Author: admin

ವಿದ್ಯಾಗಿರಿ: ದಕ್ಷಿಣ ಕೊರಿಯಾದ ಜಿಯೋಲ್ಲಾದಲ್ಲಿ ಆಗಸ್ಟ್ 2 ರಿಂದ 12ರ ವರೆಗೆ 25ನೇ ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 8 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಳ್ವಾಸ್‍ನ 8 ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 48 ಸ್ಕೌಟ್ಸ್ ಮತ್ತು ಗೈಡ್ಸ್‍ಗಳು ಭಾಗವಹಿಸಲಿದ್ದಾರೆ. ಆಳ್ವಾಸ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ, ಹತ್ತನೇಯ ತರಗತಿ ವಿದ್ಯಾರ್ಥಿಗಳಾದ ಮನುಜ ನೇಹಿಗ, ಸನ್ಮತ್ ಆಚಾರ್ಯ, ಚಿರಾಗ್ ಆಚಾರ್ಯ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಾಂಭವಿ, ಮನುಶ್ರಿ ಆನಂದ ಮೆಟ್ಟಿ, ಪವನಾ ಡಿ.ಜಿ ಮತ್ತು ಪೂರ್ಣಚಂದ್ರ ಎಂ ಪಾಲ್ಗೊಳ್ಳಲಿದ್ದಾರೆ. ಜಾಂಬೂರಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಆಳ್ವಾಸ್‍ನ ಸ್ಕೌಟ್ ಮಾಸ್ಟರ್ ಪ್ರಕಾಶ ಎಚ್. ವಿದ್ಯಾರ್ಥಿಗಳ ತಂಡದೊಂದಿಗೆ ತೆರಳಲಿದ್ದಾರೆ.

Read More

ಪಟ್ಲ ಫೌಂಡೇಶನ್ನಿನ ಸಕ್ರಿಯ ಘಟಕಗಳಲ್ಲಿ ಒಂದಾಗಿರುವ ಸುರತ್ಕಲ್ ಘಟಕದ 3 ನೇ ವರ್ಷದ ಕಾರ್ಯಕ್ರಮವು ಸುರತ್ಕಲ್ ಬಂಟರ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಸುಧಾಕರ ಪೂಂಜರ ಅಧ್ಯಕ್ಷತೆಯಲ್ಲಿ ಜರಗಿತು. ಸುರತ್ಕಲ್ ಪರಿಸರದಲ್ಲಿ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಗೈದ ಮೂರು ಮಂದಿ ಹಿರಿಯ ಕಲಾವಿದರಾದ ಸೇಸಪ್ಪ ಶೆಟ್ಟಿಗಾರ್, ಶಂಕರ್ ಜೆ ಶೆಟ್ಟಿ, ವೆಂಕಟರಮಣ ಐತಾಳ್ ಇವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕು.ಬಿಂದ್ಯಾ ಇವರು ವಾಚಿಸಿದರು. ಇತ್ತೀಚೆಗೆ ರಂಗಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಸದಸ್ಯರಾದ ಲೀಲಾಧರ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಇವರು ರೂ 1-00 ಲಕ್ಷದ ಮೊತ್ತವನ್ನು ನೀಡಿ ಯಕ್ಷಧ್ರುವ ಪಟ್ಲ ಫೌಂಡೇಶನಿನ ಟ್ರಸ್ಟಿಯಾದರು. ಈರ್ವರನ್ನೂ ಕೇಂದ್ರೀಯ ಸಮಿತಿಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶಾಲು ಹೊದಿಸಿ ಅಭಿನಂದಿಸಿದರು. ಅತಿಥಿಗಳಾದ ಶ್ರೀಕಾಂತ ಶೆಟ್ಟಿ ಬಾಳ, ಮತ್ತು ರವೀಂದ್ರ ರಾವ್ ಇವರು ತಮ್ಮ ಮಾತುಗಳಲ್ಲಿ…

