Author: admin
ಮಲಗಿರುವಾಗ ಮತ್ತು ಹಠಾತ್ತನೆ ಎದ್ದು ನಿಂತಾಗ ಅಥವಾ ಫಕ್ಕನೆ ತಲೆ ಮೇಲೆತ್ತಿ ನೋಡಿದಾಗ ಯಾ ಬಾಗಿದಾಗ ತಲೆ ತಿರುಗಿದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರುತ್ತದೆ. ಪ್ರತೀ ಬಾರಿಯೂ ಹೀಗಾದರೆ ಪರಿಹಾರ ಏನು? ಸಮತೋಲನ ಕಳೆದುಕೊಂಡ ಹಾಗೆ, ತಲೆ ಹಗುರವಾದ ಹಾಗೆ ಅಥವಾ ಇಡೀ ಕೋಣೆ ನಿಮ್ಮ ಸುತ್ತ ಸುತ್ತುತ್ತಿರುವ ಹಾಗೆ ಅನುಭವವಾದರೆ ಏನು ಮಾಡಬೇಕು? ಈ ಲಕ್ಷಣಗಳೆಲ್ಲ ಹಠಾತ್ತನೆ ಅನುಭವಕ್ಕೆ ಬಂದಾಗ ನೂರು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ. ಏಕೆ ಹೀಗಾಗುತ್ತದೆ? ತಲೆ ತಿರುಗುವಿಕೆಯು ವರ್ಟಿಗೊ, ಮೂರ್ಛೆ ತಪ್ಪುವುದು, ದೈಹಿಕ ಸಮತೋಲನ ಕಡಿಮೆಯಾಗಿರುವುದು ಅಥವಾ ಮೂರ್ಛೆ ರೋಗ/ ಸೆಳವಿನಿಂದ ಆಗಿರಬಹುದು. ವರ್ಟಿಗೊ ಎಂದರೆ ತಲೆ ತಿರುಗುವಿಕೆಯ ಒಂದು ವಿಧವಾಗಿದ್ದು, ಇಡೀ ಜಗತ್ತು ವೇಗವಾಗಿ ಸುತ್ತುತ್ತಿರುವ ಅನುಭವ ಉಂಟಾಗುತ್ತದೆ. ಇದರ ಇನ್ನಿತರ ಲಕ್ಷಣಗಳಲ್ಲಿ ದೇಹಭಂಗಿಗಳಲ್ಲಿ ಅಸ್ಥಿರತೆ, ಚಳಿ ಹಿಡಿಯುವುದು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಸೇರಿರುತ್ತವೆ. ಈ ಲಕ್ಷಣಗಳು ಕೆಲವು ಸೆಕೆಂಡುಗಳಿಂದ ತೊಡಗಿ ಕೆಲವು ದಿನಗಳ ವರೆಗೆ ಇರಬಹುದು ಮತ್ತು ಚಲಿಸಿದಾಗ ಇನ್ನಷ್ಟು ಉಲ್ಬಣಗೊಳ್ಳಬಹುದು.…
ಬಂಟರ ಸಂಘ (ರಿ) ಸುರತ್ಕಲ್ ಇದರ ನಾಮ ನಿರ್ದೇಶಿತ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ಪಾಂಡು ಎಲ್ ಶೆಟ್ಟಿ ಮುಂಚೂರು ಇವರನ್ನು ಸುರತ್ಕಲ್ ಬಂಟರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಅವಿರೋಧವಾಗಿ ನೇಮಕ ಮಾಡಲಾಯಿತು. ಹೊರನಾಡು ಕ್ಷೇತ್ರ ವಿಭಾಗದಲ್ಲಿ ಹೊಟೇಲ್ ಉದ್ಯಮಿ, ಸಮಾಜ ಸೇವಕ ಪಾಂಡು ಎಲ್ ಶೆಟ್ಟಿ ಮುಂಚೂರು ಅವರನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಗಜರಾಜ ಅಂದಾಕ್ಷಣ ನೆನಪಿಗೆ ಬರುವುದು ಮೈಸೂರು ದಸರಾ ಹಾಗೂ ಜಂಬೂಸವಾರಿ. ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿ ಪರಂಪರೆಯ ಪ್ರದರ್ಶನಕ್ಕೆ ಸಾಕ್ಷಿಯಾಗಿ 1999 ರಿಂದ 2011 ರ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ 750 ಕೆ. ಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಕೀರ್ತಿ ಗಜರಾಜ ಬಲರಾಮನದ್ದು. ಕೆಲ ದಿನಗಳ ಹಿಂದೆ 67 ವರ್ಷ ಪ್ರಾಯದ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ ಮೈಸೂರಿನ ಹುಣಸೂರು ಭೀಮನ ಕಟ್ಟೆ ಆನೆ ಶಿಬಿರದಲ್ಲಿ ಮೃತ ಪಟ್ಟ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವು ಹಾಗೂ ನಿರಾಶೆ ಆಯಿತು. ಹಲವು ವರ್ಷಗಳ ಹಿಂದೆ ಮೈಸೂರು ಪ್ರವಾಸದಲ್ಲಿ ನಾವು ಇದೆ ಬಲರಾಮನ್ನೊಂದಿಗೆ ಕಳೆದ ಸಮಯ ಪುನಃ ನೆನಪಿಗೆ ಬಂತು. ಅಷ್ಟು ಶಾಂತ ಸ್ವಭಾವದವ ಈತ ಎಂಬ ಅರಿವಿಲ್ಲದೆ ಕೆಲ ಹೊತ್ತು ದೂರದಿಂದಲೇ ಮಾವುತರೊಂದಿಗೆ ಮಾತಾಡುತ್ತಾ ಆನೆಗೆ ನೀಡಲು ತಂದ ಆಹಾರವನ್ನು ಮಾವುತರ…
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ಪ್ರೇರಣೆಯಂತೆ ಗೋವುಗಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಜನರು ಆಶೀರ್ವಾದ ನೀಡಿ ಶಾಸಕನನ್ನಾಗಿ ಚುನಾಯಿಸಿದರೆ ಕಾಪು ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಕಳತ್ತೂರು, ಮುದರಂಗಡಿ, ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಢೆ ಮನೆ ಮನೆ ಭೇಟಿ, ಕಾರ್ಯಕರ್ತರ ಜತೆಗೆ ಸಮಾಲೋಚನೆ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ತಾಯಿಯ ಪ್ರೇರಣೆಯೇ ಪೂರಕವಾಗಿದೆ. ಅವರ ಇಚ್ಛೆಯಂತೆ ನಾವು ಮನೆಯಲ್ಲೇ ಗೋವುಗಳನ್ನು ಸಾಕುತ್ತಿದ್ದು ಗುರ್ಮೆ ಗೋ ವಿಹಾರಧಾಮ ಸ್ಥಾಪಿಸಿ ಅನಾಥ ಗೋವುಗಳೂ ಸೇರಿದಂತೆ ನೂರಾರು ಗೋವುಗಳಿಗೆ ರಕ್ಷಣೆ ನೀಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುವುಕ್ಕಾಗಿ ಸುಸಜ್ಜಿತ ಗೋ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ…
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಹನುಮಾನ್ ಜಯಂತ್ಯುತ್ಸವ ಸ್ವಾರ್ಗೇಟ್ನ ಮಹಾರಾಷ್ಟ್ರ ಛೇಂಬರ್ ಆಫ್ ಕಾಮರ್ಸ್ ಇದರ ಲಕಾಕಿ ಹಾಲ್ನಲ್ಲಿ ನಡೆಯಿತು. ಪುಣೆ ಬಳಗದ ಗೌರವಾಧ್ಯಕ್ಷ ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಅವರು ಹನುಮಾನ್ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು, ಬಳಗದ ಸದಸ್ಯರಿಂದ ದಾಮೋದರ ಬಂಗೇರ ಅವರ ಮಾರ್ಗದರ್ಶನದಲ್ಲಿ ಬಳಗದ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು. ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲೀಸ್ ಅನ್ನು ಪಠಿಸಿದರು. ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ, ವೀಣಾ ಪಿ. ಶೆಟ್ಟಿ ದಂಪತಿ, ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಹೆಗ್ಡೆ, ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ…
ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು. ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ…
ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ಹೌಸ್ನಲ್ಲಿ ವಿವಾಹವಾದರು. ಅಥಿಯಾ ಮತ್ತು ಕೆಎಲ್ ರಾಹುಲ್ ಅವರು ಕೇವಲ 100 ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇವರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಿದ್ದರು. ಮದುವೆಯ ನಂತರ, ಕೆಎಲ್ ಮತ್ತು ಅಥಿಯಾ ಅವರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಅಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ, ”ಕೆಎಲ್ ರಾಹುಲ್ ನನ್ನ ಅಳಿಯನಲ್ಲ, ಅವರ ಮಗ. ಸಂಬಂಧದಿಂದ ನಾನು ಅವರ ಮಾವ ಆಗಿದ್ದರೂ, ಸಹ ಅವರು ನನ್ನ ಮಗನೇ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ ಐಪಿಎಲ್ ನಂತರ ನಡೆಯಲಿದೆ. ಮದುವೆಯ ನಂತರ, ಸುನೀಲ್ ಶೆಟ್ಟಿ ಹಾಗೂ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೋಸ್ ನೀಡಿದರು. ಅಲ್ಲದೆ ಸಿಹಿ…
ನವೆಂಬರ್ 24,25,26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೊಟ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆಗಿರುವ ಅಶೋಕ್ ರೈ ಅವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ಮಾಡಿದರು. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನೇತೃತ್ವದ ನಿಯೋಗ ಕಂಬಳದ ಬಗ್ಗೆ ಪೂರ್ಣ ವಿವರಣೆ ನೀಡಿದರು. ನಿಯೋಗದಲ್ಲಿ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ ದರ್ಬೆ, ಅಜಿತ್ ಹೆಗ್ಡೆ, ತುಳು ಕೂಟದ ಅಧ್ಯಕ್ಷರಾದ ಸುಂದರ್ ರಾಜ್ ರೈ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸೇರಿದಂತೆ ತುಳು ಕೂಟ ಹಾಗೂ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಶುದ್ಧ ಭಾರತೀಯ ಸಾಂಪ್ರದಾಯಿಕ ಉಡುಗೆ ಧೋತಿ ಎಂದರೆ ಹಳೆಯ ಕಾಲದ ಧಿರಿಸು ಎಂದು ಮೂಗು