Author: admin
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್ ಆರ್. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್ ಹಾಲ್ಕಲ್ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಂತಾರ…ಕಾಂತಾರ…ಕಾಂತಾರ…ಎಲ್ಲರ ಬಾಯಲ್ಲೂ ಈಗ ಈ ಸಿನಿಮಾದ್ದೇ ಸುದ್ದಿ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಆಭಿನಯಿಸಿರುವ ಈ ಕನ್ನಡ ಚಲನಚಿತ್ರ ಇತ್ತೀಚೆಗೆ ಬೆಳ್ಳಿ ತೆರೆಗೆ ಅಪ್ಪಳಿಸಿದ ವೇಗಕ್ಕೆ ಗಲ್ಲಾಪೆಟ್ಟಿಗೆ ಅಕ್ಷರಶಃ ಉಡಾಯಿಸಲ್ಪಟ್ಟಿದೆ! ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನಗಳನ್ನು ಕಂಡು ಕೋಟಿ-ಕೋಟಿ ರೂ.ಬಾಚುತ್ತಿರುವ ಈ ಚಿತ್ರದ ಯಶಸ್ಸು ಕಂಡು ಇಡೀ ಸ್ಯಾಂಡಲ್ವುಡ್ ಬೆಕ್ಕಸ ಬೆರಗಾಗಿದೆ! ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕೃತಿ ಎನಿಸಿರುವ ದೈವಾರಾಧನೆಯ ಜೊತೆಗೆ ಜಮೀನ್ದಾರಿ ವ್ಯವಸ್ಥೆ, ಅರಣ್ಯ ಒತ್ತುವರಿ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಆಧರಿಸಿ ನಿರ್ಮಿಸಲಾದ ವಿಭಿನ್ನ ಕಥಾವಸ್ತುವುಳ್ಳ ಈ ಚಲನಚಿತ್ರ ವೀಕ್ಷಕರನ್ನು ಮೋಡಿ ಮಾಡುತ್ತಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಪ್ತ ಸಂಬಂಧ ಚಿತ್ರದುದ್ದಕ್ಕೂ ಅನಾವರಣಗೊಂಡಿದೆ. ಆಸ್ತಿಕರು ಶ್ರದ್ಧಾ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೈವದ ಕಾರಣಿಕವನ್ನು ಜಗದಗಲ ಪಸರಿಸುತ್ತಿರುವ ಈ ಚಲನಚಿತ್ರ ನಾಸ್ತಿಕರನ್ನೂ ಒಮ್ಮೆಗೆ ನಿಬ್ಬೆರಗಾಗಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಕಂಬಳ ಓಟಗಾರನಾಗಿ ಹಾಗೂ ದೈವ ನರ್ತಕನಾಗಿ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತನ್ನ ಪಾತ್ರದೊಳಗೆ…
ಅನ್ಯಾಯ್ ನಿವಾರಣ್ ನಿರ್ಮೂಲನ ಸೇವಾ ಸಮಿತಿ ಮತ್ತು ಗೋ ರಕ್ಷಾ ಫೌಂಡೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹನ್ಮುಂಬಯಿ ಮಲಬಾರ್ಹಿಲ್ ಅಲ್ಲಿನ ಮಹಾರಾಷ್ಟ್ರ ರಾಜಭವನದಲ್ಲಿ ಜನಹಿತ ಅನುಪಮ ಸೇವೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಪ್ರದಾನ ಕಾರ್ಯಕ್ರಮ ಇಂದಿಲ್ಲಿ ಸೋಮವಾರ ಆಯೋಜಿಸಿತ್ತು. ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದ ಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೆಸರಾಂತ ತುಳು ಕನ್ನಡಿಗ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಇವರಿಗೆ ವಿಶೇಷವಾಗಿ ಕೊರೊನಾ ಸಂಧಿಗ್ಧ ಕಾಲದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಮತ್ತು ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚೇತನ, ದೇಶ ಸೇವೆ, ಸಮಾಜ ಸೇವೆಯನ್ನಾಗಿಸಿ ಜನತಾ ಹಿತಚಿಂತಕರಾಗಿ ಕಾರ್ಯ ನಿರ್ವಾಹಿಸಿದ ತುಳು-ಕನ್ನಡಿಗ ಎರ್ಮಾಳ್ ಹರೀಶ್ ಶೆಟ್ಟಿ ಸೇರಿದಂತೆ ಸುಮಾರು 30 ಮಂದಿ ಸರ್ವೋತ್ಕೃಷ್ಟ ಸಮಾಜ ಸೇವಕರಿಗೆ ಸಮಾಜ ರತ್ನ ಸಮ್ಮಾನ ಪ್ರದಾನಿಸಿ…
ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966 ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂದ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ…
ಬಹರೈನ್ ಹಾಗೂ ಕತಾರ್ ನಲ್ಲಿ ತುಳು, ಕನ್ನಡ ಭಾಷೆಯ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ ಅನುಭವ ಹೊಂದಿರುವ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನವೀನ್ ಶೆಟ್ಟಿ ಇರುವೈಲ್ ಅವರು ಪ್ರತಿಷ್ಠಿತ ಕತಾರ್ ಬಂಟರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವೀನ್ ಶೆಟ್ಟಿಯವರು ಬಹರೈನ್ ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ, ಬಹರೈನ್ ಬಂಟರ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು, ತುಳುಕೂಟ ಕತಾರ್ ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಮಾಜಸೇವಕ ನವೀನ್ ಶೆಟ್ಟಿಯವರ ಕಾರ್ಯವಧಿಯಲ್ಲಿ ಕತಾರ್ ಬಂಟರ ಸಂಘವು ಅಭಿವೃದ್ಧಿ ಹೊಂದಲಿ ಎಂದು ನಮ್ಮೆಲ್ಲರ ಹಾರೈಕೆ.
ಪುತ್ತಿಗೆ ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಅವರು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವವನ್ನು ವೈಭವೋಪೇತವಾಗಿ ನಡೆಸಲು ಅನುಕೂಲಕರವಾದ ಆರ್ಥಿಕ ಸಹಕಾರದ ಬಗ್ಗೆ ವಿಶೇಷವಾಗಿ ಸ್ವಾಗತ ಸಮಿತಿಯ ಮನವಿಯನ್ನು ಬಿಡುಗಡೆಗೊಳಿಸಿದರು. ಮನವಿಯಲ್ಲಿ ವಿವಿಧ ಆರ್ಥಿಕ ಸಹಕಾರವನ್ನು ಸಮಾಜದಿಂದ, ಗಣ್ಯರಿಂದ ನಿರೀಕ್ಷಿಸಲಾಗಿದೆ. ಎಲ್ಲಾ ಕೃಷ್ಣ ಭಕ್ತರು ಪರ್ಯಾಯೋತ್ಸವದಲ್ಲಿ ಕೈ ಜೋಡಿಸಬೇಕೆಂದು ವಿನಂತಿಸಿದರು. ಅತಿಥಿಗಳಾಗಿ ಪುಣೆಯ ಪ್ರಜ್ ಇಂಡಸ್ಟ್ರೀಸ್ ಲಿ. ಚೇರ್ ಮನ್ ಡಾ. ಪ್ರಮೋದ್ ಚೌಧರಿ, ಅವರ ಪತ್ನಿ ಪ್ರಮೀಳಾ ಚೌಧರಿ ಉಪಸ್ಥಿತರಿದ್ದು ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ ವಿಜೃಂಭಣೆಯಿಂದ ನಡೆಸಲು ಸಹಕರಿಸುವುದಾಗಿ ತಿಳಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಜ್ ಜೆನೆಕ್ಸ್ ಲಿ. ಎಂಡಿ ಅಭಿಜಿತ್ ಧಾನಿ, ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಆಸ್ಟೆನ್ ಸೆಜ್ ನ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಸಮಿತಿ ಪ್ರ. ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗೌರವ ಕೋಶಾಧಿಕಾರಿ ಶ್ರೀ ನಾಗೇಶ್ ಹೆಗ್ಡೆ, ಕೋಶಾಧಿಕಾರಿ ರಂಜನ್ ಕಲ್ಕೂರ, ಉಪಾಧ್ಯಕ್ಷ…