Read More

ನವೀಕರಣಗೊಂಡಿರುವ ಕೊಡಗು ಜಿಲ್ಲಾ ಬಂಟರ ಶಾಂತಿ ಧಾಮ ನಿರ್ವಹಣಾ ಸಮಿತಿಗೆ ಹಸ್ತಾಂತರಿಸಲಾಯಿತು. ನಗರದ ಸ್ಟೋನ್ ಹಿಲ್ ನಲ್ಲಿರುವ ಶಾಂತಿ ಧಾಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೊರಗಪ್ಪ ರೈ, ಜಯಕೃಷ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅವರುಗಳು ಶಾಂತಿಧಾಮ ನಿರ್ವಹಣಾ ಸಮಿತಿಯ ಎಚ್ ಪ್ರಭಾಕರ್ ರೈ, ಶೇಷಪ್ಪ(ಪುಟ್ಟು) ರೈ, ಅರುಣ್ ಶೆಟ್ಟಿ ಅವರಿಗೆ ದಾಖಲಾತಿ ಪುಸ್ತಕ ಹಾಗೂ ರಶೀದಿ ಪುಸ್ತಕವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಕೊರಗಪ್ಫ ರೈ, ಶಾಂತಿ ಧಾಮವನ್ನು ನವೀಕರಣಗೊಳಿಸಿ ಸ್ವಚ್ಛಂದವಾಗಿಸಬೇಕೆಂದು ಹಲವು ವರ್ಷಗಳ ಕನಸಾಗಿತ್ತು. ಜಗದೀಶ್ ರೈ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅದು ಈಡೇರಿದೆ. ಮುಂದೆ ಇದರ ನಿರ್ವಹಣೆಗೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದರು. ಬಂಟ ಸಮಾಜ ಸಾಮಾಜಿಕವಾಗಿ ಹಿಂದೆ ಮುಂದಿನ ದಿನದಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದವರನ್ನು ಮುನ್ನೆಲೆಗೆ ತರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಘಟನಾತ್ಮಕ ವಿಚಾರದಲ್ಲಿ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು. ಬಿ.ಬಿ ಐತಪ್ಪ ರೈ ಮಾತನಾಡಿ, ಬಂಟರ ಶಾಂತಿ…

Read More

ದೇವರ ಕೆಲಸದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡರೆ ತನ್ನ ಅಭಿವೃದ್ಧಿಯೊಂದಿಗೆ ದೇಗುಲ, ಊರು ಅಭಿವೃದ್ಧಿಯಾಗಲಿದೆ ಎಂಬುದಕ್ಕೆ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಕಡಿಯಾಳಿ ದೇಗುಲ ಮಾದರಿಯಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಧ್ವಜಸ್ತಂಭ ಪ್ರತಿಷ್ಠಾಪನೆ, ಧೂಳಿಮಂಡಲ ಸೇವೆ, ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ. ನಿತ್ಯಾನಂದ ಕಾಮತ್‌, ಉಡುಪಿ ಪವನ್‌ ಮೋಟಾರ್ಸ್ ನ ಸುಭಾಶ್‌ ಚಂದ್ರ ಹೆಗ್ಡೆ, ನಗರಸಭೆ ಸದಸ್ಯ ಗಿರೀಶ್‌ ಎಂ. ಅಂಚನ್‌, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ರಾಮಚಂದ್ರ ಸನಿಲ್‌, ಭಾರತಿ ಚಂದ್ರಶೇಖರ್‌, ಅರ್ಚಕ ಕೆ. ರತ್ನಾಕರ ಉಪಾಧ್ಯಾಯ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ…

