Author: admin

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಆಗೋಸ್ಟ್ 26 ರಂದು ಶನಿವಾರ ಸಾಯಂಕಾಲ 4 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿದೆ ಎಂದು ಡಾ ಎ ಸದಾನಂದ ಶೆಟ್ಟಿ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ರವೀಂದ್ರನಾಥ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ನಿಟ್ಟೆ ವಿ.ವಿ.ಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ, ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್…

Read More

‘500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು’ ವಿದ್ಯಾಗಿರಿ: ‘ಆಳ್ವಾಸ್ ಪದವಿ ಪೂರ್ವಕಾಲೇಜಿನ 500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸರ್ಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಸೀಟು ಪಡೆಯುವ ಭರವಸೆ ಇದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜು ಶುಕ್ರವಾರ ಹಮ್ಮಿಕೊಂಡ ಪೋಷಕ- ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ ಗುರಿ ಸಾಧಿಸಲು ನಿರೀಕ್ಷೆ ಮತ್ತು ಕನಸು ಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಆದರೆ, ಇನ್ನೊಬ್ಬರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ವ್ಯಕ್ತಿಯೂ ಅನನ್ಯ. ಅದಕ್ಕಾಗಿ ಗುರಿಯೆಡೆಗಿನ ನಡೆಗೆ ನಿಮ್ಮ ಸಮಯ ಮೀಸಲಿಡಿ’ಎಂದು ಹಿತವಚನ ಹೇಳಿದರು. ‘ವಿದ್ಯಾರ್ಥಿ ಜೀವನವು ಅತ್ಯಮೂಲ್ಯ ಸಮಯವಾಗಿದ್ದು, ಗಾಸಿಪ್ ಆಲಿಸಿಕೊಂಡು ವ್ಯರ್ಥ ಮಾಡಬೇಡಿ. ನಿಮಗೆ ಮಾರ್ಗದರ್ಶನ ಮಾಡಲು, ಸಂಯೋಜಕರು, ಉಪನ್ಯಾಸಕರು ಇದ್ದಾರೆ. ಅವರ ಮಾತು ಕೇಳಿ’ಎಂದು ಸಲಹೆ ನೀಡಿದರು. ‘ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಬದಲಾಗಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹವು ಮಕ್ಕಳಿಗೆ ಹುರುಪು ನೀಡುತ್ತದೆ.…

Read More

ನೂತನವಾಗಿ ಆಯ್ಕೆಯಾದ ಸಾಗರ ಕ್ಷೇತ್ರದ ಶಾಸಕರಾದ ಮಾನ್ಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಾಗರ ಬಂಟರ ಸಂಘದ ವತಿಯಿಂದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು, ಬಂಟರ ಸಂಘಗಳ ಒಳ್ಳೆಯ ಕೆಲಸಕ್ಕೆ ನನ್ನ ಸಹಕಾರ ಇದ್ದೇ ಇದೆ. ಸಮಾಜವನ್ನು ಕೆಳಸ್ತರದಿಂದ ಮೇಲೆತ್ತುವ ಕೆಲಸ ಮಾಡಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಕಾರ್ಯದರ್ಶಿ ಮಹೇಂದ್ರ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಸಂಘದ ಮುಖಂಡರುಗಳಾದ ಅಮರ್ ಶೆಟ್ಟಿ ಗೌತಮ್ ಪುರ, ಶ್ರೀಧರ್ ಶೆಟ್ಟಿ, ಬೆನಗೋಡು ಭುಜಂಗಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವಿನಹಳ್ಳಿ, ಸಂತೋಷ ಶೆಟ್ಟಿ ಸೂಲದಗುಡ್ಡೆ, ಮಹಾಬಲೇಶ್ವರ್ ಶೆಟ್ಟಿ, ಸುರೇಶ್ ಶೆಟ್ಟಿ ನಿಸ್ರಾಣಿ, ಶ್ರೀನಿವಾಸ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಸದಾನಂದ ಶೆಟ್ಟಿ, ಜಯರಾಮ್ ಶೆಟ್ಟಿ, ಸತೀಶ್ ಶೆಟ್ಟಿ, ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಸುನಿಲ್ ಶೆಟ್ಟಿ ಯಡೆಹಳ್ಳಿ ಉಪಸ್ಥಿತರಿದ್ದರು.

