ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಭಕ್ತ ಕನಕದಾಸರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ದಿನಾಂಕ 30-11-2023 ರಂದು ಸಂಜೆ 4.30ಕ್ಕೆ ಸರಿಯಾಗಿ ಎಂ.ಜಿ.ಎಂ ಕಾಲೇಜು ಬಳಿಯಿರುವ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ ವಹಿಸಿದರು. ತಾಲೂಕು ಅದ್ಯಕ್ಷ ಕೃಷ್ಣ ಕುಮಾರ್ ರವರು ಕನಕದಾಸರ ಕುರಿತ ಜೀವನ ಚರಿತ್ರೆ ವಿಸ್ತಾರವಾಗಿ ವಿವರಿಸಿ ಗುಣಗಾನ ಮಾಡಿದರು. ಮುಖಂಡರುಗಳಾದ ಉಡುಪಿ ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಪಾಂಗಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಅಟೋ ಮಾಲಕರ ಮತ್ತು ಚಾಲಕರ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಗೌರವ ಅಧ್ಯಕ್ಷೆ ಗುಣವತಿ, ಕೋಶಾಧಿಕಾರಿ ಸುನಂದಾ ಟೀಚರ್, ಮುಖಂಡರುಗಳಾದ ಗುಲಾಬಿ, ಸಾದನಾ, ಹೇಮಾ, ನಳಿನಿ, ಸುಕನ್ಯಾ, ಗೌತಮ್ ಸೇರಿದಂತೆ ಉಪಸ್ಥಿತರಿದ್ದ ಎಲ್ಲರೂ ಕನಕದಾಸರ ಭಾವಚಿತ್ರಕ್ಕೆ ಹೂ ಅರ್ಪಣೆ ಮಾಡಿ ಗೌರವ ಸಲ್ಲಿಸಿದರು.