ವಿದ್ಯಾಗಿರಿ: ‘ಜೀವನದಲ್ಲಿ ಎಲ್ಲವೂ ಯಶಸ್ವಿ ಆಗಬೇಕಾಗಿಲ್ಲ ಸೋಲನ್ನೂ ಧೈರ್ಯದಿಂದ ಎದುರಿಸುವ ಛಲವನ್ನು ಬೆಳಸಿಕೊಳ್ಳಬೇಕು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ವಿದ್ಯಾಗಿರಿಯ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ – ಕೃಷಿ ಸಿರಿ ವೇದಿಕೆಯಲ್ಲಿ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಧ್ಯಾರ್ಥಿಗಳ ಏಳಿಗೆಗೆ ಶ್ರಮಪಡುವ ಶಿಕ್ಷಕರೇ ನಿಜವಾದ ಶಿಕ್ಷಕರು. ಶಾಲೆಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಏನು ಕಲಿಯುತ್ತೀರೋ, ಅಷ್ಟೇ ಮುಖ್ಯ ಅದರ ಬಳಿಕ ನೀವು ಏನನ್ನು ಕಲಿಯುತ್ತೀರಿ ಎಂಬುದು ಎಂದು ಹೇಳಿದರು. ಆಳ್ವಾಸ್ನ ರಾಜ್ಯ ಪಠ್ಯಕ್ರಮದಡಿಯ ಒಂದೇ ಶಾಲೆಯಲ್ಲಿ 1800 ವಿದ್ಯಾರ್ಥಿಗಳು ಕಲಿಯುತ್ತಿರುವುದು ನಮ್ಮ ಗುಣಮಟ್ಟವನ್ನು ತಿಳಿಸುತ್ತದೆ. ನಮ್ಮ ವಿದ್ಯಾರ್ಥಿಗಳ ಸಾಧನೆಯೇ ಆಳ್ವಾಸ್ನ ಸಾಧನೆ.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಆಳ್ವಾಸ್ ವಿದ್ಯಾರ್ಥಿಗಳ ಬಹುಭಾಷಾ ಅಭಿವೃದ್ಧಿಗೆ ಪೂರಕವಾದ ವಾತವರಣವನ್ನು ಶಾಲೆಯ ಆವರಣದಲ್ಲಿ ಬಹುಮುಖಿ ಆಯಾಮದಲ್ಲಿ ಸೃಷ್ಠಿಲಾಗಿದೆ. ಇದು ವಿದ್ಯಾರ್ಥಿಗಳ ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಸಾಮಥ್ರ್ಯಗಳ ವೃದ್ಧಿಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಇರುವ
ಸಾಮಾಜಿಕ ಬದ್ಧತೆಯು ಕೇವಲ ಶಾಲೆಗೆ ಸೀಮಿತವಾಗಿರದೆ ಭವಿಷ್ಯದಲ್ಲೂ ಮುಂದುವರಿಯಬೇಕು ಎಂದರು.
ಪೋಷಕರು ವಿದ್ಯಾರ್ಥಿಗಳ ಬೆಳವಣಿಗೆಯನ್ನು ಪ್ರತಿ ಹಂತದಲ್ಲೂ ವೀಕ್ಷಿಸುತ್ತಿರಬೇಕು. . ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಂ ಕುಂದರ್, ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ.
ಮೂರ್ತಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾ ರುಫೂಸ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಂಜಿಕಾ ರೈ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅನ್ನಪೂರ್ಣ ಸ್ವಾಗತಿಸಿ, ಗೌತಮ್ ರೆಡ್ಡಿ ವಂದಿಸಿ, ಸುಪ್ರಿತ್ರಾಜ್ ಸಜ್ಜನ್ ಹಾಗೂ ಮನಸ್ವಿ ನಿರೂಪಿಸಿದರು.