Read More

ಕರ್ನಾಟಕ ಕರಾವಳಿಯ ಜನತೆಯ ಕನ್ನಡ ಮಾತು-ಬರಹಗಳಿಗೆ ಸಾಮಾನ್ಯ ವಾಗಿ ಮೆಚ್ಚುಗೆಯ ಮಾತು ಕೇಳಿ ಬರುತ್ತಲೇ ಇರುತ್ತದೆ. ಭಾಷಾಶುದ್ಧಿ, ಪಕ್ವತೆ, ಅಲ್ಪಪ್ರಾಣ ಮಹಾಪ್ರಾಣಗಳ ಪರಿಪೂರ್ಣ ಉಚ್ಚಾರ, ಬೌದ್ಧಿಕ ಸಾಮರ್ಥ್ಯ ಸಹಿತವಾದ ವ್ಯಾಖ್ಯಾನಗಳು, ವ್ಯಾಕರಣ ಶುದ್ಧಿ.. ಹೀಗೆ ಈ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಾ ಇರುತ್ತದೆ. ಕರಾವಳಿಯ ಈ ಕನ್ನಡ ಭಾಷಾ ಪರಿಶುದ್ಧಿಯ ಸಾಮರ್ಥ್ಯಕ್ಕೆ ಇಲ್ಲಿನ ಯಕ್ಷಗಾನದ ಬಹು ಶತಮಾನಗಳ ಪರಂ ಪರೆಯ ಮಹತ್ವದ ಕೊಡುಗೆ ಅಂತರ್ಗತ ವಾಗಿದೆ ಎಂದು ವಿಶ್ವಾಸದಿಂದ ವರ್ಣಿಸ ಬಹುದು. ಇಲ್ಲಿನ ಬಹು ಮಂದಿ ಹೀಗೆ ಯಕ್ಷಗಾನ- ತಾಳಮದ್ದಲೆಯ ಭಾಗವತಿಕೆ- ಅರ್ಥಗಾರಿಕೆ ಕೇಳುತ್ತಲೇ ಬೆಳೆಯುವವರು. ಸಹಜವಾಗಿ ಪ್ರಭಾವಿತರಾಗಿರುವವರು. ಆಯಾ ಪ್ರದೇಶದ ಅನನ್ಯವಾದ ಸಾಂಸ್ಕೃತಿಕ, ಜನಪದೀಯ ಪರಂಪರೆಗಳು ಆಯಾ ಪ್ರದೇಶದ ಜನರ ನಡೆನುಡಿಯನ್ನು ಪ್ರಭಾವಿಸುತ್ತದೆ ಎಂದು ಮಾನವಶಾಸ್ತ್ರ ತಜ್ಞರು ಹೇಳುತ್ತಾರೆ. ಅದಕ್ಕೆ ಪೂರಕವಾದ ನಿದರ್ಶನ ಇಲ್ಲಿದೆ. ಯಕ್ಷಗಾನ ಸಂಪತ್ತಿನ ತಿಟ್ಟುಗಳು, ಪ್ರಸಂಗಗಳು, ಪ್ರಯೋಗಗಳು, ಹಿಮ್ಮೇಳ- ಮುಮ್ಮೇಳ, ಬಣ್ಣಗಾರಿಕೆ, ಕಲಾವಿದರ ಪರಂ ಪರೆ, ತಾಳಮದ್ದಲೆಗಳು, ಯಕ್ಷಗಾನ ಸಂಬಂ ಧಿತ ಅಕಾಡೆಮಿ ಸಹಿತ, ಸಂಘಟನೆಗಳು, ತರಬೇತಿ-…

