ಜ್ಞಾನಸರೋವರ ಅಂತರ್ರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರಾದ ಶ್ರೀ ಸುಧಾಕರ ಎಸ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತ, ನಾಯಕತ್ವ ಎನ್ನುವುದು ಒಂದು ರೀತಿಯ ಜವಾಬ್ದಾರಿಯೇ ಹೊರತು ಅಧಿಕಾರವಲ್ಲ ಎಂದು ಹೇಳುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು, ಆತ್ಮ ವಿಶ್ವಾಸವನ್ನು ತುಂಬಬೇಕು ಎಂದು ಹೇಳಿದರು. ಯಾವುದೇ ಧರ್ಮ ಬೇಧವಿಲ್ಲದೆ ನಾವೆಲ್ಲರೂ ಸಮಾನರು, ನಾವೆಲ್ಲರೂ ಒಂದೇ ಎನ್ನುವಂತಹ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿ ಬರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಮತಿ ಸ್ವರ್ಣ ಜಿ ಎಸ್ ರವರು ಮಾತನಾಡುತ್ತ ನಾಯಕತ್ವ ಎಂಬುದು ಒಂದು ಹಡಗಿನಂತೆ ವಿದ್ಯಾರ್ಥಿಗಳು ನಾವಿಕರಂತೆ ಎಂದು ಹೇಳುವುದರ ಜೊತೆಗೆ ಜ್ಞಾನಸರೋವರ ಅಂತರ್ರಾಷ್ಟ್ರೀಯ ವಸತಿ ಶಾಲೆಯು, ಅಂತರರಾಷ್ಟ್ರೀಯ ಮಟ್ಟದ ಶಾಲೆ ಆಗಿದ್ದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ ಎಂಬುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆ ತಮ್ಮ ಹದಿಮೂರು ವರ್ಷದ ವೃತ್ತಿಜೀವನದಲ್ಲಿ , ಯಾವ ಯಾವ ರೀತಿಯ ಸೈಬರ್ ಕ್ರೈಂಗಳು ನಡೆಯುತ್ತದೆ ಎಂಬುದನ್ನು ತಿಳಿಸುತ್ತಾ ಅವುಗಳನ್ನು ತಡೆಯುವಲ್ಲಿ ಹೇಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಪೋಷಕರು ಹಾಗೂ ಮಕ್ಕಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ (CEO) ಶ್ರೀ ಪವನ್ ಕುಮಾರ್ ಶೆಟ್ಟಿ , ಶ್ರೀಮತಿ ಅಪೂರ್ವ ಪವನ್ ಶೆಟ್ಟಿ, ಆಡಳಿತಾಧಿಕಾರಿಗಳಾದ ಮುಕುಂದ, ಪ್ರಾಂಶುಪಾಲರಾದ ಅಂಕೂರ್ ಚಟರ್ಜಿ, ಉಪಪ್ರಾಂಶುಪಾಲರಾದ ದೊಡ್ಡಬಸಪ್ಪ ಹಾಗೂ ಮುಖ್ಯೋಪಾಧ್ಯಾಯನಿಯರಾದ ಪಲ್ಲವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.