ಗುರುಪುರ ಬಂಟರ ಮಾತೃ ಸಂಘ ಯುವ ವಿಭಾಗ ವತಿಯಿಂದ ಜರಗುವ ಬಂಟ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಸಂಘದ ಕಛೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗಮಾರ್ ಗುತ್ತು ವಹಿಸಿದ್ದರು. ಸಭೆಯಲ್ಲಿ ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ಜಯರಾಂ ಶೆಟ್ಟಿ ವಿಜೇತ, ಯುವ ವಿಭಾಗದ ಕಾರ್ಯದರ್ಶಿ ಪ್ರಖ್ಯಾತ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಾಜಕುಮಾರ್ ಶೆಟ್ಟಿ, ಸುದರ್ಶನ್ ಶೆಟ್ಟಿ, ನಾಗರಾಜ್ ರೈ ತಿಮಿರಿ ಗುತ್ತು, ಶಿವರಾಜ್ ಶೆಟ್ಟಿ, ಸಂದೀಪ್ ಆಳ್ವ, ಕೃಷ್ಣಕಾಂತ್ ಶೇಣವ, ರಘುಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