Read More

ಪ್ರತಿಯೊಂದು ಮಕ್ಕಳ ಚಿಂತನೆಗಳು ಭಿನ್ನವಾಗಿರುತ್ತದೆ, ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿದೆ. ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಯುವವಾಹಿನಿ ಯಡ್ತಾಡಿ ಘಟಕ ಸಂಘಟನೆಯ ಮೌಲ್ಯ ಎತ್ತಿ ಹಿಡಿದಿದೆ ಎಂದು ಉದ್ಯಮಿ ರಘುರಾಮ್ ಶೆಟ್ಟಿ ಅವರು ಹೇಳಿದರು. ಅವರು ಯುವವಾಹಿನಿ ಯಡ್ತಾಡಿ ಘಟಕ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಯಡ್ತಾಡಿ, ಜೆ.ಸಿ.ಐ ಕಲ್ಯಾಣಪುರ, ಚಿಗುರು ಕಲಾ-ಸಾಂಸ್ಕøತಿಕ ವೇದಿಕೆ ನಡೂರು, ಜೆ.ಪಿ ನಾರಾಯಣ ಸ್ವಾಮಿ ಫೌಂಡೇಶನ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಶಿರಿಯಾರ, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಬಾರ್ಕೂರು, ಸೌಜನ್ಯ ಯುವಕ ಮಂಡಲ ಯಡ್ತಾಡಿ, ಶ್ರೀ ವಿನಾಯಕ ಯುವಕ ಮಂಡಲ ಸಾಯಿಬ್ರಕಟ್ಟೆ –ಯಡ್ತಾಡಿ, ಅತುಲ ಯುವಕ ಸಂಘ ಹೇರಾಡಿ, ಇವರ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023 (ತಿಳಿವಿನ ಬೆಳಕು) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ…

Read More

ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ 2023ರ ಪದ ಪ್ರದಾನ ಸಮಾರಂಭವು ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು. 2023ನೇ ಸಾಲಿನ ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ಅವರು ಹಿಂದಿನ ಸಾಲಿನ ಅಧ್ಯಕ್ಷ ನಾಗೇಂದ್ರ ಅಡಿಗ ಅವರಿಂದ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಯಂತಹ ಸಂಸ್ಥೆಯು ವ್ಯಕ್ತಿತ್ವ ವಿಕಸನ , ಭಾಷಾ ಕೌಶಲ್ಯ ಮತ್ತು ಸಮಾಜದಲ್ಲಿ ಗೌರವ,ಸ್ನೇಹವನ್ನು ಸಂಪಾದಿಸುವಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಅಧ್ಯಾಪಕ ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಜೇಸಿಐ ವಲಯ ಉಪಾಧ್ಯಕ್ಷರಾದ ಜೆಎಫ್‍ಎಫ್ ಜಯಶ್ರೀ ಮಿತ್ರಕುಮಾರ್ ಹಾಗೂ ವಡ್ಡರ್ಸೆ ಜೇಸಿಐ ಸ್ಥಾಪಕಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಉಮೇಶ್ ವಡ್ಡರ್ಸೆ, ಜೇಜೇಸಿ ಮಹೇಶ್ ಮತ್ತು ಶ್ರೀವತ್ಸ ಉಪಸ್ಥಿತರಿದ್ದರು. ನಾಗೇಂದ್ರ ಅಡಿಗ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ…