Read More

ಒಬ್ಬ ಕ್ರೀಡಾ ಸಾಧಕನಿಗೆ ಆಸಕ್ತಿ, ತಾಳ್ಮೆ, ಕಠಿಣ ಪರಿಶ್ರಮ ಎಲ್ಲದಕ್ಕೂ ಮಿಗಿಲಾಗಿ ಕೆಳಕ್ಕೆ ಬಿದ್ದಾಗ ಮತ್ತೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿ ಮುನ್ನುಗ್ಗುವ ಛಲ ಅತೀ ಮುಖ್ಯ. ತಮ್ಮ ರೈಲ್ವೇ ಇಲಾಖೆಯ ಹುದ್ದೆಯೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನೇ ಬರೆಯುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಕೆ.ವಿ ಹರೀಶ್ ಶೆಟ್ಟಿಯವರು 01-06-1978 ರಂದು ಕೆ.ವಿ ವಿಶ್ವನಾಥ ಶೆಟ್ಟಿ ಮತ್ತು ಯಶೋಧ ವಿ ಶೆಟ್ಟಿ ದಂಪತಿಗಳ ಪುತ್ರನಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಲಿಗನಹಳ್ಳಿಯಲ್ಲಿ ಜನಿಸಿದರು. ಹರೀಶ್ ಶೆಟ್ಟರು ಒಂದರಿಂದ ಐದನೇ ತರಗತಿವರೆಗಿನ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಯಾಲ್ತಡ್ಕದಲ್ಲಿ ಪೂರ್ಣಗೊಳಿಸಿ ಸುಭೋಧ ಪ್ರೌಢಶಾಲೆ ಪಾಣಾಜೆಯಲ್ಲಿ ತಮ್ಮ ಪ್ರೌಢ ಶಿಕ್ಷಣ ಪಡೆದು ಪಿಯುಸಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಪಡೆದರು. ಬಾಲ್ಯದಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರಿಗೆ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ದೊರೆತ ಪ್ರೋತ್ಸಾಹ ಹಾಗೂ ತರಬೇತಿಯಿಂದ ಕ್ರೀಡಾ ಸಾಧನೆಗೆ ಮತ್ತಷ್ಟು ಪ್ರೇರಣೆ ದೊರೆತಂತಾಯಿತು. ಆ ಸಂದರ್ಭದಲ್ಲಿ ತರಭೇತಿ ನೀಡಲು ಕಾಲೇಜಿಗೆ ಆಗಮಿಸುತ್ತಿದ್ದ ಪ್ರೇಮನಾಥ…

Read More

ಭಾರತದ ಪ್ರಾಚೀನ ಸಾಂಪ್ರದಾಯಿಕ ಮೈನವಿರೇಳಿಸುವ ಕ್ರೀಡೆ ‌ಮಲ್ಲಕಂಬದಲ್ಲಿ ಜನಸಾಮಾನ್ಯರಿಗೆ ಆಸಕ್ತಿ ಹೆಚ್ಚುತ್ತಿದ್ದು ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ದೇಸಿಕ್ರೀಡೆ ನಶಿಸಿ ಇತಿಹಾಸದ ಪುಟ ಸೇರುವ ಹಂತ ತಲುಪದಿರಲಿ ಎಂದು ಇತರ ಕ್ರೀಡೆಗಳ ಅಬ್ಬರದಲ್ಲಿ‌ ಮಲ್ಲಕಂಬ ನಶಿಸಿ ಹೋಗದಂತೆ ಕ್ರೀಡಾ ಪಟುಗಳು ಇತ್ತೀಚಿಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಅದರೊಂದಿಗೆ ಹೆಮ್ಮೆಯಿಂದ ಮಲ್ಲಕಂಬ ಸ್ಪರ್ಧೆ ನೋಡಿ ಚಪ್ಪಾಳೆ ‌ಹಾಕುವ ಸುಂದರ ಅವಕಾಶವು ಕ್ರೀಡಾ ಸಮಿತಿಗಳು‌ ನೀಡುತ್ತಿದೆ. ಆಟಗಾರರಲ್ಲಿ ಹೊಸ ಬರವಸೆ ಹಾಗೂ ಸ್ಪೂರ್ತಿ ತುಂಬಿವ ಈ‌ ಕ್ರೀಡೆ ಕೇಂದ್ರ ,ರಾಜ್ಯ ‌ಸರಕಾರ,ಭಾರತೀಯ ಕ್ರೀಡಾ ‌ಪ್ರಾಧಿಕಾರ ಕ್ರೀಡಾ ಕೂಟದಲ್ಲಿ ಮಲ್ಲ ಕಂಬ ಕಡ್ಡಯಾವಾಗಿ ಸೇರಿಸಿದರೆ ಈ ಸ್ಥಳೀಯ ಕ್ರೀಡಾ ಕೌಶಲ್ಯ ಪ್ರೇಕ್ಷಕರಿಗೆ ನೋಡ ಸಿಗಲಿದೆ. ಮಲ್ಲಕಂಬ ಮಲ್ಲಕಂಬ ಹಾಗೂ ಮಲ್ಲ ಹಗ್ಗ ಎಂಬ ಎರಡು ವಿವಿಧ ಕ್ರೀಡೆಗಳಿದ್ದು. ಮಲ್ಲಕಂಬ ಪಟುಗಳ ಕಸರತ್ತು ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ದೈಹಿಕ ಕಸರತ್ತಿನ ಪ್ರದರ್ಶನ.ನೆಲದ ಮೇಲೆ ನೇರವಾಗಿ ನಿಲ್ಲಿಸಿದ ಹರಳೆಣ್ಣೆ ಹಾಕಿದ ನಯವಾದ ಕಂಬ ಹತ್ತಿ ವಿವಿಧ ದಿಕ್ಕಿನಲ್ಲಿ ‌ನಿರ್ದಿಷ್ಟ ಭಂಗಿಯಲ್ಲಿ…

