ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಭಾಂದವರಿಗಾಗಿ ನಡೆಯುವ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 3 ರವಿವಾರದಂದು ವಿವಿಧ ಕ್ರೀಡಾ ಆಟೋಟ ಸ್ಪರ್ದೆಗಳೊಂದಿಗೆ ಪುಣೆಯ ಸಾಳುಂಕೆ ವಿಹಾರ್ ರೋಡ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಲೇನ್, ವಾನ್ವೋರಿಯಲ್ಲಿರುವ ರೇಸ್ ಸ್ಪೋರ್ಟ್ಸ್ ಕ್ರೀಡಾ ಸಂಕುಲದಲ್ಲಿ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಗಂಟೆ 8.30 ಕ್ಕೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಜರಗಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಂಡ್ವಾ ಪರಿಸರದ ಪುಣೆ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಸ್ಥಾಯಿ ಸಮಿತಿಯ ಸದಸ್ಯೆ ಶ್ರೀಮತಿ ನಂದಾ ಲೋನ್ಕರ್ ರವರು ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಶ್ರೀಮತಿ ಶಮ್ಮಿ ಎ ಹೆಗ್ಡೆಯವರು ಆಗಮಿಸಲಿದ್ದಾರೆ.
ಅಸೋಸಿಯೇಷನ್ ಕ್ರೀಡಾ ಕಾರ್ಯಾಧ್ಯಕ್ಷ ಶ್ರೀ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪಧಾದಿಕಾರಿಗಳ ಸಹಕಾರದೊಂದಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ದೆಗಳು ನಡೆಯಲಿವೆ. ಬಂಟ ಸಮಾಜ ಭಾಂದವರ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ವಿವಿಧ ವಯೋಮಿತಿಗನುಗುಣವಾಗಿ ಕ್ರೀಡಾಕೂಟ ಸ್ಪರ್ದೆಗಳು ಜರಗಲಿರುವುದು. ಈ ಎಲ್ಲಾ ಸ್ಪರ್ದೆಗಳಲ್ಲಿ ವಿವಿದ ವಯೋಮಿತಿಯ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಬಹುದು. ವಿಶೇಷ ಆಕರ್ಷಣೆಯಾಗಿ ಹಗ್ಗ ಜಗ್ಗಾಟದ ಸ್ಪರ್ದೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರಥಮ ಮತ್ತು ದ್ವಿತೀಯ ವಿಜೇತ ತಂಡಗಳಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಕ್ರೀಡಾ ಕೂಟದ ದೀಪ ಪ್ರಜ್ವಲನೆ, ಉದ್ಘಾಟನೆ ಮತ್ತು ಕ್ರೀಡಾ ಜ್ಯೋತಿಯ ಆಗಮನ ಹಾಗೂ ಪಥ ಸಂಚಲನಾ ಕಾರ್ಯಕ್ರಮವು ಕ್ಲಪ್ತ ಸಮಯದಲ್ಲಿ ನಡೆಯಲಿರುವುದರಿಂದ ಕ್ರೀಡಾ ಸ್ಪರ್ಧಿಗಳು ಹಾಗೂ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಅಗಮಿಸಿ ಸಹಕರಿಸಬೇಕೆಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀ ಅರವಿಂದ್ ರೈ, ಕ್ರೀಡಾ ಕಾರ್ಯಾಧ್ಯಕ್ಷ ಶ್ರೀ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಉಷಾ ಯು ಶೆಟ್ಟಿ ಮತ್ತು ಯುವ ವಿಭಾಗದ ಅಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಬಂಟ್ಸ್ ಅಸೋಸಿಯೇಷನ್ ನ ವತಿಯಿಂದ ಬಂಟ ಸಮಾಜ ಭಾಂದವರಿಗಾಗಿ ವರ್ಷoಪ್ರತಿ ನಡೆಯುತ್ತಿರುವ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾಟಗಳು ಡಿ 9 ಶನಿವಾರದಂದು ಅಪರಾಹ್ನ ಗಂಟೆ 2.00 ರಿಂದ ಫ್ರೀ ಕಿಕ್ ಫುಟ್ ಬಾಲ್ ಫ್ಯಾಕ್ಟರಿ ಗ್ರೌಂಡ್ ಮುಂಡ್ವಾ ಪುಣೆ ಇಲ್ಲಿ ಜರಗಲಿರುವುದು. ಬಾಕ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಹೆಸರು ನೋಂದಾಯಿಸುವವರು ಡಿ 2 ರ ಒಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪುಣೆ ಬಂಟ್ಸ್ ಅಸೋಸಿಯೇಷನ್ ನ ಕ್ರೀಡಾ ಕಾರ್ಯಧ್ಯಕ್ಷ ಸತೀಶ್ ಶೆಟ್ಟಿ -[ 9860705863] ಮತ್ತು ಉಪ ಕ್ರೀಡಾ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ – [ 8087799428] ರವರನ್ನು ಸಂಪರ್ಕಿಸಬಹುದು.