಚಣ್ಣ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಬಿರುದು ನೀಡಿ ಗೌರವಿಸಿದೆ. ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಹವಾದ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಹೆಗ್ಗಳಿಕೆ ಕೋಚಣ್ಣ ರೈ ಅವರದು, ಬೆಳ್ತಂಗಡಿಯಲ್ಲಿ ಸಾವಿರಾರು ದೀನ ದಲಿತರಿಗೆ ಅತ್ಯಂತ ಸುಲಭವಾಗಿ ಹಾಗೂ ಸುಲಲಿತವಾಗಿ ನಿವೇಶನದ ಹಕ್ಕು ಪತ್ರವನ್ನು ಒದಗಿಸಿದವರು ಇವರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕ್ರೆ ಜಾಗವನ್ನು…
ಸಿನಿಮಾ ನಿರ್ಮಾಪಕರು, ಹೋಟೆಲ್ ಉದ್ಯಮಿಗಳು, ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿರುವಂತಹ ಉಪೇಂದ್ರ ಆರ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ನಾಟಕ ರಂಗಭೂಮಿ ಕಂಡ ಮಹಾನ್ ನಿರ್ದೇಶಕ, ರಂಗಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬಯಿ ಮಹಾನಗರದಲ್ಲಿ ಸಂಪಾದಿಸಿದ ಜನಪ್ರಿಯತೆ, ಅವರ ನಿರ್ದೇಶನ ಪ್ರತಿಭೆ ಮರೆಯಲಾಗದು. ತುಳು ರಂಗಭೂಮಿ ಹಾಗೂ ಕೆಲವು ಅಪರೂಪದ ಪಾತ್ರ ಚಿತ್ರಣಗಳ ಕನ್ನಡ ನಾಟಕ ನಿರ್ದೇಶನಗಳ ಮೂಲಕ ರಂಗಭೂಮಿಯ ದೈತ್ಯ ಪ್ರತಿಭೆ ಎಂದು ಪ್ರಶಂಸೆ ಪಡೆದವರು. ಇತ್ತೀಚೆಗೆ ತನ್ನ ಹುಟ್ಟೂರಲ್ಲೇ ಇದ್ದುಕೊಂಡು ಅಲ್ಲಿಯೂ ಅನೇಕ ನಾಟಕ ತಂಡಗಳಿಗೆ ನಿರ್ದೇಶಕರಾಗಿ ದುಡಿಯುತ್ತಾ ವ್ಯಾಪಕ ಪ್ರಸಿದ್ಧಿ ಪಡೆದಿರುತ್ತಾರೆ. ಶ್ರೀಯುತರ ನಿರ್ದೇಶನದಲ್ಲಿ ಪಾತ್ರಗಳು ಜೀವ ತಳೆದು ಭಾವತುಂಬಿ ಮಾತಾಡುತ್ತವೆ. ಹೊಸ ಕಲಾವಿದನನ್ನು ತನ್ನ ನಿರ್ದೇಶನ ಸಾಮರ್ಥ್ಯದಿಂದ ಪ್ರಬುದ್ಧತೆಯ ಅಭಿನಯ ಪಡೆದು ಕಲಾವಿದರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಅವರನ್ನು ನಾಟಕ ಗುರು ಎಂದೇ ಸಂಬೋಧಿಸುತ್ತಾರೆ. ಹುಟ್ಟುತ್ತಲೇ ಒಬ್ಬಾತ ಪರಿಣತ ಕಲಾವಿದನಾಗಿರುವುದಿಲ್ಲ. ಅವನನ್ನು ತಿದ್ದಿ ತೀಡಿ ಒಬ್ಬ ಪರಿಪೂರ್ಣ ಕಲಾವಿದನನ್ನಾಗಿ ರೂಪಿಸಬೇಕಾಗುತ್ತದೆ. ಶಿಲ್ಪಿಯೊಬ್ಬ ಕಾಟುಶಿಲೆಯನ್ನು ಆಕರ್ಷಕ ಮೂರುತಿಯನ್ನಾಗಿ ರೂಪಿಸುವ ರೀತಿ ನಿರ್ದೇಶಕನಲ್ಲೂ ಅಂಥಾ ಮಂತ್ರ ಸ್ಪರ್ಷ ಇರಬೇಕಾಗುತ್ತದೆ.…