ಮುರಿಯುತ್ತಿರುವ ಕಾಲ ಬದಲಾಗಿದೆ. ಇತ್ತೀಚೆಗಂತು ಧೋತಿ ಪ್ಯಾಶನ್ ಲೋಕದಲ್ಲಿ ಮಿಂಚುತ್ತಿದ್ದು ಸಂಪ್ರದಾಯ ಬದ್ಧ ಉಡುಗೆಯಾದರೂ ಮಾಡರ್ನ್ ಲುಕ್ ಪಡೆದುಕೊಂಡಿದೆ. ಧೋತಿ ಸಂಪ್ರದಾಯದ ಚೌಕಟ್ಟಿನೊಳಗೆ ನಲಿಯುತ್ತಿರುವ ಕಾಲದಲ್ಲೇ ಪ್ಯಾಶನ್ ಜಗತ್ತಿಗೂ ಲಗ್ಗೆ ಇಟ್ಟಿದ್ದು ವಿಶೇಷ. ಚಿಣ್ಣರಿಂದ ವೃದ್ದರವರೆಗೂ ಎಲ್ಲರೂ ಇಷ್ಟ ಪಡುವ ಧೋತಿ ಆಧುನಿಕತೆಯ ಅಟ್ಟಹಾಸದಲ್ಲಿ ನಲುಗಿ ಹೋಗದೆ ದಿನೆ ದಿನೆ ಹೆಚ್ಚು ಮಾನ್ಯತೆ ಪಡೆಯುತ್ತಿರುವುದು ಆಶ್ಚರ್ಯವಾದರೂ ವಾಸ್ತವ. ಪ್ಯಾಶನ ಪ್ರಿಯರ ಅಭಿರುಚಿಗೆ ಒಪ್ಪುವಂತಹ ಡಿಸೈನ್ ಬಟ್ಟೆಗಳು ಯಶಸ್ಸು ಪಡೆಯುತ್ತಿದ್ದರೂ ಈ ಎಲ್ಲವುದರ ನಡುವೆಯು ಸರಳತೆ, ಸ್ವಚ್ಛತೆ, ಶಿಸ್ತು, ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಗರಿಗೆದರಿ ಆದಿಯಿಂದಲೂ ತನ್ನ ಸ್ಥಾನ ಉಳಿಸಿಕೊಂಡ ಧೋತಿ ಅಪಾರ ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಂತೂ ಪ್ಯಾಶನ್ ಲೋಕದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹರಿದಾಡಿದರೂ ಧೋತಿ ಬಗ್ಗೆ ಜನರಿಗೆ ಹೊಸ ಆಕರ್ಷಣೆ ಹಾಗೂ ಆಸಕ್ತಿ ಮೂಡಿರುವುದು ಈ ಉದ್ಯಮದ ಪ್ರಗತಿಯ ಗುಟ್ಟು. …
ಹಿರಿಯಡ್ಕ ಬಂಟರ ಸಂಘ(ರಿ.) ಹಿರಿಯಡ್ಕ ಇದರ ವಾರ್ಷಿಕ ಸಮ್ಮಿಲನ ಸಮಾರಂಭವು ಹಿರಿಯಡ್ಕದಲ್ಲಿ ನಿತೀಶ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಮಣಿ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಮಾಜಿ ಅಧ್ಯಕ್ಷರೂ ನಿವೃತ್ತ ಮುಖ್ಯೋಪಧ್ಯಾಯರೂ ಆಗಿರುವ ಕುದಿ ವಸಂತ ಶೆಟ್ಟಿ ಉದ್ಘಾಟಕರ ವ್ಯಕ್ತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯಡ್ಕದಲ್ಲಿ ಸಾರ್ಥಕ 45 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿರುವ ದೇವದಾಸ್ ಕಾಮತ್ ಸುಧಾ ದೇವದಾಸ್ ಕಾಮತ್, ಹಾಗೂ ಉದಯೋನ್ಮಖ ಲೇಖಕಿ ನೀತಾ ರಾಜೇಶ್ ಶೆಟ್ಟಿ, ಕ್ರೀಡಾ ಸಾಧಕಿ ಸ್ವಸ್ತಿ ಶೆಟ್ಟಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಸಂಘದ ಪ್ರಥಮ ಅಧ್ಯಕ್ಷರಾದ ವಿಶ್ವನಾಥ ರೈ ಮಾತನಾಡಿದರು, ಸಂಘದ ಉಪಾಧ್ಯಕ್ಷರಾದ ರವೀಂದ್ರನಾಥ್ ಶೆಟ್ಟಿ ಸ್ವಾಗತಿಸಿದರು. ಸಂಜನಾ ರೈ ಹಾಗೂ ಸುರೇಶ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂದ್ಯಾ ಶೆಟ್ಟಿ ವಂದಿಸಿದರು. ನೀತಾ ರಾಜೇಶ್ ಶೆಟ್ಟಿ…