Read More

ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಹಿರಿಯ ಸಾಹಿತಿ, ಸಹಕಾರಿ ರತ್ನ ಪ್ರಶಸ್ತಿ ವಿಜೇತರಾದ ದಂಬೆಕ್ಕಾನ ಸದಾಶಿವ ರೈ ಯವರ ರಚಿಸಿದ ‘ಬಂಟ ಮದುವೆ’ ಎಂಬ ಪುಸ್ತಕ ರಚನೆಗಾಗಿ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಂಟರ ಆಚಾರ, ವಿಚಾರಗಳನ್ನು ಸಮಾಜಕ್ಕೆ ಪರಿಚಯಿಸುವ ಮಾಹಿತಿಯನ್ನೊಳಗೊಂಡ ‘ಬಂಟ ಮದುವೆ’ ಪುಸ್ತಕ ಸಮಾಜಕ್ಕೆ ನೀಡಿದ ಉತ್ತಮ ಕೊಡುಗೆ ಎನ್ನುವ ಕಾರಣಕ್ಕೆ ಅವರನ್ನು ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕರಾದ ಕಾವು ಹೇಮಾನಾಥ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.

Read More

ಬಂಟರ ಸಂಘ ಪುತ್ತಿಗೆ ನೇತೃತ್ವದಲ್ಲಿ ‘ಆಟಿದ ಕೂಟ’ ಕಾರ್ಯಕ್ರಮವು ಪುತ್ತಿಗೆ ಎಜೆಬಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹೇರಂಬ ಇಂಡಸ್ಟ್ರಿಸ್ ಮುಂಬಯಿ ಇದರ ಸಿಎಂಡಿ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತನಾಡಿ, ತುಳುನಾಡಿನ ಸಾಂಸ್ಕೃತಿಕತೆಯನ್ನು ಈ ಆಟಿದ ಕೂಟದಲ್ಲಿ ಅನಾವರಣ ಮಾಡಿದ್ದು, ತುಂಬಾ ಸಂತಸದ ವಿಚಾರವಾಗಿದೆ. ಬಂಟ ಸಮಾಜವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಬಂಟರ ಸಂಘ ಬಹುಮುಖ್ಯವಾಗಿದೆ ಎಂದರು. ಇದೇ ವೇಳೆ ಬಂಟ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಗ್ರಾಮದ ಅಜಲು ದೈವ ನರ್ತಕರಿಂದ ‘ಆಟಿ ಕಳಂಜ’ ನರ್ತನ ನಡೆದಿದ್ದು, ಇದು ಕಾರ್ಯಕ್ರಮದ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Read More