ಪುಣೆ : ಮನುಷ್ಯ ತನ್ನ ದಿನ ನಿತ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವ ಅರೋಗ್ಯವನ್ನು ಬಯಸುತ್ತಾನೆ ,ಆದರೆ ಈಗಿನ ದೈಹಿಕ ,ಮಾನಸಿಕ ,ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರು ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ .ಇದರಿಂದ ಯಾವುದೇ ನಿಯಂತ್ರಣ ಹೊಂದಿರದ ಚಲನೆ ಮತ್ತು ಪ್ರಕ್ರಿಯೆಯಿಂದ ಮಾನಸಿಕ ಆರೋಗ್ಯಕ್ಕೆ ತೊಂದರೆ ಯಾಗುತ್ತದೆ .ಇಂತಹ ಸಂದರ್ಭದಲ್ಲಿ ಮೊದಲಾಗಿ ನಾವು ಡಾಕ್ಟರ್ಸ್ ನವರ ಸಲಹೆಯಂತೆ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಜೀವನ ಸುಖಮಯವಾಗಬಹುದು,ಮತ್ತು ದೈಹಿಕ,ಮಾನಸಿಕ ,ಸಾಮಾಜಿಕ ಸುಸ್ಥಿತಿಯಿಂದ ಅರೋಗ್ಯ ಪೂರ್ಣ ಜೀವನವನ್ನು ಪಡೆಯಲು ಸಾದ್ಯ . ಆರೋಗ್ಯದ ಬಗ್ಗೆ ಕಾಳಜಿ ಮತ್ತು ತಪಾಸಣೆ ಮಾಡಿಸುವ ಉದ್ದೇಶದೊಂದಿಗೆ ನಮ್ಮ ಅಸೋಸಿಯೇಷನ್ ವತಿಯಿಂದ ಸಮಾಜ ಭಾಂದವರಿಗೆ ಈ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ .ಇದಕ್ಕೆ ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು , ಗುರುನಾನಕ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ .ಡಾ ಸುಧಾಕರ್ ಶೆಟ್ಟಿ ಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು…
ಕರ್ನಾಟಕ ಸಂಪದ್ಭರಿತ ಕಾನನ ಹಾಗೂ ಜೀವ ಜಂತುಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅದರಲ್ಲೂ ಹಾವುಗಳಂತೂ ರೈತ ಸ್ನೇಹಿ ಜೀವಿಗಳು. ಪ್ರಕೃತಿ ನಮಗೆ ಕೊಟ್ಟ ಉಡುಗೊರೆ. ದುರಾದೃಷ್ಟವೆಂದರೆ ಹಲವು ವರ್ಷಗಳಿಂದ ಹಾವುಗಳ ಪ್ರಬೇಧಗಳು ನಶಿಸಿದೆ. 2024 ರ ಹೊತ್ತಿಗೆ ಮತ್ತಷ್ಟು ಹದಗೆಡುವ ಸಾಧ್ಯತೆಯ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ನಿಸರ್ಗ ಸ್ನೇಹಿಯಾಗಿದ್ದ ಮಾನವ ಬದುಕು ಬದಲಾಗಿ ಪರಿಸರ ಸಮತೋಲನದ ಸ್ಥಿತಿಯ ಲಯ ತಪ್ಪಲು ಕಾರಣವಾಗುತ್ತಿದೆ. ಮನುಷ್ಯನ ಸ್ವಾರ್ಥ, ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣದ ಅಬ್ಬರ, ಕಾಡು ನಾಶ, ಶರವೇಗದಲ್ಲಿ ನಡೆಯುತ್ತಿರುವ ನಗರೀಕರಣ, ಹಸಿರನ್ನು ನುಂಗಿ ಜೀವ ವೈವಿಧ್ಯತೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಾವುಗಳ ಸೂಕ್ತ ರಕ್ಷಣೆ ಅನಿವಾರ್ಯ ಹಾಗೂ ಅವುಗಳ ಸಂತತಿ ಉಳಿಸಿ ನಿಸರ್ಗ ಸ್ನೇಹಿ ಬದುಕನ್ನು ರೂಪಿಸಿಕೊಳ್ಳಲು ನಾವಿಂದು ದಾಪುಗಾಲು ಇಡ ಬೇಕಾಗಿದೆ. ಈಗಾಗಲೇ ಕಾಲ ಮೀರಿದೆ. ಮತ್ತಷ್ಟು ವಿಳಂಬವಾದರೆ ಪ್ರಕೃತಿ ಮುನಿದು ಸೇಡು ತೀರಿಸಿಕೊಳ್ಳಲು ಅಣಿಯಾಗಬಹುದು.…
ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆಯ ಅಧ್ಯೆಕ್ಷೆಯಾಗಿ ಭವ್ಯಾ ಎ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಂಟರ ಭವನದಲ್ಲಿ ನಡೆದ ಮಹಿಳಾ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಅಧ್ಯಕ್ಷರಾಗಿ ಭವ್ಯಾ ಎ ಶೆಟ್ಟಿ, ಉಪಾಧ್ಯಕ್ಷರಾಗಿ ಸರೋಜ ಟಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕೃಷ್ಣಾಪುರ, ಜೊತೆ ಕಾರ್ಯದರ್ಶಿಯಾಗಿ ವಜ್ರಾಕ್ಷಿ ಶೆಟ್ಟಿ, ಕೋಶಾಧಿಕಾರಿಯಾಗಿ ಜ್ಯೋತಿ ಪಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ನಾಗಲತಾ ಶೆಟ್ಟಿ ತೋಕೂರು, ಕ್ರೀಡಾಕಾರ್ಯದರ್ಶಿಯಾಗಿ ಬಬಿತಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಾತ ಶೆಟ್ಟಿ ಕಾಟಿಪಳ್ಳ ಆಯ್ಕೆಯಾದರು. ಸಭೆಯಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಮಾಜೀ ಅಧ್ಯಕ್ಷರಾದ ಅಂಜನಾ ಶೆಟ್ಟಿ, ಬೇಬಿ ಶೆಟ್ಟಿ ಉಪಸ್ಥಿತರಿದ್ದರು.
ಮುಂಬಯಿ ಮಹಾನಗರ ಪಾಲಿಕೆಯ ರಾಜಾವಾಡಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ‘ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪರಿಣಾಮ ಜನ್ಮ ಜಾತ ಶ್ರವಣ ದೋಷ ಇರುವ ಮಕ್ಕಳಿಗೆ ಶಾಶ್ವತವಾಗಿ ಪರಿಹಾರ ಸಿಗಲಿದೆ. ದೋಷವಿರುವ ಮಕ್ಕಳಲ್ಲಿ ಐದು ವರ್ಷಗಳವರೆಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಮಕ್ಕಳಲ್ಲಿ ಶ್ರವಣ ದೋಷದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ವಿಶೇಷವೇನೆಂದರೆ ಡಾ. ಅದೀಪ್ ಶೆಟ್ಟಿ ನೇತೃತ್ವದಲ್ಲಿ ಈ ಯೋಜನೆ ಕಾರ್ಯನಿರತಗೊಳ್ಳಲಿದೆ. ಮೂಲತ: ಮಂಗಳೂರು ಸುರತ್ಕಲ್ ನ ಡಾ. ಅದೀಪ್ ಶೆಟ್ಟಿಯವರು ರಾಜಾವಾಡಿಯ ಕಿವಿ- ಮೂಗು – ಗಂಟಲು ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪಾಲಿಕೆಯ ಕೆಇಎಂ ಮತ್ತು ನಾಯರ್ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತಿತ್ತು. ದೇಶದ ಅತ್ಯಂತ ಕಿರಿಯ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಆದ ಡಾ. ಅದೀಪ್ ಶೆಟ್ಟಿ ಅವರ ಪರಿಶ್ರಮದ ಫಲವೇ ಉಪನಗರದ ರಾಜಾವಾಡಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆ ಆರಂಭಗೊಳ್ಳಲಿದೆ. ಮುಂಬಯಿಯಲ್ಲಿರುವ ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್…