Read More

ಮಂಗಳೂರು ಮೆಟ್ರೋಪಾಲಿಟನ್ ನಗರವಾಗಿ ಬೆಳೆಯುತ್ತ ಹೋದಂತೆ, ಅದು ಪ್ರತ್ಯೇಕ ಮಂಗಳೂರು ನಗರ ಜಿಲ್ಲೆಯಾಗುವತ್ತ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ಸಣ್ಣ ನಗರ ಪ್ರದೇಶಗಳು ಮತ್ತು ಗ್ರಾಮಾಂತರ ಪ್ರದೇಶಗಳೆಲ್ಲಾ ಒಂದಾಗಿ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯಾಗುವುದಂತೂ ಖಂಡಿತಾ ಅನ್ನುವ ಮಾತು ಶುರುವಾಗಿ ಆಗಲೇ ಹತ್ತತ್ತಿರ ಹತ್ತು ವರ್ಷಗಳೇ ಆಯಿತು. ಅದಕ್ಕೆ ತಕ್ಕ ಹಾಗೆ ಮುಂದೆ ಆಗಲಿರುವ ಈ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಗೆ ಪುತ್ತೂರೇ ಜಿಲ್ಲಾ ಕೇಂದ್ರವಾಗುತ್ತದೆ ಎಂಬ ಮಾತಿಗೂ ಪುಷ್ಟಿ ಸಿಕ್ಕಿತ್ತು. ಅದಕ್ಕೆ ತಕ್ಕ ಹಾಗೆ ಸರಿಯಾಗಿ ಹತ್ತು ವರ್ಷಕ್ಕೂ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದಾಗ, ವಿ.ಎಸ್. ಆಚಾರ್ಯ ಗೃಹಮಂತ್ರಿಯಾಗಿದ್ದಾಗ ಮಂಗಳೂರಿಗೆ ಪೊಲೀಸ್ ಕಮೀಷನರ್ ಕಚೇರಿಯೂ ಬಂತು. ಈ ಪೊಲೀಸ್ ಕಮೀಷನರ್ ಆಡಳಿತ ವ್ಯಾಪ್ತಿಗೆ ಮೂಲ್ಕಿ, ಮೂಡಬಿದ್ರಿ, ಬಜ್ಪೆ, ಕೊಣಾಜೆ, ಇವೆಲ್ಲವನ್ನೂ ಸೇರಿಸಲಾಗಿತ್ತು. ಇಷ್ಟಾಗುವಾಗ ಮಂಗಳೂರಿನಲ್ಲಿದ್ದ ಎಸ್.ಪಿ ಕಚೇರಿಯ ವ್ಯಾಪ್ತಿಯಿಂದ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹೊರಬಿದ್ದವು. ಅಲ್ಲಿಗೆ ಮಂಗಳೂರಿನಲ್ಲಿ ಆಡಳಿತಾತ್ಮಕವಾಗಿ ಎಸ್.ಪಿ ಕಚೇರಿಯ…

Read More

ಇದು ಆಧುನಿಕ ಕಾಲ. ಭಾರತ ಅಭಿವೃದ್ಧಿ ಹೊಂದಿದೆ.. ಹಾಗಾಗಿ ನಮ್ಮಲ್ಲೇ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿದೆ. ಭಾರತ ರಸ್ತೆ ನಿರ್ಮಾಣದಲ್ಲಿ ಈಗಾಗಲೇ ನಾಲ್ಕು ವರ್ಲ್ಡ್ ರೆಕಾರ್ಡ್ ಗಳನ್ನೂ, ಗಿನ್ನೆಸ್ ರೆಕಾರ್ಡ್ ಗಳನ್ನೂ ಮಾಡಿದೆ. ಇತ್ತೀಚಿನದ್ದು ಅತ್ಯಂತ ವೇಗದ ರಸ್ತೆ ನಿರ್ಮಾಣ. 75 ಕಿಲೋಮೀಟರ್ ದೂರದ ಡಾಮಾರು ರಸ್ತೆಯನ್ನು ಕೇವಲ 105 ಗಂಟೆ 33 ನಿಮಿಷಗಳಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ಭಾರತ ಅತ್ಯಂತ ವೇಗವಾಗಿ ರಸ್ತೆ ನಿರ್ಮಿಸುವುದರಲ್ಲಿ ಗಿನ್ನೆಸ್ ದಾಖಲೆಗೆ ಸೇರಿಹೋಯಿತು. ಈ ಸುದ್ದಿ ಟಿವಿ. ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರುತ್ತದೆ. ಪುತ್ತೂರು ಕೂಡಾ ಭಾರತದಲ್ಲಿಯೇ ಇರುವುದರಿಂದಾಗಿ, ಭಾರತ ಅಭಿವೃದ್ಧಿ ಹೊಂದಿರುವುದರಿಂದ ಪುತ್ತೂರು ಕೂಡಾ ಅಭಿವೃದ್ಧಿ ಹೊಂದಿರಲೇ ಬೇಕು ಎಂಬ ತರ್ಕ ಇಟ್ಟುಕೊಂಡು ನೋಡಿದರೆ ಪುತ್ತೂರಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನಗಳೆಲ್ಲ ಬಂದಿದ್ದು ಇಲ್ಲಿನ ಜನ ಈಗ ಟಿವಿಗಳನ್ನು ನೋಡುತ್ತಿದ್ದಾರೆ ಮತ್ತು ಪತ್ರಿಕೆಗಳನ್ನು ಓದುತ್ತಿದ್ದಾರೆ. ಆದರೆ ಭಾರತ ಅತ್ಯಂತ ವೇಗದ ರಸ್ತೆ ನಿರ್ಮಾಣದಲ್ಲಿ ವಿಶ್ವ ದಾಖಲೆ ಮಾಡಿದ ಸುದ್ದಿ ಕೇಳಿ ಪುತ್ತೂರಿನ, ಅದರಲ್ಲೂ ಪುತ್ತೂರು ಉಪ್ಪಿನಂಗಡಿ ರಸ್ತೆ ಯ…