ವಿದ್ಯಾಗಿರಿ: ಮಣಿಪುರದಲ್ಲಿ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಯಿತು. ಕಾಲೇಜಿನಲ್ಲಿ ನಡೆದ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಸಂಗ್ರಹಿಸಿದ ಸುಮಾರು 1 ಲಕ್ಷ ರೂಪಾಯಿಯನ್ನು ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ (ಮೊಯಿರಾಂಗ್ ನ್ಯಾಯವ್ಯಾಪ್ತಿಯಲ್ಲಿರುವ ಕುಂಬಿ ಪ್ರದೇಶ), ತೌಬಲ್ ಜಿಲ್ಲೆ ಮತ್ತು ಕಾಕ್ಚಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು. 7 ಪರಿಹಾರ ಶಿಬಿರಗಳಿಗೆ ತಲಾ 10 ಸಾವಿರ ರೂಪಾಯಿ, 2 ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ 10 ಸಾವಿರ ರೂಪಾಯಿ ಮತ್ತು 3 ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್ ಬ್ರಷ್, ಮಸೂರ, ನೀರಿನ ಬಾಟಲಿ ಇತ್ಯಾದಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜರುಗಿದ ಆಳ್ವಾಸ್ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಹತ್ತಕ್ಕೂ ಅಧಿಕ ಆಹಾರ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಆ ಸಂಧರ್ಭದಲ್ಲಿ ವಿವಿಧ ಮಳಿಗೆಗಳಿಂದ ಗಳಿಸಿದ ಲಾಭವನ್ನು ಒಟ್ಟು ಗೂಡಿಸಿ ಮಣಿಪುರ ಸಂತ್ರಸ್ತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗಿದೆ.…

Read More

ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ವಿಚಾರಗೋಷ್ಠಿಯು ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ ಕಿರು ಸಭಾಗೃಹ, ಬಾವುದಾಜಿ ರಸ್ತೆ, ಮಾಟುಂಗಾ ಪೂರ್ವ ಮುಂಬಯಿ ಇಲ್ಲಿ ಜೂನ್‌ 10 ರಂದು ಶನಿವಾರ ಸಂಜೆ 4 ಗಂಟೆಯಿಂದ ನಡೆಯಲಿದೆ. ಅಂದು ಮುಖ್ಯ ಅತಿಥಿಯಾಗಿ ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಆಗಮಿಸಲಿದ್ದಾರೆ. ಕಥಾ ಸಾಹಿತ್ಯದಲ್ಲಿ ಮಹಿಳಾ ಚಿತ್ರಣ ‌ ಎಂಬ ವಿಚಾರಗೋಷ್ಠಿಯ ವಿಷಯ ಮಂಡನೆಗೆ ಇಂಗ್ಲಿಷ್ ಕಥೆಗಳ ಬಗ್ಗೆ ಶ್ಯಾಮಲಾ ಮಾಧವ ಸಾಹಿತಿ, ಖ್ಯಾತ ಅನುವಾದಕಿ, ತಮ್ಮ ಅನುಭವದ ಸಾರವನ್ನು ಹಂಚಿಕೊಳ್ಳಲಿದ್ದಾರೆ. ಕನ್ನಡ ಕಥೆಗಳಲ್ಲಿನ ಒಳ ಹೊರ‌ನೋಟದ ಬಗ್ಗೆ ಸಾ. ದಯಾ ಕವಿ, ಸಾಹಿತಿ, ರಂಗನಿರ್ದೇಶಕ, ನಟ ಮಾತನಾಡಲಿದ್ದಾರೆ. ಮರಾಠಿ ಕಥೆಗಳಲ್ಲಿನ ವಿಚಾರ ವಿಷಯಗಳನ್ನು ಕನ್ನಡ ಮರಾಠಿ ಸಾಹಿತಿ, ಖ್ಯಾತ ಅನುವಾದಕಿ ಅಕ್ಷತಾ ಪ್ರಸಾದ್ ದೇಶಪಾಂಡೆ ವಿಷಯ ಮಂಡಿಸಲಿದ್ದಾರೆ. ಸಾಹಿತ್ಯ ಹಾಗೂ ಕನ್ನಡ ಅಭಿಮಾನಿಗಳಿಗೆ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆದರದ ಸ್ವಾಗತ ಕೋರಿದೆ.

Read More