Read More

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ದಶಮಾನ ಸಡಗರ ಇದೇ ನವೆಂಬರ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ’ ಪುರಸ್ಕಾರಕ್ಕೆ ಮುಂಬೈ ಉದ್ಯಮಿ ಮತ್ತು ಕಲಾಪೋಷಕ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಐಕಳ ಹರೀಶ್ ಶೆಟ್ಟಿ : ನಿರಂತರ ಸೇವಾರಾಧಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಐಕಳ ಹರೀಶ್ ಶೆಟ್ಟಿ ಮುಂಬೈ ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ಸಮಾಜಸೇವಕರು. ತಮ್ಮ ಶಾಲಾ ದಿನಗಳಿಂದಲೇ ಹುಟ್ಟೂರಿನಲ್ಲಿ ಉತ್ತಮ ಕ್ರೀಡಾಪಟುವಾಗಿ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿ.ದಕ್ಷಿಣ ಕನ್ನಡ, ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಪ್ರಶಸ್ತಿಗಳನ್ನು ಪಡೆದವರು. ಮುಂಬೈ ಆಹಾರ್ ಉಪಾಧ್ಯಕ್ಷರಾಗಿ, ಸಾಯಿ ಸಂಧ್ಯಾ ಆರ್ಟ್ಸ್…

Read More

ಮೂಡಬಿದಿರೆಯ ಪ್ರತಿಷ್ಠಿತ ಮಿಜಾರು ಮನೆತನದ ಬಂಟ ಸಮಾಜದ ಹಿರಿಯರಾದ ಮಿಜಾರು ಆನಂದ ಆಳ್ವರಿಗೆ ಪುತ್ತೂರಿನ ಪಿ ಬಿ ರೈ ಪ್ರತಿಷ್ಠಾನದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಶಿಕ್ಷಣ ಕಾಶಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ನಿರ್ಮಾತೃಗಳಾದ ಡಾ. ಮೋಹನ್ ಆಳ್ವ ಅವರ ಪಿತೃವರ್ಯರಾದ ಮಿಜಾರು ಆನಂದ ಆಳ್ವ ಅವರು ಕೃಷಿ, ಕಂಬಳ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಗೈದು 105 ವರುಷಗಳ ಸಾರ್ಥಕ ಬದುಕಿನಲ್ಲಿ ಮೂಡಬಿದಿರೆಯ ಶಿಕ್ಷಣ ಕಾಶಿ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿಗೆ ಶಿಕ್ಷಣ ಕಲೆ ಉದ್ಯೋಗ ವನ್ನು ಒದಗಿಸಿದ ಮೂಡಬಿದಿರೆ ಯ ನಿರ್ಮಾತೃ ಡಾ. ಮೋಹನ್ ಆಳ್ವ ಅವರನ್ನು ಈ ಪುಣ್ಯ ಭೂಮಿಗೆ ಕೊಡುಗೆಯಾಗಿ ನೀಡಿರುವುದನ್ನು ಪಿ ಬಿ ರೈ ಪ್ರತಿಷ್ಠಾನದ ಗೌರವಾಧ್ಯಕ್ಷರಾದ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷರಾದ ಕಾವು ಹೇಮನಾಥ್ ಶೆಟ್ಟಿಯವರು ಗೌರವಾರ್ಪಣೆ ಸಲ್ಲಿಸಿ ಮುಕ್ತ ಕಂಠದಿಂದ ಪ್ರಷ0ಶಿಸಿದರು. ಪಿ ಬಿ ರೈ ಪ್ರತಿಷ್ಠಾನದ ಅಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ ಯವರು ಡಾ.…

Read More